Homeಮುಖಪುಟಕೊರೊನಾ ಆರ್ಥಿಕ ಹಿಂಜರಿತ: 77,350 ಉದ್ಯೋಗ ಸೃಷ್ಟಿ; 100 ದಿನಗಳ ಕ್ರಿಯಾ ಯೋಜನೆ ಘೋಷಿಸಿದ...

ಕೊರೊನಾ ಆರ್ಥಿಕ ಹಿಂಜರಿತ: 77,350 ಉದ್ಯೋಗ ಸೃಷ್ಟಿ; 100 ದಿನಗಳ ಕ್ರಿಯಾ ಯೋಜನೆ ಘೋಷಿಸಿದ ಪಿಣರಾಯಿ ಸರ್ಕಾರ

- Advertisement -
- Advertisement -

ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯಿಂದ ಉಂಟಾದ ಆರ್ಥಿಕ ಕುಸಿತವನ್ನು ಸರಿದೂಗಿಸಲು 100 ದಿನಗಳ ಕ್ರಿಯಾ ಯೋಜನೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ತಿರುವನಂತಪುರಂನಲ್ಲಿ ಪ್ರಕಟಿಸಿದ್ದಾರೆ. ಯೋಜನೆಯು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು, ಗುಣಮಟ್ಟದ ಉದ್ಯೋಗವನ್ನು ಸೃಷ್ಟಿಸುವುದು ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರೀಕರಿಸುತ್ತದೆ ಮತ್ತು ಇದು ಜೂನ್ 11 ಮತ್ತು ಸೆಪ್ಟೆಂಬರ್ 19 ರ ನಡುವೆ ಜಾರಿಗೆ ಬರಲಿದೆ.

ವಿಜ್ಞಾನ, ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಜ್ಞಾನಾಧಾರಿತ ಆರ್ಥಿಕತೆಯ ನಿರ್ಮಾಣಕ್ಕೆ ಅನುವು ಮಾಡಿಕೊಡುವುದು ಕೂಡಾ ಇದರ ಉದ್ದೇಶ ಎಂದು ಪಿಣರಾಯಿ ವಿಜಯನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯ ಸಾಧನೆಗಳನ್ನು ಮುನ್ನಡೆಸಲು, ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಹಾಗೂ ಗುಣಮಟ್ಟದ ಉದ್ಯೋಗವನ್ನು ಸೃಷ್ಟಿಸಲು ಬೇಕಾಗಿ ನೀತಿಗಳು ಮತ್ತು ಯೋಜನೆಗಳಿಗೆ ಒತ್ತು ನೀಡಲಾಗುವುದು” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ 7 ತಿಂಗಳು: ‘ಕೃಷಿ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ ದಿನ’ ಪ್ರತಿಭಟನೆಗೆ ರೈತರ ಕರೆ

“ಬಡತನ ನಿವಾರಣೆ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸುವುದು, ಪರಿಸರ ಸ್ನೇಹಿ ಅಭಿವೃದ್ಧಿಯ ಅನುಷ್ಠಾನ ಮತ್ತು ಆರೋಗ್ಯಕರ ನಗರ ಜೀವನಕ್ಕೆ ಅನುಕೂಲಕರವಾದ ಆಧುನಿಕ ಘನತ್ಯಾಜ್ಯ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಈ ಯೋಜನೆಯ ಅತ್ಯಂತ ಮಹತ್ವದ ಅಂಶವಾಗಿದೆ” ಎಂದು ಅವರು ಹೇಳಿದ್ದಾರೆ.

ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ, ವಿಷಕಾರಿಯಲ್ಲದ ಆಹಾರದ ಉತ್ಪಾದನೆಯೂ ಈ ಯೋಜನೆಯ ಆದ್ಯತೆಯಾಗಿದೆ ಎಂದು ಪಿಣರಾಯಿ ಹೇಳಿದ್ದಾರೆ.

