Homeಮುಖಪುಟನೋಯ್ಡಾ: ರಂಜಾನ್ ನಮಾಜ್‌ಗೆ ಅಡ್ಡಿಪಡಿಸಿದ ಮತಿಯವಾದಿ ಗುಂಪು

ನೋಯ್ಡಾ: ರಂಜಾನ್ ನಮಾಜ್‌ಗೆ ಅಡ್ಡಿಪಡಿಸಿದ ಮತಿಯವಾದಿ ಗುಂಪು

- Advertisement -
- Advertisement -

ನೋಯ್ಡಾದ ಹೌಸಿಂಗ್ ಸೊಸೈಟಿಯ ಆವರಣದಲ್ಲಿ ಮುಸ್ಲಿಂ ಸಮುದಾಯದವರು ಸೋಮವಾರದಂದು ಪ್ರಾರ್ಥನೆ ಸಲ್ಲಿಸುವ ವೇಳೆ ಸ್ಥಳೀಯ ಹಿಂದುತ್ವವಾದಿ ಗುಂಪೊಂದು ನುಗ್ಗಿ ಪ್ರಾರ್ಥನೆಗೆ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ ಎಂದು ದಿ ಹಿಂದೂ ಬುಧವಾರ ವರದಿ ಮಾಡಿದೆ.

ಹೌಸಿಂಗ್ ಸೊಸೈಟಿಯೊಳಗಿನ ಮಾರುಕಟ್ಟೆ ಜಾಗದ ಖಾಲಿ ಕೋಣೆಯಲ್ಲಿ ಇಕೋ ವಿಲೇಜ್ IIರ ಸುಮಾರು 40 ಮುಸ್ಲಿಂ ನಿವಾಸಿಗಳು ಸೋಮವಾರ ರಾತ್ರಿ 8.30ರ ಸುಮಾರಿಗೆ ನಮಾಜ ಮಾಡಲು ಸೇರಿದ್ದರು. ಈ ವೇಳೆ ಕೆಲವು ಹಿಂದುತ್ವವಾದಿಗಳು ಪ್ರಾರ್ಥನಾ ಸಭೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಗಲಾಟೆ ನಡೆಯಿತು.

ಪೊಲೀಸರು ಆಗಮಿಸಿದ ನಂತರ ಅಲ್ಲಿಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಇದೀಗ ಆ ಜಾಗದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸದಿರಲು ನಿರ್ಧರಿಸಿದ್ದಾರೆ ಮತ್ತು ಆ ಸ್ಥಳದಲ್ಲಿ ಈಗ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ರಂಜಾನ್ ಪ್ರಾರ್ಥನಾ ಸಭೆಗೆ ಬಜರಂಗದಳ ಕಾರ್ಯಕರ್ತರಿಂದ ಅಡ್ಡಿ

ಇನಾಮ್ ಖಾನ್ ಎನ್ನುವ ನಿವಾಸಿಯೊಬ್ಬರು ಮಾತನಾಡಿ, ”ಕಳೆದ ಮೂರ್ನಾಲ್ಕು ವರ್ಷಗಳಿಂದ ಅಲ್ಲಿ ಅರ್ಧಕ್ಕೆ ನಿರ್ಮಾಣವಾಗಿರುವ ಕೊಠಡಿಯೊಳಗೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಯಾರಿಗೂ ಸಮಸ್ಯೆ ಇರಲಿಲ್ಲ ಮತ್ತು ನಾವು ಯಾರಿಗೂ ತೊಂದರೆ ನೀಡಲಿಲ್ಲ. ಆದರೆ ಈಗ ಕೆಲವು ಹಿಂದು ಯುವಕರು ಈ ಪ್ರದೇಶಕ್ಕೆ ಬಂದು ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿದ್ದಾರೆ” ಎಂದು ಅವರು ದಿ ಹಿಂದೂಗೆ ತಿಳಿಸಿದರು.

ಸೊಸೈಟಿ ಮ್ಯಾನೇಜ್‌ಮೆಂಟ್‌ನಿಂದ ಅನುಮತಿ ಪಡೆದು ಕೋಣೆಯೊಳಗೆ ಕಾರ್ಪೆಟ್, ಕೆಲವು ಲೈಟ್‌ಗಳು ಮತ್ತು ಪರದೆಯನ್ನು ಹಾಕಿದ್ದೇವೆ ಎಂದು ಖಾನ್ ಪತ್ರಿಕೆಗೆ ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...