HomeಅಂಕಣಗಳುKarnataka against SIRSIR ಅವಾಂತರ: ನಟ ಪ್ರಕಾಶ್ ರಾಜ್ ಹೆಸರೇ ವೋಟರ್ ಲಿಸ್ಟ್‌ನಿಂದ ನಾಪತ್ತೆ, ನಾಳೆ ಬೆಂಗಳೂರಲ್ಲಿ ಮಹತ್ವದ...

SIR ಅವಾಂತರ: ನಟ ಪ್ರಕಾಶ್ ರಾಜ್ ಹೆಸರೇ ವೋಟರ್ ಲಿಸ್ಟ್‌ನಿಂದ ನಾಪತ್ತೆ, ನಾಳೆ ಬೆಂಗಳೂರಲ್ಲಿ ಮಹತ್ವದ ಪತ್ರಿಕಾಗೋಷ್ಠಿ

- Advertisement -
- Advertisement -

ರಾಜ್ಯದಲ್ಲಿ ನಡೆಯುತ್ತಿರುವ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಅವಾಂತರಗಳು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹೆಸರೇ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ.

ವರ್ಷಗಳಿಂದ ಮತದಾನ ಮಾಡುತ್ತಾ ಬಂದಿರುವ ಪ್ರಮುಖ ವ್ಯಕ್ತಿಯೊಬ್ಬರ ಹೆಸರೇ ಪಟ್ಟಿಯಿಂದ ನಾಪತ್ತೆ ಆಗಿರುವುದು SIR ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಲೋಪದೋಷಗಳು ಎಷ್ಟರ ಮಟ್ಟಿಗೆ ಗಂಭೀರವಾಗಿವೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಯಡವಟ್ಟು ಹಾಗೂ ಅರ್ಹ ಮತದಾರರಿಗೆ ಆಗುತ್ತಿರುವ ಕಿರುಕುಳವನ್ನು ಪ್ರಶ್ನಿಸಿ ನಾಳೆ (ಆಗಸ್ಟ್ 14, ಶುಕ್ರವಾರ) ಸಂಜೆ 4 ಗಂಟೆಗೆ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಟ ಪ್ರಕಾಶ್ ರಾಜ್ ಹಾಗೂ ನಾಗರಿಕ ಸಂಘಟನೆಗಳು ಜಂಟಿ ಪತ್ರಿಕಾಗೋಷ್ಠಿ ಕರೆದಿವೆ.

ಈಗಾಗಲೇ ವೋಟರ್ ಐಡಿ ಹೊಂದಿದ್ದು, ಪ್ರತಿ ಚುನಾವಣೆಯಲ್ಲೂ ಹಕ್ಕು ಚಲಾಯಿಸುತ್ತಿರುವ ಅರ್ಹ ನಾಗರಿಕರ ಹೆಸರುಗಳನ್ನು ‘ಸ್ಥಳಾಂತರಗೊಂಡವರು’ ಅಥವಾ ‘ಪತ್ತೆಯಾಗದವರು’ ಎಂಬ ನೆಪವೊಡ್ಡಿ ‘ASDDO’ ಪಟ್ಟಿಗೆ ತಳ್ಳಲಾಗುತ್ತಿದೆ. “ಈಗಾಗಲೇ ಮತದಾರರಾಗಿರುವವರು ಮತ್ತೆ ಹೊಸದಾಗಿ ‘ಫಾರಂ-6’ (Form 6) ಅನ್ನು ಯಾಕೆ ಭರ್ತಿ ಮಾಡಬೇಕು?” ಎನ್ನುವುದು ನಾಳಿನ ಸುದ್ದಿಗೋಷ್ಠಿಯ ಪ್ರಮುಖ ಪ್ರಶ್ನೆಯಾಗಿದೆ.

ಪ್ರಕಾಶ್ ರಾಜ್ ವಿಡಿಯೋ ವೈರಲ್:

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್, ಚುನಾವಣಾ ಆಯೋಗದ ದ್ವಂದ್ವ ನಿಲುವನ್ನು ಕಟುವಾಗಿ ವಿಮರ್ಶಿಸಿದ್ದಾರೆ.

