Homeಮುಖಪುಟತೀಸ್ತಾ ಸೆತಲ್ವಾಡ್ ವಿರುದ್ಧ ಮೇಲ್ನೋಟದ ಪ್ರಕರಣವೇ ಇಲ್ಲ, ಅನ್ವಯಿಸಬಹುದಾದ ವಿಧಿಗಳೂ ಇಲ್ಲ: ಗುಜರಾತ್ ಹೈಕೋರ್ಟಿನಲ್ಲಿ ವಕೀಲರ...

ತೀಸ್ತಾ ಸೆತಲ್ವಾಡ್ ವಿರುದ್ಧ ಮೇಲ್ನೋಟದ ಪ್ರಕರಣವೇ ಇಲ್ಲ, ಅನ್ವಯಿಸಬಹುದಾದ ವಿಧಿಗಳೂ ಇಲ್ಲ: ಗುಜರಾತ್ ಹೈಕೋರ್ಟಿನಲ್ಲಿ ವಕೀಲರ ವಾದ

ತೀಸ್ತಾರವರ ವಿರುದ್ಧ ದ್ವೇಷ ಸಾಧಿಸುತ್ತಿರುವ ಸರ್ಕಾರ ಉದ್ದೇಶಪೂರ್ವಕವಾಗಿ ಸುಳ್ಳು ಪ್ರಕರಣಗಳನ್ನು ಹೇರಿದೆ. ಹಾಗಾಗಿ ಅವರಿಗೆ ಶಾಶ್ವತ ಜಾಮೀನು ನೀಡಬೇಕು.

- Advertisement -
- Advertisement -

ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಪತ್ರಕರ್ತರಾಗಿರುವ ತೀಸ್ತಾ ಸೆತಲ್ವಾಡ್ ಅವರನ್ನು ಜೂನ್ 25, 2022ರಂದು ಬಂಧಿಸಲಾಗಿತ್ತು. 2002ರ ಗುಜರಾತ್ ನರಮೇಧದ ಹಿಂದೆ ದೊಡ್ಡದಾದ ಸಂಚು ಇದೆ ಎಂದು ಸಂತ್ರಸ್ತೆ ಝಾಕಿಯಾ ಜಾಫ್ರಿ ಅವರ ದೂರನ್ನು ತಳ್ಳಿ ಹಾಕಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮರುದಿನವೇ ಅವಸರವಸರವಾಗಿ ಸೆತಲ್ವಾಡ್ ಅವರನ್ನು ಬಂಧಿಸಲಾಗಿತ್ತು. ಅವರ ಶಾಶ್ವತ ಜಾಮೀನು ಅರ್ಜಿಯ ಕುರಿತು ಗುಜರಾತ್ ಹೈಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಯ ಕುರಿತ ವರದಿಯ ಸಂಕ್ಷಿಪ್ತ ರೂಪ ಇಲ್ಲಿದೆ.

ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಪತ್ರಕರ್ತೆ ತೀಸ್ತಾ ಸೆತಲ್ವಾಡ್ ಅವರು ಸುಳ್ಳು ಸಾಕ್ಷ್ಯ ಸಲ್ಲಿಸಿದ್ದಾರೆ ಎಂಬ ಆರೋಪದಲ್ಲಿ ಶಾಶ್ವತ ಜಾಮೀನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಗುಜರಾತ್ ಹೈಕೋರ್ಟಿನಲ್ಲಿ ಮುಂದುವರಿಯುತ್ತಿದೆ. 70 ದಿನಗಳನ್ನು ಗುಜರಾತಿನ ಜೈಲಿನಲ್ಲಿ ಕಳೆದ ಅವರು, ಸದ್ಯಕ್ಕೆ ಸೆಪ್ಟೆಂಬರ್ 2022ರಂದು ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿನ ರಕ್ಷಣೆಯಲ್ಲಿದ್ದಾರೆ. ಅರ್ಜಿದಾರರು ಜೂನ್ 12 ಮತ್ತು 13ರಂದು ತನ್ನ ಹಿರಿಯ ವಕೀಲ ಮಿಹಿರ್ ಥಾಕೋರೆ ಅವರ ಮೂಲಕ ತಮ್ಮ ವಾದವನ್ನು ಮಂಡಿಸಿದರು.

