Homeಮುಖಪುಟಪಾಕಿಸ್ತಾನದ 'ಜೈಶ್ ಅಲ್-ಅದ್ಲ್‌' ನೆಲೆಯ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ

ಪಾಕಿಸ್ತಾನದ ‘ಜೈಶ್ ಅಲ್-ಅದ್ಲ್‌’ ನೆಲೆಯ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ

- Advertisement -
- Advertisement -

ಪಾಕಿಸ್ತಾನದ ಸುನ್ನಿ ತೀವ್ರಗಾಮಿ ಗುಂಪು ಜೈಶ್ ಅಲ್-ಅದ್ಲ್‌ಗೆ ಸೇರಿದ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ ಕ್ಷಿಪಣಿ ದಾಳಿ ನಡೆಸಿದ್ದು, ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಮತ್ತು ಮೂವರಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನ ತಿಳಿಸಿದೆ. ಇರಾನ್ ಕಳೆದ ಕೆಲ ದಿನಗಳಿಂದ ಸಿರಿಯಾ ಮತ್ತು ಇರಾಕ್ ಮೇಲೆ ಇದೇ ರೀತಿಯ ದಾಳಿಯನ್ನು ನಡೆಸಿತ್ತು.

ಪಾಕಿಸ್ತಾನದ ಸುನ್ನಿ ತೀವ್ರಗಾಮಿ ಗುಂಪು ಜೈಶ್ ಅಲ್-ಅದ್ಲ್‌ಗೆ ಸೇರಿದ ನೆಲೆಗಳ ಮೇಲೆ ಕಾರ್ಯಾಚರಣೆಗೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಇರಾನ್‌ನ ಸರ್ಕಾರಿ ಮಾದ್ಯಮಗಳು ವರದಿ ಮಾಡಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ದಾಳಿಯನ್ನು ದೃಢಪಡಿಸಿದ್ದು, ಇದು ಪಾಕ್‌ನ ವಾಯುಪ್ರದೇಶದ ಮೇಲೆ ನಡೆದ ಅಪ್ರಚೋದಿತ ದಾಳಿ ಎಂದು ಹೇಳಿಕೊಂಡಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಈ ದಾಳಿಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ವಾಯುನೆಲೆಯ ನಿಯಮಗಳನ್ನು ಉಲ್ಲಂಘಿಸಿ ಇರಾನ್‌ ದಾಳಿ ನಡೆಸಿದೆ. ಇಂತಹ ಕ್ರಮಗಳು ಉಭಯ ದೇಶಗಳ ನಡುವೆವಿನ ಸಂಬಂಧದ ಮೇಲೆ ಗಂಭೀರ ಪರಿಣಾಮ ಉಂಟುಮಾಡಬಹುದು ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯು ತಿಳಿಸಿದೆ. ಇರಾನ್ ರಾಯಭಾರಿಯನ್ನು ಕರೆಸಿಕೊಂಡಿರುವ ಪಾಕ್‌, ಕ್ಷಿಪಣಿ ದಾಳಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ಪಾಕಿಸ್ತಾನ ಹಾಗೂ ಇರಾನ್ ನಡುವೆ ಸಂವಹನಕ್ಕೆ ಹಲವು ಮಾರ್ಗಗಳಿದ್ದರೂ, ಈ ದಾಳಿಯನ್ನು ನಡೆಸಿರುವುದು  ಹೆಚ್ಚು ಕಳವಳಕಾರಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಭಯೋತ್ಪಾದಕತೆ ಈ ಭಾಗದ ಎಲ್ಲ ದೇಶಗಳಿಗೆ ಸಮಾನ ಅಪಾಯ ಎನ್ನುವುದನ್ನು ಪಾಕಿಸ್ತಾನ ಪ್ರತಿಪಾದಿಸುತ್ತ ಬಂದಿದೆ ಹಾಗೂ ಇದರ ತಡೆಗೆ ಪರಸ್ಪರ ಸಮನ್ವಯದ ಕ್ರಮ ಅಗತ್ಯವಾಗಿದೆ. ಇಂಥ ಏಕಪಕ್ಷೀಯ ಕೃತ್ಯಗಳು ನೆರೆಹೊರೆಯ ದೇಶಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ಪೂರಕವಲ್ಲ ಹಾಗೂ ದ್ವಿಪಕ್ಷೀಯ ವಿಶ್ವಾಸಕ್ಕೆ ಗಂಭೀರವಾಗಿ ಧಕ್ಕೆ ತರುವಂಥದ್ದು ಎಂದು ಹೇಳಿದೆ.

