Homeಕರ್ನಾಟಕಆಪರೇಷನ್ ಕಮಲದ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು. ಏಕೆಂದರೆ..

ಆಪರೇಷನ್ ಕಮಲದ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು. ಏಕೆಂದರೆ..

- Advertisement -
- Advertisement -

ಕೊನೆಗೂ ಭಾರತೀಯ ಜನತಾ ಪಕ್ಷ ಎರಡನೆಯ ಬಾರಿಗೆ ಕರ್ನಾಟಕದಲ್ಲಿ ತನ್ನ ಸರಕಾರ ರಚಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಇಷ್ಟರಮಟ್ಟಿಗಿನ ಅಧಿಪತ್ಯ ಸ್ಥಾಪಿಸಿದ ಏಕೈಕ ರಾಜ್ಯ ಎಂದರೆ ಅದು ಕರ್ನಾಟಕ ಮಾತ್ರ ಎನ್ನುವ ನೆಲೆಯಲ್ಲಿ ಬಿಜೆಪಿಯ ಸಾಧನೆ ಚಾರಿತ್ರಿಕ. ಅಷ್ಟೇ ಚಾರಿತ್ರಿಕವಾಗಿ ಉಳಿಯುವ ಇನ್ನೊಂದು ಅಂಶ ಎನು ಎಂದರೆ ಎರಡು ಬಾರಿಯೂ ಬಿಜೆಪಿ ಅಡ್ಡ ದಾರಿ ಹಿಡಿದೇ ಈ ರಾಜ್ಯದಲ್ಲಿ ಸರಕಾರ ರಚನೆ ಮಾಡಬೇಕಾಯಿತು ಎನ್ನುವುದು.

ಕರ್ನಾಟಕದ ಜನ ಸಂಪೂರ್ಣವಾಗಿ ಬಿಜೆಪಿಯನ್ನು ಇನ್ನೂ ಒಪ್ಪಿಲ್ಲ, ಸಂಪೂರ್ಣವಾಗಿ ತಿರಸ್ಕರಿಸಲೂ ಇಲ್ಲ ಎನ್ನುವುದು ಈವರೆಗಿನ ಸತ್ಯ. ಈ ಸತ್ಯವನ್ನು ಸ್ವೀಕರಿಸಲಾಗದೆ ಬಿಜೆಪಿ ಆಪರೇಷನ್ ಕಮಲ ಎನ್ನುವ ರಾಜಕೀಯ ಕುತಂತ್ರದ ವ್ಯೂಹ ರಚಿಸಿ ಅಧಿಕಾರಕ್ಕೇರಿದೆ. 2018ರಲ್ಲಿ ಚುನಾವಣೆ ನಡೆದಾಗ ಬಿಜೆಪಿಗೆ ಅನುಕಂಪದ ಅಲೆಯ ಬೆಂಬಲವಿತ್ತು. ಆ ಹಿಂದೆ ಜೆಡಿಎಸ್‍ನ ಜತೆ ಸೇರಿ ರಚಿಸಿದ ಸಮ್ಮಿಶ್ರ ಸರಕಾರ ಒಡಂಬಡಿಕೆಯನ್ವಯ ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಿಲ್ಲ ಎನ್ನುವ ಕಾರಣಕ್ಕೆ ಹುಟ್ಟಿದ ಅನುಕಂಪದ ಅಲೆ ಬಿಜೆಪಿಯನ್ನು ಅಧಿಕಾರದ ಅಂಚಿಗೆ ತಂದು ನಿಲ್ಲಿಸಿತ್ತೆ ಹೊರತು ಸರಳ ಬಹುಮತ ನೀಡಲಿಲ್ಲ. 110 ಸ್ಥಾನಗಳನ್ನು ಪಡೆದ ಬಿಜೆಪಿಗೆ ಹಲವು ಪಕ್ಷೇತರ ಸದಸ್ಯರ ಬೆಂಬಲ ನಿರೀಕ್ಷಿತ ರೀತಿಯಲ್ಲೇ ಸಿಕ್ಕಿದ ಕಾರಣ ಹಾಗೂ ಹೀಗೂ ಅಧಿಕಾರ ಹಿಡಿಯಿತು. ಆ ನಂತರ ಹಿಡಿದ ಅಧಿಕಾರ ಭದ್ರಪಡಿಸಿಕೊಳ್ಳಲು ಆಪರೇಷನ್ ಕಮಲ ನಡೆಸಿತು. ಆ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು.