ನನ್ನ ವೋಟರ್ ಐಡಿ ಪರ್ಮನಂಟ್ಲಿ ಶಿಫ್ಟೆಡ್ ಆಗಿದೆ, ಹೊಸದಾಗಿ ‘ಫಾರಂ-6’ (Form 6) ತುಂಬಿ ಎಂದು ಆಯೋಗದ ವೆಬ್‌ಸೈಟ್‌ನಲ್ಲೇ ತೋರಿಸಲಾಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರಿಗೆ ತಲುಪುತ್ತಿದ್ದಂತೆಯೇ, ಆಯೋಗದ ಅಧಿಕಾರಿಗಳು ನನಗ ಕರೆ ಮಾಡಿ ‘ತಪ್ಪಾಗಿದೆ, ಸರಿಪಡಿಸುತ್ತೇವೆ ಎಂದು ಹೇಳಿದರು. ಅಲ್ಲದೆ, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸುವಂತೆಯೂ ವಿನಂತಿಸಿದರು. ಇದರ ಕಾಲ್ ರೆಕಾರ್ಡ್ಸ್ ನನ್ನ ಬಳಿಯಿದೆ. ಆದರೆ, ಸಂಜೆ ಸುದ್ದಿಗೋಷ್ಠಿ ನಡೆಸಿದ ಅಧಿಕಾರಿಗಳು ‘ಅವರ ಹೆಸರು ಡಿಲೀಟ್ ಆಗಿಲ್ಲ, ಕೇವಲ ಸ್ಥಳಾಂತರಗೊಂಡಿದೆ, ಮಹಜರು ಮಾಡಿದ್ದೇವೆ’ ಎಂದು ಸುಳ್ಳು ಹೇಳಿದ್ದಾರೆ.”

ರಾತ್ರಿ 8:30ರ ವೇಳೆಗೆ ಹಳೆಯ ವಿಳಾಸದ ಮನೆ ಮುಂದೆ ಕ್ಯಾಮೆರಾ ಹಿಡಿದು, ನೆರೆಹೊರೆಯವರನ್ನು ಕರೆದು ಬಿಎಲ್‌ಒ ಮೂಲಕ ಮಹಜರು ನಾಟಕ ಮಾಡಿಸಲಾಯಿತು. ಮಾಧ್ಯಮಗಳು ಹಾಗೂ ಬಿಜೆಪಿ ಹ್ಯಾಂಡಲ್‌ಗಳು ಪ್ರಕಾಶ್ ರಾಜ್ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಚಾರ ಮಾಡಲು ಈ ಡ್ರಾಮಾ ಸೃಷ್ಟಿಸಲಾಯಿತೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

ನಾನೊಬ್ಬ ನಟನಾಗಿ ಪ್ರಸಿದ್ಧನಿರಬಹುದು, ಆದರೆ ಪ್ರಜೆಯಾಗಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕಿದೆ. 5 ವರ್ಷಗಳಿಗೊಮ್ಮೆ ಬಂದು ವೋಟಿಗಾಗಿ ಭಿಕ್ಷೆ ಬೇಡುವ ರಾಜಕಾರಣಿಗಳು, ಈಗ ತಮ್ಮ ಹಕ್ಕನ್ನು ಉಳಿಸಿಕೊಳ್ಳಲು ಅರ್ಹ ನಾಗರಿಕರನ್ನೇ ಕ್ಯೂನಲ್ಲಿ ನಿಂತು ಭಿಕ್ಷೆ ಬೇಡುವಂತೆ ಮಾಡುತ್ತಿದ್ದಾರೆ. ಇದು ಯಾವ ರೀತಿಯ ರಾಜಕೀಯ? ಇದರ ಹಿಂದಿರುವ ಅಜೆಂಡಾ ಏನು? ಎಂದು ಅವರು ಆಯೋಗ ಹಾಗೂ ರಾಜಕೀಯ ಪಕ್ಷಗಳನ್ನು ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ| ಗ್ರಾಮ ತೊರೆಯಿರಿ ಅಥವಾ ‘ಘರ್ ವಾಪ್ಸಿ’ಯಾಗಿ; ಹಿಂದುತ್ವ ಗುಂಪಿನಿಂದ ಕ್ರೈಸ್ತ ಕಟುಂಬಗಳಿಗೆ ಬೆದರಿಕೆ

ಬಿಹಾರದ ಭಾಗಲ್ಪುರ ಜಿಲ್ಲೆಯ ಗೋಪಾಲಪುರ ಗ್ರಾಮದ 42 ಕ್ರಿಶ್ಚಿಯನ್ ಕುಟುಂಬಗಳಿಗೆ ಹಿಂದುತ್ವ ಗುಂಪಿನ ಸದಸ್ಯರು ಬೆದರಿಕೆ ಹಾಕಿದ್ದಾರೆ ಎಂದು 'ಕ್ಲಾರಿಯನ್ ಇಂಡಿಯಾ' ನ್ಯೂಸ್‌ ಪೋರ್ಟ್ಲ್ ವರದಿ ಮಾಡಿದೆ. 'ಘರ್ ವಾಪ್ಸಿ'ಯಾಗಿ ಅಥವಾ ಗ್ರಾಮ...

