Homeಮುಖಪುಟಕನ್ನಡ ಚಿತ್ರನಿರ್ಮಾಣಕ್ಕೆ ಸ್ಥಿರತೆ ತಂದುಕೊಟ್ಟ ಪಾರ್ವತಮ್ಮ ರಾಜಕುಮಾರ್ ಸ್ಮರಣೆ

ಕನ್ನಡ ಚಿತ್ರನಿರ್ಮಾಣಕ್ಕೆ ಸ್ಥಿರತೆ ತಂದುಕೊಟ್ಟ ಪಾರ್ವತಮ್ಮ ರಾಜಕುಮಾರ್ ಸ್ಮರಣೆ

ಚಿತ್ರನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅಗಲಿ ಇಂದಿಗೆ ಮೂರು ವರ್ಷ. ಸದಭಿರುಚಿಯ ಚಿತ್ರಗಳ ನಿರ್ಮಾಣದೊಂದಿಗೆ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ, ಚಿತ್ರನಿರ್ಮಾಣದಲ್ಲಿ ಶಿಸ್ತು ರೂಢಿಸಿದವರು ಪಾರ್ವತಮ್ಮ. ವರನಟ ಡಾ.ರಾಜಕುಮಾರ್ ಕನ್ನಡಗರ ಐಕಾನ್ ಆಗಿ ರೂಪುಗೊಳ್ಳುವಲ್ಲಿ ಪಾರ್ವತಮ್ಮನವರ ಶ್ರಮ ದೊಡ್ಡದು.

- Advertisement -
- Advertisement -

“ಕನ್ನಡ ಸಿನಿಮಾ ನಿರ್ಮಾಣಕ್ಕೆ ಶಿಸ್ತು ಮತ್ತು ಸ್ಥಿರತೆ ತಂದುಕೊಟ್ಟವರು ಪಾರ್ವತಮ್ಮ ರಾಜಕುಮಾರ್” ಎಂದಿದ್ದರು ಹಿರಿಯ ನಿರ್ದೇಶಕ ಭಗವಾನ್. ವರ್ಷದ ಹಿಂದೆ ಅವರಿಗೆ ಡಾಕ್ಟರೇಟ್ ಗೌರವ ಸಂದ ಸಂದರ್ಭದಲ್ಲಿ ಪಾರ್ವತಮ್ಮನವರ ಬಗ್ಗೆ ಭಗವಾನ್ ಮಾತನಾಡುತ್ತಾ, “ಅವರು ಈ ಗೌರವಕ್ಕೆ ಅತ್ಯಂತ ಸೂಕ್ತ ವ್ಯಕ್ತಿ. ನಾನು ಅವರನ್ನು ನನ್ನ ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ನೋಡಿಕೊಂಡು ಬಂದಿದ್ದೇನೆ. ಆಗ ಮದರಾಸಿನಲ್ಲಿ ಕನ್ನಡ ಸಿನಿಮಾಗಳಿಗೆ ಚಿತ್ರೀಕರಣ ನಡೆಯುತ್ತಿದ್ದ ದಿನಗಳಲ್ಲಿ ಕನ್ನಡ ಕಲಾವಿದರು ಮತ್ತು ತಂತ್ರಜ್ಞರಾದ ನಮಗೆ ಅನಿಶ್ಚಿತತೆ ಕಾಡುತ್ತಿತ್ತು. ಕನ್ನಡ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದವರು ಹೊರರಾಜ್ಯದವರೇ ಆಗಿರುತ್ತಿದ್ದರು. ಮುಂದೆ ಪಾರ್ವತಮ್ಮನವರು ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಕನ್ನಡದ ಹೂಡಿಕೆದಾರರಿಗೆ ಆತ್ಮವಿಶ್ವಾಸ ಮೂಡಿಸಿದರು. ಶಿಸ್ತು ಮತ್ತು ಬದ್ಧತೆಯ ಅವರ ಬ್ಯಾನರ್ ಕನ್ನಡ ಚಿತ್ರರಂಗಕ್ಕೆ ಸ್ಥಿರತೆ ತಂದುಕೊಟ್ಟಿತು” ಎಂದು ಹೇಳಿದ್ದರು.

