Homeಮುಖಪುಟ'ಹಿಂದುತ್ವ ವಾಚ್' ಎಕ್ಸ್‌ ಖಾತೆಗೆ ಭಾರತದಲ್ಲಿ ನಿರ್ಬಂಧ!

‘ಹಿಂದುತ್ವ ವಾಚ್’ ಎಕ್ಸ್‌ ಖಾತೆಗೆ ಭಾರತದಲ್ಲಿ ನಿರ್ಬಂಧ!

- Advertisement -
- Advertisement -

ಮುಸ್ಲಿಮರ, ಅಲ್ಪಸಂಖ್ಯಾತರ, ಹಿಂದುಳಿದ ಸಮುದಾಯಗಳ ಮೇಲೆ ನಡೆಯುತ್ತಿದ್ದ ದಾಳಿ, ದೌರ್ಜನ್ಯದ ಕುರಿತು ಪೋಸ್ಟ್‌ ಮಾಡುತ್ತಿದ್ದ ‘ಹಿಂದುತ್ವ ವಾಚ್ ಇನ್‌’ ಎಂಬ ಎಕ್ಸ್‌ ಖಾತೆಯನ್ನು ಕೇಂದ್ರ ಸರಕಾರದ ಬೇಡಿಕೆಯ ಮೇರೆಗೆ ಜನವರಿ 16ರಿಂದ ಭಾರತದಲ್ಲಿ ನಿರ್ಬಂಧಿಸಲಾಗಿದೆ.

ಖಾತೆಯ ಸಂಸ್ಥಾಪಕ ರಖೀಬ್ ಹಮೀದ್ ನಾಯಕ್ ಅವರು ಮಂಗಳವಾರ ಬೆಳವಣಿಗೆಯ ಬಗ್ಗೆ ಇಮೇಲ್ ಸ್ವೀಕರಿಸಿದ್ದಾರೆ ಎಂದು ಮಾದ್ಯಮಗಳಿಗೆ ತಿಳಿಸಿದ್ದಾರೆ. ಈ ಖಾತೆಯು ಐಟಿ ಕಾಯ್ದೆಯ ಸೆಕ್ಷನ್‌ಗಳನ್ನು ಉಲ್ಲಂಘಿಸಿದೆ ಎಂದು ಭಾರತ ಸರ್ಕಾರ ಹೇಳಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾದ್ಯಮ ಪ್ಲಾಟ್‌ಫಾರ್ಮ್ ‘ಎಕ್ಸ್’ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ  ‘ಹಿಂದುತ್ವ ವಾಚ್‌ ಇನ್‌’ನ ಖಾತೆಯನ್ನು ತಡೆಹಿಡಿದಿದೆ. ಮಂಗಳವಾರ ಜನವರಿ 16ರ ಸಂಜೆ ‘ಹಿಂದುತ್ವ ವಾಚ್‌ ಇನ್‌’ ಪೇಜ್‌ಗೆ ನಿರ್ಬಂಧ ವಿಧಿಸಲಾಗಿದೆ. ಖಾತೆಯನ್ನು ಎಕ್ಸ್‌ ನಿರ್ಬಂಧಿಸಿದ ಮೂರು ಗಂಟೆಗಳ ನಂತರ ಅವರು ಈ ಕುರಿತ ಇ-ಮೇಲ್‌ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ರಖೀಬ್ ಹಮೀದ್ ನಾಯಕ್ ಹೇಳಿದ್ದಾರೆ.

ಖಾತೆಯನ್ನು ನಿರ್ಬಂಧಿಸಿರುವ ಬಗ್ಗೆ ಎಕ್ಸ್‌ ಇ-ಮೇಲ್‌ ಕಳುಹಿಸಿದ್ದು, ಭಾರತ ಸರ್ಕಾರ @HindutvaWatchIn ಖಾತೆಯನ್ನು ತೆಗೆದುಹಾಕಲು ಬೇಡಿಕೆಯನ್ನು ಇಟ್ಟಿದೆ. ಭಾರತದ ಮಾಹಿತಿ ತಂತ್ರಜ್ಞಾನ ಕಾಯಿದೆ-2000ದ ಅಧಿನಿಯಮವನ್ನು ಉಲ್ಲಂಘಿಸಿದ ಅರೋಪವನ್ನು ಮಾಡಿದೆ.

ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ರಖೀಬ್ ಹಮೀದ್, ಪ್ರಧಾನಿ ಮೋದಿ ಆಡಳಿತದ ಇತಿಹಾಸ ಮತ್ತು ಮುಕ್ತ ಪತ್ರಿಕಾ ಮತ್ತು ವಿಮರ್ಶಾತ್ಮಕ ಧ್ವನಿಗಳನ್ನು ನಿಗ್ರಹಿಸುವುದನ್ನು ಗಮನಿಸಿದಾಗ ಇದೇನು ಅಚ್ಚರಿಯಲ್ಲ. ಈ ಕ್ರಮದಿಂದ  ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಭಾರತದಲ್ಲಿ ನಮ್ಮ ಖಾತೆಯ ಮೇಲಿನ ನಿರ್ಬಂಧವು ನಮ್ಮ ಕೆಲಸವನ್ನು ಅಡೆತಡೆಯಿಲ್ಲದೆ ಮುಂದುವರಿಸುವ ನಮ್ಮ ಸಂಕಲ್ಪವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

ಹಿಂದುತ್ವ ವಾಚ್ ಎಂಬ ಎಕ್ಸ್‌ ಖಾತೆ ಭಾರತದಲ್ಲಿನ ಮೂಲಭೂತವಾದಿ ಹಿಂದೂಗಳು ಮತ್ತು ಹಿಂದುತ್ವ  ಗುಂಪುಗಳಿಂದ ಅಲ್ಪಸಂಖ್ಯಾತ ಮತ್ತು ಅಂಚಿನಲ್ಲಿರುವ ಸಮುದಾಯಗಳ ಸದಸ್ಯರ ಮೇಲೆ ಮತ್ತು ಅವರ ನಂಬಿಕೆಯ ಮೇಲೆ ನಡೆಯುತ್ತಿರುವ ದಾಳಿಯ ವರದಿಗಳನ್ನು ಮಾಡುತ್ತದೆ. ಇದು ಸಂಸ್ಥೆಗಳು ಮತ್ತು ಹಿಂಸಾಚಾರ ಮತ್ತು ಕುಕೃತ್ಯಗಳಿಗೆ ಕಾರಣವಾದ ಜನರನ್ನು ಬಹಿರಂಗಪಡಿಸುವ ಕೆಲಸವನ್ನು ಕೂಡ ಮಾಡುತ್ತಿತ್ತು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹಿಂದುತ್ವ ವಾಚ್ ಇನ್‌ ವರದಿಯನ್ನು ಬಿಡುಗಡೆ ಮಾಡಿದ್ದು, 2023ರ ಮೊದಲ ಆರು ತಿಂಗಳುಗಳಲ್ಲಿ ಮುಸ್ಲಿಂ ವಿರೋಧಿ ದ್ವೇಷ ಭಾಷಣವನ್ನು ಒಳಗೊಂಡ 250ಕ್ಕೂ ಹೆಚ್ಚು ದಾಖಲೆಗಳನ್ನು ಬಹಿರಂಗಪಡಿಸಿದೆ. ಅವುಗಳಲ್ಲಿ ಹೆಚ್ಚಿನವು ಭಾರತೀಯ ಜನತಾ ಪಕ್ಷದ ಆಡಳಿತ ಇರುವ ರಾಜ್ಯಗಳದ್ದಾಗಿದೆ. ಮತ್ತು ಅದರಲ್ಲಿ ಸುಮಾರು 70% 2023 ಅಥವಾ 2024ರಲ್ಲಿ ಚುನಾವಣೆಗಳಿದ್ದ ರಾಜ್ಯದಲ್ಲಿ ದ್ವೇಷ ಭಾಷಣವನ್ನು ಮಾಡಲಾಗಿದೆ ಎಂದು ಬಹಿರಂಗಪಡಿಸಿತ್ತು.

ಇದನ್ನು ಓದಿ: ಉತ್ತರಪ್ರದೇಶ: ಬೀದಿ ವ್ಯಾಪಾರಿಯನ್ನು ಥಳಿಸಿ ಹತ್ಯೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...