ಹಿನ್ನೆಲೆ

ಒಂದು ವರ್ಷದ ಹಿಂದೆಯಷ್ಟೇ ಝಾಕಿಯಾ ಜಾಫ್ರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಮರುದಿನವೇ ಗುಜರಾತ್ ಭಯೋತ್ಪಾದನಾ ದಳ (ಎಟಿಎಸ್)ವು ಸೆತಲ್ವಾಡ್ ಅವರನ್ನು ಮುಂಬಯಿಯ ಅವರ ಮನೆಯಿಂದ ಅವಸರವಸರವಾಗಿ ಬಂಧಿಸಿತ್ತು. ಅವರ ವಿರುದ್ಧ ಐಪಿಸಿ ವಿಧಿ 468 (ಫೋರ್ಜರಿ), ವಿಧಿ 471 (ಒಂದು ದಾಖಲೆ ಅಥವಾ ಇಲೆಕ್ಟ್ರಾನಿಕ್ ದಾಖಲೆಯನ್ನು ಅಸಲಿ ಎಂದು ಬಳಸುವುದು), ವಿಧಿ194 (ಮರಣ ದಂಡನೆ ನೀಡಬಹುದಾದಂತ ಪ್ರಕರಣ ಒಂದರಲ್ಲಿ ತೀರ್ಪು ಪಡೆಯಲು ಸುಳ್ಳು ಸಾಕ್ಷ್ಯ ನೀಡುವುದು ಇಲ್ಲವೇ ಸೃಷ್ಟಿಸುವುದು), ವಿಧಿ 211 (ಹಾನಿ ಉಂಟುಮಾಡುವ ಉದ್ದೇಶದಿಂದ ಸುಳ್ಳು ಆರೋಪ ಮಾಡುವುದು), ವಿಧಿ 2185 (ವ್ಯಕ್ತಿಯನ್ನು ಶಿಕ್ಷೆ ಅಥವಾ ಆಸ್ತಿ ಮುಟ್ಟುಗೋಲಿನಿಂದ ತಪ್ಪಿಸಲು ತಪ್ಪಾದ ದಾಖಲೆ ಅಥವಾ ಬರವಣಿಗೆ): ಮತ್ತು 120 ಬಿ (ಕ್ರಿಮಿನಲ್ ಒಳಸಂಚು) ಮೊದಲಾದ ವಿಧಿಗಳ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಜಾಫ್ರಿ ಅವರು ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ದೃಢಪಡಿಸಿ ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಝಾಕಿಯಾ ಮತ್ತು ಸಹದೂರುದಾರರಾಗಿ ಸೆತಲ್ವಾಡ್ ಈ ಅರ್ಜಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದರು. ತನ್ನ ಪತಿ ಎಹಸಾನ್ ಜಾಫ್ರಿ ಅವರನ್ನು ನಿರ್ದಯವಾಗಿ ಹತ್ಯೆ ಮಾಡಿದ ಮತ್ತು ದೊಡ್ಡ ಪ್ರಮಾಣದಲ್ಲಿ ಮುಸ್ಲಿಮರ ಹತ್ಯೆಗಳಿಗೆ ಕಾರಣವಾದ ನರಮೇಧದಲ್ಲಿ ಇನ್ನಷ್ಟು ದೊಡ್ಡ ಸಂಚು ಇರುವುದಾಗಿ ಅವರು 2006ರಲ್ಲಿ ನೀಡಿದ್ದ ದೂರಿನ ವಿಚಾರಣೆಗಾಗಿ ಸ್ಥಾಪಿಸಲಾಗಿದ್ದ ವಿಶೇಷ ತನಿಖಾ ತಂಡದ ವರದಿಯನ್ನು ಮುಚ್ಚುವುದರ ವಿರುದ್ಧ ಈ ಪ್ರತಿಭಟನಾ ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿಯನ್ನು ತಿರಸ್ಕರಿಸುವಾಗ, “ದುರುದ್ದೇಶದಿಂದ” ಕಳೆದ 16 ವರ್ಷಗಳಿಂದ “ಮಡಕೆಯನ್ನು ಕುದಿಯುತ್ತಾ ಇಟ್ಟವರು” (ವಿಷಯವನ್ನು ಜೀವಂತ ಇಟ್ಟವರು) ಜೈಲಿಗೆ ಹೋಗಬೇಕು ಮತ್ತು “ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ನಡೆಯಬೇಕು” ಎಂಬಂತ ಕೆಲವು ಪ್ರತಿಕೂಲ ಮೌಖಿಕ ಹೇಳಿಕೆಗಳನ್ನು ಸುಪ್ರೀಂಕೋರ್ಟ್ ನೀಡಿತ್ತು. ಆದರೆ, ಲಿಖಿತ ತೀರ್ಪಿನಲ್ಲಿ ಇದನ್ನು ಸೇರಿಸಿರಲಿಲ್ಲ.

