Homeಮುಖಪುಟಅಫ್ಘಾನಿಸ್ತಾನದಲ್ಲಿ ಭಾರತದ ವಿಮಾನ ಪತನವಾಗಿಲ್ಲ: ಸಚಿವಾಲಯ ಸ್ಪಷ್ಟನೆ

ಅಫ್ಘಾನಿಸ್ತಾನದಲ್ಲಿ ಭಾರತದ ವಿಮಾನ ಪತನವಾಗಿಲ್ಲ: ಸಚಿವಾಲಯ ಸ್ಪಷ್ಟನೆ

- Advertisement -
- Advertisement -

ಅಫ್ಘಾನಿಸ್ತಾನದಲ್ಲಿ ಪತನಗೊಂಡ ಸಣ್ಣ ವಿಮಾನವು ಯಾವುದೇ ಭಾರತೀಯ ಮೂಲಗಳಿಗೆ ಸೇರಿದ್ದಲ್ಲ ಮತ್ತು ವಿಮಾನವು ಥಾಯ್ಲೆಂಡ್‌ನ ವಿಮಾನ ನಿಲ್ದಾಣದಿಂದ ಮಾಸ್ಕೋಗೆ ಹಾರುತ್ತಿದ್ದಾಗ ಗಯಾ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡಿತ್ತು ಎಂದು ಭಾರತೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಪಘಾತದಲ್ಲಿ ಸಿಲುಕಿರುವುದು ಭಾರತೀಯ ವಿಮಾನವಾಗಿದೆ ಎಂಬ ವರದಿಗಳ ನಡುವೆ ನಾಗರಿಕ ವಿಮಾನಯಾನ ಸಚಿವಾಲಯವು ಅಪಘಾತಕ್ಕೀಡಾದ ವಿಮಾನವು ಮೊರಾಕೊಗೆ ಸೇರಿದ DF-10 ವಿಮಾನವಾಗಿದೆ ಎಂದು ಹೇಳಿದೆ.

ವಿಮಾನವು ಏರ್ ಆಂಬುಲೆನ್ಸ್ ಆಗಿತ್ತು ಮತ್ತು ಥೈಲ್ಯಾಂಡ್‌ನಿಂದ ಮಾಸ್ಕೋಗೆ ಹಾರುತ್ತಿತ್ತು ಮತ್ತು ಗಯಾ ವಿಮಾನ ನಿಲ್ದಾಣದಲ್ಲಿ ಇಂಧನವನ್ನು ರೀಫಿಲ್ಲಿಂಗ್‌ ಮಾಡಿಕೊಂಡಿತ್ತು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಥಾಯ್ಲೆಂಡ್‌ನ ಉಟಾಪಾವೊ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭಿಸಿತ್ತು ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪೋಸ್ಟ್‌ ಮಾಡಿದ ಸಚಿವಾಲಯ, ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ದುರದೃಷ್ಟಕರ ವಿಮಾನ ಅಪಘಾತವು ಭಾರತೀಯ ಏರ್‌ಕ್ರಾಫ್ಟ್  ವಿಮಾನವಲ್ಲ. ಇದು ಮೊರೊಕನ್-ನೋಂದಾಯಿತ ಸಣ್ಣ ವಿಮಾನವಾಗಿದೆ ಎಂದು ಹೇಳಿದೆ.

ಸುದ್ದಿ ಸಂಸ್ಥೆ ಎಪಿ(ಅಸೋಸಿಯೇಟೆಡ್‌ ಪ್ರೆಸ್‌) ವರದಿಯ ಪ್ರಕಾರ, ಆರು ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಖಾಸಗಿ ಜೆಟ್ ಗ್ರಾಮೀಣ ಅಫ್ಘಾನಿಸ್ತಾನದ ಭೂ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಹೇಳಿಕೊಂಡಿತ್ತು. ವಿಮಾನವು ಅಥ್ಲೆಟಿಕ್ ಗ್ರೂಪ್ ಎಲ್ಎಲ್‌ಸಿ ಮತ್ತು ಖಾಸಗಿ ವ್ಯಕ್ತಿಗೆ ಸೇರಿದೆ. ರಷ್ಯಾದ ನಾಗರಿಕ ವಿಮಾನಯಾನ ಅಧಿಕಾರಿಗಳು ವಿಮಾನವೊಂದು ಸಂವಹನವನ್ನು ಕಡಿದುಕೊಂಡು ರಾಡಾರ್ ಪರದೆಗಳಿಂದ ಕಣ್ಮರೆಯಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಿತ್ತು.

ಅಫ್ಘಾನಿಸ್ತಾನದ ಟೆಲಿವಿಷನ್ ನೆಟ್‌ವರ್ಕ್ ಟೋಲೋ ನ್ಯೂಸ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಕುರಾನ್-ಮುಂಜಾನ್ ಮತ್ತು ಬಡಾಖಾನ್ ಪ್ರಾಂತ್ಯದ ಜಿಬಾಕ್ ಜಿಲ್ಲೆಗಳ ಜೊತೆಗೆ ಟೋಪ್‌ಖಾನಾ ಪರ್ವತಗಳಲ್ಲಿ ಭಾರತೀಯ ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ ಎಂದು ಹೇಳಿಕೊಂಡಿತ್ತು. ಘಟನೆಯ ಕುರಿತು ತನಿಖೆ ನಡೆಸಲು ತಂಡವನ್ನು ಆ ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಬಡಾಕ್ಷಣ್‌ನ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಸ್ಥ ಜಬಿಹುಲ್ಲಾ ಅಮೀರಿ ಅವರನ್ನು ಉಲ್ಲೇಖಿಸಿ ಟೋಲೋ ನ್ಯೂಸ್ ವರದಿ ಮಾಡಿತ್ತು.

ಇದನ್ನು ಓದಿ: ಭಾರತ್ ಜೋಡೋ ನ್ಯಾಯ ಯಾತ್ರೆ; ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುತ್ತಿದೆ; ರಾಹುಲ್‌ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...