ಪಾರ್ವತಮ್ಮನವರ ಮಾರ್ಗದರ್ಶನ

ಇಲ್ಲಿ ಮತ್ತೊಂದು ಸಂದರ್ಭವನ್ನು ಸ್ಮರಿಸಬಹುದು. ನಿರ್ದೇಶಕರಾದ ದೊರೈ-ಭಗವಾನ್ ಅದೊಮ್ಮೆ ತಾವು ನಿರ್ದೇಶಿಸಲಿದ್ದ “ಚಂದನದ ಗೊಂಬೆ’ ಚಿತ್ರಕ್ಕಾಗಿ ಡಾ.ರಾಜಕುಮಾರ್ ಡೇಟ್ಸ್ ಕೇಳುವುದಕ್ಕೆಂದು ಸದಾಶಿವನರದ ಅವರ ಮನೆಗೆ ಹೋಗದ್ದರು. ಇದು ಸಾಹಿತಿ ತರಾಸು ಅವರ ಕೃತಿಯನ್ನು ಆಧರಿಸಿದ ವಸ್ತು. ಕಥೆ ಕೇಳಿದ ಪಾರ್ವತಮ್ಮನವರು, “ಈ ಪಾತ್ರ ರಾಜಕುಮಾರ್ ಅವರ ಇಮೇಜ್‍ಗೆ ಹೊಂದುವುದಿಲ್ಲ. ಬದಲಿಗೆ ಈ ಪಾತ್ರಕ್ಕೆ ನೀವು ಅನಂತನಾಗ್ ಅವರನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರ ಚೆನ್ನಾಗಿ ಆಗುತ್ತದೆ’ ಎಂದು ಸಲಹೆ ಮಾಡಿದರು. ಅದರಂತೆ ನಿರ್ದೇಶಕದ್ವಯರು ಅನಂತನಾಗ್ ಅವರನ್ನ ಆಯ್ಕೆ ಮಾಡಿಕೊಂಡ ಚಿತ್ರ ಮಾಡಿದರು. ಈ ಸಿನಿಮಾ ಸೂಪರ್‌ಹಿಟ್ ಆಯ್ತು! ಅನಂತನಾಗ್ ಅವರ ವೃತ್ತಿ ಬದುಕಿಗೂ ಈ ಸಿನಿಮಾ ಒಂದೊಳ್ಳೆ ತಿರುವು ನೀಡಿತು. ಹೀಗೆ ಹಲವು ಹಂತಗಳಲ್ಲಿ ಅವರು ಕನ್ನಡ ಚಿತ್ರನಿರ್ದೇಶಕರಿಗೆ ಮಾರ್ಗದರ್ಶನ ಮಾಡಿದ್ದಿದೆ.

ಡಾ.ರಾಜಕುಮಾರ್ ಯಶಸ್ಸಿನ ಹಿಂದೆ ಪಾರ್ವತಮ್ಮನವರ ಕೊಡುಗೆ

“ಪಾರ್ವತಿ ಬದುಕಿಗೆ ಬಂದ ನಂತರ ನನ್ನ ಅದೃಷ್ಟ ಖುಲಾಯಿಸಿತು. ಆಕೆ ನನ್ನ ಅದೃಷ್ಟ ದೇವತೆ’ ಎನ್ನುತ್ತಿದ್ದರು ಡಾ.ರಾಜಕುಮಾರ್. 1953 ಜೂನ್ 25ರಂದು ರಾಜಕುಮಾರ್ ಅವರನ್ನು ವರಿಸಿದಾಗ ಪಾರ್ವತಮ್ಮನವರಿಗೆ 13 ವರ್ಷವಷ್ಟೆ. 1954ರಲ್ಲಿ ರಾಜ್ ನಾಯಕನಟನಾಗಿ ನಟಿಸಿದ ಮೊಟ್ಟಮೊದಲ ಸಿನಿಮಾ “ಬೇಡರ ಕಣ್ಣಪ್ಪ’ ತೆರೆಕಂಡಿತು. ಈ ಚಿತ್ರದ ಯಶಸ್ಸಿನೊಂದಿಗೆ ರಾಜಕುಮಾರ್ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಯವರೆಗೆ ರಂಗಭೂಮಿ ನಟನಾಗಿದ್ದ ಅವರು ಮುಂದೆ ಸಿನಿಮಾ ನಟನಾಗಿ ಗುರುತಿಸಿಕೊಂಡರು. ಈ ಏಳ್ಗೆಗೆ ತಮ್ಮ ಬದುಕಿಗೆ ಬಂದ ಪಾರ್ವತಮ್ಮನವರೇ ಕಾರಣ ಎಂದೇ ಭಾವಿಸಿದ್ದರು ರಾಜ್. ಅದಕ್ಕೆ ಸರಿಯಾಗಿ ಪಾರ್ವತಮ್ಮನವರೂ ಸೂಕ್ತ ಸಲಹೆ-ಸೂಚನೆಗಳೊಂದಿಗೆ ಪತಿಗೆ ನೆರವಾಗುತ್ತಿದ್ದರು. ವಯಸ್ಸು ಚಿಕ್ಕದಾದರೂ ಪ್ರೌಢ ಆಲೋಚನೆ ಪಾರ್ವತಮ್ಮನವರದ್ದು. ಅವರ ಹುಟ್ಟೂರು ಮೈಸೂರು ಜಿಲ್ಲೆಯ ಸಾಲಿಗ್ರಾಮ. ಅಪ್ಪಾಜಿ ಗೌಡ ಮತ್ತು ಲಕ್ಷ್ಮಮ್ಮ ದಂಪತಿಯ ಪುತ್ರಿಯಾಗಿ 1939 ಡಿಸೆಂಬರ್ 6ರಂದು ಜನಿಸಿದರು.

