Homeಮುಖಪುಟ’ಅಕ್ರಮ ವಿದೇಶಿ’ ಹೆಸರಲ್ಲಿ ಒಂದೂವರೆ ವರ್ಷ ಬಂಧನ: ಕೊನೆಗೂ ಭಾರತೀಯರು ಎಂದು ಒಪ್ಪಿಕೊಂಡ ಸರ್ಕಾರ

’ಅಕ್ರಮ ವಿದೇಶಿ’ ಹೆಸರಲ್ಲಿ ಒಂದೂವರೆ ವರ್ಷ ಬಂಧನ: ಕೊನೆಗೂ ಭಾರತೀಯರು ಎಂದು ಒಪ್ಪಿಕೊಂಡ ಸರ್ಕಾರ

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಎಂಬ ಸೇಡು-ದ್ವೇಷದ ಮತ್ತು ರಾಜಕೀಯ ಲಾಭದ ಆಟದಲ್ಲಿ ಲಕ್ಷಾಂತರ ಜನ ಇಂದಿಗೂ ಏದುಸಿರು ಬಿಡುತ್ತಿದ್ದಾರೆ.

- Advertisement -
- Advertisement -

ಅಕ್ರಮ ವಿದೇಶಿಯರು ಎಂದು ಅಸ್ಸಾಂನ ಈ ದಂಪತಿಯನ್ನು ಬಂಧಿಸಿ ಬಂಧನ ಕೇಂದ್ರಕ್ಕೆ ಸೇರಿಸಲಾಗಿತ್ತು. ಎನ್‌ಆರ್‌ಸಿ ಹೆಸರಲ್ಲಿ ಅಸ್ಸಾಂನಲ್ಲಿ ನಡೆದ ದಬ್ಬಾಳಿಕೆಗೆ ಸಾಂಕೇತಿಕದಂತಿದೆ ಈ ಪ್ರಕರಣ. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಬಂಧನ ಕೇಂದ್ರ(ಡಿಟೆನ್ಸನ್ ಸೆಂಟರ್)ದಲ್ಲಿ ಕಳೆದ ಈ ದಂಪತಿ ಈಗ ತಾವು ಭಾರತೀಯರು ಎಂದು ಪ್ರೂವ್ ಮಾಡಿ ನಿರಾಳರಾಗಿದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಎಂಬ ಸೇಡು-ದ್ವೇಷದ ಮತ್ತು ರಾಜಕೀಯ ಲಾಭದ ಆಟದಲ್ಲಿ ಲಕ್ಷಾಂತರ ಜನ ಇಂದಿಗೂ ಏದುಸಿರು ಬಿಡುತ್ತಿದ್ದಾರೆ.

’ನಮ್ಮನ್ನು ಅಕ್ರಮ ವಲಸೆಗಾರರು ಎಂದು ನಿರ್ಧರಿಸಿದ್ದರು. ಅದು ಹೇಗೆ ಸಾಧ್ಯ?’ ಎಂಬ ಈ ದಂಪತಿಯ ಪ್ರಶ್ನೆಗೆ ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಬಳಿ ಯಾವ ಉತ್ತರವೂ ಇಲ್ಲ. ಮೊಹಮ್ಮದ್ ನೂರ್ ಹುಸೇನ್ (34) ಮತ್ತು ಶಹೀರಾ ಬೇಗಂ(26) ದಂಪತಿ ಕತೆಯಿದು. ಇವರ ಬಂಧನದ ನಂತರ, ಅವರ ಇಬ್ಬರು ಪುಟ್ಟ ಮಕ್ಕಳಿಗೆ ಆಶ್ರಯವಿಲ್ಲದೇ ಅವರೂ ಡಿಟೆನ್ಸನ್ ಸೆಂಟರ್‌ನಲ್ಲಿ ಕಳೆಯಬೇಕಾಯಿತು. ಇದೀಗ ವಿದೇಶಿಯರ ನ್ಯಾಯಮಂಡಳಿ (ಫಾರೆನರ್‍ಸ್ ಟ್ರಿಬುನಲ್) ಇವರನ್ನು ಭಾರತೀಯರು ಎಂದು ಘೋಷಿಸಿದೆ.