2018ರಲ್ಲಿ ಚುನಾವಣೆ ನಡೆದಾಗ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಬಹಳಷ್ಟು ಬದಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯ ವರ್ಚಸ್ಸು ಉತ್ತುಂಗದಲ್ಲಿತ್ತು. ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆ ಒಂದು ರಾಷ್ಟ್ರೀಯ ಐತಿಹ್ಯ ಎನ್ನುವಷ್ಟರಮಟ್ಟಿಗೆ ಮನೆಮಾತಾಗಿತ್ತು. ಮೋದಿಯ ವರ್ಚಸ್ಸು, ಅಮಿತ್ ಶಾ ತಂತ್ರಗಾರಿಕೆ, ಅರ.ಎಸ್.ಎಸ್‍ನ ತ್ರಿಕರಣ ಬೆಂಬಲ, ಸಾಮಾಜಿಕ ಜಾಲತಾಣಗಳ ಮೂಲಕ ಲಂಗುಲಗಾಮಿಲ್ಲದೆ ನಡೆಸಿದ ಪ್ರಚಾರ ಇತ್ಯಾದಿ ಎಲ್ಲವೂ ಸೇರಿಯೂ ಆ ಚುನಾವಣೆಯಲ್ಲಿ ಬಿಜೆಪಿಗೆ 2008ರಲ್ಲಿ ಗೆದ್ದಷ್ಟು ಸ್ಥಾನಗಳನ್ನೂ ಗೆಲ್ಲಲಾಗಲಿಲ್ಲ. ಏದುಸಿರು ಬಿಟ್ಟು ಗೆದ್ದದ್ದು 104 ಸ್ಥಾನ. ಆಗ ಕೈತಪ್ಪಿಹೋದ ಅಧಿಕಾರ ಈಗ 14 ತಿಂಗಳುಗಳ ನಂತರ ಮತ್ತೊಂದು ಸುತ್ತು ಆಪರೇಶನ್ ಕಮಲ ನಡೆಸಿದ ಕಾರಣಕ್ಕೆ ಬಂದಿದೆ.

2008 ರಲ್ಲಿ ಮೊದಲು ಸರಕಾರ ರಚಿಸಿ ಅದನ್ನು ಉಳಿಸಿಕೊಳ್ಳಲು ಆಪರೇಶನ್ ಕಮಲ ನಡೆಸಿದರೆ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಕೈಯ್ಯಲ್ಲಿದ್ದ ಸರಕಾರವನ್ನು ಕಸಿದುಕೊಳ್ಳಲು ಆಪರೇಷನ್ ಕಮಲ ಬಳಸಲಾಗಿದೆ. ಮೊದಲನೇ ಬಾರಿಗೆ ಆಪರೇಷನ್ ಕಮಲವನ್ನು ಒಂದಷ್ಟು ಅಂಜಿಕೆ, ಅಳುಕು ಇಲ್ಲದೆ ಬಹಿರಂಗವಾಗಿ ರಾಜಾರೋಷವಾಗಿ ಮಾಡಿದರೆ ಈ ಬಾರಿ ಅದನ್ನು ಕದ್ದುಮುಚ್ಚಿ, ಬಹಿರಂಗವಾಗಿ ಎಲ್ಲೂ ಒಪ್ಪಿಕೊಳ್ಳದೆ ನಡೆಸಲಾಗಿದೆ. ಇದರರ್ಥ ಈ ಬಾರಿ ಬಿಜೆಪಿಗೆ ಸ್ವಲ್ಪ ಮರ್ಯಾದೆಗೆ ಅಂಜುವ ಗುಣ ಬಂದಿದೆ ಅಂತ ಯಾರಾದರೂ ತಿಳಿದುಕೊಂಡರೆ ಅದು ತಪ್ಪು. ಈ ಬಾರಿ ಕದ್ದುಮುಚ್ಚಿ ಆಪರೇಷನ್ ಕಮಲ ನಡೆದದ್ದು ಬಹಿರಂಗವಾಗಿ ಮಾಡಿದರೆ ಅದು ಸೋಲುವ ಅಪಾಯವಿತ್ತು ಎನ್ನುವ ಕಾರಣಕ್ಕೆ. ಅಂತೂ ಕರ್ನಾಟಕದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರ ಪಡೆದು ಚರಿತ್ರೆ ನಿರ್ಮಿಸುವುದರ ಜತೆಗೆ ರಾಜಕೀಯ ವ್ಯಭಿಚಾರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಿಯೂ ಎರಡು ಬಾರಿ ಚರಿತ್ರೆಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿತು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