ನಾಟಕ, ಸಿನಿಮಾವೊಂದು ಯಶಸ್ಸು ಸಾಧಿಸಲು ಇಡೀ ತಂಡದ ಪ್ರಯತ್ನ ಅತ್ಯಗತ್ಯ ಎಂದು ಅರಿವಾಗಲು ಪಾರ್ವತಮ್ಮ ರಾಜಕುಮಾರ್ ರವರಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಮುಂದಿನ ದಿನಗಳಲ್ಲಿ ಪಾರ್ವತಮ್ಮನವರು ಸಿನಿಮಾದ ವಿವಿಧ ವಿಭಾಗಗಳ ಬಗ್ಗೆ ಅರಿವು ಮೂಡಿಸಿಕೊಂಡರು. ಸಿನಿಮಾವೊಂದರ ಯಶಸ್ಸಿಗೆ ಉತ್ತಮ ಕತೆ, ತಂತ್ರಜ್ಞರ ಪಾಲ್ಗೊಳ್ಳುವಿಕೆ ಮುಖ್ಯ ಎನ್ನುವುದನ್ನು ರಾಜ್ ಸಿನಿಮಾಗಳ ನಿರ್ಮಾಪಕರಿಗೆ ಮನವರಿಕೆ ಮಾಡಿಕೊಟ್ಟರು. ಮುಂದೆ ಸ್ವತಃ ತಾವೂ ರಾಜ್ ಸಿನಿಮಾಗಳ ಕತೆ, ವಸ್ತುವಿನ ಚರ್ಚೆಯಲ್ಲಿ ಪಾಲ್ಗೊಳ್ಳತೊಡಗಿದರು. ರಾಜ್ ಅವರ ಕಿರಿಯ ಸಹೋದರ ವರದಪ್ಪ ಮತ್ತು ಪಾರ್ವತಮ್ಮನವರು ಕತೆ, ಚಿತ್ರಕಥೆಯ ಚರ್ಚೆಗಳಲ್ಲಿ ತೊಡಗಿಸಿಕೊಂಡದ್ದು ರಾಜ್‍ಗೆ ಬಹುದೊಡ್ಡ ವರವಾಯ್ತು. ಕ್ರಮೇಣ ಅವರ ಇಮೇಜ್ ಬೆಳೆಯತೊಡಗಿತಲ್ಲದೆ ಅವರು ನಟಿಸಿದ ಸಿನಿಮಾಗಳು ಕೂಡ ಜನಮನ್ನಣೆ ಗಳಿಸಿದವು.

