Homeಕರ್ನಾಟಕಅನಂತಕುಮಾರ್‌ ನೆಟ್ಟ ಗಿಡ ಉಳಿಸಬೇಕಿದೆ: ರಾಜಕೀಯ ಅರ್ಥ ಧ್ವನಿಸಿತೇ ತೇಜಸ್ವಿನಿ ಟ್ವೀಟ್?

ಅನಂತಕುಮಾರ್‌ ನೆಟ್ಟ ಗಿಡ ಉಳಿಸಬೇಕಿದೆ: ರಾಜಕೀಯ ಅರ್ಥ ಧ್ವನಿಸಿತೇ ತೇಜಸ್ವಿನಿ ಟ್ವೀಟ್?

- Advertisement -
- Advertisement -

ಅಭ್ಯರ್ಥಿಗಳ ಟಿಕೆಟ್ ಘೋಷಣೆಯಾದ ಬಳಿಕ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಕಾವು ಜೋರಾಗಿದೆ. ಮತ್ತೊಂದೆಡೆ ಮಾಜಿ ಸಚಿವ, ದಿವಂಗತ ಅನಂತಕುಮಾರ್‌ ಅವರ ಪಾಳೆಯದಲ್ಲಿದ್ದ ಬಿಜೆಪಿ ನಾಯಕರಿಗೆ ಟಿಕೆಟ್ ಕೈತಪ್ಪುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗ ಅನಂತಕುಮಾರ್‌ ಅವರ ಪತ್ನಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಅವರು ಮಾಡಿರುವ ಟ್ವೀಟ್ ರಾಜಕೀಯ ಅರ್ಥಗಳನ್ನು ಹೊಮ್ಮಿಸಿದಂತೆ ಭಾಸವಾಗಿದೆ.

ಸೋಮವಾರ ಮಾಡಿರುವ ಟ್ವೀಟ್‌ವೊಂದರಲ್ಲಿ ತೇಜಸ್ವಿನಿ ಅನಂತಕುಮಾರ್‌, “ಈ ಗಿಡ ಜೂನ್ 5, 2015ರಂದು ಲಾಲ್‌‌ಬಾಗ್ ಪಶ್ಚಿಮ ದ್ವಾರದ ಬಳಿ ಶ್ರೀ ಅನಂತಕುಮಾರ್ ಅವರು ನೆಟ್ಟಿದ್ದು. ಯಾಕೋ ಮುದುರಿ ಹೋಗಿದೆ. ಲಾಲ್‌ಬಾಗ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಶ್ರೀ ಅನಂತಕುಮಾರರ ಅನುಪಸ್ಥಿತಿಯಲ್ಲಿ ಈ ಗಿಡವನ್ನು ಉಳಿಸುವ ಜವಾಬ್ದಾರಿ ನಮ್ಮದು, ಎಂಬುದು ನನ್ನ ಭಾವನೆ” ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ “ಮಾತು ಬೆಳ್ಳಿ ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ಮೌನ ಮಾತ್ರ ಬಂಗಾರ. ಏನಂತಿರಿ?” ಎಂದು ಕೇಳಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೂ ತೇಜಸ್ವಿನಿಯವರ ಟ್ವೀಟ್‌ಗಳಿಗೂ ಕಾಕತಾಳೀಯವೆಂಬಂತೆ ಹೋಲಿಕೆ ಮಾಡಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಅನಂತಕುಮಾರ್‌ ಅವರೊಂದಿಗೆ ಗುರುತಿಸಿಕೊಂಡು ಬೆಳೆದ ಅನೇಕರಿಗೆ ಬಿಜೆಪಿ ಟಿಕೆಟ್ ಕೈತಪ್ಪಿರುವಾಗ ಹಾಗೂ ರಾಜ್ಯ ಬಿಜೆಪಿಯೊಳಗೆ ಬಿಕ್ಕಟ್ಟು ತಾರಕ್ಕೇರುತ್ತಿರುವಾಗ ತೇಜಸ್ವಿನಿಯವರ ಪೋಸ್ಟ್‌ ವಿವಿಧ ಅರ್ಥಗಳಿಗೆ ಅವಕಾಶ ಮಾಡಿಕೊಟ್ಟಿದೆ.

