Homeಮುಖಪುಟಕಾದಂಬರಿ ಆಧಾರಿತ ಹಾಗೂ ಮೂಲ ಚಿತ್ರಕಥೆಗಳು

ಕಾದಂಬರಿ ಆಧಾರಿತ ಹಾಗೂ ಮೂಲ ಚಿತ್ರಕಥೆಗಳು

- Advertisement -
- Advertisement -

| ರಾಜಶೇಖರ್ ಅಕ್ಕಿ |

“ಇದೇನು ನಾಗರಹಾವೋ, ಕೇರೇ ಹಾವೋ?” ತರಾಸು ನಾಗರಹಾವು ಚಿತ್ರ ನೋಡಿದ ನಂತರ ನೀಡಿದ ಪ್ರತಿಕ್ರಿಯೆ.
ಯಾವುದೋ ಒಂದು ಘಟನೆ, ಆ ಘಟನೆಯ ಸುತ್ತ ಆಗುವ ವಿದ್ಯಮಾನಗಳು, ಪತ್ರಿಕೆಯೊಂದರಲ್ಲಿಯ ಒಂದು ವರದಿ, ನಮಗೆ ಪರಿಚಯದ ಅಥವಾ ಎಲ್ಲೋ ಕೇಳಿದ ಯಾರದೋ ಒಂದು ಸಾಹಸದ, ದುಃಖದ ಕಥೆ, ಇವೆಲ್ಲವುಗಳೂ ಒಂದು ಸಿನೆಮಾಗೆ ಕಥೆಯಾಗಬಲ್ಲ ಸಾಧ್ಯತೆ ಹೊಂದಿರುತ್ತವೆ. (ನೆನಪಿಡಿ, ಇಲ್ಲಿ ಬರೆಯುತ್ತಿರುವುದು ಸುಮಾರು ಎರಡು ಗಂಟೆಗಳ ಪೂರ್ಣಾವಧಿ ಸಿನೆಮಾ ಬಗ್ಗೆ ಮಾತ್ರ) ಆದರೆ ಅವೆಲ್ಲವುಗಳೂ ಚಿತ್ರಕಥೆಯಾಗುವುದಿಲ್ಲ. ನಮಗೆ ತಿಳಿದಿರುವ ಆ ಘಟನೆ ಕೇವಲ ಘಟನೆಯಾಗಿ ಮಾತ್ರ ಉಳಿಯಬಲ್ಲದು, ಪೂರ್ಣಪ್ರಮಾಣದ ಚಿತ್ರಕಥೆಯಾಗಬೇಕಾದರೆ ಇನ್ನೂ ಅನೇಕ ಅಂಶಗಳನ್ನು ಹಾಕಬೇಕಾಗುತ್ತದೆ. ಆಗ ಎದುರಾಗುವ ಸಮಸ್ಯೆಗಳೂ ಅನೇಕ.

ಒಂದು ಘಟನೆಯನ್ನು ಚಿತ್ರಕಥೆಯನ್ನಾಗಿಸುವ ಭರದಲ್ಲಿ ಅದಕ್ಕೆ ಇತರ ಅನೇಕ ಅಂಶಗಳನ್ನು ತುಂಬಿದಾಗ (ಇಲ್ಲಿ ಕಾಮೆಡಿ ಟ್ರ್ಯಾಕ್ ಅಥವಾ ಫೈಟ್ ಸಿಕ್ವೆನ್ಸ್ ಬಗ್ಗೆ ಹೇಳುತ್ತಿಲ್ಲ) ಆ ಕಥೆಗೆ ಪ್ರೇರಕವಾದ ಘಟನೆಯೇ ಗೌಣವಾಗಿಬಿಟ್ಟರೆ? ಹಾಗೆ ಆಗಿರುವ ಉದಾಹರಣೆಗಳು ಉಂಟು. ಆಗ ಕೇಳಬೇಕಾದ ಪ್ರಶ್ನೆ; ನಾವು ಯಾವ ಕಥೆಯನ್ನು ಹೇಳಲು ಬಯಸುತ್ತಿದ್ದೇವೆ? ಆ ಪ್ರಶ್ನೆಗೆ ಕೇವಲ ನಾಲ್ಕೈದು ವಾಕ್ಯಗಳಲ್ಲಿ ಉತ್ತರ ನೀಡಬೇಕು. ಆ ನಾಲ್ಕೈದು ವಾಕ್ಯಗಳಲ್ಲಿ ಮೂಲ ಘಟನೆಯೇ ಕಾಣಿಸಿಕೊಳ್ಳದಿದ್ದರೆ? ಬಿಟ್ಟುಬಿಡಿ, ಏಕೆಂದರೆ, ನಾವು ಬದ್ಧರಾಗಿರಬೇಕಾದದ್ದು ನಮ್ಮ ಕಥೆಗೇ ಹೊರತು ಆ ಕಥೆಗೆ ಕಾರಣೀಭೂತವಾಗಿರುವ ಘಟನೆಗೆ ಅಲ್ಲ. ಆದರೆ ಆ ಘಟನೆಗೂ ಮತ್ತು ಈಗ ಮೂಡಿಬಂದಿರುವ ಕಥೆಗೂ ಇರುವ ಸಂಬಂಧ ಎಂಥದ್ದು ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ನೀಡಲೇಬೇಕು.