ಚಿತ್ರಕೃಪೆ: ಮನು

ವಜ್ರೇಶ್ವರಿ ಕಂಬೈನ್ಸ್ ಆರಂಭ

ಸಿನಿಮಾದ ವಿವಿಧ ವಿಭಾಗಗಳ ಬಗ್ಗೆ ಅನುಭವ ಸಿಗುತ್ತಿದ್ದಂತೆ ಪಾರ್ವತಮ್ಮನವರು ಸ್ವತಃ ತಾವೇ ಚಿತ್ರನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ಆರಂಭಿಸಿದರು. ಚಿತ್ರನಿರ್ಮಾಣ ಮತ್ತು ಕನ್ನಡ ಚಿತ್ರೋದ್ಯಮದ ಬಗ್ಗೆ ಪಾರ್ವತಮ್ಮನವರಿಗೊಂದು ಮುನ್ನೋಟ ಇತ್ತು. “ತ್ರಿಮೂರ್ತಿ’ ಚಿತ್ರದಿಂದ ನಿರ್ಮಾಣಕ್ಕಿಳಿದ ಅವರು ಮುಂದೆ ಸಾಲು ಸಾಲಾಗಿ ಮಹತ್ವದ ಚಿತ್ರಗಳನ್ನು ನಿರ್ಮಿಸುತ್ತಾ ಬಂದರು. ಇಲ್ಲಿಯವರೆಗೆ ಅವರ ಸಂಸ್ಥೆಯಡಿ 80ಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣಗೊಂಡಿವೆ. ಶಿಸ್ತು ಮತ್ತು ಬದ್ಧತೆ ಅವರ ಚಿತ್ರನಿರ್ಮಾಣ ಸಂಸ್ಥೆಯ ಧ್ಯೇಯವಾಕ್ಯ. ತಮ್ಮದೇ ಸಂಸ್ಥೆಯಡಿ ಚಿತ್ರಗಳನ್ನು ನಿರ್ಮಿಸತೊಡಗಿದಾಗ ಪಾರ್ವತಮ್ಮನವರಿಗೆ ಹೆಚ್ಚಿನ ಅಧಿಕಾರವಿರುತ್ತಿತ್ತು. ತಾವೇ ಕತೆಯನ್ನು ಆಯ್ಕೆ ಮಾಡುತ್ತಿದ್ದರು. ಕತೆಗೆ ಹೊಂದುವಂತಹ ತಾರಾಬಳಗ ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿತ್ತು. ಪ್ರಮುಖವಾಗಿ ಪಾರ್ವತಮ್ಮ ಚಿತ್ರಸಾಹಿತಿಗಳ ಬಗ್ಗೆ ಅಪಾರ ಗೌರವಭಾವ ಹೊಂದಿದ್ದರು. ಸದೃಢ ಚಿತ್ರವೊಂದು ರೂಪುಗೊಳ್ಳಲು ಚಿತ್ರಸಾಹಿತ್ಯದ ಪಾಲು ದೊಡ್ಡದು ಎನ್ನುವುದನ್ನು ಮನವರಿಕೆ ಮಾಡಿಕೊಂಡಿದ್ದ ಅವರು ಅನುಭವಿ ಚಿತ್ರಸಾಹಿತಿಗಳಿಂದ ಸಂಭಾಷಣೆ, ಚಿತ್ರಕಥೆ ಮತ್ತು ಹಾಡುಗಳನ್ನು ಬರೆಸುತ್ತಿದ್ದರು. ಒಂದೆಡೆ ಇದರಿಂದ ರಾಜ್ “ಐಕಾನ್’ ಆಗಿ ರೂಪುಗೊಂಡರಲ್ಲದೆ ಮತ್ತೊಂದೆಡೆ ತಂತ್ರಜ್ಞರು ಮತ್ತು ಚಿತ್ರಸಾಹಿತಿಗಳೂ ಬೆಳೆದರು. ಅವರ ಸಂಸ್ಥೆಯಡಿ ತಯಾರಾದ ತಂತ್ರಜ್ಞರು ಮುಂದೆ ಕನ್ನಡದ ಇತರೆ ನಿರ್ಮಾಣ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ದೊಡ್ಡ ಯಶಸ್ಸು ಕಂಡಿದ್ದಾರೆ. ಅವರ ಸಂಸ್ಥೆಯ ಚಿತ್ರಗಳ ಯಶಸ್ಸಿನ ಪರ್ಸಂಟೇಜ್ ಶೇ.98 ಎನ್ನುವುದು ವಿಶೇಷ!