’ನಾವು ಹೆಮ್ಮೆಯ ಭಾರತೀಯರು. ಅಸ್ಸಾಂನವರು. ಅಕ್ರಮವಾಗಿ ಗಡಿ ದಾಟಿದ ಬಾಂಗ್ಲಾದೇಶಿಯರು ಎಂದು ನಮ್ಮನ್ನು ಬಂಧಿಸಿ ಕೊಳೆ ಹಾಕಿದರು. ಇದೆಲ್ಲ ಹೇಗೆ ಸಾಧ್ಯ? ನಾನು ಅಸ್ಸಾಂನಲ್ಲೇ ಜನಿಸಿದವನು’ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಎದುರು ತಮ್ಮ ನೋವು-ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಹುಸೇನ್. ಅಸ್ಸಾಂನ ಉದುಲ್‌ಗಿರಿ ಜಿಲ್ಲೆಯ ಲಾಲ್‌ಡಂಗ್ ಗ್ರಾಮದ ಹುಸೇನ್ ಗುವಾಹತಿಯಲ್ಲಿ ರಿಕ್ಷಾ ಎಳೆಯುವ ಕೆಲಸ ಮಾಡುತ್ತಾರೆ. ಹುಸೇನ್‌ರ ಅಜ್ಜ-ಅಜ್ಜಿಯರ ಹೆಸರು 1951 ರ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿದೆ. ಹುಸೇನ್ ತಂದೆಯ ಹೆಸರು (ಹುಸೇನ್ ಅಜ್ಜ-ಅಜ್ಜಿಯರ ಹೆಸರಿನ ಸಮೇತ) 1965 ರ ಮತದಾರರ ಪಟ್ಟಿಯಲ್ಲಿದೆ.

ಇದನ್ನೂ ಓದಿ: ಎನ್ನಾರ್ಸಿ, ಸಿಎಬಿ ಹಾಗೂ ಎನ್‍ಪಿಆರ್ ಎನ್ನುವ ಮೂರು ಅಂಕದ ನಾಟಕ

ಹುಸೇನ್ ಪತ್ನಿ ಬೇಗಂ ತಂದೆಯ ಹೆಸರು ಕೂಡ 1951 ರ ಎನ್‌ಆರ್‌ಸಿ ಮತ್ತು 1966 ರ ಮತದಾರರ ಪಟ್ಟಿಯಲ್ಲಿದೆ, ಜೊತೆಗೆ ಕುಟುಂಬದ ಬಳಿ 1958-59 ರ ದಿನಾಂಕಗಳಿರುವ ಭೂ ದಾಖಲೆಗಳು ಇವೆ. ಭಾರತೀಯನೆಂದು ಗುರುತಿಸಲು ಅಸ್ಸಾಂನಲ್ಲಿ ಕಟ್ ಆಫ್ ದಿನಾಂಕ ಮಾರ್ಚ್ 24-1971.
ಇಷ್ಟಿದ್ದರೂ, 2017 ರಲ್ಲಿ ಈ ದಂಪತಿಯ ಭಾರತೀಯತೆಯ ರುಜುವಾತುಗಳನ್ನು ತನಿಖೆ ಮಾಡತೊಡಗಿದ ಗುವಾಹತಿ ಪೊಕೀಸರಿಗೆ ಮೇಲಿನ ಯಾವ ದಾಖಲೆಗಳೂ ಮೌಲ್ಯಯುತ ಅನಿಸಲೇ ಇಲ್ಲ. 2017 ರ ಅಗಸ್ಟ್‌ನಲ್ಲಿ ಬೇಗಂ ಕೇಸನ್ನು ಮತ್ತು 2018 ರ ಜನವರಿಯಲ್ಲಿ ಹುಸೇನ್ ಕೇಸನ್ನು ಫಾರೆನರ್‍ಸ್ ಟ್ರಿಬುನಲ್‌ಗೆ ವರ್ಗಾಯಿಸಲಾಯಿತು. ಅಂದರೆ ಈ ದಂಪತಿ ತಮ್ಮನ್ನು ಭಾರತೀಯರು ಎಂದು ತಾವು ಪ್ರೂವ್ ಮಾಡಿಕೊಳ್ಳಬೇಕು.