ಭೂಮಾನಂದ ಹತ್ಯೆ: ಕೊಲೆಗಾರರ ಪರ ನಿಂತ ‘ವಾಲ್ಮೀಕಿ ನಾಯಕ ಸಂಘ’ದ ವಿರುದ್ಧ ಆಕ್ರೋಶ: ಆಗಸ್ಟ್ 15ಕ್ಕೆ ಕಪ್ಪುಪಟ್ಟಿ ಪ್ರದರ್ಶನ, ಬೈಕ್ ರ್ಯಾಲಿಗೆ ಕರೆ

ರಾಯಚೂರು: ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಹುಜನ ಮುಖಂಡ ಭೂಮಾನಂದ ಅವರ ಬರ್ಬರ ಕಗ್ಗೋಲೆಯನ್ನು ಖಂಡಿಸಿ, ಕೊಲೆಗಡುಕರ ಪರವಾಗಿ ನಿಂತಿರುವ ಸಂಘಟನೆಗಳು ಹಾಗೂ ಮೌನ ವಹಿಸಿರುವ ಜನಪ್ರತಿನಿಧಿಗಳ ವಿರುದ್ಧ 'ಬಹುಜನ ಮುಖಂಡ ಭೂಮಾನಂದನ...

ಹಳೆ ಮತದಾರರಲ್ಲಿ ಫಾರ್ಮ್ ನಂ.6 ಕೇಳುವುದೇ ಕಾನೂನು ಬಾಹಿರ; ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧ!

"ASDDO ಪಟ್ಟಿಯಲ್ಲಿ ಹೆಸರು ಬಂದಿದ್ದರೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ, ಫಾರ್ಮ್ ನಂ.6 ಸಲ್ಲಿಸುವ ಮೂಲಕ ದಾಖಲೆಗಳನ್ನು ನೀಡಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು" ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ, ಹಳೆ...

SIR: ಅರ್ಹ ಮತದಾರರನ್ನು ಹೊರಗಿಟ್ಟು 1,848 ಹೊಸ ಮತಗಟ್ಟೆ ಸ್ಥಾಪಿಸಲು ಮುಂದಾದ ಚುನಾವಣಾ ಆಯೋಗ

ಒಂದೆಡೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಡಿಲೀಟ್‌ ಆಗುವ ಭೀತಿ ಎದುರಾಗಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಹೊಸದಾಗಿ 1,848 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ಕೇಂದ್ರ ಚುನಾವಣಾ...

ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಷಣದ ಬೆನ್ನಲ್ಲೇ ವೇದಿಕೆ ‘ಶುದ್ಧೀಕರಣ’: ಕೇಂದ್ರ ಸರ್ಕಾರ ಹಾಗೂ ಬಿಜೆಪಿಗೆ ಪ್ರತಿಪಕ್ಷಗಳ ತೀವ್ರ ತರಾಟೆ 

ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯಲ್ಲಿರುವ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕೆಲವೇ ದಿನಗಳಲ್ಲಿ, ಬಲಪಂಥೀಯ...

ನೀಟ್ ಪೇಪರ್ ಲೀಕ್ ಪ್ರಕರಣದ ಚಾರ್ಜ್ ಶೀಟ್ ಲೀಕ್ : ಕೋರ್ಟ್ ಕಳವಳ

ನೀಟ್ ಯುಜಿ- 2026ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆಗಾಗಿ ಸ್ಥಾಪಿಸಲಾದ ವಿಶೇಷ ಫಾಸ್ಟ್ ಟ್ರ್ಯಾಕ್ (ಶೀಘ್ರ ಗತಿ) ನ್ಯಾಯಾಲಯವು, 13 ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿರುವ ದೋಷಾರೋಪ...

ಕರ್ನಾಟಕ ಎಸ್‌ಐಆರ್: ಶಾಶ್ವತ ನಿವಾಸಿ ಪ್ರಮಾಣಪತ್ರಕ್ಕೆ ಬೆಂಗಳೂರು ನಗರದಲ್ಲೇ ಭಾರೀ ಬೇಡಿಕೆ: ಕಂದಾಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಡುವೆಯೇ, ಕಂದಾಯ ಇಲಾಖೆಗೆ ಸಲ್ಲಿಕೆಯಾಗುತ್ತಿರುವ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ಅರ್ಜಿಗಳ ಸಂಖ್ಯೆಯಲ್ಲಿ ಬೆಂಗಳೂರು ನಗರ ಜಿಲ್ಲೆಯು...

ಅಮೇರಿಕಾದಲ್ಲಿ ಅದಾನಿ ಮತ್ತು ಆಪ್ತರ ಮೇಲಿನ ಕ್ರಿಮಿನಲ್ ಕೇಸ್ ರದ್ದು: ‘ರಾಜಿ ಮಾಡಿಕೊಂಡ ಪ್ರಧಾನಿ ಭಾರತದ ಹಿತಾಸಕ್ತಿ ಮಾರಾಟ ಮಾಡಿದ್ದಾರೆ’ ಎಂದ ರಾಹುಲ್ ಗಾಂಧಿ 

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಶಾಶ್ವತವಾಗಿ ವಜಾಗೊಳಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್...

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್...

‘ಆಹಾರ ಸುರಕ್ಷತೆ – ಔಷಧ ಆಡಳಿತ ಇಲಾಖೆ’ಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ 'ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ'ನ್ನು 'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ' ಆಯುಕ್ತರು ಪ್ರಕಟಿಸಿದ್ದಾರೆ. ಕಳೆದ ಮೂರ್ನಾಲ್ಕು...