ಭಾರತದಲ್ಲಿ ಅಧಿಕಾರ ಎನ್ನುವುದು ಒಂದು ವಿಚಿತ್ರವಾದ ಗಂಗಾಜಲ. ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದವರ ವಿಚಾರದಲ್ಲಿ ಅವರು ಅಧಿಕಾರ ಹಿಡಿಯಲು ಬಳಸಿದ ಪಾಪಕಾರ್ಯಗಳು ಎಂತಹದ್ದೇ ಇರಲಿ, ಅವುಗಳನ್ನು ಜನ ಅದನ್ನು ಮರೆತು ಬಿಡುತ್ತಾರೆ. ಈ ಅಂಶವನ್ನು ಬಿಜೆಪಿ ಚೆನ್ನಾಗಿ ಅರಿತುಕೊಂಡಿದೆ. ಹಾಗಂತ ಈ ವಿಷಯದಲ್ಲಿ ಕೇವಲ ಬಿಜೆಪಿಯೊಂದನ್ನೇ ದೂರಿದರೆ ಸಾಕೇ?

ಬಿಜೆಪಿ ಅಧಿಕಾರ ಹಿಡಿಯಲು ನಡೆಸಿದ ರಾಜಕೀಯ ಮಾಂಸದಂಧೆಯಲ್ಲಿ ಇತರ ಪಕ್ಷದ ಚುನಾಯಿತ ಪ್ರತಿನಿಧಿಗಳು ಮಾರಿಕೊಳ್ಳಲು ತಯಾರಿದ್ದ ಕಾರಣಕ್ಕಾಗಿಯಲ್ಲವೇ ಬಿಜೆಪಿಗೆ ಅವರನ್ನು ಕ್ರಯಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿದ್ದು. ಅದು ಬಿಡಿ. ಖರೀದಿಸುವವರು ಎಲ್ಲಿರುತ್ತಾರೋ ಅಲ್ಲಿ ಮಾರಿಕೊಳ್ಳಲು ತಯಾರಿರುವವರು ಇದ್ದೇ ಇರುತ್ತಾರೆ. ಇದಕ್ಕಿಂತ ಮುಖ್ಯವಾದ ವಿಚಾರ ಅಂದರೆ ಮತದಾರರದ್ದು ಅಥವಾ ಜನರದ್ದು.

ಕರ್ನಾಟಕದಲ್ಲಾಗಲೀ ಇತರೆಡೆಯಾಗಲೀ ಬಿಜೆಪಿ ನಡೆಸಿದ ಮತ್ತು ನಡೆಸುತ್ತಿರುವ ಈ ದಂಧೆಗೆ ಖಡಾಖಂಡಿತವಾದ ಸಾರ್ವಜನಿಕ ತಿರಸ್ಕಾರ ಎನ್ನುವುದು ಎಲ್ಲೂ ಈತನಕ ಕಾಣಿಸಿಲ್ಲ. ಮೊದಲನೆಯ ಬಾರಿಗೆ ಬಿಜೆಪಿ ಆಪರೇಷನ್ ಕಮಲ ನಡೆಸಿ ರಾಜೀನಾಮೆ ನೀಡಿಸಿದ್ದ ಕಾಂಗ್ರೆಸ್ ಮತ್ತು ಜನತಾ ದಳ ಪಕ್ಷಗಳ ಶಾಸಕರ ಪೈಕಿ ಹಲವು ಮಂದಿ ಉಪಚುನಾವಣೆಯಲ್ಲಿ ಮರು ಆಯ್ಕೆ ಆಗಿದ್ದಾರೆ. ಇಂತವರನ್ನು ಮರು ಆಯ್ಕೆ ಮಾಡಿದ ಮತದಾರರನ್ನು ಏನು ಅಂತ ಕರೆಯುವುದು.