’ಅನಕ್ಷರಸ್ಥರಾದ ನಮ್ಮಿಬ್ಬರಿಗೂ ಯಾವುದು ಯಾವುದರ ದಾಖಲೆ ಎಂದು ಗುರುತಿಸುವುದು ಗೊತ್ತಾಗಲಿಲ್ಲ ಮತ್ತು ಮುಂದೇನು ಮಾಡುವುದು ಎಂಬುದೂ ತಿಳಿಯಲಿಲ್ಲ’ ಎನ್ನುತ್ತಾರೆ ಹುಸೇನ್. ಹುಸೇನ್ 4 ಸಾವಿರ ರೂ. ಕೊಟ್ಟು ಒಬ್ಬ ಲಾಯರ್ ಪಡೆದರು. ಆದರೆ ಟ್ರಿಬುನಲ್‌ನಲ್ಲಿ ಅವರ ಪತ್ನಿ ಬೇಗಂ ಪ್ರತಿನಿಧಿಸಲು ಯಾರೂ ಇರಲಿಲ್ಲ. ಅಗಸ್ಟ್ 28-2018 ರಂದು ಕೇಸಿನಿಂದ ಹೊರ ನಡೆದ ಹುಸೇನ್ ಲಾಯರ್, ಮುಂದೆ ಸತತವಾಗಿ ಟ್ರಿಬುನಲ್ ವಿಚಾರಣೆಗೆ ಹಾಜರಾಗಲೇ ಇಲ್ಲ.

ಟ್ರಿಬುನಲ್ ನಲ್ಲಿ ೨ ಲಕ್ಷ ಕೇಸು ಇತ್ಯರ್ಥ. ಫಾರೆನರ್‍ಸ್ ಟ್ರಿಬುನಲ್ ಅರೆ ನ್ಯಾಯಾಂಗೀಯ ಮಂಡಳಿಗಳಾಗಿದ್ದು, ಒಬ್ಬ ವ್ಯಕ್ತಿ ’ಅಕ್ರಮ ವಿದೇಶಿಗ’ ಹೌದೋ ಅಲ್ಲವೋ ಎಂಬ ಅಭಿಪ್ರಾಯ ನೀಡುತ್ತವೆ. ರಾಜ್ಯ ಪೊಲೀಸರು ರೆಫರ್ ಮಾಡಿದ ಕೇಸುಗಳು ಮತ್ತು ಚುನಾವಣಾ ಅಧಿಕಾರಿಗಳು ’ಸಂದೇಹಿತ ಮತದಾರ’ ಎಂದು ಗುರುತಿಸಿದ ಕೇಸುಗಳನ್ನು ಟ್ರಿಬುನಲ್ ವಿಚಾರಣೆ ಮಾಡುತ್ತದೆ. 2020 ರ ಜುಲೈವರೆಗೆ 4.34 ಲಕ್ಷ ಕೇಸುಗಳ ಪೈಕಿ 2 ಲಕ್ಷ ಕೇಸುಗಳನ್ನು ಟ್ರಿಬುನಲ್ ಇತ್ಯರ್ಥ ಮಾಡಿದೆ.