5,898 ಕೋಟಿ ರೂ.ಗಳ ಸಾಲವನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಾದ ವಿಶ್ವ ಬ್ಯಾಂಕ್, ಜರ್ಮನ್ ಬ್ಯಾಂಕ್ ಕೆಎಫ್‌ಡಬ್ಲ್ಯೂ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಎಐಐಬಿ) ನಿಂದ ರೀಬ್ಯುಲ್ಡ್‌ ಕೇರಳ ಇನಿಶಿಯೇಟಿವ್ (ಆರ್‌ಕೆಐ) ಗೆ ಮಂಜೂರು ಮಾಡಲಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

“ಈ ಸಾಲಕ್ಕೆ ರಾಜ್ಯದ ಪಾಲನ್ನು ಸೇರಿಸಿದರೆ ಆರ್‌ಕೆಐ ಯೋಜನೆಗಳಿಗೆ 8,425 ಕೋಟಿ ರೂ. ಲಭ್ಯವಾಗುತ್ತದೆ. ಮುಂದಿನ 100 ದಿನಗಳಲ್ಲಿ 945.35 ಕೋಟಿ ರೂ.ಗಳ ಒಂಬತ್ತು ರಸ್ತೆ ಯೋಜನೆಗಳನ್ನು ಆರ್‌ಕೆಐ ಹಣವನ್ನು ಬಳಸಿಕೊಂಡು ಪ್ರಾರಂಭಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್‌- ಆಡಳಿತರೂಢ ಕಾಂಗ್ರೆಸ್‌ ಆಂತರಿಕ ಕಚ್ಚಾಟ ಬೀದಿಗೆ: ಬೆಂಬಲಿಗರ ಪೋಸ್ಟರ್‌ ಯುದ್ಧ

ಇದಲ್ಲದೆ, ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯು ಈ 100 ದಿನಗಳಲ್ಲಿ 1,519.57 ಕೋಟಿ ರೂ.ಗಳ ಯೋಜನೆಗಳನ್ನು ಪೂರ್ಣಗೊಳಿಸಲಿದೆ ಎಂದರು.

ಪಿಡಬ್ಲ್ಯುಡಿ, ಆರ್‌ಕೆಐ ಮತ್ತು ಕೇರಳ ಇನ್ಪ್ರಾಸ್ಟ್ರಕ್ಚರ್‌‌ ಇನ್ವೆಸ್ಟ್‌ಮೆಂಟ್‌‌ ಫಂಡ್‌ ಬೋರ್ಡ್‌ ಮೂಲಕ 2,464.92 ಕೋಟಿ ರೂ.ಗಳ 100 ದಿನಗಳ ಕ್ರಿಯಾ ಯೋಜನೆಯು ನಡೆಯಲಿದೆ ಎಂದು ಸರ್ಕಾರದ ಪತ್ರಿಕಾ ಹೇಳಿಕೆಯು ತಿಳಿಸಿದೆ.

“ಕೆ-ಡಿಐಎಸ್ಸಿ (ಕೇರಳ ಅಭಿವೃದ್ಧಿ ಮತ್ತು ಇನ್ನೋವೇಶನ್ ಸ್ಟ್ರಾಟೆಜಿಕ್ ಕೌನ್ಸಿಲ್) ರಾಜ್ಯದ 20 ಲಕ್ಷ ವಿದ್ಯಾವಂತರಿಗೆ ಉದ್ಯೋಗ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪೂರ್ಣಗೊಳಿಸುತ್ತಿದೆ. ಎಲ್ಲಾ ಸ್ಥಳೀಯ ಸಂಸ್ಥೆಗಳು 1,000 ಜನರಲ್ಲಿ ಐದು ಜನರಿಗೆ ಉದ್ಯೋಗ ಸೃಷ್ಟಿಸುವ ಕರಡು ಯೋಜನೆಯನ್ನು ಸಿದ್ಧಪಡಿಸುತ್ತವೆ” ಎಂದು ಹೇಳಿಕೆ ತಿಳಿಸಿದೆ.

ಕೈಗಾರಿಕೆಗಳು ಮತ್ತು ವಾಣಿಜ್ಯ ವಿಭಾಗದಲ್ಲಿ ತಲಾ 10,000 ಉದ್ಯೋಗಗಳು, ಕುಡುಂಬಶ್ರೀಯಲ್ಲಿ 2,000, ಮತ್ತು ಸಾರಿಗೆ ಇಲಾಖೆಯಲ್ಲಿ 7,500 ಉದ್ಯೋಗಗಳು ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಸುಮಾರು 77,350 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು 100 ದಿನಗಳಲ್ಲಿ ಸೃಷ್ಟಿಸಲಾಗುವುದು ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಬಹುಜನ ಭಾರತ: ತುಕ್ಕು ತಗುಲಿತೇ ಉಕ್ಕಿನ ರಕ್ಷಾ ಕವಚಕ್ಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...