Homeಅಂಕಣಗಳುಆಘಾತವಾಣಿ : ಅಟ್ಯಾಕ್ ಹನ್ಮಂತ

ಆಘಾತವಾಣಿ : ಅಟ್ಯಾಕ್ ಹನ್ಮಂತ

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಜಯನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಸಾವಿನಿಂದಾಗಿ ಮುಂದೂಡಲ್ಪಟ್ಟ ಚುನಾವಣೆಯ ಫಲಿತಾಂಶದಲ್ಲಿ ಹೀನಾಯವಾಗಿ ಸೋತುಹೋದ ಕಾರಣದಿಂದ ಸನ್ಮಾನ್ಯ ಧಡಿಯೂರಪ್ಪನವರ ಎದೆ ಧಸಕ್ ಪುಸುಕ್ ಎಂದ ಸುದ್ದಿ ಬಂದಿದೆ. ಈ ಚಿಂತಾಜನಕ ಸಂದರ್ಭದಲ್ಲಿ ಮನೆ ಸೇರಿಕೊಂಡಿರೋ ಧಡಿಯೂರಪ್ಪನವರು ನಾನು ಯಾರಿಗೂ ಮುಖ ತೋರಿಸೋದಿಲ್ಲವೆಂದು ಕಂಬಳಿ ಹೊದ್ದು ಕಾಲೆತ್ತಿಕೊಂಡು ಮಲಗಿದ್ದಾರೆ. ಮಾತನಾಡಿಸಿ ಪ್ರತಿಕ್ರಿಯೆ ಕೇಳಲು ಹೋದ ಮಾಧ್ಯಮದವರ ಮೇಲೆ ನಾಯಿ ಛೂಬಿಟ್ಟು ಓಡಿಸಲು ತಮ್ಮ ಸಹಾಯಕರಿಗೆ ತಿಳಿಸಿರುವ ಅವರು, ತಮ್ಮ ಪಕ್ಷದ ಮುಖಂಡರು ಬಂದರೆ ಅವರನ್ನು ನೆಲಕ್ಕೆ ಕೆಡವಿ, ಅವರ ಮುಖ ಮತ್ತು ಹೊಟ್ಟೆಗೆ ಕಚ್ಚಿ ಓಡಿಸಲು ತಮ್ಮ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆಂದು ಸುದ್ದಿಮೂಲಗಳು ಸ್ಪಷ್ಟ ಪಡಿಸಿವೆ. ಹಾಸಿಗೆ ಹಿಡಿದಿರುವ ಧಡಿಯೂರಪ್ಪನವರಿಗೆ ಸ್ಕೋಪಕ್ಕ ತಮ್ಮ ಸೆರಗಿನಿಂದ ಗಾಳಿ ಬೀಸಿಕೊಂಡು ಶುಶ್ರೂಷೆ ಮಾಡುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

****

ನೋಟ್ ಬ್ಯಾನ್‍ನಿಂದಾಗಿ ದೇಶದಲ್ಲಿ ಭಯೋತ್ಪಾದಕರು, ನಕ್ಸಲೈಟರೆಲ್ಲರೂ ಕೈಯಲ್ಲಿ ಕಾಸಿಲ್ಲದೆ ಸಾಮೂಹಿಕವಾಗಿ ಶಸ್ತ್ರತ್ಯಾಗ ಮಾಡಿ ತಪಸ್ಸಿಗೆ ಕುಳಿತುಬಿಟ್ಟಿದ್ದಾರೆ ಎಂದಿದ್ದ ಫೇಕಪ್ಪನ ಸುಳ್ಳು ಮತ್ತೊಮ್ಮೆ ಮಕಾಡೆ ಮಲಗಿದೆ. ನಕ್ಸಲೈಟರು ಫೇಕಪ್ಪನನ್ನು ಕೊಲ್ಲಲು ಸಂಚು ಮಾಡಿದ್ದಾರೆ, ಇದರ ಬಗ್ಗೆ ನಕ್ಸಲೈಟರು “ಪಕೋಡೇಂದ್ರ ಮಟ್ಯಾಶ್ ಸ್ವಾಹ” ಎಂಬ ಕಾದಂಬರಿಯನ್ನು ಬರೆದು, ಅದರಲ್ಲಿ ತಮ್ಮ ಒರಿಜಿನಲ್ ಹೆಸರುಗಳನ್ನೂ ಬರೆದು ಪೊಲೀಸರ ಕೈಗೆ ಸಿಗುವಂತೆ ಇಟ್ಟಿದ್ದಾರೆ ಎಂಬ ನಗೆಪಾಟಲು ಪ್ರಚಾರಕ್ಕೆ ಫೇಕಪ್ಪ ಇಳಿದಿರುವುದು ಇದಕ್ಕೆ ಪುಷ್ಟಿ ನೀಡಿದೆ. ನನ್ನನ್ನ ಸಾಯಿಸ್ತಾರೆ, ಆದ್ರಿಂದ ಓಟು ಕೊಡಿ ಅಂತ ಗೋಳಾಡ್ತಿರೋ ಫೇಕಪ್ಪನ 3ನೇ ದರ್ಜೆ ಡ್ರಾಮೇಬಾಜಿ ಸರ್ಕಸ್ಸಿಗೆ ಜನ ಬಿದ್ದೂ ಬಿದ್ದೂ ನಗುತ್ತಿದ್ದಾರೆಂದು ತಿಳಿದುಬಂದಿದೆ.