ಸ್ವತಃ ಪಾರ್ವತಮ್ಮ ರಾಜಕುಮಾರ್ ರವರು ಉತ್ತಮ ಓದುಗರಾಗದ್ದರು. ಬಿಡುವಿನ ವೇಳೆಯಲ್ಲಿ ಕಾದಂಬರಿಗಳನ್ನು ಓದುತ್ತಿದ್ದ ಅವರು ಬೆಳ್ಳಿತೆರೆಗೆ ಹೊಂದಿಕೆಯಾಗುವಂತಹ ಕತೆಗಳಿದ್ದರೆ ನಿರ್ದೇಶಕರಿಗೆ ತಿಳಿಸುತ್ತಿದ್ದರು. ಹೀಗಾಗಿಯೇ ಅವರ ಬ್ಯಾನರ್‌ನಲ್ಲಿ ತಯಾರಾದ ಸಾಕಷ್ಟು ಸಿನಿಮಾಗಳು ಕಾದಂಬರಿ ಆಧರಿಸಿದ್ದವೇ ಆಗಿವೆ. ಒಮ್ಮೆ ಬೀದಿಯಲ್ಲಿ ತಳ್ಳುಗಾಡಿಯಲ್ಲಿ ಓರ್ವ ಹಳೆಯ ಪುಸ್ತಕಗಳನ್ನು ಮಾರಾಟಕ್ಕೆಂದು ತೆಗೆದುಕೊಂಡು ಹೋಗುತ್ತಿದ್ದನಂತೆ. ಪಾರ್ವತಮ್ಮನವರು ಆಸಕ್ತಿಯಿಂದ ಗಾಡಿ ನಿಲ್ಲಿಸಿ ತಮಗೇನಾದರೂ ಪುಸ್ತಕಗಳು ಸಿಗುತ್ತವೆಯೇ ಎಂದು ನೋಡಿದ್ದಾರೆ. ಅಲ್ಲಿ ಅವರಿಗೆ ದೇವುಡು ನರಸಿಂಹಶಾಸ್ತ್ರಿಯವರ “ಮಯೂರ’ ಕೃತಿ ಕಣ್ಣಿಗೆ ಬಿದ್ದಿದೆ. ಅದನ್ನು ಎತ್ತಿಕೊಂಡ ಪಾರ್ವತಮ್ಮನವರು ಓದಿ ಆ ವಸ್ತುವನ್ನು ಬೆಳ್ಳಿತೆರೆಗೆ ಅಳವಡಿಸಲು ನಿರ್ಧರಿಸಿದರು. ಡಾ.ರಾಜಕುಮಾರ್ ವೃತ್ತಿ ಬದುಕಿಗೆ ಮಾತ್ರವಲ್ಲ ಕನ್ನಡ ಚಿತ್ರರಂಗಕ್ಕೂ ಇದು ಮಹತ್ವದ ಚಿತ್ರವಾಯ್ತು!

ಎಪ್ಪತ್ತರ ದಶಕದ ದ್ವಿತಿಯಾರ್ಧದ ಹೊತ್ತಿಗೆ ಕನ್ನಡ ಚಿತ್ರರಂಗ ಮದರಾಸಿನಿಂದ ಕನ್ನಡ ನಾಡಿಗೆ ಶಿಫ್ಟ್ ಆಯ್ತು. ಆಗ ಇಲ್ಲಿ ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಂಡ ಮೂರ್ನಾಲ್ಕು ಪ್ರಮುಖ ಸಂಸ್ಥೆಗಳಲ್ಲಿ ಪಾರ್ವತಮ್ಮನವರ ಬ್ಯಾನರ್ ಮುಂಚೂಣಿಯದ್ದು. ಈ ಕಾಲಘಟ್ಟದಲ್ಲಿ ತಂತ್ರಜ್ಞರು ಮತ್ತು ಕಲಾವಿದರಲ್ಲಿ ಚಿತ್ರನಿರ್ಮಾಣದೊಂದಿಗೆ ವಿಶ್ವಾಸ ಮೂಡಿಸುವುದು ಅತ್ಯವಶ್ಯವಾಗಿತ್ತು. ಆ ವೇಳೆಗಾಗಲೇ ಸಿನಿಮೋದ್ಯಮದ ವ್ಯಾಕರಣ ಕರಗತ ಮಾಡಿಕೊಂಡಿದ್ದ ಪಾರ್ವತಮ್ಮನವರು ತಮ್ಮ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ರಾಜ್ ಸಿನಿಮಾಗಳಲ್ಲಿ ಬಿಝಿಯಾಗಿದ್ದಾಗ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಸ್ಟಾರ್ ನಟನಾಗಿ ಬೆಳೆದ ರಾಜ್‍ರನ್ನು ಯಾವುದೇ ಗಾಸಿಪ್‍ಗಳು ಕಲಕದಂತೆ ಎಚ್ಚರಿಕೆ ವಹಿಸಿದರು. ಇತ್ತೀಚಿನ ವರ್ಷಗಳವರೆಗೂ ಅದೆಷ್ಟೋ ಉದ್ಯಮದ ಸಮಸ್ಯೆಗಳು ಮತ್ತು ಕಲಾವಿದರ ವೈಯಕ್ತಿಕ ಸಮಸ್ಯೆಗಳು ಕೂಡ ಪಾರ್ವತಮ್ಮನವರ ಸಮ್ಮುಖದಲ್ಲಿ ಬಗೆಹರಿಯುತ್ತಿದ್ದವು. ಇದು ಉದ್ಯಮದ ಮಂದಿ ಅವರ ಮೇಲಿಟ್ಟ ಗೌರವ, ವಿಶ್ವಾಸದ ಪ್ರತೀಕ.