ಸೆತಲ್ವಾಡ್ ಪರ ವಕೀಲರ ವಾದ

ಸೆತವ್ವಾಡ್ ವಿರುದ್ಧ ದಾಖಲಿಸಲಾದ ಆರೋಪಗಳನ್ನು ವಿವರಿಸಿದ ಅರ್ಜಿದಾರರ ವಕೀಲರು, ಪೀಠದ ಮುಂದೆ ಅವರ ಮೇಲಿನ ಆರೋಪ ಪಟ್ಟಿಯಲ್ಲಿ ಮಾಡಲಾದ ಪ್ರತಿಯೊಂದು ಆರೋಪದ ವ್ಯಾಖ್ಯಾನ ಮಾಡಿ, ಆರೋಪಗಳ ಹಿಂದಿರುವ ಧಾಟಿಯನ್ನು ಎತ್ತಿತೋರಿಸಿದರು.

ನಕಲಿ ಅಥವಾ ಫೋರ್ಜರಿ ಎಂದು ಪೋಲೀಸರು ಹೇಳಿಕೊಂಡಿರುವ ಅಫಿದಾವಿತ್- ಸುಪ್ರೀಂಕೋರ್ಟಿನ ಮುಂದೆ ಸಲ್ಲಿಸಲಾದ ದಾಖಲೆಯೇ ಹೊರತು ಪೊಲೀಸರ ಮುಂದೆ ಅಲ್ಲ ಎಂಬುದಕ್ಕೆ ಒತ್ತು ನೀಡಿದರು. ಈ ಅಫಿದಾವಿತ್ ಸಲ್ಲಿಸುವಾಗ ಮುಖ್ಯ ನ್ಯಾಯಮೂರ್ತಿಯವರು ಮಧ್ಯಪ್ರವೇಶ ಮಾಡಿದ್ದರು. ಈ ಪ್ರಕರಣವು 2006ರಲ್ಲಿ ಜಾಫ್ರಿಯವರು ನೀಡಿದ ದೂರಿಗಿಂತಲೂ ಮೊದಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸಲ್ಲಿಸಿದ್ದಾಗಿತ್ತು..

ಆದುದರಿಂದ ಸಿಆರ್‌ಪಿಸಿ ವಿಧಿ 195ರ ಪ್ರಕಾರ, “ನ್ಯಾಯಾಲಯದ, ಅಥವಾ ತನ್ನ ಪರಪಾಗಿ ನ್ಯಾಯಾಲಯವು ಲಿಖಿತವಾಗಿ ನೇಮಿಸಿದ ಅಧಿಕಾರಿಯ, ಅಥವಾ ಆ ನ್ಯಾಯಾಲಯದ ಆಧೀನವಾಗಿರುವ ಯಾವುದೇ ಇತರ ನ್ಯಾಯಾಲಯದ ಲಿಖಿತ ದೂರು ಇಲ್ಲದೇ” ಕೇವಲ ಮೌಖಿಕ ಅಭಿಪ್ರಾಯದ ಮೇಲೆ ತನ್ನ ಕಕ್ಷಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸೆತಲ್ವಾಡ್ ಪರ ವಕೀಲರು ವಾದಿಸಿದರು.