****

ಸಲ್ಮಾನ್ ಖಾನ್ ‘ಚುಲ್‍ಬುಲ್ ಪಾಂಡೆ’ ಅವತಾರದಲ್ಲಿ ದಬಾಂಗ್ ಚಿತ್ರದಲ್ಲಿ ರಂಜಿಸಿದ ನಂತರ ಅದೇ ರೇಂಜಿಗೆ ‘ಬೋಂಡಾ ಪಾಂಡೆ’ ಎಂದು ರಾಜ್ಯದಾದ್ಯಂತ ಫೇಮಸ್ಸಾಗಿರುವ ಆರುವಿ ದೋಶಪಾಂಡೆ ಬಗ್ಗೆ ಹೊಸ ಸುದ್ದಿಯೊಂದು ಲಭ್ಯವಾಗಿದೆ. ಉದ್ಯೋಗಕ್ಕಾಗಿ ನಮ್ಮನ್ನು ನೆಚ್ಚಿಕೊಳ್ಳಬೇಡಿ, ಬೋಂಡಾ ಬಜ್ಜಿ ಮಾರುವ ಗೌರವಯುತ ಕೆಲಸ ಮಾಡಿ ಕೋಟಿಗಟ್ಟಲೆ ಸಂಪಾದನೆ ಮಾಡಿ ಎಂದು ಶ್ರೀ ಬೋಂಡಾಪಾಂಡೆಯವರು ವದರಿದ್ದಾರೆ. ಈ ತಲೆಕೆಟ್ಟ ಹೇಳಿಕೆಯ ಗಮನಿಸಿದರೆ, ‘ಉದ್ಯೋಗ ಕೊಟ್ಟು ಸಾಯ್ರಿ’ ಎಂಬ ಜನರ ಬೇಡಿಕೆಗೆ ಪಕೋಡ ಮಾರಿ, ಪಂಚರ್ ಹಾಕಿ ಅಂತ ಬಡಬಡಿಸುತ್ತಿದ್ದ ಫೇಕೇಂದ್ರನೇನಾದ್ರೂ ಈ ‘ದೋಶಪಾಂಡೆ’ಯ ಆಯಕಟ್ಟಿನ ಭಾಗಕ್ಕೆ ಕಚ್ಚಿರಬಹುದಾ ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ.