ಮಕ್ಕಳ ಎಂಟ್ರಿ

ತಮ್ಮ ಪುತ್ರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರನ್ನು ತಮ್ಮ ಬ್ಯಾನರ್ ಮೂಲಕ ಪಾರ್ವತಮ್ಮನವರು ಯಶಸ್ವಿಯಾಗಿ ಬೆಳ್ಳಿತೆರೆಗೆ ಪರಿಚಯಿಸಿದರು. ಅಮ್ಮ ಹಾಕಿಕೊಟ್ಟ ಕಾದಂಬರಿ ಆಧರಿಸಿದ ಮತ್ತು ಸದಭಿರುಚಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಡಾ.ರಾಜ್ ಪುತ್ರರೂ ಯಶಸ್ಸು ಕಂಡರು. ಇನ್ನು ಅವರ ನಿರ್ಮಾಣ ಸಂಸ್ಥೆಯಡಿ ಕನ್ನಡ ತೆರೆಗೆ ಪರಿಚಯವಾದ ನಾಯಕಿಯರ ಸಂಖ್ಯೆ ದೊಡ್ಡದಿದೆ. ಸುಧಾರಾಣಿ, ಆಶಾರಾಣಿ, ವೀಣಾ, ಮಾಲಾಶ್ರೀ, ಮೋಹಿನಿ, ಮೊನಿಶಾ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್, ವಿದ್ಯಾವೆಂಕಟೇಶ್, ಶ್ರೀವಿದ್ಯಾ, ರಕ್ಷಿತಾ, ರಮ್ಯಾ… ಹೀಗೆ ಹತ್ತಾರು ನಾಯಕಿಯರು ಅವರ ಬ್ಯಾನರ್‌ನಲ್ಲಿ ಪರಿಚಯವಾಗಿ ಯಶಸ್ಸು ಕಂಡಿದ್ದಾರೆ.

ಚಿತ್ರಕೃಪೆ: ಮನು

“ಪಾರ್ವತಮ್ಮನವರ ಬ್ಯಾನರ್‌ನಿಂದ ಪರಿಚಯವಾದ ನಟಿ ನಾನು. ವೈಯಕ್ತಿಕವಾಗಿ ನನಗೆ ಆ ಬಗ್ಗೆ ತುಂಬಾ ಖುಷಿ ಇದೆ. ಅವರ ಸಂಸ್ಥೆಯಿಂದ ಪರಿಚಯವಾಗಿದ್ದು ವೃತ್ತಿ ಬದುಕಿಗೆ ದೊಡ್ಡ ವರವಾಯ್ತು. ಮತ್ತೊಂದೆಡೆ ನನಗೆ ಗೌರವವೂ ಸಿಕ್ಕಿದೆ. ದೊಡ್ಮನೆಯ ಸಿನಿಮಾ ಮೂಲಕ ಬಂದವಳು ಎಂದು ಎಲ್ಲರೂ ಪ್ರೀತಿ, ವಿಶ್ವಾಸ, ಗೌರವದಿಂದ ಕಾಣುತ್ತಾರೆ” ಎನ್ನುತ್ತಾರೆ ನಟಿ ಸುಧಾರಾಣಿ. ಹೀಗೆ, ಹಲವು ಕಾರಣಗಳಿಂದಾಗಿ ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮನವರು ಪ್ರಮುಖ ವ್ಯಕ್ತಿ ಮತ್ತು ಶಕ್ತಿಯಾಗಿ ಗೋಚರಿಸುತ್ತಾರೆ.


ಇದನ್ನೂ ಓದಿ; ತೆಲುಗು, ತಮಿಳು ಚಿತ್ರರಂಗದಲ್ಲಿ ಯಶಕಂಡ ಫ್ಯಾಂಟಸಿ ಸಿನಿಮಾಗಳ ನಿರ್ದೇಶಕ, ಕನ್ನಡಿಗ ವಿಠಲಾಚಾರ್ಯ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...