Homeಮುಖಪುಟಮೋದಿ ದ್ವೇಷ ಭಾಷಣ: ಪ್ರಧಾನಮಂತ್ರಿಯ ವೆಬ್‌ಸೈಟ್‌ನಲ್ಲಿನ ಸಾರಾಂಶದಲ್ಲಿ ವಿವಾದಿತ ಹೇಳಿಕೆಗಳು ಕಾಣೆ!

ಮೋದಿ ದ್ವೇಷ ಭಾಷಣ: ಪ್ರಧಾನಮಂತ್ರಿಯ ವೆಬ್‌ಸೈಟ್‌ನಲ್ಲಿನ ಸಾರಾಂಶದಲ್ಲಿ ವಿವಾದಿತ ಹೇಳಿಕೆಗಳು ಕಾಣೆ!

- Advertisement -
- Advertisement -

ಬುಡಕಟ್ಟು ಜನಾಂಗದ ಜನರೇ ಬಹುಸಂಖ್ಯಾತರಾಗಿರುವ ರಾಜಸ್ಥಾನದ ಭನ್ಸ್ವಾರಾದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ವೇಳೆ ಮೋದಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣವನ್ನು ಮಾಡಿದ್ದರು. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಚುನಾವಣಾ ಆಯೋಗ ಮೌನವಾಗಿದೆ. ಆದರೆ, ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಪ್ರಧಾನ ಮಂತ್ರಿಯ ವೆಬ್‌ಸೈಟ್‌ನಲ್ಲಿನ ಇಂಗ್ಲಿಷ್ ಸಾರಾಂಶದಿಂದ ನೀತಿ ಸಂಹಿತೆ ಉಲ್ಲಂಘಿಸಿರುವ ಮೋದಿಯ ಭಾಷಣದ ತುಣುಕುಗಳು ಕಾಣೆಯಾಗಿವೆ.

ಮೋದಿ ಮುಸ್ಲಿಂ ಸಮುದಾಯವನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರು, ನುಸುಳುಕೋರರು ಎಂದು ಉಲ್ಲೇಖಿಸಿದ್ದಾರೆ. ಇದಲ್ಲದೆ ಮನಮೋಹನ್ ಸಿಂಗ್ ಅವರ ಸರ್ಕಾರವು ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳಿದ್ದರು ಎಂದು ಸುಳ್ಳು ಹೇಳಿದ್ದರು.

ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಆ ವಿವಾದಾತ್ಮಕ ಭಾಗಗಳು ಅವರ ವೈಯಕ್ತಿಕ ವೆಬ್‌ಸೈಟ್ www.narendramodi.in ನಲ್ಲಿ ಇಂಗ್ಲಿಷ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೋದಿಯವರ ಚುನಾವಣಾ ಭಾಷಣದ ದೀರ್ಘ ಸಾರಾಂಶದಿಂದ ಕಾಣೆಯಾಗಿದೆ.

ಭಾಷಣಗಳ ಇಂಗ್ಲಿಷ್ ಸಾರಾಂಶವು ಕೊನೆಯ ಪ್ಯಾರಾಗ್ರಾಫ್‌ನಲ್ಲಿ ಪ್ರಚೋದನಕಾರಿ ಭಾಗವನ್ನು ಉಲ್ಲೇಖಿಸಿದೆ, ಆದರೆ ‘ನುಸುಳುಕೋರರು’ ಮತ್ತು ‘ಮುಸ್ಲಿಮ್‌ಗಳಂತಹ ಪದಗಳನ್ನು ಒಳಗೊಂಡಂತೆ ಗಮನಾರ್ಹ ವಿವರಗಳನ್ನು ನಮೂದಿಸಿಲ್ಲ ಮತ್ತು ‘ಹೆಚ್ಚು ಮಕ್ಕಳನ್ನು ಹೊಂದಿರುವವರು’ ಮುಂತಾದ ಪದಗುಚ್ಛಗಳನ್ನು ಪ್ರಧಾನಿ ಬಳಸಿದ್ದಾರೆ. ಕಾಂಗ್ರೆಸ್ ನಮ್ಮ ತಾಯಂದಿರು ಮತ್ತು ಸಹೋದರಿಯರ ಮಂಗಳಸೂತ್ರವನ್ನು ಕಸಿದುಕೊಂಡು ಮುಸ್ಲಿಂ ಸಮುದಾಯಕ್ಕೆ ನೀಡಲಿದೆ ಎಂದು ಅವರು ಹೇಳಿರುವುದನ್ನು ಉಲ್ಲೇಖಿಸಿಲ್ಲ.

