Homeಮುಖಪುಟಏನಾಯಿತು ಗರೀಬ್ ಕಲ್ಯಾಣ? 14.4 ಕೋಟಿ ಜನರಿಗೆ ಮೇ ತಿಂಗಳಲ್ಲಿ ಸಿಗಲಿಲ್ಲ ಆಹಾರ ಧಾನ್ಯ..

ಏನಾಯಿತು ಗರೀಬ್ ಕಲ್ಯಾಣ? 14.4 ಕೋಟಿ ಜನರಿಗೆ ಮೇ ತಿಂಗಳಲ್ಲಿ ಸಿಗಲಿಲ್ಲ ಆಹಾರ ಧಾನ್ಯ..

- Advertisement -
- Advertisement -

ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಧಾನ್ಯ ಪಡೆಯಲು ಅರ್ಹರಾಗಿರುವ ಸುಮಾರು 14.45 ಕೋಟಿ ಜನರಿಗೆ ಮೇ ತಿಂಗಳಿಗೆ ಧಾನ್ಯ ದೊರೆತಿಲ್ಲ ಎಂದು ಕೇಂದ್ರ ಸರ್ಕಾರವು ಜೂನ್ 3 ರಂದು ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ತಿಳಿಸಿದೆ. 6.44 ಕೋಟಿ ಪಡಿತರ ಚೀಟಿ ಹೊಂದಿರುವವರು ಇನ್ನೂ ಏಪ್ರಿಲ್‌ನಲ್ಲಿ ಸಿಗಬೇಕಾದ ಧಾನ್ಯಗಳನ್ನು ಸ್ವೀಕರಿಸಿಲ್ಲ ಎಂದು ಅಂಕಿ ಅಂಶಗಳು ತೋರಿಸುತ್ತಿವೆ.

ಪಡಿತರ ಚೀಟಿಗಳನ್ನು ಹೊಂದಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ 20 ಕೋಟಿ ಫಲಾನುಭವಿಗಳು ಏಪ್ರಿಲ್‌ನಲ್ಲಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಪಡೆಯಲು ಅರ್ಹವಾದ ಹೆಚ್ಚುವರಿ 5 ಕಿಲೋಗ್ರಾಂಗಳಷ್ಟು ಧಾನ್ಯವನ್ನು ಸ್ವೀಕರಿಸಲಿಲ್ಲ ಎಂದು ಕಳೆದ ತಿಂಗಳು ದಿ ವೈರ್ ವರದಿ ಮಾಡಿತ್ತು.

ಮಾರ್ಚ್ 26 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅನ್ನು ಘೋಷಿಸಿದಾಗ 80 ಕೋಟಿ ಫಲಾನುಭವಿಗಳಿಗೆ 5 ಕಿಲೋಗ್ರಾಂಗಳಷ್ಟು ಧಾನ್ಯವನ್ನು (ಗೋಧಿ ಅಥವಾ ಅಕ್ಕಿ) ಹೆಚ್ಚುವರಿಯಗಿ ನೀಡಲಾಗುವುದು ಎಂದು ಅವರು ಹೇಳಿದ್ದರು. ಇದನ್ನು ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ಉಚಿತವಾಗಿ ನೀಡಬೇಕಿತ್ತು. ಪಡಿತರ ಚೀಟಿ ಹೊಂದಿರುವ ಮನೆಗಳಿಗೆ ತಿಂಗಳಿಗೆ 1 ಕಿಲೋಗ್ರಾಂಗಳಷ್ಟು ದ್ವಿದಳ ಧಾನ್ಯಗಳನ್ನು ಮೂರು ತಿಂಗಳವರೆಗೆ ಉಚಿತವಾಗಿ ವಿತರಿಸಲಾಗುವುದು ಎಂದು ಅವರು ಹೇಳಿದ್ದರು.

ಏಪ್ರಿಲ್ ನಲ್ಲಿ, ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಹೆಚ್ಚುವರಿ 5 ಕಿಲೋಗ್ರಾಂಗಳಷ್ಟು ಧಾನ್ಯವು 73.86 ಕೋಟಿ ಫಲಾನುಭವಿಗಳನ್ನು ತಲುಪಿದೆ, ಆದರೆ 6.44 ಕೋಟಿ ಜನರು ಜೂನ್ 3 ರ ಹೊತ್ತಿಗೆ ಇನ್ನೂ ಇದರ ಪ್ರಯೋಜನವನ್ನು ಪಡೆಯಲಿಲ್ಲ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಮೇ ತಿಂಗಳಲ್ಲಿ, ಹೆಚ್ಚುವರಿ ಧಾನ್ಯವು 65.85 ಕೋಟಿ ಜನರನ್ನು ತಲುಪಿದ್ದು, ಇದಕ್ಕೆ ಇನ್ನೂ 14.45 ಕೋಟಿ ಜನರು ಅರ್ಹರಾಗಿದ್ದರೂ ಸಹ ಅದರ ಪ್ರಯೋಜನವನ್ನು ಪಡೆಯಲಿಲ್ಲ ಎನ್ನಲಾಗಿದೆ.

ಏಪ್ರಿಲ್ ಅಂತ್ಯದ ಪತ್ರಿಕಾ ಪ್ರಕಟಣೆಯಲ್ಲಿ ದ್ವಿದಳ ಧಾನ್ಯಗಳ ದಾಸ್ತಾನು ಹೊಂದಿರುವ ಸಂಸ್ಥೆ – ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (ನಾಫೆಡ್), “ಮೇ ತಿಂಗಳೊಳಗೆ ಎಲ್ಲಾ ಮೂರು ತಿಂಗಳವರೆಗಿನ ವಿತರಣೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿತ್ತು.

ಆದಾಗ್ಯೂ, ಮೂರು ತಿಂಗಳ ಅವಧಿಯಲ್ಲಿ ವಿತರಿಸಬೇಕಾದ ದ್ವಿದಳ ಧಾನ್ಯಗಳಲ್ಲಿ ಜೂನ್ 3 ರವರೆಗೆ ಕೇವಲ 26% ಮಾತ್ರ ಪಡಿತರ ಚೀಟಿ ಹೊಂದಿರುವವರಿಗೆ ಒದಗಿಸಲಾಗಿದೆ.


ಓದಿ: ಲಾಕ್‌ಡೌನ್ ಸಮಯದಲ್ಲಿ ಪಡಿತರ ವ್ಯವಸ್ಥೆಯ ವಿಸ್ತರಣೆ ಮತ್ತು ಸಾರ್ವತ್ರೀಕರಣವೊಂದೇ ದಾರಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...