ಇನ್ನು, ಈ ಎಲ್ಲ ಘಟನೆಗಳು, ವರದಿಗಳು, ಸ್ನೇಹಿತರ, ಪರಿಚಿತರ ಅಥವಾ ಅಪರಿಚಿತರ ಕಥೆಗಳು ಚಿತ್ರಕಥೆಯಾಗುವುದಿಲ್ಲ. ಅಲ್ಲಿಯ ಕಥೆಗಳು ಎರಡು ಗಂಟೆಗಳ ಕಾಲ ನೋಡುಗರನ್ನು ಹಿಡಿದಿಡುವಷ್ಟು ಸತ್ವವನ್ನು ಹೊಂದಿರುವುದಿಲ್ಲ ಅಥವಾ ಆ ಕಥೆಯನ್ನು ಒಂದು ಚಿತ್ರಕಥೆಗೆ ಇರಬೇಕಾದ ಸ್ಟ್ರಕ್ಚರ್‍ನಲ್ಲಿ ಕೂಡಿಸುವುದು ಆಗದೇ ಇರಬಹುದು. ಆಗ ಒಂದೋ ಅವುಗಳನ್ನು ಕೈಬಿಡಬೇಕಾಗುತ್ತದೆ ಅಥವಾ ಆ ವರದಿ ಅಥವಾ ಘಟನೆ ನಮಗೆ ಯಾವ ಕಾರಣಕ್ಕೆ ಚಿತ್ರಕಥೆ ಬರೆಯಬೇಕೆಂದು ಪ್ರಚೋದಿಸಿತು ಎನ್ನುವ ಉತ್ತರವನ್ನು ಹುಡುಕಿ, ಆ ಅಂಶದ ಮೇಲೆಯೇ ಕಥೆಯನ್ನು ಹೆಣೆಯಬೇಕಾಗುತ್ತದೆ. ಇದು ಅಷ್ಟು ಸುಲಭದ ಕೆಲಸವಲ್ಲ. (ಚಿತ್ರಕಥೆ ಬರೆಯುವುದು ಸುಲಭದ ಕೆಲಸ ಎಂದು ಯಾರೂ ಹೇಳಿಲ್ಲ. ಇದರ ಬಗ್ಗೆ ಇನ್ನೊಂದು ಲೇಖನ ಈಗಾಗಲೇ ಬರೆದಿದ್ದೇನೆ.)

ಈ ರೀತಿ ಕಷ್ಟಪಟ್ಟು ಬರೆದ ಚಿತ್ರಕಥೆಗಳನ್ನು ಮೂಲಚಿತ್ರಕಥೆಗಳು (original screenplay) ಎನ್ನಲಾಗುತ್ತದೆ. ಪ್ರಖ್ಯಾತ ಆಸ್ಕರ್ ಪ್ರಶಸ್ತಿಗಳಲ್ಲಿ ಒಂದು ಪ್ರಶಸ್ತಿ ಒರಿಜಿನಲ್ ಸ್ಕ್ರೀನ್‍ಪ್ಲೇಗೆ ಮೀಸಲಿಡಲಾಗಿದೆ. ಇನ್ನು ಕಥೆ ಕಾದಂಬರಿಗಳನ್ನು ಆಧರಿಸಿ ಬರೆದ ಚಿತ್ರಕಥೆಗಳು; ಅವುಗಳ ಪಯಣವೂ ಅಷ್ಟೇ ರೋಚಕವಾಗಿದೆ. ಮೊದಲು ಕೆಲವು ಉದಾಹರಣೆಗಳನ್ನು ನೋಡುವ.