“ಲಾಯರ್ ನನಗೆ ಹೇಳಿದ, ‘ನಿನ್ನಿಂದ ನನ್ನ ಫೀಸ್ ಭರಿಸಲಾಗಲ್ಲ. ಗುವಾಹತಿ ತೊರೆದು ಪರಾರಿಯಾಗು, ಇಲ್ಲವಾದರೆ ಪೊಲೀಸರು ನಿನ್ನನ್ನು ಬಂಧಿಸುತ್ತಾರೆ…..’ ಎಂದು. ಅದಕ್ಕೆ ನಾನು ಹೇಳಿದೆ, ‘ನಾನ್ಯಾಕೆ ಪರಾರಿಯಾಗಲಿ, ನಾನೇನು ತಪ್ಪು ಮಾಡಿರುವೆ’’ ಎಂದು ಹುಸೇನ್ ಅಂದಿನ ಸಂದಿಗ್ಧವನ್ನು ನೆನೆಯುತ್ತಾರೆ. ಮೇ 29-2019 ರಂದು ಟ್ರಿಬುನಲ್ ಬೇಂಗಂರನ್ನು ’ವಿದೇಶಿ’ ಎಂದು ಘೋಷಿಸಿತು. ಮರುವರ್ಷ ಮಾರ್ಚ್ 30 ರಂದು ಹುಸೇನ್‌ಗೂ ’ವಿದೇಶಿ’ ಪಟ್ಟವನ್ನು ಟ್ರಿಬುನಲ್ ಕಟ್ಟಿತು. ವಿದೇಶಿಯರ ಕಾಯ್ದೆ ಸೆಕ್ಷನ್ 9 ರ ಪ್ರಕಾರ, ಒಬ್ಬ ವ್ಯಕ್ತಿ ತಾನು ವಿದೇಶಿಯಲ್ಲ ಎಂದು ಪ್ರೂವ್ ಮಾಡುವ ಜವಾಬ್ದಾರಿ ಆತನ/ಆಕೆಯ ಮೇಲೆಯೇ ಇದೆ. ಹೀಗಾಗಿ ಟ್ರಿಬುನಲ್ ಮುಂದೆ ಹಾಜರಾಗದೇ ಇದ್ದರೆ ಆತ/ಆಕೆ ವಿದೇಶಿ ಎಂದು ನಿರ್ಧರಿತವಾಗಿ ಬಿಡುತ್ತದೆ! ಜೂನ್ 2019 ರಲ್ಲಿ ಈ ದಂಪತಿಯನ್ನು ಬಂಧಿಸಿ ಗೋಲ್ಪಾರಾ ಜಿಲ್ಲೆಯ ಡಿಟೆನ್ಸನ್ ಸೆಂಟರ್‌ಗೆ ತಳ್ಳಿದಾಗ, ಅವರಿಬ್ಬರ ಸುತ್ತಲಿನ ಜಗತ್ತೇ ಕುಸಿದು ಹೋದಂತಾಯಿತು.

ಇದನ್ನೂ ಓದಿ: ಕರೋನಾಕ್ಕೆ ಕೊನೆಯಿದ್ದೀತು, ಆದರೆ ಈ ಮುಸ್ಲಿಮ್ ದ್ವೇಷಕ್ಕೆ ಮದ್ದೇನು?

”ನಮ್ಮ ಸಂಬಂಧಿಕರು ದೂರದ ಹಳ್ಳಿಯಲ್ಲಿದ್ದ ಕಾರಣ ಮಕ್ಕಳ ಪಾಲನೆ ಮಾಡುವವರು ಯಾರೂ ಇರಲಿಲ್ಲ. ಹೀಗಾಗಿ ನಮ್ಮ 7 ಮತ್ತು 5 ವರ್ಷದ ಮಕ್ಕಳನ್ನು ಡಿಟೆನ್ಸನ್ ಸೆಂಟರ್‌ಗೇ ಕರೆದೊಯ್ದೆವು. ಹಿರಿಮಗ ಶಾಲೆಯನ್ನೂ ತಪ್ಪಿಸಿಕೊಂಡ’’ ಎಂದು ಬೇಂಗಂ ನೆನೆಸಿಕೊಳ್ಳುತಾರೆ. ಜೈಲಿನಲ್ಲಿದ್ದಾಗ ನನ್ನ ಮಕ್ಕಳು ಆಗಾಗ ”ಮನೆಗೆ ಹೋಗೋಣ’’ ಎಂದು ಪೀಡಿಸುತ್ತಲೇ ಇದ್ದರು ಎನ್ನುತ್ತಾರೆ ಬೇಗಂ. ಇಂತಹ ಸಂದರ್ಭದಲ್ಲಿ, ದಂಪತಿಯ ಸಂಬಂಧಿಕರು ಗುವಾಹತಿಯ ಅಮನ್ ವಡುದ್ ಎಂಬ ಮಾನವ ಹಕ್ಕು ವಕೀಲರನ್ನು ಭೇಟಿಯಾಗುತ್ತಾರೆ. ಸಯ್ಯದ್ ಬರ್‍ಹನುರ್ ರೆಹಮಾನ್ ಮತ್ತು ಝಕೀರ್ ಸಯ್ಯದ್ ಎಂಬ ವಕೀಲರೊಂದಿಗೆ ಅಮನ್ ಗುವಾಹತಿ ಹೈಕೋರ್ಟಿನಲ್ಲಿ ಮತ್ತು ಮುಂದೆ ಟ್ರಿಬುನಲ್‌ನಲ್ಲಿ ಈ ದಂಪತಿಯ ಕೇಸನ್ನು ಪ್ರತಿನಿಧಿಸುತ್ತಾರೆ.