“Cryptic message (ನಿಗೂಢ ಸಂದೇಶ) ಯಾಕೆ ಮೇಡಂ? ನೇರವಾಗಿ ಹೇಳಬಿಡಿ” ಎಂದು ಸಿಟಿಜನ್‌ ಆಫ್‌ ಕನ್ನಡಸ್ಥಾನ ಟ್ವಿಟರ್‌ ಖಾತೆ ಒತ್ತಾಯಿಸಿದೆ.

“ರೆಂಬೆ ಕೊಂಬೆ ಮುರಿದಿದೆ ಒಣಗಿಲ್ಲ. ಒಣಗಲು ಬಿಡಬಾರದು. ನಾವು ನೆಟ್ಟ ಸಸಿ ಮರವಾಗಿದೆ ಹೆಮ್ಮರವಾಗಿ ಬೆಳೆದು ನೂರಾರು ವರ್ಷಗಳ ಕಾಲ ಫಲ ನೀಡಬೇಕು. ಯಾರೂ ರಕ್ಷಿಸದಿದ್ದರೆ ನಾವೇ ಕಾರ್ಯ ಪ್ರವೃತ್ತರಾಗಬೇಕು. ಇಲ್ಲವಾದರೆ ನಮ್ಮ ಕಣ್ಮುಂದೆಯೇ ಒಣಗಿ ಸಾಯಬಹುದು, ಯೋಚಿಸೋಣ” ಎಂದು ಗಂಗಾಧರ್‌ ಬಿಕೆಎಸ್‌ ಎಂಬವರು ಪ್ರತಿಕ್ರಿಯಿಸಿದ್ದಾರೆ.

“ಅನಂತಕುಮಾರ್ ಅವರು ನೆಟ್ಟ ಗಿಡ ಉಳಿಸೋದು ಎಷ್ಟು ಮುಖ್ಯನೋ ಹಾಗೆ ಅವರು ಬೆವರು ಸುರಿಸಿ ಕಟ್ಟಿದ ಪಕ್ಷ ಮತ್ತು ಸಿದ್ಧಾಂತ ಉಳಿಸುವುದು ಮುಖ್ಯವೆ, ಆ ಕೆಲಸ ಎಂದಿನಿಂದ ಶುರು ಮಾಡುತ್ತೀರಿ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

“ಕಮಲ ಕರ್ನಾಟಕದಲ್ಲಿ, ಈ ಗಿಡ ಲಾಲ್ಬಾಗ್‌ನಲ್ಲಿ (ಒಣಗುತ್ತಿದೆ)” ಎಂದು ನವೀನ್‌ಕುಮಾರ್‌ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

“ಬಿ.ಎಲ್‌.ಸಂತೋಷ್, ಜೋಶಿ ಅವರಿಂದಾಗಿ ಗಿಡ ಮುದುಡಿ ಹೋಗಿದೆ ಅಷ್ಟೇ ಮೇಡಂ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

“ನಮ್ಮ ಈ ಸುಂದರವಾದ ಸರ್ವಜನಾಂಗದ ಶಾಂತಿಯ ತೋಟದ ಶಾಂತಿಯನ್ನು ಕದಡುತ್ತಿರುವ ಬಿಜೆಪಿ ಮುಂಬರುವ ದಿನಗಳಲ್ಲಿ ಮುದುರಿಕೊಳ್ಳುವುದರ ಸಂಕೇತವೆನಿಸುತ್ತೆ. ಬೇಗ ಬಿದ್ದು ನಾಶವಾಗಿ ಹೋಗಲಿ, ಉಳಿದೆಲ್ಲ ಮರ-ಗಿಡ-ಬಳ್ಳಿಗಳು ಹಸಿರಿನಿಂದ ಕಂಗೊಳಿಸಲಿ” ಎಂದು ಬಾರುಕೋಲು ಟ್ವಿಟರ್‌ ಖಾತೆ ಪ್ರತಿಕ್ರಿಯಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...