ಅದಕ್ಕಿಂತಲೂ ಹೆಚ್ಚಾಗಿ, ಎಸ್ಐಟಿ ದಾಖಲಿಸಿದ ಯಾವುದೇ ಹೇಳಿಕೆಯು ಅಥವಾ ಎಸ್‌ಐಟಿಯ ಮುಂದೆ ಸಲ್ಲಿಸಲಾದ ಯಾವುದೇ ಅಫಿಡವಿಟ್- ಜಾಫ್ರಿಯವರ (2006)ರ ದೂರನ್ನು ಅಥವಾ ನಂತರದ ಪ್ರತಿಭಟನಾ ಅರ್ಜಿಯನ್ನು ಉಲ್ಲೇಖಿಸಿಲ್ಲ. ಸುಪ್ರೀಂಕೋರ್ಟಿನ ಮುಂದೆ ಜಾಫ್ರಿಯವರ ವಿಶೇಷ ತೆರವು ಅರ್ಜಿಯಲ್ಲಿಯೂ ಈ ಅಫಿದಾವಿತ್‌ಗಳನ್ನು ಬಳಸಲಾಗಿಲ್ಲ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನ್ನ ಹಸ್ತಾಂತರ ಅರ್ಜಿಯಲ್ಲಿ ಮಾಡಿದ ದಾವೆಯನ್ನು ಬೆಂಬಲಿಸುವ ಸಲುವಾಗಿ ಮಾತ್ರವೇ, 2006ರ ಜಾಫ್ರಿಯವರ ದೂರಿಗೆ ಬಹಳ ಮುಂಚೆಯೇ ಈ ಅಫಿದಾವಿತ್‌ಗಳನ್ನು ಸಲ್ಲಿಸಲಾಗಿತ್ತು.

ಈ ಸಂದರ್ಭದಲ್ಲಿ ಇಕ್ಬಾಲ್ ಸಿಂಗ್ ಮಾರ್ವಾ ಮತ್ತು ಮೀನಾಕ್ಷಿ ಮಾರ್ವಾ (2005) ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ವಕೀಲರು ತನ್ನ ಕಕ್ಷಿದಾರರಿಗೆ ಸಿಆರ್‌ಪಿಸಿ 195-340ರಲ್ಲಿ ವಿವರಿಸಲಾದ ಪ್ರಕ್ರಿಯೆಯು- ತನ್ನ ಕಕ್ಷಿದಾರರ ಮೇಲೆ ಹೇರಲಾಗಿರುವ ವಿಧಿ 195(1)(b)(i)ಕ್ಕೆ ಯಾಕೆ ಅನ್ವಯವಾಗುವುದಿಲ್ಲ ಎಂಬುದಕ್ಕೆ ತಾಂತ್ರಿಕ ಕಾರಣಗಳನ್ನು ನೀಡಿದರು. ಇದರ ಅರ್ಥವೆಂದರೆ, ಅಫಿದಾವಿತ್‌ನ ಸ್ಥಾನಮಾನ ಏನೇ ಇರಲಿ, ಅದು ಸುಳ್ಳೇ ಆಗಿರಲಿ, ಸಿಆರ್‌ಪಿಸಿಯ 195 ಮತ್ತು 340ನೇ ವಿಧಿಗಳಲ್ಲಿ ವಿಧಿಸಿರುವಂತೆ ಕ್ರಮ ಅರಂಭಿಸಲು ಇರುವ ಏಕೈಕ ಮಾರ್ಗವೆಂದರೆ, ನ್ಯಾಯಾಲಯದ ಲಿಖಿತ ದೂರು ಎಂದವರು ವಾದಿಸಿದರು. ಈ ಪ್ರಕರಣದಲ್ಲಿ ಅಂತಾ ದೂರು ಇಲ್ಲ.

ಹೀಗಿದ್ದರೂ, ನಿಗದತ ಪ್ರಕ್ರಿಯೆಯನ್ನು ಅನುಸರಿಸುವುದಕ್ಕೆ ಬದಲಾಗಿ, ಗುಜರಾತ್ ಎಟಿಎಸ್ ಪೊಲೀಸರು ವಾರಂಟ್ ಇಲ್ಲದೆಯೇ ಸೆತಲ್ವಾಡ್ ಅವರ ಮುಂಬಯಿಯ ಮನೆಗೆ ಬಂದು ಅವರನ್ನು ಬಲವಂತವಾಗಿ ಅಹ್ಮದಾಬಾದಿಗೆ ಕರೆದೊಯ್ದಿದ್ದರು. ಅಲ್ಲಿ ಅವರಿಗೆ ಜೂನ್ 26, 2022ರಂದು ಪೊಲೀಸ್ ಕಸ್ಟಡಿಯನ್ನೂ, ಜುಲೈ 2ರಂದು ನ್ಯಾಯಾಂಗ ಕಸ್ಟಡಿಯನ್ನೂ ವಿಧಿಸಿ ಅಹ್ಮದಾಬಾದಿನ ಸಾಬರಮತಿ ಮಹಿಳಾ ಜೈಲಿನಲ್ಲಿ ಇರಿಸಲಾಗಿತ್ತು. ಬಂಧನದ ದಿನ ಎಟಿಎಸ್ ಪೊಲೀಸರು ತನ್ನ ಮನೆಯನ್ನು ಪ್ರವೇಶಿಸುವಾಗ ಮಾಡಿದ ಹಿಂಸಾಚಾರದ ಕುರಿತು ಕೂಡಾ ಸೆತಲ್ವಾಡ್ ಗಂಭೀರವಾದ ಆರೋಪಗಳನ್ನು ಮಾಡಿದ್ದರು.