ಪಾಲ್ ಥಾಮಸ್ ಆ್ಯಂಡರ್ಸನ್ ನಿರ್ದೇಶಿಸಿದ ‘ದೇರ್ ವಿಲ್ ಬಿ ಬ್ಲಡ್’ ಚಿತ್ರ ಅಪ್ಟನ್ ಸಿಂಕ್ಲೇರ್ ಅವರ ಆಯಿಲ್ ಎನ್ನುವ ಕಾದಂಬರಿಯನ್ನು ಆಧರಿಸಿದ ಚಿತ್ರ ಎಂದು ಹೇಳಲಾಗಿತ್ತು. ಈ ಚಿತ್ರವನ್ನು ಅತ್ಯಂತ ಇಷ್ಟಪಟ್ಟ ನಾನು ಕಾದಂಬರಿಯನ್ನು ಪಡೆದು ಓದಲಾರಂಭಿಸಿದೆ. ಕೆಲವೇ ಕೆಲವು ಸಾಮ್ಯತೆಗಳನ್ನು ಮತ್ತು ಆ ಚಿತ್ರ ನಡೆಯುವ ಅವಧಿಯನ್ನು ಬಿಟ್ಟರೆ ಚಿತ್ರಕ್ಕೂ ಕಾದಂಬರಿಗೂ ಹೆಚ್ಚಿನ ಸಂಬಂಧ ಕಾಣಲಿಲ್ಲ. 20ನೇ ಶತಮಾನದ ಪ್ರಾರಂಭದಲ್ಲಿ ತೈಲವನ್ನು ಹೊರತೆಗೆದು, ಅದರಿಂದ ಸಾಮ್ರಾಜ್ಯವನ್ನೇ ಕಟ್ಟುವ ಕಥೆಯು ಕಾದಂಬರಿ ಮತ್ತು ಚಿತ್ರಗಳಲ್ಲಿ ಸಾಮಾನ್ಯವಾಗಿದ್ದರೂ, ಚಿತ್ರದ ಆತ್ಮವೇ ಭಿನ್ನವಾಗಿದೆ. ಕಾದಂಬರಿಯನ್ನು ಚಿತ್ರಕಥೆಗೆ ಅಳವಡಿಸುವ ದೀರ್ಘ ಪ್ರಕ್ರಿಯೆಯಲ್ಲಿ ಮೂಲಕತೆಯಿಂದ ಬಲುದೂರ ಸಾಗಿದ್ದು ನಿರ್ದೇಶಕ ಪಾಲ್ ಆ್ಯಂಡರ್ಸನ್‍ಗೆ ತಿಳಿದಿದ್ದರೂ ಮುಂದುವರೆದರು. ನಾವು ಮೂಲಕಥೆಗೆ ಬದ್ಧರಾಗಲಿಲ್ಲ (faithful) ಎಂದು ಆ್ಯಂಡರ್ಸನ್ ಹೇಳಿದರು.

