Homeಮುಖಪುಟಮಹಾರಾಷ್ಟ್ರ BJP ಉಪಾಧ್ಯಕ್ಷನದ್ದು ಎನ್ನಲಾದ ಅಶ್ಲೀಲ ವಿಡಿಯೋ ಬಹಿರಂಗ: ನಿಜ ಮುಖ ಬಯಲಾಗಿದೆ ಎಂದ ವಿಪಕ್ಷಗಳು

ಮಹಾರಾಷ್ಟ್ರ BJP ಉಪಾಧ್ಯಕ್ಷನದ್ದು ಎನ್ನಲಾದ ಅಶ್ಲೀಲ ವಿಡಿಯೋ ಬಹಿರಂಗ: ನಿಜ ಮುಖ ಬಯಲಾಗಿದೆ ಎಂದ ವಿಪಕ್ಷಗಳು

- Advertisement -
- Advertisement -

ಮಹಾರಾಷ್ಟ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಲೋಕಸಭಾ ಸದಸ್ಯ ಕಿರಿಟ್‌ ಸೋಮಯ್ಯ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಬಹಿರಂಗವಾಗಿದ್ದು, ಸ್ಥಳೀಯ ಮಾರಾಠಿ ನ್ಯೂಸ್ ಚಾನಲ್‌ಗಳಲ್ಲಿ ಪ್ರಸಾರವಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ದಾಳಿ ಮಾಡಲು ಪ್ರತಿಪಕ್ಷಗಳಿಗೆ ಈ ವಿಡಿಯೋ ಮದ್ದುಗುಂಡುಗಳನ್ನು ನೀಡಿದಂತಾಗಿದೆ.

ವಿಡಿಯೊದಲ್ಲಿ ಕಿರಿಟ್ ಸೋಮಯ್ಯ ಎನ್ನಲಾದ ವ್ಯಕ್ತಿ ಯಾರೋ ಮಹಿಳೆಯೊಬ್ಬರ ಜೊತೆ ಅಶ್ಲೀಲವಾಗಿ ಮಾತನಾಡುತ್ತಾ ಅಶ್ಲೀಲ ಹಾವಭಾವ ಪ್ರದರ್ಶಿಸುತ್ತಾ, ಬೆತ್ತಲೆ ದೇಹ ಪ್ರದರ್ಶನ ಮಾಡಿರುವುದು ತೋರುತ್ತದೆ.

ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಸೋಮಯ್ಯ ಮತ್ತು ಆಡಳಿತ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ”ವೀಡಿಯೊ ಅವರ ‘ಗುಣ ಮತ್ತು ನಿಜವಾದ ಮುಖ’ವನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದೆ.

ಈ ವಿಡಿಯೋ ಅವರ ನೈಜ ಪಾತ್ರವನ್ನು ಮತ್ತು ಅವರ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕಿ ಯಶೋಮತಿ ಠಾಕೂರ್ ಅವರು, ”ಸಮ್ಮಿಶ್ರ ಸರ್ಕಾರದ ಚಾರಿತ್ರ್ಯ ಮತ್ತು ನಿಜ ಮುಖ ಇಂದು ಬಯಲಾಗಿದೆ. ಕಿರೀಟ್ ಸೋಮಯ್ಯ ಹಲವು ಶಾಸಕರು, ಸಂಸದರನ್ನು ಬ್ಲಾಕ್‌ಮೇಲ್ ಮಾಡಿದ್ದಾರೆ. ಈಗ ಒಂದಷ್ಟು ಮಹಿಳೆಯರನ್ನು ಬ್ಲಾಕ್‌ಮೇಲ್ ಮಾಡಿರುವುದನ್ನು ನಾವು ನೋಡಬಹುದು. ಎಂಟು ಗಂಟೆಯ ಕ್ಲಿಪ್ ಹೊರಬಿದ್ದಿದೆ. ಕ್ಲಿಪ್‌ನಿಂದಾಗಿ ಎಷ್ಟು ಮಹಿಳೆಯರು ಕಿರುಕುಳ ಮತ್ತು ಚಿತ್ರಹಿಂಸೆಗೆ ಒಳಗಾಗಿರಬಹುದು ಎಂದು ನಾನು ಊಹಿಸಲು ಸಹ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