ಮೇಲ್ನೋಟದ ಪ್ರಕರಣವೇ ಇಲ್ಲ

ಒಂದು ವೇಳೆ 2006ರಲ್ಲಿ ದೂರು ನೀಡುವಂತೆ ಝಾಕಿಯಾ ಜಾಫ್ರಿಯವರನ್ನು ಒತ್ತಾಯಿಸಿದ ಆರೋಪವಿದ್ದರೆ ಮಾತ್ರವೇ ಐಪಿಸಿ ವಿಧಿ 467,469 ಮತ್ತು 194ನ್ನು ಅವರ ಮೇಲೆ ಅನ್ವಯಿಸಬಹುದಿತ್ತು ಎಂದು ಹಿರಿಯ ವಕೀಲ ಮಿಹಿರ್ ಥಾಕೋರೆ ವಾದಿಸಿದರು. ಈ ದೂರನ್ನು ಜಾಫ್ರಿಯವರು ದಾಖಲಿಸಿದ್ದರೇ ಹೊರತು ಅರ್ಜಿದಾರರಲ್ಲ. ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ಒಂಟಿ ದಾಖಲೆಯೊಂದರ ಹೊರತಾಗಿ ಯಾವುದೇ ದಾಖಲೆಯಲ್ಲಿ ಸೆತಲ್ವಾಡ್ ಅವರ ಸಹಿ ಇಲ್ಲವಾದುದರಿಂದ ಈ ಪ್ರಕರಣವನ್ನು ಸಿಆರ್‌ಪಿಸಿ ವಿಧಿ 195ರಿಂದ ಹೊರತುಪಡಿಸುವ ಸಲುವಾಗಿ ಮಾತ್ರವೇವಿಧಿ 467,469 ಮತ್ತು 471ನ್ನು ಅವರ ಮೇಲೆ ಹೇರಲಾಗಿದೆ ಎಂದೂ ಅವರು ವಾದಿಸಿದರು. ಸುಪ್ರೀಂಕೋರ್ಟಿನ ಲಿಖಿತ ದೂರು ಇಲ್ಲವಾದುರಿಂದ ಮೇಲೆ ವಿವರಿಸಿದಂತೆ- ಸೆತಲ್ವಾಡ್ ವಿರುದ್ಧ ಮೇಲ್ನೋಟಕ್ಕೇ ಯಾವುದೇ ಪ್ರಕರಣವಿಲ್ಲ ಎಂಬುದು ಅವರ ವಾದದ ಸಾರಾಂಶವಾಗಿತ್ತು. ಜಾಮೀನು ನೀಡಲಾಗದ ಪ್ರಕರಣಗಳಲ್ಲಿ ಜಾಮೀನು ನೀಡುವ ಸಿಆರ್‌ಪಿಸಿ ವಿಧಿ 437 ಮತ್ತು ಜಾಮೀನು ನೀಡಲು ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯಗಳಿಗೆ ಇರುವ ವಿವೇಚನೆಗೆ ಸಂಬಂಧಿಸಿದ ವಿಧಿ ೪೩೯ರ ಕುರಿತು ಅವರು ವಿವರವಾಗಿ ಚರ್ಚಿಸಿದರು.

ಪೂರ್ವ ನಿದರ್ಶನಗಳು

ಈ ಸಂದರ್ಭದಲ್ಲಿ ಅವರು 2004ರ ಕಲ್ಯಾಣ್ ಚಂದ್ರ ಸರ್ಕಾರ್ ವಿರುದ್ಧ ರಾಜೇಶ್ ರಂಜನ್ ಯಾನೆ ಪಪ್ಪು ಯಾದವ್ (ಅಪೀಲು) ಪ್ರಕರಣದಲ್ಲಿ ಜಾಮೀನು ನೀಡುವಾಗ ನ್ಯಾಯಾಂಗದ ವಿವೇಚನೆಯಲ್ಲಿ ಪರಿಗಣಿಸಲು ಸುಪ್ರೀಂಕೋರ್ಟ್ ನಿಗದಿಪಡಿಸಿದ ಕೆಳಗಿನ ಮೂರು ಅಂಶಗಳನ್ನು ವಕೀಲ ಥಾಕೋರೆ ವಿವರಿಸಿದರು.