****

ಗೌರಿ ಲಂಕೇಶ್ ಹತ್ಯೆಯ ಒಬ್ಬೊಬ್ಬ ಪಾತಕಿಗಳನ್ನೂ ಎರಡೂ ಕಾಲಿಗೆ ಹಗ್ಗ ಕಟ್ಟಿ ಸತ್ತನಾಯಿಗಳಂತೆ ದರದರ ಎಳೆದು ತಂದು ರುಬ್ಬುತ್ತಿರುವ ರಾಜ್ಯದ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ ಜನರ ಪ್ರಶಂಸೆಗೆ ಪಾತ್ರವಾಗಿದೆ. ರೌಡಿಗಳು ಕೊಲೆಗಡುಕರ ಕೈಗೆ ಧರ್ಮದ ಹೆಂಡ ಕೊಟ್ಟು ತಮಗಾಗದವರನ್ನು ಕೊಲ್ಲಿಸೋ ಸಣಕಲು ತೊಡೆಯ ಹೇಡಿಪಡೆಗಳ ಪಂಚೆ ಲಳಲಳನೆ ಒದ್ದೆಯಾಗುತ್ತಿರುವುದು ಕೇಳಿಬರುತ್ತಿದೆ. ಗೌರಿಹತ್ಯೆಯ ಕೇಸಿನಲ್ಲಿ ಆ ಸೇನೆ ಈ ಸೇನೆ, ಈ ಜಾಗೃತಿ, ಆ ವಿಕೃತಿ ಅಂತ ಮಕಮೂತಿ ನೋಡದೇ ಎಸ್.ಐ.ಟಿ ತಂಡವು ಒಬ್ಬೊಬ್ಬರನ್ನೇ ಹಿಡಿದುತಂದು ಬೋನಿಗೆ ಬಿಸಾಕುತ್ತಿದ್ದರೆ, ಅತ್ತ ದಾಬೋಲ್ಕರ್, ಪನ್ಸಾರೆ ಕೊಲೆ ಕೇಸನ್ನು ಏನೋ ಕಿತ್ತು ದಬಾಕ್ತೀವಿ ಎಂದು ಕೈಗೆತ್ತಿಕೊಂಡ ಸಿಬಿಐ ಪೊಮೇರಿಯನ್‍ಗಳು ಸರ್ಕಾರಿ ದುಡ್ಡಲ್ಲಿ ಕುಷ್ಕ ಕಬಾಬ್ ಮುಕ್ಕಿಕೊಂಡು ಓತ್ಲಾ ಹೊಡೆಯುತ್ತಿದ್ದಾರೆಂದು ಜನರು ಆಡಿಕೊಂಡು ನಗುತ್ತಿರುವ ವರದಿಗಳು ಬರುತ್ತಿವೆ.

****

ಭೂಮಿಯ ಮೇಲೆ ಇನ್ನೆಲ್ಲೂ ಕಾಣಸಿಗದ ಮಾಸ್ಟರ್ ಪೀಸ್ ಮೆಂಟ್ಲು ಗಿರಾಕಿಗಳಾದ ಉತ್ತರ ಕೊರಿಯಾದ ಕಿಮ್‍ಜಾಂಗ್ ಉನ್ನೇಶ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪೇಶ ಅವರು ಸಿಂಗಪೂರ್‍ನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ‘ನಿನ್ ಮೇಲೆ ನಾನು ಬಾಂಬ್ ಹಾಕಲ್ಲ, ನನ್ ಮೇಲೆ ನೀನು ಬಾಂಬ್ ಹಾಕ್ಬೇಡ’ ಅಂತ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಐತಿಹಾಸಿಕ ತಲೆತಿಕ್ಕಲರ ಸಂಗಮದಲ್ಲಿ ನಮ್ ಹಾಫ್ ಮೆಂಟ್ಲು ಫೇಕಪ್ಪನೂ ಇದ್ದಿದ್ರೆ ಈ ಶುದ್ದ ಮುಠ್ಠಾಳರ ಸಮ್ಮೇಳನ ಸಂಪೂರ್ಣವಾಗುತ್ತಿತ್ತೆಂದು ತೇಜಾವರ ಶ್ರೀಗಳು ನಿದ್ದೆಯಲ್ಲೇ ಕಣ್ಣನ್ನೆಲ್ಲ ತೇವ ಮಾಡಿಕೊಂಡು ಕನವರಿಸಿಕೊಳ್ಳುತ್ತಿದ್ದರೆಂದು ಅವರ ಕಾರ್ ಡ್ರೈವರ್ ಫೇಸ್ಬುಕ್ಕಲ್ಲಿ ಪೋಸ್ಟ್ ಹಾಕಿದ್ದಾನೆ.