“ವಿದೇಶಿ ಎಂಬ ಹಣೆಪಟ್ಟಿ ಪಡೆದ ಎಲ್ಲರಿಗೂ ವಕೀಲರು ಸಿಗುವುದಿಲ್ಲ. ಇದರಿಂದ ನಾಗರಿಕರು ದಿಕ್ಕೆಟ್ಟು ಹೋಗುತ್ತಿದ್ದಾರೆ, ಅವರ ಬಳಿ ಲಾಯರ್ ಫೀಸ್ ಕಟ್ಟಲೂ ಕಾಸು ಇರುವುದಿಲ್ಲ’’ ಎನ್ನುತ್ತಾರೆ ವಕೀಲ ಅಮನ್ ವಡುದ್. 2020 ರ ಅಕ್ಟೋಬರ್ 8 ರಂದು ಫಾರೆನರ್‍ಸ್ ಟ್ರಿಬುನಲ್ ಆದೇಶಗಳನ್ನು ತಳ್ಳಿ ಹಾಕಿದ ಹೈಕೋರ್ಟ್, ಮರು ವಿಚಾರಣೆ ನಡೆಸುವಂತೆ ಟ್ರಿಬುನಲ್‌ಗೆ ಆದೇಶಿಸಿತು. ನಂತರ ಕೆಲ ದಿನಗಳಲ್ಲಿ ದಂಪತಿ ಜಾಮೀನು ಮೇಲೆ ಹೊರ ಬಂದರು. ಅದಾದ ಎರಡು ವಾರಗಳ ನಂತರ 2020 ಡಿಸೆಂಬರ್ 16 ರಂದು ಟ್ರಿಬುನಲ್ ಹುಸೇನ್ ಅವರನ್ನು ಭಾರತೀಯ ಎಂದು ಘೋಷಿಸಿತು.

ಮೊನ್ನೆ ಬುಧವಾರ ಬೇಗಂ ಅವರ ತಲೆಗೆ ಕಟ್ಟಿದ್ದ ’ವಿದೇಶಿ’ ಹಣೆಪಟ್ಟಿಯೂ ಕಳಚಿಬಿದ್ದು, ಅವರೂ ಭಾರತೀಯ ಎಂದು ಘೋಷಣೆಯಾಗಿತು. ಅವತ್ತು ಮೂವರು ಲಾಯರ್‌ಗಳು ಮತ್ತು ಹುಸೇನ್ ಕುಟುಂಬ ಸಂಭ್ರಮಾಚರಣೆ ಮಾಡಿದರು. ಆಗ ವಕೀಲ ಅಮನ್ ವುಡುದ್ ದಂಪತಿಯ 7 ವರ್ಷದ ಹಿರಿಮಗ ಶಹಾಜಹಾನ್‌ಗೆ ಕೇಳಿದರು, ’ಮುಂದೇನಾಗುತ್ತಿಯಾ?’ ಎಂದು. ಏಳು ವರ್ಷದ ಹುಡುಗ ಹೇಳಿತು: ’ಉಕೀಲ್’ (ವಕೀಲ) ಎಂದು!.

ಇದನ್ನೂ ಓದಿ: ಅಂದಿನ ಸಾದತ್‌ ಹಸನ್‌ ಮಂಟೋ ಮತ್ತು ಇಂದಿನ ನಾವು…!! : ಇಸ್ಮತ್ ಪಜೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...