1. ಆರೋಪದ ಗಂಭೀರತೆ ಮತ್ತು ಆರೋಪ ಸಾಬೀತಾದರೆ ವಿಧಿಸಬಹುದಾದ ಶಿಕ್ಷೆಯ ಪ್ರಮಾಣ ಹಾಗೂ ಪೂರಕ ಸಾಕ್ಷ್ಯದ ಸ್ವರೂಪ.

2. ಸಾಕ್ಷ್ಯಾಧಾರಗಳನ್ನು ನಾಶಪಡಿಸಬಹುದಾದ ಮತ್ತು ಫಿರ್ಯಾದಿದಾರರಿಗೆ ಬೆದರಿಕೆ ಒಡ್ಡಬಹುದಾದ ಕಾರ್ಯಸಾಧ್ಯತೆಯ ಅಪಾಯ.

3. ಆರೋಪವು ನಿಜವಾಗಿರಬಹುದು ಎಂಬ ಕುರಿತು ನ್ಯಾಯಾಲಯದ ತೃಪ್ತಿಕರ ಗ್ರಹಿಕೆ.

ಸೆತಲ್ವಾಡ್ ಅವರ ಜಾಮೀನು ಅರ್ಜಿಯ ಕುರಿತು ಮಾನವೀಯ ಹಾದಿ ಅನುಸರಿಸಬೇಕು ಎಂದು ವಿನಂತಿಸಿದ ವಕೀಲರು- ಸತೇಂದ್ರ ಕುಮಾರ್ ಆಂಟಿಲ್ (2021) ಪ್ರಕರಣದಲ್ಲಿ ಸುಪ್ರೀಂಕೋರ್ಟ್- ” ಜಾಮೀನು ನೀಡುವಾಗ, ಆರೋಪಿಯು ಪರಾರಿಯಾಗದಂತೆ ತಡೆಯಲು ಹಣಕಾಸು ನಷ್ಟದ ಭಯವಷ್ಟೇ ಖಾತರಿಯಲ್ಲ; ಕುಟುಂಬ ಸಂಬಂಧಗಳು, ಸಮಾಜದಲ್ಲಿ ಬೇರುಗಳು, ಉದ್ಯೋಗದ ಭದ್ರತೆ, ಸ್ಥಿರವಾದ ಸಂಸ್ಥೆಯೊಂದರ ಸದಸ್ಯತ್ವ ಇತ್ಯಾದಿ ಇತರ ಖಾತರಿಗಳೂ ಇವೆ ಎಂಬುದನ್ನು ತಿಳಿದುಕೊಳ್ಳಲು ನಮ್ಮ ಸಂಸತ್ತಿಗಿದು ಸಕಾಲ. ಇವುಗಳನ್ನು ಜಾಮೀನು ನೀಡುವಾಗ ಪರಿಗಣಿತವಾಗಬೇಕು. ಈ ವಿಷಯಗಳ ಕುರಿತು ನ್ಯಾಯಾಲಯಕ್ಕೆ ತೃಪ್ತಿಯಾದರೆ, ಯಾವುದೇ ಹಣಕಾಸಿನ ಖಾತರಿ ಇಲ್ಲದೇ, ವೈಯಕ್ತಿಕ ಬಾಂಡಿನ ಮೇಲೆ ಆರೋಪಿಗೆ ಜಾಮೀನು ನೀಡಬಹುದು” ಎಂದು ಹೇಳಿದ್ದನ್ನು ಉಲ್ಲೇಖಿಸಿ ಥಾಕೋರೆಯವರು ವಿವರ ನೀಡಿದರು.