ಜೈಶ್ ಅಲ್ ಅದ್ಲ್‌:

ಪಾಕಿಸ್ತಾನ ತೀವ್ರಗಾಮಿ ಸಂಘಟನೆಗಳನ್ನು ಪಾಕಿಸ್ತಾನ ಪೋಷಿಸುತ್ತಿದೆ ಎಂದು ಇರಾನ್‌ ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿತ್ತು.  ‘ಜೈಶ್ ಅಲ್ ಅದ್ಲ್‌‘ ಪಾಕಿಸ್ತಾನದ ಬಲೂಚಿಯಲ್ಲಿ ನೆಲೆಯೂರಿರುವ ಒಂದು ತೀವ್ರಗಾಮಿ ಸಂಘಟನೆಯಾಗಿದೆ. ಇದು 2012ರಲ್ಲಿ ಸ್ಠಾಪನೆಗೊಂಡಿತ್ತು. ಜೈಶ್ ಅಲ್ ಅದ್ಲ್‌  ತೀವ್ರಗಾಮಿ ಗುಂಪನ್ನು ಹೆಡೆಮುರಿ ಕಟ್ಟವುದಾಗಿ ಇರಾನ್ ಪ್ರಯತ್ನಿಸಿದ್ದು,  ಅದರ ವಿರುದ್ಧ ಗಡಿಯಲ್ಲಿ ಯುದ್ಧ ಸಾರಿತ್ತು. ತೀವ್ರಗಾಮಿ ಗುಂಪಿನ ನೆಲೆಗಳನ್ನು ನಾಶ ಮಾಡಲು ಕ್ಷಿಪಣಿ ದಾಳಿ ನಡೆಸುವುದು ಅನಿವಾರ್ಯವಾಗಿದೆ ಎಂದು ಇರಾನ್‌ ಹೇಳಿತ್ತು.

ಇರಾನ್‌ನಲ್ಲಿ ಈ ತಿಂಗಳ ಆರಂಭದಲ್ಲಿ ಎರಡು ಆತ್ಮಾಹುತಿ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಕನಿಷ್ಠ 84 ಜನರು ಮೃತಪಟ್ಟಿದ್ದರು ಮತ್ತು 284 ಜನರು ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್‌ ಕ್ಷಿಪಣಿ ದಾಳಿ ನಡೆಸಿತ್ತು.

ಗಾಝಾದಲ್ಲಿನ ಸಂಘರ್ಷದ ಮಧ್ಯೆ ಈ ಘಟನೆಯು ಇರಾಕ್‌ ಮತ್ತು ಇರಾನ್‌ ನಡುವಿನ ಸಂಬಂಧವನ್ನು ಹದಗೆಡುವಂತೆ ಮಾಡಿದೆ. ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಇರಾನ್ ಈ ಹಿಂದೆ ಜೈಶ್ ಅಲ್-ಅದ್ಲ್ ವಿರುದ್ಧ ಗಡಿಯಲ್ಲಿ ಕದನಗಳಲ್ಲಿ ತೊಡಗಿಸಿಕೊಂಡಿದ್ದರೂ, ಗಡಿಯಾಚೆಗಿನ ಕ್ಷಿಪಣಿ ದಾಳಿಯ ಎಂದಿಗೂ ನಡೆಸಿರಲಿಲ್ಲ.

ಇದನ್ನು ಓದಿ: ‘ಹಿಂದುತ್ವ ವಾಚ್’ ಎಕ್ಸ್‌ ಖಾತೆಗೆ ಭಾರತದಲ್ಲಿ ನಿರ್ಬಂಧ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...