Homeಮುಖಪುಟಬಿಜೆಪಿ, ಮೋದಿ ವಿರುದ್ಧ ಪೋಸ್ಟ್: ಧಾರಾವಾಹಿಯಿಂದ ಮರಾಠಿ ನಟ ಹೊರಕ್ಕೆ, ಗ್ರಾಮದಲ್ಲಿ ಚಿತ್ರೀಕರಣ ಬೇಡ ...

ಬಿಜೆಪಿ, ಮೋದಿ ವಿರುದ್ಧ ಪೋಸ್ಟ್: ಧಾರಾವಾಹಿಯಿಂದ ಮರಾಠಿ ನಟ ಹೊರಕ್ಕೆ, ಗ್ರಾಮದಲ್ಲಿ ಚಿತ್ರೀಕರಣ ಬೇಡ ಎಂದ ಗ್ರಾಮಸ್ಥರು

- Advertisement -
- Advertisement -

ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧದ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಮರಾಠಿ ನಟ ಕಿರಣ್ ಮಾನೆ ಅವರನ್ನು ಧಾರಾವಾಹಿಯಿಂದ ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನಿರ್ಧಾರಕ್ಕೆ ಕಿಡಿ ಕಾರಿರುವ ಸತಾರಾ ಜಿಲ್ಲೆಯ ಗುಲುಂಬ್ ಗ್ರಾಮದ ಸರಪಂಚ್, ಪ್ರೊಡಕ್ಷನ್ ಹೌಸ್‌ಗೆ ಗ್ರಾಮದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಬರೆದ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮರಾಠಿ ನಟ ಕಿರಣ್ ಮಾನೆ ಅವರು ಪೋಸ್ಟ್‌ಗಳನ್ನು ಆಧರಿಸಿ ಮುಲ್ಗಿ ಝಲಿ ಹೋ (Mulgi Zali Ho) ಧಾರಾವಾಹಿಯಿಂದ ತೆಗೆದುಹಾಕಲಾಗಿದೆ ಎಂದು ನಟ ಹೇಳಿಕೊಂಡಿದ್ದಾರೆ. ಶೋಯಿಂದ ಹೊರಹಾಕಲು ಯಾವುದೇ ಅಧಿಕೃತ ಕಾರಣವನ್ನು ನೀಡಲಾಗಿಲ್ಲ. ಆದರೆ, ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಘಟಕದ ಯಾರೋ ಆಫ್ ದಿ ರೆಕಾರ್ಡ್ ಹೇಳಿದ್ದಾರೆ ಎಂದು ನಟ ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಶಾಹು ಮಹಾರಾಜ, ಮಹಾತ್ಮ ಫುಲೆ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯಲ್ಲಿ ಮಹಾರಾಷ್ಟ್ರ ಪ್ರಜಾಪ್ರಭುತ್ವದ ಮೇಲೆ ಸಾಗುತ್ತಿದೆ ಎಂಬುದನ್ನು ಮರಾಠಿ ಚಿತ್ರರಂಗ ಮರೆಯಬಾರದು ಎಂದು ಸರಪಂಚ್ ಸ್ವಾತಿ ಮಾನೆ ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ‘ಧೀರ ಭಗತ್ ರಾಯ್‌’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್

ಆದರೆ ಈ ಬಗ್ಗೆ ಮಾತನಡಿರು ಪ್ರೊಡಕ್ಷನ್ ಹೌಸ್, ’ಪ್ರೊಡಕ್ಷನ್ ಹೌಸ್ ಮಾತನ್ನು ಕೇಳದೆ ಅಜಾಗರೂಕತೆಯಿಂದ ಪತ್ರವನ್ನು ನೀಡಲಾಗಿದೆ. ಇನ್ನೂ ಗ್ರಾಮದಲ್ಲಿ ಚಿತ್ರೀಕರಣ ನಡೆಯುತ್ತಿದೆ’ ಎಂದಿದೆ. ಜೊತೆಗೆ ನಟನನ್ನು ಅವರ ರಾಜಕೀಯ ದೃಷ್ಟಿಕೋನಗಳಿಂದಲ್ಲ, ಆದರೆ ಸಹ-ನಟರೊಂದಿಗಿನ ವೃತ್ತಿಪರ ನಡವಳಿಕೆಯಿಂದಾಗಿ ಕೈಬಿಡಲಾಗಿದೆ ಎಂದು ಹೇಳಿಕೊಂಡಿದೆ.

ವರದಿಗಳ ಪ್ರಕಾರ, ಮರಾಠಿ ಕಿರಣ್ ಮಾನೆ ಶನಿವಾರ ಶರದ್ ಪವಾರ್ ಅವರನ್ನು ಭೇಟಿಯಾದರು. ಎನ್‌ಸಿಪಿ ನಾಯಕರಾದ ಡಾ ಜಿತೇಂದ್ರ ಅವದ್, ಧನಂಜಯ್ ಮುಂಡೆ ಅವರು ಕಿರಣ್ ಮಾನೆ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ನಟ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದಾನೆ ಆದರೆ ರಾಜಕೀಯ ಒತ್ತಡದಲ್ಲಿ ಅವರನ್ನು ಕೈಬಿಡುವುದು ಸಾಂಸ್ಕೃತಿಕ ಭಯೋತ್ಪಾದನೆಯ ಸಂಕೇತವಾಗಿದೆ ಎಂದು ಧನಂಜಯ್ ಮುಂಡೆ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಕಿರಣ್ ಮಾನೆ ಹಲವಾರು ಸಂದರ್ಭಗಳಲ್ಲಿ ಮಾಡಿದ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಪಂಜಾಬ್‌ನಲ್ಲಿ ಪ್ರಧಾನಿ ಮೋದಿಯವರ ಭದ್ರತಾ ಉಲ್ಲಂಘನೆಯ ನಂತರ, ಅವರು ಪಿಎಂ ಮೋದಿಯವರನ್ನು ಹೆಸರಿಸದೆ, ಘಟನೆಯನ್ನು ಉಲ್ಲೇಖಿಸದೆ ಕಾಮೆಂಟ್ ಒಂದನ್ನು ಪೋಸ್ಟ್ ಮಾಡಿದ್ದರು.


ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ’ಸಂತ್ರಸ್ತೆಯಾಗಿ ಬದುಕುವುದು ಸುಲಭವಲ್ಲ’ 5 ವರ್ಷಗಳ ಪ್ರಯಾಣ ನೆನಪಿಸಿಕೊಂಡ ನಟಿ ಭಾವನಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...