ಈ ಬದ್ಧತೆಯ ಪ್ರಶ್ನೆಯೂ ತುಂಬಾ ಕುತೂಹಲಕಾರಿಯಾಗಿದೆ. ದೇರ್ ವಿಲ್ ಬಿ ಬ್ಲಡ್ ಚಿತ್ರನ ನಿದರ್ಶನ ಎಕ್ಸ್ಟ್ರೀಮ್ (extreme) ಆಗಿದೆ. ಇನ್ನು ಅಲೆಕ್ಸಾಂಡರ್ ಪೇನ್‍ನ ಚಿತ್ರಗಳ ಪ್ರಯೋಗವೂ ವಿಶಿಷ್ಟವಾಗಿದೆ. ಅವರ ಎಲೆಕ್ಷನ್, ಅಬೌಟ್ ಶ್ಮಿತ್ ಮುಂತಾದ ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳು. ಅಲೆಕ್ಸಾಂಡರ್ ಪೇನ್‍ಗೆ ಅಥವಾ ಅವರ ಲೇಖನದ ಪಾಟ್ರ್ನರ್ ಜಿಮ್ ಟೇಲರ್‍ಗೆ ಒಂದು ಕಾದಂಬರಿಯನ್ನು ಸಿನೆಮಾಗೆ ಅಳವಡಿಸಬೇಕಾದಲ್ಲಿ, ಅವರಿಬ್ಬರೂ ಚಿತ್ರಕಥೆ ಬರೆಯುವ ಮುಂಚೆ ಆ ಮೂಲಕಾದಂಬರಿಯನ್ನು ಹಲವಾರು ಬಾರಿ ಓದುತ್ತಾರೆ. ಕಾದಂಬರಿಯ ಅಂಶಗಳು ಮನದಟ್ಟಾದ ನಂತರ ತಾವು ಬರೆಯಲಿರುವ ಚಿತ್ರದ ಆತ್ಮ ಅಥವಾ ಮೂಲಅಂಶ ಏನು ಎನ್ನುವುದನ್ನು ನಿರ್ಧರಿಸುತ್ತಾರೆ. ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮೂಲಕಾದಂಬರಿಯನ್ನು ಮರೆತು ಚಿತ್ರಕಥೆಯನ್ನು ಬರೆಯತೊಡಗುತ್ತಾರೆ. ಅವಶ್ಯಕತೆ ಬಿದ್ದಾಗ ಮಾತ್ರವೇ ಮೂಲಪುಸ್ತಕವನ್ನು ರೆಫರೆನ್ಸ್‍ಗಾಗಿ ಬಳಸುತ್ತಾರೆ. ಈ ಪ್ರಯೋಗಗಳ ಫಲಿತಾಂಶ ನಮ್ಮೆಲ್ಲರ ಕಣ್ಣೆದುರಿಗಿದೆ.
ಆದರೆ ಒಂದುವೇಳೆ ಮೂಡಿಬಂದ ಚಿತ್ರ ಮೂಲ ಬರಹಗಾರರಿಗೆ ಇಷ್ಟವಾಗದಿದ್ದರೆ?

