Homeಮುಖಪುಟಮುಂದುವರೆದ ಇಸ್ರೇಲ್ ಆಕ್ರಮಣ: 25 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರು ಬಲಿ

ಮುಂದುವರೆದ ಇಸ್ರೇಲ್ ಆಕ್ರಮಣ: 25 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರು ಬಲಿ

- Advertisement -
- Advertisement -

ಅಕ್ಟೋಬರ್ 7 ರಂದು ಪ್ರಾರಂಭಗೊಂಡ ಗಾಝಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಇದುವರೆಗೆ 25,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 62,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ಇಸ್ರೇಲ್‌ ಆಕ್ರಮಣಕ್ಕೆ 190 ಜನರು ಸಾವನ್ನಪ್ಪಿದ್ದಾರೆ ಮತ್ತು 340 ಜನರು ಗಾಯಗೊಂಡಿದ್ದಾರೆ. ವೈದ್ಯಕೀಯ ಮೂಲಗಳ ಪ್ರಕಾರ, ಸೋಮವಾರ ಇಸ್ರೇಲ್‌ ದಾಳಿಯಿಂದ ಗಾಝಾದ ದಕ್ಷಿಣ ನಗರವಾದ ಖಾನ್ ಯೂನಿಸ್‌ನಲ್ಲಿ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲಿ ಪಡೆಗಳು ಆಸ್ಪತ್ರೆ, ಆಂಬ್ಯುಲೆನ್ಸ್‌ ಮತ್ತು ಸಾವಿರಾರು ನಾಗರಿಕರು ಆಶ್ರಯ ಪಡೆದಿರುವ ಶಾಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ.

ಈ ನಡುವೆ ತಮ್ಮ ಸ್ವಂತ ರಾಷ್ಟ್ರ ನಿರ್ಮಿಸುವ ಫ್ಯಾಲೆಸ್ತೀನಿಯರ ಹಕ್ಕನ್ನು ಎಲ್ಲರೂ ಮಾನ್ಯ ಮಾಡಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಆಗ್ರಹಿಸಿದ್ದಾರೆ.

ಉಗಾಂಡಾದ ಕಂಪಾಲದಲ್ಲಿ ನಡೆಯುತ್ತಿರುವ ಅಲಿಪ್ತ ಅಭಿಯಾನದ ಶೃಂಗಸಭೆಯಲ್ಲಿ ಮಾತನಾಡಿದ ಅವರು`ಇಸ್ರೇಲಿ ಮತ್ತು ಫೆಲೆಸ್ತೀನಿಯನ್ನರಿಗೆ ಎರಡು ದೇಶಗಳ ಪರಿಹಾರವನ್ನು ಒಪ್ಪಿಕೊಳ್ಳಲು ನಿರಾಕರಿಸುವುದು ಮತ್ತು ಫೆಲೆಸ್ತೀನಿಯನ್ ಜನರ ರಾಷ್ಟ್ರತ್ವದ ಹಕ್ಕನ್ನು ನಿರಾಕರಿಸುವುದು ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.

ಅಕ್ಟೋಬರ್ 7ರಂದು ಪ್ರಾರಂಭವಾದ ಇಸ್ರೇಲ್‌ ದಾಳಿ 100 ದಿನಗಳನ್ನು ದಾಟಿ ಮುಂದುವರೆದಿದೆ. ಪ್ರತಿ ದಿನವೂ ಇಸ್ರೇಲ್ ಪಡೆಗಳು ಗಾಝಾದ ಜನತೆಯ ರಕ್ತ ಹರಿಸುತ್ತಿದೆ. ಯುಎಸ್‌ ಸೇರಿದಂತೆ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಇಸ್ರೇಲ್ ಆಕ್ರಮಣಕ್ಕೆ ಪರೋಕ್ಷ ಬೆಂಬಲ ನೀಡುತ್ತಿವೆ. ಅರಬ್ ರಾಷ್ಟ್ರಗಳು ಯುಎಸ್‌ ಮುಂದೆ ಧ್ವನಿ ಎತ್ತಲು ಹೆದರುತ್ತಿದೆ. ಪ್ಯಾಲೆಸ್ತೀನಿಯರಿಗೆ ಧ್ವನಿಯಾಗಿರುವ ವಿಶ್ವಸಂಸ್ಥೆ ಅಸಹಾಯಕ ಸ್ಥಿತಿಯಲ್ಲಿದೆ. ಟರ್ಕಿ, ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳು ಮಾತ್ರ ಗಾಝಾದ ಜನತೆಯ ಪರ ಹೋರಾಡುತ್ತಿದೆ. ಆದರೆ, ಅದಕ್ಕೆ ಬಲ ಸಾಕಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಇಸ್ರೇಲ್‌ನ ಮಾರಣಹೋಮಕ್ಕೆ ಲಗಾಮು ಹಾಕುವವರು ಇಲ್ಲದಂತಾಗಿದೆ. ಪ್ಯಾಲೆಸ್ತೀನ್ ಜನತೆಯ ಬದುಕುವ ಹಕ್ಕನ್ನು ಕಸಿದುಕೊಂಡು ಸುಂದರ ಗಾಝಾವನ್ನು ರಣಾಂಗಣವಾಗಿ ಮಾರ್ಪಡಿಸಲಾಗಿದೆ.

ತಂಬ್‌ನೈಲ್‌ ಚಿತ್ರ ಸಾಂಧರ್ಬಿಕ

ಇದನ್ನೂ ಓದಿ : ಅಫ್ಘಾನಿಸ್ತಾನದಲ್ಲಿ ಭಾರತದ ವಿಮಾನ ಪತನವಾಗಿಲ್ಲ: ಸಚಿವಾಲಯ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...