Homeಮುಖಪುಟಮಣಿಪುರ ಗಲಭೆ: ಕರ್ಫ್ಯೂ ನಡುವೆಯೆ ಮೊರೆಹ್‌ನಲ್ಲಿ ಐಆರ್‌ಬಿ ಯೋಧನ ಹತ್ಯೆ

ಮಣಿಪುರ ಗಲಭೆ: ಕರ್ಫ್ಯೂ ನಡುವೆಯೆ ಮೊರೆಹ್‌ನಲ್ಲಿ ಐಆರ್‌ಬಿ ಯೋಧನ ಹತ್ಯೆ

- Advertisement -
- Advertisement -

ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಭಾರತೀಯ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಯೋಧನೊಬ್ಬ ಬುಧವಾರ ಮುಂಜಾನೆ ಗಲಭೆ ಪೀಡಿತ ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಹುತಾತ್ಮರಾಗಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಹೆಚ್ಚಿನ ವೈದ್ಯಕೀಯ ನೆರವು, ತುರ್ತು ಪರಿಸ್ಥಿತಿಗಳಿಗಾಗಿ ಹೆಲಿಕಾಪ್ಟರ್, ಹೆಚ್ಚಿನ ಸೇನಾ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಏರ್‌ಲಿಫ್ಟ್‌ ಮಾಡುವಂತೆ ರಾಜ್ಯ ಗೃಹ ಇಲಾಖೆ ಆಯುಕ್ತರು ಕೇಂದ್ರ ಗೃಹ ಸಚಿವಾಲಯಕ್ಕೆ ವಿನಂತಿ ಮಾಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಎರಡೂವರೆ ತಿಂಗಳಲ್ಲಿ ಮೊರೆಹ್‌ನಲ್ಲಿ ನಡೆದ ಎರಡನೇ ಹತ್ಯೆ ಇದಾಗಿದ್ದು, ಮಣಿಪುರ ಪೊಲೀಸ್ ಪಡೆಯೊಂದಿಗೆ ಭದ್ರತೆಗೆ ನಿಯೋಜಿಸಲಾಗಿದ್ದ ಐಆರ್‌ಬಿ ಯೋಧ ಡಬ್ಲ್ಯೂ ಸೊಮೊರ್ಜಿತ್ ಅವರು ಬೆಳಿಗ್ಗೆ 3.25 ರ ಸುಮಾರಿಗೆ ಕೊಲೆಗೀಡಾಗಿದ್ದಾರೆ. ‘ಆ ಸಮಯದಲ್ಲಿ ಸೋಮೊರ್ಜಿತ್‌ನನ್ನು ಕೊಂಡೊಂಗ್ ಲೈರೆಂಬಿ ದೇವಿ ಮಂದಿರದ ಬಳಿಯ ಐಆರ್‌ಬಿ ಪೋಸ್ಟ್‌ನಲ್ಲಿ ನಿಯೋಜಿಸಲಾಗಿತ್ತು. ದಾಳಿಕೋರರು ಗ್ರೆನೇಡ್‌ಗಳನ್ನು ಸ್ಪೋಟಿಸಿದ ನಂತರ ಗುಂಡಿನ ದಾಳಿ ನಡೆಸಿದರು’ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಗೃಹ ಇಲಾಖೆ ಆಯುಕ್ತ ಟಿ.ರಂಜಿತ್ ಸಿಂಗ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ತುರ್ತು ಅಗತ್ಯತೆಗಳನ್ನು ಉಲ್ಲೇಖಿಸಿದ್ದಾರೆ. ಕನಿಷ್ಠ ಏಳು ದಿನಗಳ ಕಾಲ ಇಂಫಾಲ್‌ನಲ್ಲಿ ವಾಯು ಪಡೆಗಳು ಅಥವಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ವಿನಂತಿಸಿದ್ದಾರೆ.

‘ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿತವು ಗಂಭೀರವಾದ ಕಳವಳಕಾರಿ ವಿಷಯವಾಗಿದೆ. ಏಕೆಂದರೆ, ನಿರಂತರವಾಗಿ ಗುಂಡಿನ ವಿನಿಮಯ ನಡೆಯುತ್ತಿದ್ದು, ಇಂದು ಮುಂಜಾನೆ ಒಬ್ಬ ಐಆರ್‌ಬಿ ಸಿಬ್ಬಂದಿಯ ಸಾವಿಗೆ ಕಾರಣವಾಗಿದೆ. ಪ್ರಚಲಿತ ಪರಿಸ್ಥಿತಿಯ ದೃಷ್ಟಿಯಿಂದ, ಮೊರೆಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು, ಯಾವುದೇ ಸಮಯದಲ್ಲಿ ವೈದ್ಯಕೀಯ ತುರ್ತುಸ್ಥಿತಿ ಉಂಟಾಗಬಹುದು. ಮೋರೆಗೆ ಭದ್ರತಾ ಸಿಬ್ಬಂದಿ, ಮದ್ದುಗುಂಡುಗಳು ಇತ್ಯಾದಿಗಳನ್ನು ಏರ್‌ಲಿಫ್ಟ್‌ ಮಾಡುವ ಅವಶ್ಯಕತೆಯಿದೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ’ ಎಂದು ಸಿಂಗ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.

2023ರ ಅಕ್ಟೋಬರ್ 31 ರಂದು, ಮಣಿಪುರ ಪೊಲೀಸರ ಎಸ್‌ಡಿಪಿಒ ಚಿಂಗ್ತಮ್ ಆನಂದ್ ಕುಮಾರ್ ಅವರನ್ನು ಮೋರೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ನಂತರ, ಆನಂದ್ ಹತ್ಯೆ ಮಾಡಿದ್ದಾರೆ ಎಂಬ ಅನುಮಾನದ ಮೇಲೆ ಫಿಲಿಪ್ ಖೈಖೋಲಾಲ್ ಖೋಂಗ್ಸಾಯ್ ಮತ್ತು ಹೆಮ್ಖೋಲಾಲ್ ಮೇಟ್ ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು.

ಇಬ್ಬರ ಬಂಧನವು ಮಿಶ್ರ ಸಮುದಾಯಗಳ ಜನಸಂಖ್ಯೆಯ ಪಟ್ಟಣದಲ್ಲಿ ಬಹುಸಂಖ್ಯಾತರಾದ ಕುಕಿ ಸಮುದಾಯದಲ್ಲಿ ಅಶಾಂತಿಯನ್ನು ಉಂಟುಮಾಡಿತು. ಅದರ ನಂತರ ಮೊರೆಹ್ ತೆಂಗ್ನೌಪಾಲ್ ಜಿಲ್ಲೆಯಾದ್ಯಂತ ಕರ್ಫ್ಯೂ ವಿಧಿಸಲಾಯಿತು.

ಇದನ್ನೂ ಓದಿ; ಮಂದಿರ ಉದ್ಘಾಟನೆ ನಂತರ ರಾಮನ ದರ್ಶನ ಪಡೆಯುವುದು ಸುಲಭ: ಶರದ್ ಪವಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...