****

ಹೋರಿಯ ಹಿಂದೆ ನಡೆಯುತ್ತ ಅದರ ಯಾವುದಾದರೊಂದು ಪಾರ್ಟು ಲೂಸಾಗಿ ಕಳಚಿಕೊಂಡು ಉದುರಬಹುದೆಂದು ಆಸೆಯಿಂದ ಫಾಲೋ ಮಾಡುತ್ತಿರೋ ಗುಳ್ಳೆನರಿಯಂತೆ ಧಡಿಯೂರಪ್ಪನವರು ರಾಜ್ಯದ ಬೆರಕೆ ಸರ್ಕಾರದ ಹಿಂದೆ ಬಿದ್ದಿರುವುದು ತಿಳಿದ ಸಂಗತಿ. ದಿನಕಳೆದಂತೆ ಬೆರಕೆ ಸರ್ಕಾರದ ಮಂದಿ ಕೇರಳದ ಮಾಟಮಂತ್ರ ತಜ್ಞರೂ ನಾಚಿ ನೀರಾಗುವ ಹಾಗೆ ಬುರುಡೆ ಮಂತ್ರವಾದಿಗಳಂತೆ ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ ಗಾಬರಿಯಾಗಿದ್ದಾರೆಂದು ಸುದ್ದಿ ಲಭ್ಯವಾಗಿದೆ. ತಮ್ಮ ಪಕ್ಷವೇ ಅಧಿಕಾರದಲ್ಲಿದ್ರೆ ಏನೇನು ನೌಟಂಕಿ ಆಟವಾಡುತ್ತಿದ್ದೆವೋ, ಅದೆಲ್ಲವನ್ನೂ ತಮ್ಮ ಎದುರಾಳಿಗಳೇ ಕಚ್ಚೆ ಬಿಚ್ಚಿಕೊಂಡು ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ, ತಮ್ಮ ಪಕ್ಷದೋರು ಯಾರು? ಬೆರಕೆ ಸರ್ಕಾರದ ಪಕ್ಷದೋರು ಯಾರು? ಎಂದು ಗುರುತಿಸಲಾಗದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆಂದು ಸ್ಕೋಪಕ್ಕನವರು ಚೀಟಿ ರೆವಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದಾರೆಂದು ಗೊತ್ತಾಗಿದೆ.

****

ಭೀಮ ಕೊರೆಗಾಂವ್ ಮೆರವಣಿಗೆಯಲ್ಲಿ ತನ್ನ ಪಟಾಲಂನಿಂದ ದಲಿತರ ಮೇಲೆ ಹಲ್ಲೆ ನಡೆಸಿದ್ದ ಮಹಾರಾಷ್ಟ್ರದ ಪೊರಕೆ ಮೀಸೆ ಸಂಘಿ ಮುದುಕನೊಬ್ಬ ತಾನು ತನ್ನ ತೋಟದಲ್ಲಿ ಬೆಳೆಯೋ ಮಾವಿನಹಣ್ಣು ತಿಂದ್ರೆ ಗಂಡು ಮಕ್ಕಳಾಗ್ತವೆ, ಅಂಥ ವಿಶೇಷ ಶಕ್ತಿ ತನ್ನ ಮ್ಯಾಂಗೋಗಳಿಗೆ ಇದೆಯೆಂದು ಕಕ್ಕಿಕೊಂಡಿದ್ದಾನೆ. ಸಂಘಿ ಮಂಗಿಗಳ ಈ ಮ್ಯಾಂಗೋ ಸಂತಾನ ಪ್ರಾಪ್ತಿ ಮ್ಯಾಜಿಕ್ ಥಿಯರಿ ಕೇಳಿದ ದೇಶದ ಜನರು ನಗಬಾರದ ಜಾಗದಲ್ಲೆಲ್ಲ ನಗುತ್ತ “ಅಲ್ಲಾ ಕಣೋ ಬುಡ್ಡಾ, ಮ್ಯಾಂಗೋ ತಿಂದ್ರೆ ಮಕ್ಕಳಾಗ್ತವೆ ಅಂದ್ರೆ ಜನ ಬಾಟಾ ಕಂಪನಿ ಮೆಟ್ಟು ತಗೊಂಡು ಅಟ್ಟಿಸಿಕೊಂಡು ಬಂದು ಬಡೀತಾರೆ” ಎಂದು ಆಡಿಕೊಳ್ಳುತ್ತಿರುವ ಸುದ್ದಿ ತಡವಾಗಿ ವರದಿಯಾಗಿದೆ. ಬೆದರಿದ ಸಂಘಿ ಮುದುಕನು ಮಹಾರಾಷ್ಟ್ರ ಸಿಎಂ ಭಡ್ನಊಸು ಕಚೇರಿಯ ಶೌಚಾಲಯದಲ್ಲಿ ಕದ್ದು ಕುಳಿತಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತಕಾರಿ ಸುದ್ದಿಗಳನ್ನು ನಿಮ್ಮ ಮುಂದಿಡುವ ‘ಆಘಾತವಾಣಿ’ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನ ವಾರ. ನಮಸ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...