ಸೆತಲ್ವಾಡ್ ಅವರು ಈ ದಿನದ ತನಕ ಯಾವುದೇ ಸಂದರ್ಭದಲ್ಲಿ ನ್ಯಾಯಾಲಯವು ಜಾಮೀನಿನ ರೂಪದಲ್ಲಿ ತನಗೆ ನೀಡಿರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಲ್ಲ ಎಂಬುದನ್ನು ಒತ್ತಿಹೇಳಿದ ವಕೀಲರು, ಇವುಗಳಲ್ಲಿ ಹಲವು ಪ್ರಕರಣಗಳನ್ನು ನಂತರದಲ್ಲಿ ತಳ್ಳಿಹಾಕಲಾಗಿತ್ತು ಎಂದು ನೆನಪಿಸಿದರು.

ಸೆತಲ್ವಾಡ್ ಅವರನ್ನು ಹಲವಾರು ಪ್ರಕರಣಗಳಲ್ಲಿ ಹಿಂದೆಯೂ ಸಿಲುಕಿಸಲಾಗಿದೆ ಮತ್ತು ಸರಕಾರವು ಅವರಿಗೆ ನಿರಂತರ ಕಿರುಕುಳ ನೀಡುತ್ತಿದೆ ಎಂದು ವಿವರ ನೀಡಿದ ವಕೀಲರು, ದ್ವೇಷ ಸಾಧಿಸುತ್ತಿರುವ ಸರಕಾರವು ಅವರನ್ನು ನಿರಂತರವಾಗಿ ಮತ್ತು ಉದ್ದೇಶಪೂರ್ವಕವಾಗಿ ಬೆನ್ನು ಹತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್, ಬಿಬಿಸಿ ಮುಂತಾದ ಗೌರವಾರ್ಹ ಮಾಧ್ಯಮಗಳು ಮತ್ತು ಫ್ರಂಟ್‌ಲೈನ್ ಡಿಫೆಂಡರ್ಸ್‌ನಂತಾ ಸಂಘಟನೆಗಳು ಕೂಡಾ ವರದಿ ಮಾಡಿವೆ ಎಂಬುದನ್ನು ಉಲ್ಲೇಖಿಸಿದರು. ಸರಕಾರವು ಅವರಿಗೆ ಕಿರುಕುಳ ನೀಡಲು ಅವರ ವಿರುದ್ಧ ದಾಖಲಿಸಲಾದ ಎಲ್ಲಾ ಪ್ರಕರಣಗಳಲ್ಲಿ ಮುಂಬಯಿ ಹೈಕೋರ್ಟ್ ನಿರೀಕ್ಷಣಾ ಜಾಮಿನು ಮತ್ತು ನಂತರದಲ್ಲಿ ಗುಜರಾತ್ ನ್ಯಾಯಾಲಯಗಳು ಶಾಶ್ವತ ಜಾಮೀನು ನೀಡಿವೆ ಮತ್ತು ಹಲವು ಪ್ರಕರಣಗಳು ವಜಾಗೊಂಡಿವೆ ಎಂಬುದನ್ನೂ ನೆನಪಿಸಿದರು.

ಸೆತಲ್ವಾಡ್ ಅವರ ಸಿಟಿಜನ್ಸ್ ಫಾರ್ ಪೀಸ್ ಸಂಘಟನೆಯು 2002ರ ನರಮೇಧದ ನೂರಾರು ಸಂತ್ರಸ್ತರಿಗೆ ನೆರವು ನೀಡಿದ್ದು, ಅವರು, ಅವರ ಪತಿ ಜಾವೇದ್ ಆನಂದ್ ಸೇರಿದಂತೆ ಸಂಘಟನೆಯ ಸದಸ್ಯರು 68 ಪ್ರಕರಣಗಳಲ್ಲಿ ಹೋರಾಡಿ, 174 ತಪ್ಪಿತಸ್ಥರಿಗೆ ಶಿಕ್ವೆಯಾಗುವಂತೆ ಮಾಡಿದ್ದು, ಇವುಗಳಲ್ಲಿ 124 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ತಿಳಿಸಿದರು. ಈ ಎಲ್ಲಾ ಹಿನ್ನೆಲೆಗಳನ್ನು ಪರಿಗಣಿಸಿ ತೀಸ್ತಾ ಸೆತಲ್ವಾಡ್ ಅವರಿಗೆ ಶಾಶ್ವತ ಜಾಮೀನು ನೀಡಬೇಕೆಂದು ವಕೀಲ ಮಿಹಿರ್ ಥಾಕೋರೆ ವಿನಂತಿಸಿದರು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಇದನ್ನೂ ಓದಿ; ಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...