ಅಮೇರಿಕದ ಪ್ರಖ್ಯಾತ ಲೇಖಕ ಸ್ಟೀಫನ್ ಕಿಂಗ್ ಅವರ ಕಾದಂಬರಿ ಶೈನಿಂಗ್ ಅನ್ನು ಅಷ್ಟೇ ಪ್ರಖ್ಯಾತ ಮತ್ತು ಪ್ರತಿಭಾವಂತ ನಿರ್ದೇಶಕ ಸ್ಟ್ಯಾನ್ಲಿ ಕೂಬ್ರಿಕ್ ಕೈಗೆತ್ತಿಕೊಂಡರು. ಜಾಕ್ ನಿಕಲ್ಸನ್ ಅವರ ಅಭಿನಯದಲ್ಲಿ ಮೂಡಿಬಂದ ಈ ಚಿತ್ರವು ಹಾರರ್ ಚಿತ್ರಗಳ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಚಿತ್ರ ಎಂದು ಪರಿಗಣಿಸಲಾಗಿದೆ. ಈ ಚಿತ್ರದಲ್ಲಿ ಯಾರು ಪ್ರಮುಖ ಪಾತ್ರ ಮಾಡಬೇಕು ಎನ್ನುವುದಕ್ಕೂ ಸ್ಟೀಫನ್ ಕಿಂಗ್ ಒಪ್ಪಿಗೆ ಪಡೆಯಬೇಕಿತ್ತು. ಒಂದು ಚಿತ್ರವು ಪಡೆಯಬಹುದಾದ ಎಲ್ಲಾ ರೀತಿಯ ಮನ್ನಣೆಗಳು ಶೈನಿಂಗ್ ಚಿತ್ರಕ್ಕೆ ದೊರೆತರೂ ಕಾದಂಬರಿಯ ಕರ್ತೃ ಸ್ಟೀಫನ್‍ಗೆ ಚಿತ್ರ ಇಷ್ಟವಾಗಲಿಲ್ಲ. ತನ್ನ ಮೂಲಕಥೆಗಿಂತ ಭಿನ್ನವಾಗಿ ಅನೇಕ ಸ್ವಾತಂತ್ರ್ಯ ತೆಗೆದುಕೊಳ್ಳಲಾಗಿದೆ ಎಂದು ಸ್ಟೀಫನ್ ಕಿಂಗ್ ಭಾವಿಸಿದರು. ಆದರೆ ಕೂಬ್ರಿಕ್‍ಗೆ ಕಥೆಯೊಂದಿಗೆ ಏನು ಮಾಡಬೇಕು ಎನ್ನುವುದರಲ್ಲಿ ಹೆಚ್ಚಿನ ಸಂಶಯವಿರಲಿಲ್ಲ. ಸಿನೆಮಾದ ಅಪರಿಮಿತ ಸಾಧ್ಯತೆಗಳನ್ನು ಮತ್ತು ಮಿತಿಗಳನ್ನು ಅರಿತಿದ್ದ ಕೂಬ್ರಿಕ್ ದೃಶ್ಯಮಾಧ್ಯಮಕ್ಕೆ ಅಳವಡಿಸುವಲ್ಲಿ ಸೋಮಾರಿತನ ತೋರಿಸಲಿಲ್ಲ. ಆದರೆ ಈ ಪ್ರಯೋಗದಿಂದ ಸಿಟ್ಟಿಗೆದ್ದ ಲೇಖಕ ಸ್ಟೀಫನ್ ಕಿಂಗ್ ಕೆಲವು ವರ್ಷಗಳ ನಂತರ ಕಾದಂಬರಿಯನ್ನು ಟಿವಿ ಸಿರೀಸ್ ಮಾಡಲು ಹಕ್ಕುಗಳನ್ನು ನೀಡಿದರು. ಹಾಗೂ ಅದರ ಮೆಲ್ವಿಚಾರಣೆಯನ್ನು ಖುದ್ದಾಗಿ ಮಾಡಿದರು. ಆದರೆ ಆ ಟಿವಿ ಸಿರೀಸ್ ಬಗ್ಗೆ ಯಾರೂ ಮಾತನಾಡುವುದಿಲ್ಲ.

ಕಾದಂಬರಿಯಾಧಾರಿತ ಚಿತ್ರಗಳಲ್ಲಿ ಗಾಡ್‍ಫಾದರ್ ಸರಣಿಯ ಚಿತ್ರಗಳನ್ನು ಬಿಡಲು ಸಾಧ್ಯವಿಲ್ಲ. ಮಾರಿಯೊ ಪೂಜೊ ಎಂಬ ಲೇಖಕನ ಅತ್ಯಂತ ಸಾಧಾರಣ ಕೃತಿಯನ್ನು ದೃಶ್ಯ ಮಾಧ್ಯಮದ ಅತ್ಯಂತ ಅದ್ಭುತ ಉದಾಹರಣೆಯನ್ನಾಗಿ ಮಾಡಿದ್ದು ಫ್ರಾನ್ಸಿಸ್ ಫೋರ್ಡ್ ಕೊಪೋಲಾ. ಈ ಕಾದಂಬರಿಯನ್ನು ಅಳವಡಿಸಲು ಕೊಪೋಲಾ ಅತ್ಯಂತ ಉತ್ಸುಕರಾಗಿದ್ದಿಲ್ಲ. ಕ್ರಮೇಣ ಕಾದಂಬರಿಯಲ್ಲಿ ಅಡಗಿರುವ ಅದ್ಭುತ ಚಿತ್ರವನ್ನು ಕಂಡು ಅದನ್ನು ಅಳವಡಿಸಿಕೊಂಡರು. ಆಗಿದ್ದು ಇತಿಹಾಸ. (ಅಂದಹಾಗೆ ಗಾಡ್‍ಫಾದರ್ ಪಾತ್ರ ಮಾಡಲು ಮಾರ್ಲನ್ ಬ್ರ್ಯಾಂಡೋ ಕೂಡ ಹಿಂಜರಿಕೆಯಿಂದಲೇ ಒಪ್ಪಿಕೊಂಡಿದ್ದರಂತೆ.)