ಹಿಂದಿನ ಕತೆ ಬಿಡಿ. ಮೊನ್ನೆ ಮೊನ್ನೆ 2019ರ ಲೋಕಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಪರೇಷನ್ ಕಮಲಕ್ಕೆ ತನ್ನನ್ನು ಅರ್ಪಿಸಿಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಗುಲ್ಬರ್ಗದ ಮತದಾರರು ಆ ವ್ಯಕ್ತಿಯನ್ನು ಬಹುಮತದಿಂದ ಆಯ್ಕೆ ಮಾಡಿಲ್ಲವೇ? ಈ ವಿಚಾರವನ್ನೂ ಬೇಕಾದರೆ ಬದಿಗಿರಿಸೋಣ.. ಯಾಕೆಂದರೆ ಅವರ ಕಾಂಗ್ರೆಸ್ ಎದುರಾಳಿ ಹಲವು ಬಾರಿ ಗೆದ್ದಿದ್ದ ಕಾರಣಕ್ಕೆ ಅಲ್ಲೊಂದು ದೊಡ್ಡ ಮಟ್ಟದ ಅಧಿಕಾರ ವಿರೋಧಿ ಅಲೆ ಇತ್ತು ಎಂದುಕೊಳ್ಳೋಣ. ಅಥವಾ ಮೋದಿ ಅಲೆಯಲ್ಲಿ ಇತರ ಎಲ್ಲಾ ಅಂಶಗಳೂ ಕೊಚ್ಚಿ ಹೋದವು ಎಂದುಕೊಳ್ಳೋಣ. ಆದರೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಜನತೆ ರಾಜೀನಾಮೆ ನೀಡಿದ ಶಾಸಕನ ಮಗನನ್ನೇ ಪುನರಾಯ್ಕೆ ಮಾಡಿದರಲ್ಲಾ, ಅವರ ಪ್ರಜ್ಞಾವಂತಿಕೆಯನ್ನು ಯಾವ ಶಬ್ದಗಳಿಂದ ಹೊಗಳುವುದು?

ಮೊನ್ನೆ ಹದಿನೈದು ಶಾಸಕರನ್ನು ಕೆಡವಿದ ಎರಡನೆಯ ಹಂತದ ಬೃಹತ್ ಆಪರೇಷನ್ ಕಮಲಕ್ಕೆ ಪ್ರೇರಣೆಯೇ ಚಿಂಚೋಳಿಯ ಮತದಾರರು ನೀಡಿದ ತೀರ್ಪು ಎನ್ನಬೇಕು. ಯಾಕೆಂದರೆ ಅಲ್ಲಿನ ಮತದಾರರಿಂದ ಆಪರೇಷನ್ ಕಮಲ ವಿರೋಧಿ ಸಂದೇಶವೊಂದು ಹೋಗಿದ್ದರೆ ಹದಿನೈದು ಮಂದಿಯಲ್ಲಿ ಕೆಲವರಾದರೂ ಬಿಜೆಪಿಯ ತಂತ್ರಗಾರಿಕೆಗೆ ಕೈಜೋಡಿಸುವ ವೇಳೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಒಂದಿಷ್ಟು ಯೋಚಿಸುತ್ತಿದ್ದರೋ ಏನೋ.

ಯಾವತ್ತು ಮತದಾರರು ಆಪರೇಷನ್ ಕಮಲದ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಸಂದೇಶ ರವಾನೆಯಾಯಿತೋ ಅಲ್ಲಿಗೆ ಶಾಸಕರನ್ನು ಖರೀದಿಸುವ ಪಕ್ಷದ ಮತ್ತು ಮಾರಿಕೊಳ್ಳಲು ಸಿದ್ಧರಿರುವ ಶಾಸಕರ ಪಾಪಪ್ರಜ್ಞೆಯೂ ಅಷ್ಟರಮಟ್ಟಿಗೆ ಕಡಿಮೆಯಾಯಿತು ಎಂದೇ ಹೇಳಬೇಕು. ಆದುದರಿಂದ ಆಪರೇಷನ್ ಕಮಲ ಎಂಬ ಘೋರಾಪರಾಧ ನಡೆಸಿದವರ ಮತ್ತು ನಡೆಸಲು ಸಹಕರಿಸಿದವರ ವಿರುದ್ಧ ಆರೋಪ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದೇ ಆದರೆ ಅದರಲ್ಲಿ ಮೊದಲ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು.

ಸಮ್ಮಿಶ್ರ ಸರಕಾರ ಇದ್ದಷ್ಟು ಕಾಲ ಸ್ಪೀಕರ್ ಒಬ್ಬರು ಆಪರೇಷನ್ ಕಮಲದ ಹಾದಿಯಲ್ಲಿ ತೊಡಕಾಗಿದ್ದರು. ಈಗ ಆ ಸಮಸ್ಯೆಯೂ ಇಲ್ಲ. ಬಿಜೆಪಿಯ “ಸ್ವಂತ” ಸ್ಪೀಕರ್ ಅವರ ಪ್ರತಿಷ್ಠಾಪನೆಯಾಗಿದೆ. ಇನ್ನು ಕೇಳಬೇಕೆ? ನಿರೀಕ್ಷಿಸಿ, ದಂಧೆಯ ಮುಂದಿನ ಅಂಕವನ್ನು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...