Homeಮುಖಪುಟಕರ್ನಾಟಕದ ಪೂರ್ಣಾವಧಿ ಸಿಎಂ ಆದವರು ಮೂರು ಜನ ಮಾತ್ರ: ಹೆಚ್ಚು ದಿನ ಅಧಿಕಾರ ನಡೆಸಿದವರು ದೇವರಾಜ...

ಕರ್ನಾಟಕದ ಪೂರ್ಣಾವಧಿ ಸಿಎಂ ಆದವರು ಮೂರು ಜನ ಮಾತ್ರ: ಹೆಚ್ಚು ದಿನ ಅಧಿಕಾರ ನಡೆಸಿದವರು ದೇವರಾಜ ಅರಸು

- Advertisement -
- Advertisement -

ಕರ್ನಾಟಕದ ಸಿಎಂ ಆಯ್ಕೆ ಕಗ್ಗಂಟು ಮುಗಿದಿದ್ದು ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಈ ನಡುವೆ ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿ ಎಂಬ ಎಂ.ಬಿ ಪಾಟೀಲ್‌ರವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ಸಿದ್ದರಾಮಯ್ಯನವರು ಈ ಬಾರಿಯೂ ಪೂರ್ಣಾವಧಿ ಸಿಎಂ ಆದಲ್ಲಿ ಹಲವಾರು ದಾಖಲೆಗಳಿಗೆ ಪಾತ್ರರಾಗಲಿದ್ದಾರೆ. ಏಕೆಂದರೆ ಇದುವರೆಗೂ ಪೂರ್ಣಾವಧಿಗೆ ಮುಖ್ಯಮಂತ್ರಿಯಾದವರು ಮೂರು ಜನ ಮಾತ್ರ. ಸಿದ್ದರಾಮಯ್ಯ ಎರಡನೇ ಬಾರಿಗೆ ಪೂರ್ಣಾವಧಿ ಮುಖ್ಯಮಂತ್ರಿಯಾದ ವಿಶಿಷ್ಟ ದಾಖಲೆ ಮಾಡಬಹುದು.

ಪೂರ್ಣಾವಧಿ ಸಿಎಂಗಳು

ಎಸ್‌ ನಿಜಲಿಂಗಪ್ಪನವರು 1962ರಿಂದ 1967ರವರೆಗೆ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿದ್ದರು. ಅವರ ನಂತರ ದೇವರಾಜ ಅರಸುರವರು 1972 ರಿಂದ 1977ರವರೆಗೆ ಪೂರ್ಣಾವಧಿ ಸಿಎಂ ಆಗಿದ್ದರು. ಆದಾದ ನಂತರ 2013ರಲ್ಲಿ ಸಿಎಂ ಆದ ಸಿದ್ದರಾಮಯ್ಯನವರು 2018ರವರೆಗೂ ಪೂರ್ಣಾವಧಿ ಪೂರೈಸಿದ್ದರು.

1999ರ ಅಕ್ಟೋಬರ್​ನಲ್ಲಿ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಅಧಿಕಾರ ಹಿಡಿದಿತ್ತು. ಆದರೆ ಇನ್ನೇನು ಪೂರ್ಣಾವಧಿ ಮುಗಿಸಲು ಕೇವಲ 5 ತಿಂಗಳು ಇದೆ ಎನ್ನುವಾಗಲೇ ಲೋಕಸಭಾ ಚುನಾವಣೆ ಎದುರಾಗಿತ್ತು. ಹೀಗಾಗಿ ವಿಧಾನಸಭೆ ಚುನಾವಣೆಯೂ ಒಟ್ಟಿಗೇ ನಡೆಯಲಿ ಎನ್ನುವ ಉದ್ದೇಶದಿಂದ ಮಾಜಿ ಸಿಎಂ ಎಸ್.ಎಂ ಕೃಷ್ಣ ವಿಧಾನಸಭೆಯನ್ನು ವಿಸರ್ಜಿಸಿದ್ದರು. ಹೀಗಾಗಿ ಪೂರ್ಣಾವಧಿ ಸಿಎಂ ಪಟ್ಟಿಗೆ ಅವರ ಹೆಸರು ಸೇರ್ಪಡೆಯಾಗಲಿಲ್ಲ.

ಹೆಚ್ಚು ದಿನ ಕರ್ನಾಟಕದ ಸಿಎಂ ಆದವರು 

  1. ಎಸ್. ನಿಜಲಿಂಗಪ್ಪ: 2,729 ದಿನಗಳು
  2. ದೇವರಾಜ ಅರಸು: 2,790 ದಿನಗಳು
  3. ರಾಮಕೃಷ್ಣ ಹೆಗ್ಡೆ: 1,967 ದಿನಗಳು
  4. ಸಿದ್ದರಾಮಯ್ಯ*: 1,828+++ ದಿನಗಳು

ಕಡಿದಾಳು ಮಂಜಪ್ಪನವರು ಅತಿ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ. ಅವರು ಕೇವಲ 73 ದಿನಗಳ ಕಾಲ ಅಧಿಕಾರದಲ್ಲಿದ್ದರು.

ವರ್ಷಗಳ ಕಾಲ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳ ಸಂಖ್ಯೆ

1 ವರ್ಷದವರೆಗೆ ಅಧಿಕಾರದಲ್ಲಿದ್ದವರು: 09
2 ವರ್ಷದವರೆಗೆ ಅಧಿಕಾರದಲ್ಲಿದ್ದವರು: 08
3 ವರ್ಷದವರೆಗೆ ಅಧಿಕಾರದಲ್ಲಿದ್ದವರು: 06
4 ವರ್ಷದವರೆಗೆ ಅಧಿಕಾರದಲ್ಲಿದ್ದವರು: 3
5 ವರ್ಷದವರೆಗೆ ಅಧಿಕಾರದಲ್ಲಿದ್ದವರು: 3
5 ವರ್ಷ ಮೇಲ್ಪಟ್ಟು ಅಧಿಕಾರದಲ್ಲಿದ್ದವರು: 3

ಇದನ್ನೂ ಓದಿ: ಇದುವರೆಗಿನ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಜಾತಿ ಪ್ರಾತಿನಿಧ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...