ಈ ಮೇಲಿನ ಉದಾಹರಣೆಗಳೆಲ್ಲ ಮೂಲಕೃತಿಯನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಿ ಅದರ ಮೌಲ್ಯವನ್ನು ಹೆಚ್ಚಿಸಿದ ಉದಾಹರಣೆಗಳೇ ಆಗಿವೆ. ಈ ಅದ್ಭುತ ನಿರ್ದೇಶಕರೆಲ್ಲರೂ ಸಿನೆಮಾ ಎಂಬ ಮಾಧ್ಯಮವನ್ನು ಆಳವಾಗಿ ಪ್ರೀತಿಸಿದವರು, ಅದನ್ನು ಆಳವಾಗಿ ಅಭ್ಯಸಿಸಿದವರು, ವಿಶಿಷ್ಟ ಪ್ರಯೋಗಗಳನ್ನು ಮಾಡಿದವರು. ಮೂಲಕೃತಿಯ ಬಗ್ಗೆ ಇವರಿಗಿರುವ ಪ್ರೀತಿಯು ಆ ಕೃತಿಯನ್ನು ಬದಲಿಸಲು ಅಡ್ಡಿಯಾಗಲಿಲ್ಲ. ಆಯಾ ಕೃತಿಯ ವಿಶಿಷ್ಟತೆ, ಆಳ ಮತ್ತು ಅವರಿಗೆ ತಟ್ಟಿದ ಅಂಶವನ್ನು ಇಟ್ಟುಕೊಂಡು ಚಿತ್ರಕಥೆಯನ್ನು ಅಭಿವೃದ್ಧಿಪಡಿಸಿದವರು ಇವರೆಲ್ಲ. ಸಿನೆಮಾ ಮಾಧ್ಯಮದ ತಾಂತ್ರಿಕತೆಯನ್ನು ಆ ಮಾಧ್ಯಮದ ಅಡ್ಡಿ ಎಂದು ಪರಿಭಾವಿಸದೇ, ಅದನ್ನೇ ಒಂದು ಕಲೆಯೆಂದು ಪ್ರಯೋಗ ಮಾಡಿದವರು ಇವರು.
ಭಾರತದಲ್ಲೂ ಇಂತಹ ಅನೇಕ ಯಶಸ್ವೀ ಪ್ರಯೋಗಗಳು ಆಗಿವೆ. ಗುರುದತ್ ಅವರು ಮಾಡಿದ ಸಾಹಿಬ್ ಬೀವಿ ಔರ್ ಘುಲಾಮ್ (ಮೂಲ ಲೇಖಕ ಬಿಮಲ್ ಮಿತ್ರ), ಸತ್ಯಜಿತ್ ರಾಯ್ ಅವರ ಅದ್ಭುತ ಅಪು ಸರಣಿ (ಮೂಲ ಲೇಖಕ ವಿಭೂತಿಭೂಷಣ್ ಬಂಡೋಪಾಧ್ಯಾಯ), ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ ಹೆಚ್ಚಿನ ಚಿತ್ರಗಳು ಕಾದಂಬರಿಗಳನ್ನು ಸರಳವಾಗಿ ಸಿನೆಮಾ ರೂಪಕ್ಕೆ ಅಳವಡಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿವೆ.

ಕಥೆ ಕಾದಂಬರಿ ಆಧಾರಿತ ಚಿತ್ರಕಥೆ(ಅಡಾಪ್ಟೆಡ್ ಸ್ಕ್ರೀನ್‍ಪ್ಲೇ)ಗಳನ್ನು ಮೂಲಕೃತಿ ಮತ್ತು ಚಿತ್ರಕಥೆಯ ನಡುವಿನ ಸೆಣೆಸಾಟ ಅಥವಾ ಅಕ್ಷರಮಾಧ್ಯಮ ಮತ್ತು ದೃಶ್ಯಮಾಧ್ಯಮದ ಮಿಲನದ ಫಲಿತಾಂಶ ಎಂತಲೂ ಎನ್ನಬಹುದು. ಏನೇ ಆಗಲಿ ಈ ಪ್ರಕ್ರಿಯೆಯಂತೂ ನಿಲ್ಲಲಾಗದ ಪ್ರಕ್ರಿಯೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...