ಭನ್ಸ್ವಾರಾದಲ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರವಾಗಿ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಎಡಪಂಥೀಯರು ಮತ್ತು ನಗರ ನಕ್ಸಲರ ಕಪಿಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದು ಗಂಭೀರ ಮತ್ತು ಆತಂಕಕಾರಿ ವಿಚಾರ, ಅವರು ಸರ್ಕಾರ ರಚಿಸಿದರೆ ಪ್ರತಿಯೊಬ್ಬ ವ್ಯಕ್ತಿಗೆ ಸೇರಿದ ಆಸ್ತಿಯ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ನಮ್ಮ ಸಹೋದರಿಯರು ಎಷ್ಟು ಚಿನ್ನ ಹೊಂದಿದ್ದಾರೆ, ಸರ್ಕಾರಿ ನೌಕರರು ಎಷ್ಟು ಹಣ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು. ನಮ್ಮ ಸಹೋದರಿಯರ ಚಿನ್ನಾಭರಣಗಳನ್ನು ಸಮಾನವಾಗಿ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ನಮ್ಮ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆಯೇ? ಎಂದು ಉಲ್ಲೇಖಿಸಲಾಗಿದೆ.

www.narendramodi.in ವೆಬ್‌ಸೈಟ್ ಪ್ರಧಾನಿಯ ಪ್ರಚಾರ ಪೋರ್ಟಲ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಮೋದಿಯವರು ಹಿಂದಿಯಲ್ಲಿ ಮಾಡಿದ ವಿವಾದಾತ್ಮಕ ಭಾಷಣಗಳ ವಿಡಿಯೋಗಳನ್ನು ಲಗತ್ತಿಸಿದೆ. ಜಾಲೋರ್‌ನಲ್ಲಿ ಮೋದಿ ಭಾಷಣದ ಪೂರ್ಣ ಹಿಂದಿ ಭಾಗವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆದರೆ ಅವರ ಭನ್ಸ್ವಾರಾದ ಭಾಷಣದ ಭಾಗ ಸ್ಪಷ್ಟವಾಗಿ ಕಾಣೆಯಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡುವ ಇಂಗ್ಲಿಷ್‌ನಲ್ಲಿ ಮಾತ್ರ ಬಲ್ಲವರಿಗೆ ಪ್ರಧಾನಿ ಮಾಡಿದ ದ್ವೇಷದ ಭಾಷಣದ ಬಗ್ಗೆ ತಿಳಿಯುವುದು ಅಸಾಧ್ಯ, ಹಿಂದಿಯನ್ನು ಅರ್ಥಮಾಡಿಕೊಳ್ಳುವವರಿಗೆ ಮಾತ್ರ ವೀಡಿಯೊ ಕ್ಲಿಕ್ ಮಾಡಿದ ನಂತರ ಅವರ ನಿಖರವಾದ ಮಾತುಗಳನ್ನು ಕೇಳಬಹುದು.

ಏಪ್ರಿಲ್ 22ರ ಮಧ್ಯಾಹ್ನದವರೆಗೂ ಮೋದಿ ಅವರ ವಾಟ್ಸಾಪ್ ಚಾನೆಲ್ ಕೂಡ ಭಾಷಣವನ್ನು ಅಪ್‌ಲೋಡ್ ಮಾಡಿರಲಿಲ್ಲ ಎಂದು ವರದಿ ಉಲ್ಲೇಖಿಸಿದೆ. ಮೋದಿಯ ದ್ವೇಷದ ಭಾಷಣ ರಾಜಕೀಯ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಏಕೆಂದರೆ ಮೋದಿ ಪ್ರಧಾನಿಯಾದಾಗಿನಿಂದ ಇಲ್ಲಿಯವರೆಗೆ ಹಿಂದೂ ಮತಗಳನ್ನು ಸೆಳೆಯಲು ತಮ್ಮ ಚುನಾವಣಾ ಭಾಷಣಗಳಲ್ಲಿ ನೇರವಾಗಿ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿರಲಿಲ್ಲ. ಆದರೆ ಈ ಬಾರಿ ನೇರವಾಗಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣವನ್ನು ಮಾಡಿದ್ದಾರೆ. ಭಾರತದ ಚುನಾವಣಾ ಆಯೋಗವು ಈ ವಿಷಯದಲ್ಲಿ ಮೌನವಾಗಿದೆ.

ಇದನ್ನು ಓದಿ: ಮುಸ್ಲಿಂ ಸಮುದಾಯದ ಬಗ್ಗೆ ಪ್ರಧಾನಿ ದ್ವೇಷ ಭಾಷಣ: ಮೋದಿ ವಿರುದ್ಧ ರಾಹುಲ್‌, ಖರ್ಗೆ ಸೇರಿ ಪ್ರತಿಪಕ್ಷಗಳ ನಾಯಕರಿಂದ ವಾಗ್ಧಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...