”ನೈತಿಕತೆಯ ಬಗ್ಗೆ ಆಗಾಗ್ಗೆ ಉಪನ್ಯಾಸ ನೀಡುವ ಬಿಜೆಪಿ ನಾಯಕರು ಇದೀಗ ಕಿರಿತ್ ಸೋಮಯ್ಯ ಅವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ತೋರಬೇಕು” ಎಂದು ಅವರು ಹೇಳಿದ್ದಾರೆ.

ಸೋಮಯ್ಯ ಅವರನ್ನು ಹೆಸರಿಸದೆ, ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಅವರು, ಬಾಳಾಸಾಹೇಬ್ ಠಾಕ್ರೆಯನ್ನು ಉಲ್ಲೇಖಿಸಿ ”ಅವನ ಕರ್ಮದಿಂದ ಸಾಯುವವರನ್ನು ಧರ್ಮದಿಂದ ಕೊಲ್ಲಬೇಡಿ” ಎಂದು ಹೇಳಿದರು.

ಗೌರವಾನ್ವಿತ ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಮೌಲ್ಯಗಳನ್ನು ನಾವು ಹೊಂದಿದ್ದೇವೆ. ಅವರು ಹೇಳುತ್ತಿದ್ದರು, ”ಅವನ ಕರ್ಮದಿಂದ ಸಾಯುವವರನ್ನು ಧರ್ಮದಿಂದ ಕೊಲ್ಲಬೇಡಿ” ಎಂದು… ನಿಖರವಾಗಿ ಅದೇ ಆಗುತ್ತಿದೆ. ಇನ್ನೂ ಬಹಳಷ್ಟು ಸಂಭವಿಸುತ್ತದೆ. ಏನಾಗುತ್ತದೆ ಎಂದು ನೋಡೋಣ. ಜೈ ಮಹಾರಾಷ್ಟ್ರ!” ಶ್ರೀ ರಾವುತ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ವಿಷಯ ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಕಿರಿಟ್‌ ಸೋಮಯ್ಯ ಅವರ ಬಗ್ಗೆ ಟೀಕೆಗಳು ಕೇಳಿ ಬಂದಿವೆ ದೂರುಗಳು ಕೂಡ ದಾಖಲಾಗಿವೆ. ಆದರೆ, ಕಿರಿಟ್ ಸೋಮಯ್ಯ ಅವರು, ”ಈ ವಿಡಿಯೊ ನನ್ನದಲ್ಲ, ನನ್ನ ಹಸರಿನಲ್ಲಿ ತಿರುಚಿದ ವಿಡಿಯೊಗಳನ್ನು ಬಿತ್ತರಿಸಲಾಗಿದೆ. ನಾನು ಯಾವುದೇ ಮಹಿಳೆ ಅಥವಾ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿಲ್ಲ. ವಿಡಿಯೊ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿ ಕ್ರಮ ಜರುಗಿಸಬೇಕು” ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವ ದೇವೇಂದ್ರ ಫಡಣವೀಸ್ ಅವರಿಗೆ ಟ್ವಿಟ್ ಮೂಲಕ ದೂರು ನೀಡಿದ್ದಾರೆ.ಮಾಜಿ ಸಂಸದರು ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪೂಂಚ್ ದಾಳಿ ಬಿಜೆಪಿಯ ಚುನಾವಣಾ ಪೂರ್ವ ಗಿಮಿಕ್: ಚರಂಜಿತ್ ಸಿಂಗ್ ಚನ್ನಿ

0
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ವಾಯು ಪಡೆಯ ಬೆಂಗಾವಲು ವಾಹನದ ಮೇಲೆ ನಡೆದ ಉಗ್ರರ ದಾಳಿಯು ಬಿಜೆಪಿಯ ಚುನಾವಣಾ ಪೂರ್ವ ಗಿಮಿಕ್‌ ಎಂದು ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ...