HomeಅಂಕಣಗಳುKarnataka against SIRಕರ್ನಾಟಕ SIR | 'ಲಾಜಿಕಲ್ ಡಿಸ್ಕ್ರಿಪೆನ್ಸಿ' ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

- Advertisement -
- Advertisement -

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್ 17ರವರೆಗೆ ವಿಸ್ತರಣೆಯಾಗಿದ್ದು, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ಇದಕ್ಕಿಂತ ಮುಂಚಿತವಾಗಿ ಗೈರು ಹಾಜರಾದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮರಣ ಹೊಂದಿದವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದವರು (ಡೂಪ್ಲಿಕೇಟ್) ಮತ್ತು ಇತರೆ (Absent, Shifted, Death, Duplicate and Others-ASDDO) ಮತದಾರರ ಪಟ್ಟಿಯನ್ನು ಬೂತ್‌ವೈಸ್ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ 1 ಕೋಟಿಗೂ ಹೆಚ್ಚು ಮತದಾರರ ಹೆಸರುಗಳಿದ್ದು, ಇಡೀ ದೇಶದಲ್ಲೇ ಹೆಚ್ಚು ಎನ್ನಲಾಗುತ್ತಿದೆ. ASDDO ಪಟ್ಟಿಯಲ್ಲಿ ಮೇಲ್ಗಡೆ ಉಲ್ಲೇಖಿಸಿದ ಯಾವುದೇ ವರ್ಗದಲ್ಲಿ ಒಳಪಡದ ಅನೇಕ ಮತದಾರರ ಹೆಸರುಗಳೂ ಸೇರ್ಪಡೆಯಾಗಿರುವ ಆರೋಪಗಳು ರಾಜ್ಯದಾದ್ಯಂತ ಕೇಳಿ ಬಂದಿವೆ.

ಆಗಸ್ಟ್ 11ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದರ ಪ್ರಕಾರ, ಆಗಸ್ಟ್ 3ರಿಂದ 9ರ ನಡುವೆ ಕರ್ನಾಟಕದ ASDDO ಸಂಖ್ಯೆ 2.9 ಲಕ್ಷ (3 ಲಕ್ಷ) ಇಳಿಕೆಯಾಗಿದೆ. ಈ ವರದಿ ಲಕ್ಷಾಂತರ ಮತದಾರರ ಹೆಸರು ತಪ್ಪಾಗಿ ASDDO ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂಬುವುದನ್ನು ಪುಷ್ಠೀಕರಿಸುತ್ತದೆ.

ASDDO ಡಿಲೀಟ್ ಪಟ್ಟಿಯಲ್ಲಿ ತಮ್ಮ ಹೆಸರು ಬಂದಿರುವುದನ್ನು ಕಂಡು ಅನೇಕ ಮತದಾರರು ಬಿಎಲ್‌ಒಗಳತ್ತ ಧಾವಿಸಿ ತಮ್ಮ ಹೆಸರು ಮರು ಸೇರ್ಪಡೆಗೆ ಹರಸಾಹಸಪಡುತ್ತಿರುವುದು ರಾಜ್ಯದಾದ್ಯಂತ ವರದಿಯಾಗುತ್ತಿದೆ.

ASDDOಗೆ ಮುಗಿದಿಲ್ಲ..ಕಾದು ಕುಳಿತಿದೆ ಮತ್ತೊಂದು ಅಪಾಯ

ಈ ASDDO ಕಥೆ ಒಂದೆಡೆಯಾದರೆ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವೈರುದ್ಯ) ಎಂಬ ಮತ್ತೊಂದು ಅಪಾಯ ಮತದಾರರ ಮುಂದೆ ಬಂದು ನಿಂತಿದೆ. ಇದರ ಅಸಲಿ ಆಟ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಶುರುವಾಗಲಿದೆ.

ಲಾಜಿಕಲ್ ಡಿಸ್ಕ್ರಿಪೆನ್ಸಿ ಅಂದರೆ ಏನು?

ಮತದಾರರ ಪಟ್ಟಿಯಲ್ಲಿರುವ ಡೇಟಾ ಅಥವಾ ಮಾಹಿತಿಯ ನಡುವೆ ಕಂಡುಬರುವ ತಾರ್ಕಿಕ ಅಸಂಗತತೆ ಅಥವಾ ಹೊಂದಾಣಿಕೆಯಿಲ್ಲದಿರುವುದನ್ನು ಚುನಾವಣಾ ಆಯೋಗ ಲಾಜಿಕಲ್ ಡಿಸ್ಕ್ರಿಪೆನ್ಸಿ (Logical Discrepancy) ಎಂದು ಕರೆಯುತ್ತದೆ.

ಸರಳವಾಗಿ ಹೇಳುವುದಾದರೆ, ಒಬ್ಬ ಮತದಾರನ ವಿವರಗಳನ್ನು ಹಿಂದಿನ ಮತದಾರರ ಪಟ್ಟಿಗೆ (ಉದಾಹರಣೆಗೆ ಕರ್ನಾಟಕದಲ್ಲಿ 2002ರ ಪಟ್ಟಿ) ಹೋಲಿಸಿದಾಗ ಅಥವಾ ಅವರ ಕುಟುಂಬದ ಸದಸ್ಯರ ವಯಸ್ಸಿನ ವಿವರಗಳನ್ನು ಪರಿಶೀಲಿಸಿದಾಗ ಕಂಪ್ಯೂಟರ್ ವ್ಯವಸ್ಥೆಯು ಅಥವಾ ಎಐ ವ್ಯವಸ್ತೆ ಪತ್ತೆಹಚ್ಚುವ ತಾಂತ್ರಿಕ ಮತ್ತು ತಾರ್ಕಿಕ ತಪ್ಪುಗಳಾಗಿವೆ.

ಉದಾ : ಒಬ್ಬರು ವ್ಯಕ್ತಿಯ ಹೆಸರು 2002ರ ಮತದಾರರ ಪಟ್ಟಿಯಲ್ಲಿ ‘ರಮೇಶ್’ ಎಂದಿದ್ದು, 2025-26ರ ಪಟ್ಟಿಯಲ್ಲಿ ‘ರಮೇಶ್ ಕುಮಾರ್’ ಎಂದಿದ್ದರೆ, ಇದು ಲಾಜಿಕಲ್ ಡಿಸ್ಕ್ರಿಪೆನ್ಸಿ (ತಾರ್ಕಿಕ ವೈರುದ್ಯ) ವರ್ಗದಲ್ಲಿ ಬರುತ್ತದೆ.

ಪ್ರಮುಖ 11 ಲಾಜಿಕಲ್ ಡಿಸ್ಕ್ರಿಪೆನ್ಸಿ ವರ್ಗಗಳು

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಕೆಳಗಿನ ಲಾಜಿಕಲ್ ಡಿಸ್ಕ್ರಿಪೆನ್ಸಿಗಳನ್ನು ಗುರುತಿಸಲಾಗುತ್ತದೆ:

1. ಸಹೋದರರ ವಯಸ್ಸಿನ ವ್ಯತ್ಯಾಸ : ಒಂದೇ ಪೋಷಕರ ಇಬ್ಬರು ಮಕ್ಕಳ (ಸಹೋದರ/ಸಹೋದರಿ) ವಯಸ್ಸಿನ ನಡುವೆ 9 ತಿಂಗಳಿಗಿಂತ ಕಡಿಮೆ ಅವಧಿಯ ವ್ಯತ್ಯಾಸವಿರುವುದು.

2. ಪೋಷಕರು ಮತ್ತು ಮಕ್ಕಳ ವಯಸ್ಸಿನ ಅಂತರ : ತಂದೆ/ತಾಯಿ ಮತ್ತು ಮಗ/ಮಗಳ ನಡುವಿನ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ ಇರುವುದು ಅಥವಾ 50 ವರ್ಷಕ್ಕಿಂತ ಹೆಚ್ಚಿರುವುದು.

3. ತಾತ/ಅಜ್ಜಿ ಮತ್ತು ಮೊಮ್ಮಕ್ಕಳ ವಯಸ್ಸಿನ ಅಂತರ : ಮತದಾರ ಮತ್ತು ಅವರ ತಾತ/ಅಜ್ಜಿಯ ನಡುವಿನ ವಯಸ್ಸಿನ ವ್ಯತ್ಯಾಸ 40 ವರ್ಷಕ್ಕಿಂತ ಕಡಿಮೆ ಇರುವುದು.

4. ಹೆಸರಿನಲ್ಲಿ ಬದಲಾವಣೆ : ಪ್ರಸ್ತುತ ಮತದಾರರ ಪಟ್ಟಿ ಮತ್ತು ಹಳೆಯ ಎಸ್‌ಐಆರ್ ಪಟ್ಟಿಯಲ್ಲಿ ಪೋಷಕರ ಹೆಸರಿನ ಕಾಗುಣಿತ (Spelling) ಬೇರೆಯಾಗಿರುವುದು.

5. ಸಂಬಂಧದ ವಿಧದಲ್ಲಿ ವ್ಯತ್ಯಾಸ : ಹಳೆಯ ಪಟ್ಟಿಯಲ್ಲಿ ತಂದೆಯ ಹೆಸರು ಇದ್ದು, ಪ್ರಸ್ತುತ ಪಟ್ಟಿಯಲ್ಲಿ ತಾಯಿಯ ಹೆಸರು ಅಥವಾ ಸಂಬಂಧ ಬದಲಾಗಿರುವುದು.

6. ವಿವಾಹಿತ ಮಹಿಳೆಯರ ಲಿಂಕ್ : ಹಳೆಯ ಪಟ್ಟಿಯಲ್ಲಿ ತಂದೆಯ ಹೆಸರಿದ್ದು, ಹೊಸ ಪಟ್ಟಿಯಲ್ಲಿ ಗಂಡನ ಹೆಸರಿದ್ದಾಗ ಸರಿಯಾಗಿ ಲಿಂಕ್ ಆಗದಿರುವುದು.

7. ಪೋಷಕರ ಗುರುತು ಗೊಂದಲ : ಪ್ರಸ್ತುತ ಪಟ್ಟಿ ಮತ್ತು ಹಳೆಯ ಪಟ್ಟಿಯಲ್ಲಿ ತಂದೆಯ ಹೆಸರೇ ಬೇರೆಯಾಗಿರುವುದು.

8. ವಯಸ್ಸಿನ ಅಸಹಜ ಬದಲಾವಣೆ : ಹಿಂದಿನ ಪರಿಷ್ಕರಣೆಗೆ ಹೋಲಿಸಿದರೆ ಮತದಾರನ ವಯಸ್ಸಿನಲ್ಲಿ ತಾರ್ಕಿಕವಾಗಿ ಒಪ್ಪಲಾಗದಷ್ಟು ವ್ಯತ್ಯಾಸವಾಗಿರುವುದು.

9. ದಾಖಲೆಗಳ ಕೊರತೆ : ಯಾವುದೇ ಸೂಕ್ತ ಪೂರಕ ದಾಖಲೆಗಳನ್ನು ಸಲ್ಲಿಕೆ ಮಾಡದಿರುವುದು.

10. ಆಧಾರ್ ಕಾರ್ಡ್ ಮಾತ್ರ ಇರುವುದು : ವಯಸ್ಸು ಅಥವಾ ವಿಳಾಸದ ಪುರಾವೆಗೆ ಬೇರೆ ದಾಖಲೆ ನೀಡದೆ, ಕೇವಲ ಆಧಾರ್ ಕಾರ್ಡ್ ಮಾತ್ರ ನೀಡಿರುವುದು (ಆಧಾರ್ ಅನ್ನು ಕೇವಲ ಗುರುತಿನ ಚೀಟಿಯನ್ನಾಗಿ ಮಾತ್ರ ಪರಿಗಣಿಸಲಾಗುತ್ತದೆ).

11. ಹೆಚ್ಚಿನ ಮಕ್ಕಳ ಲಿಂಕ್ : ಒಬ್ಬರೇ ವ್ಯಕ್ತಿಗೆ (ಪೋಷಕರಿಗೆ) 6 ಕ್ಕಿಂತ ಹೆಚ್ಚು ಮಕ್ಕಳ ವಿವರಗಳು ಲಿಂಕ್ ಆಗಿರುವುದು.

    ಈಗಾಗಲೇ ಅಪ್ಲೈ ಆಗಿದೆ ಲಾಜಿಕಲ್ ಡಿಸ್ಕ್ರಿಪೆನ್ಸಿ!

    ಹೆಚ್ಚಿನ ಮತದಾರರು 2002ರ ಪಟ್ಟಿಯಲ್ಲಿ ತಮ್ಮ ಅಥವಾ ತಮ್ಮ ಪೋಷಕರ ಮಾಹಿತಿ ಹುಡುಕಿ ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿ ಬಿಎಲ್‌ಒಗೆ ಕೊಟ್ಟಿದ್ದಾರೆ. ನಮ್ಮ ಎಸ್‌ಐಆರ್ ಯಶಸ್ವಿಯಾಗಿ ಆಗಿದೆ, ASDDO ಪಟ್ಟಿಯಲ್ಲೂ ನಮ್ಮ ಹೆಸರು ಬಂದಿಲ್ಲ. ಇಲ್ಲಿಗೆ ಕೆಲಸ ಮುಗೀತು, ನಮಗೇನು ಅಪಾಯ ಇಲ್ಲ ಎಂಬ ನಿರಾಳ ಭಾವದಲ್ಲಿದ್ದಾರೆ.

    ASDDOಪಟ್ಟಿಯಲ್ಲಿ ನಿಮ್ಮ ಹೆಸರು ಬಾರದಿರುವುದು ಒಂದು ರೀತಿ ಸಮಾಧಾನದ ಸುದ್ದಿಯೆ. ಆದರೆ, ಲಾಜಿಕಲ್ ಡಿಸ್ಕ್ರಿಪೆನ್ಸಿಯಲ್ಲಿ ಎಂಬ ಭೂತ ನಿಮಗಾಗಿ ಹೊಂಚು ಹಾಕಿ ಕುಳಿತಿದೆ ಎಂಬುವುದನ್ನು ಮರೆಯಬೇಡಿ.

    ಮೇಲ್ಗಡೆ ಹೇಳಿದ 11 ಲಾಜಿಕಲ್ ಡಿಸ್ಕ್ರಿಪೆನ್ಸಿ ವರ್ಗಗಳ ಪೈಕಿ ಯಾವುದಾದರು ಒಂದರಲ್ಲಿ ನಿಮ್ಮ ಹೆಸರಿದ್ದರೂ ನಿಮಗೆ ನೋಟಿಸ್ ಬರುವುದು ಖಚಿತ. ಈ ವೇಳೆ ಹೆಚ್ಚಿನ ದಾಖಲೆ ಕೊಟ್ಟು ಮತ ಉಳಿಸಿಕೊಳ್ಳಬೇಕಿದೆ.

    ಲಾಜಿಕಲ್ ಡಿಸ್ಕ್ರಿಪೆನ್ಸಿ ಬಂದರೆ ಏನಾಗುತ್ತದೆ?

    ನಿಮ್ಮ ಮಾಹಿತಿಗಳು ಮೇಲಿನ 11 ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಅಥವಾ ಅಸಂಗತತೆಗಳ ವರ್ಗಗಳಲ್ಲಿ ಕಂಡು ಬಂದರೆ ಚುನಾವಣಾ ನೋಂದಣಾಧಿಕಾರಿಗಳು (ERO) ನಿಮಗೆ ನೋಟಿಸ್ ನೀಡುತ್ತಾರೆ.

    ನೋಟಿಸ್ ಬಂದ ನಂತರ ಮತದಾರರು ತಮ್ಮ ವಯಸ್ಸು, ವಿಳಾಸ ಮತ್ತು ಸಂಬಂಧವನ್ನು ನಿರೂಪಿಸುವ ಸರಿಯಾದ ದಾಖಲೆಗಳನ್ನು (ಉದಾಹರಣೆಗೆ ಜನ್ಮ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ) ನೀಡಿ ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ದಾಖಲೆ ಕೊಡದಿದ್ದರೆ ಅಂತಿಮ ಮತದಾರರ ಪಟ್ಟಿ ಬರುವಾಗ ನಿಮ್ಮ ಹೆಸರು ಡಿಲೀಟ್ ಆಗಬಹುದು.

    ಲಾಜಿಕಲ್ ಡಿಸ್ಕ್ರಿಪೆನ್ಸಿ ಬಂದಿರುವುದನ್ನು ತಿಳಿದುಕೊಳ್ಳುವುದು ಹೇಗೆ?

    ಈಗಾಗಲೇ ಎನ್ಯುಮರೇಷನ್ ಫಾರಂ ನೀವು ಬಿಎಲ್‌ಒಗೆ ಕೊಟ್ಟಿದ್ದರೆ, ಅವರನ್ನು ಅದನ್ನು ಚುನಾವಣಾ ಆಯೋಗದ ಆಪ್‌ನಲ್ಲಿ ಅಪ್ಲೋಡ್ ಮಾಡಿರುತ್ತಾರೆ. ಈ ವೇಳೆ ನಿಮ್ಮ ಮಾಹಿತಿಗಳಲ್ಲಿ ವ್ಯತ್ಯಾಸಗಳಿದ್ದರೆ, ತಕ್ಷಣ ಅದು ಲಾಜಿಕಲ್ ಡಿಸ್ಕ್ರಿಪೆನ್ಸಿ ಕ್ಯಾಟಗರಿಯಲ್ಲಿ ಹೋಗಿ ಕೂತಿರುತ್ತದೆ. ಬಿಎಲ್‌ಒ ನಿಮ್ಮ ಹೆಸರು ಲಾಜಿಕಲ್ ಡಿಸ್ಕ್ರಿಪೆನ್ಸಿಯಲ್ಲಿ ಬಂದಿದೆಯಾ ಎಂಬ ಮಾಹಿತಿ ತಿಳಿಸುವುದಿಲ್ಲ.

    ಬಿಎಲ್‌ಒ ಆಪ್‌ನಲ್ಲಿರುವ ಲಾಜಿಕಲ್ ಡಿಸ್ಕ್ರಿಪೆನ್ಸಿ ಕ್ಯಾಟಗರಿ ಹೀಗಿರುತ್ತದೆ

    ಬಿಎಲ್‌ಒ ಲಾಜಿಕಲ್ ಡಿಸ್ಕ್ರಿಪೆನ್ಸಿ ಕ್ಯಾಟಗರಿ ಓಪನ್ ಮಾಡಿ ಅಲ್ಲಿರುವ ಹೆಸರುಗಳ ಮೇಲೆ ಕ್ಲಿಕ್ ಮಾಡಿದರೆ, ಆ ಹೆಸರಿಗೆ ಯಾವ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಪ್ಲೈ ಆಗಿದೆ ಎಂಬುವುದು ಗೊತ್ತಾಗುತ್ತದೆ.

    ಲಾಜಿಕಲ್ ಡಿಸ್ಕ್ರಿಪೆನ್ಸಿ ಮಾಹಿತಿ ಹಂಚಿಕೊಳ್ಳದ ಚು. ಆಯೋಗ

    ಪ್ರಸ್ತುತ ASDDO ಮಾಹಿತಿಯನ್ನು ಚುನಾವಣಾ ಆಯೋಗ ಬೂತ್‌ವೈಸ್‌ ಹಂಚಿಕೊಂಡಿದೆ. ಆದರೆ, ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಆಯೋಗ ಮಾತನಾಡಿದರೂ, ಇಲ್ಲದಿದ್ದರೂ..ಜನರನ್ನು ಮತ ಪಟ್ಟಿಯಿಂದ ಹೊರಗಟ್ಟುವ ಲಾಜಿಕಲ್ ಡಿಸ್ಕ್ರಿಪೆನ್ಸಿ ಸದ್ದಿಲ್ಲದೆ ಅಪ್ಲೈ ಆಗೋಗಿದೆ.

    ಮತದಾರರಿಗೆ ನಿಮ್ಮ ಹೆಸರಿಗೆ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಪ್ಲೈ ಆಗಿದೆ ಎಂದು ಈಗಲೇ ಹೇಳಿದರೆ ಅವರು ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಬಹುದು. ಕರಡು ಪಟ್ಟಿ ಪ್ರಕಟಿಸಿದ ಬಳಿಕ ನೋಟಿಸ್ ಕೊಟ್ಟರೆ, ದಾಖಲೆ ಇಲ್ಲದವರು ದಾಖಲೆ ಹೊಂದಿಸುವಷ್ಟರಲ್ಲಿ ದಾಖಲೆ ಸಲ್ಲಿಸುವ ಅವಧಿ ಕೊನೆಗೊಂಡಿರುತ್ತದೆ. ಚುನಾವಣಾ ಆಯೋಗ ಲಾಜಿಕಲ್ ಡಿಸ್ಕ್ರಿಪೆನ್ಸಿಯ ಮಾಹಿತಿಯನ್ನು ಯಾಕೆ ಹಂಚಿಕೊಳ್ಳುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

    ಮತದಾರರಿಗೆ ಅವರದ್ದೇ ಮಾಹಿತಿಯನ್ನು ಆಯೋಗ ಯಾಕೆ ಬಚ್ಚಿಡುತ್ತಿದೆ? ಈಗಲೇ ಮಾಹಿತಿ ಹಂಚಿಕೊಳ್ಳುವುದಿಲ್ಲ ಯಾಕೆ? ಜನರಿಗೆ ಈಗಲೇ ಗೊತ್ತಾದರೆ ಅವರು ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಲು ಸಹಕಾರಿಯಾಗುವುದಿಲ್ಲವೇ? ಇತ್ಯಾದಿ ಪ್ರಶ್ನೆಗಳಿಗೆ ಆಯೋಗವೇ ಉತ್ತರಿಸಬೇಕಿದೆ.

    ಲಾಜಿಕಲ್ ಡಿಸ್ಕ್ರಿಪೆನ್ಸಿ ಬಂದರೆ ಕೊಡಬೇಕಾದ ದಾಖಲೆಗಳು ಯಾವುವು?

    ನಿಮಗೆ ಲಾಜಿಕಲ್ ಡಿಸ್ಕ್ರಿಪೆನ್ಸಿ ನೋಟಿಸ್ ಬಂದರೆ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಸರ್ಕಾರಿ ಕೆಲಸದಲ್ಲಿದ್ದರೆ ಅದರ ಐಡಿ ಕಾರ್ಡ್, ಸರ್ಕಾರದಿಂದ ಜಮೀನು ದೊರೆತಿದ್ದರೆ ಅದರ ದಾಖಲೆ, ಅರಣ್ಯ ಹಕ್ಕು ದಾಖಲೆ, ಎನ್‌ಆರ್‌ಸಿ ಇರುವಲ್ಲಿ ಅದರ ದಾಖಲೆ, ಶಾಶ್ವತ ನಿವಾಸಿ ಪ್ರಮಾಣಪತ್ರ, ಎಸ್‌ಸಿ,ಎಸ್‌ಟಿ ಮತ್ತು ಒಬಿಸಿಯವರು ಜಾತಿ-ಆದಾಯ ಪ್ರಮಾಣಪತ್ರ ಇತ್ಯಾದಿಗಳಲ್ಲಿ ಯಾವುದಾದರು ಒಂದನ್ನು ಕೊಡಬೇಕು.

    ಆಯೋಗದ ಹೇಳಿದ ಮಾನ್ಯ ದಾಖಲೆಗಳಲ್ಲಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್‌, ಪ್ಯಾನ್ ಕಾರ್ಡ್ , ರೇಷನ್ ಕಾರ್ಡ್‌ ಇವುಗಳು ಯಾವುದೂ ಒಳಗೊಂಡಿಲ್ಲ. ಹಾಗಾಗಿ, ಆಯೋಗ ಹೇಳಿದ ದಾಖಲೆಗಳು ಇಲ್ಲದ ಲಕ್ಷಾಂತರ ಮತದಾರರು ಲಾಜಿಕಲ್ ಡಿಸ್ಕ್ರಿಪೆನ್ಸಿ ಕಾರಣಕ್ಕೆ ತಮ್ಮ ಹಕ್ಕು ಕಳೆದುಕೊಳ್ಳುವುದು ನಿಚ್ಚಲವಾಗಿದೆ.

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    ಅಧಿಕಾರಿಯ ಡೆತ್‌ ನೋಟ್‌ನಲ್ಲಿ ಗ್ಯಾನೇಶ್ ಕುಮಾರ್ ಹೆಸರು!: ಮತ್ತೆ ಮುನ್ನೆಲೆಗೆ ಬಂದ ಹಳೆ ಕೇಸ್

    ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧ ದೇಶದಾದ್ಯಂತ ಆಕ್ರೋಶದ ಅಲೆ ಎದ್ದಿರುವ ಈ ಸಂದರ್ಭದಲ್ಲಿ, ಸುಮಾರು ಎರಡು ದಶಕಗಳ ಹಿಂದೆ, ಮಲೇಷ್ಯಾದ ಯೋಜನಾ ಅಧಿಕಾರಿಯೊಬ್ಬರ ಆತ್ಮಹತ್ಯೆ ಪತ್ರದಲ್ಲಿ ಗ್ಯಾನೇಶ್ ಕುಮಾರ್...

    ಹಾಸನ| SIR ಅಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತನಿಖೆಗೆ ನಟ ಪ್ರಕಾಶ್ ರಾಜ್ ಪಟ್ಟು

    ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ನೆಪದಲ್ಲಿ ಲಕ್ಷಾಂತರ ನಾಗರಿಕರ ಮೂಲಭೂತ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಕೇವಲ ಮತದಾರರ ವೈಯಕ್ತಿಕ ಸಮಸ್ಯೆಯಲ್ಲ, ಬದಲಿಗೆ ದೇಶದ ಸಂವಿಧಾನ...

    SIR ರದ್ದುಗೊಳಿಸಿ, ಗ್ಯಾನೇಶ್ ಕುಮಾರ್‌ನನ್ನು ವಜಾಗೊಳಿಸುವಂತೆ ಆಗ್ರಹಿಸಿ ಎಡಪಕ್ಷಗಳಿಂದ ಪ್ರತಿಭಟನೆ

    ದೇಶಾದ್ಯಂತ ನಡೆಯುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿದ್ದು, ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಅವರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ. ಈ ಪ್ರಕ್ರಿಯೆಯನ್ನು...

    ಗುವಾಹಟಿಯಲ್ಲಿ ಸಿಜೆಪಿ ಸಭೆಗೆ ಪೊಲೀಸರಿಂದ ಅಡ್ಡಿ; ಅಶುತೋಷ್ ರಾಂಕಾ ಮತ್ತು ತಂಡ ವಶಕ್ಕೆ

    ಅಸ್ಸಾಂ ಪೊಲೀಸರು ಭಾನುವಾರ (ಸೆ.27) ಬೆಳಿಗ್ಗೆ ಗುವಾಹಟಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ'ಯ (ಸಿಜೆಪಿ) ಸಹ-ಸಂಯೋಜಕ ಅಶುತೋಷ್ ರಾಂಕಾ ಮತ್ತು ಸಂಘಟನೆಯ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂ ಸಚಿವಾಲಯದ ಸಮೀಪದಲ್ಲಿ...

    ಬಿಜೆಪಿಯಿಂದ ಸ್ಪರ್ಧಿಸುವಂತೆ ಗ್ಯಾನೇಶ್ ಕುಮಾರ್ ಈ ಹಿಂದೆ ನನಗೆ ಆಫರ್ ನೀಡಿದ್ದರು! — ಕೇರಳದ ಮಾಜಿ ಚೀಫ್ ಸೆಕ್ರೆಟರಿ ಜಿಜಿ ತೋಮ್ಸನ್ ಸ್ಪೋಟಕ ಹೇಳಿಕೆ!

    ಚುನಾವಣಾ ಆಯೋಗದಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಮತ ಕಡಿತ ಹಾಗೂ ಏಕಪಕ್ಷೀಯ ನಿರ್ಧಾರಗಳ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಹಾಲಿ ಮುಖ್ಯ ಚುನಾವಣಾ ಆಯುಕ್ತ...

    ಕರ್ನಾಟಕ ಎಸ್ಐಆರ್: ಅಳಿಸುವಿಕೆಗೆ ಸಂಬಂಧಿಸಿದ ದತ್ತಾಂಶದಿಂದ ಸುಮಾರು 6000 ಮತದಾರರು ನಾಪತ್ತೆ: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಅಂಕಿಅಂಶಗಳ ವ್ಯತ್ಯಾಸ

    ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ, ಚುನಾವಣಾ ಆಯೋಗದ ಅಂಕಿಅಂಶಗಳಲ್ಲೇ ಸುಮಾರು 6 ಸಾವಿರ ಮತದಾರರ ಅಳಿಸುವಿಕೆಗೆ ಸಂಬಂಧಿಸಿದ ವ್ಯತ್ಯಾಸ ಬೆಳಕಿಗೆ ಬಂದಿದೆ. ಮತದಾರರ...

    Breaking News: ಎಸ್‌ಐಆರ್‌ನಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್: ಕರ್ನಾಟಕದ ಅಂಕಿಅಂಶಗಳು ಎತ್ತಿದ ಗಂಭೀರ ಪ್ರಶ್ನೆಗಳು

    ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕರ್ನಾಟಕದಲ್ಲಿ ಮುಂದುವರಿಯುತ್ತಿರುವ ಬೆನ್ನಲ್ಲೇ, ಅದರ ಲಿಂಗಾನುಪಾತದ ಅಂಕಿಅಂಶಗಳು ಗಂಭೀರವಾದ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ. ಲಭ್ಯವಿರುವ 34 ಜಿಲ್ಲೆ/ನಗರ ಆಡಳಿತ ಘಟಕಗಳ...

    ಎಸ್ಐಆರ್‌ನಲ್ಲಿ ಬದುಕಿದ್ದರೂ ‘ಮೃತ’, ಮನೆಯಲ್ಲಿದ್ದರೂ ‘ಸ್ಥಳಾಂತರ’: ಚಿಕ್ಕಬಳ್ಳಾಪುರದ ಸಂತ್ರಸ್ತರನ್ನು ಭೇಟಿಯಾದ ಪ್ರಕಾಶ್ ರಾಜ್ 

    ಚಿಕ್ಕಬಳ್ಳಾಪುರ: ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ ಬದುಕಿರುವ ಮತದಾರರನ್ನೇ ಮೃತಪಟ್ಟವರು ಎಂದು ಗುರುತಿಸಿರುವ ಆರೋಪಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕೇಳಿಬಂದಿವೆ. ಎಸ್ಐಆರ್ ಪರಿಶೋಧನೆ-ಪ್ರತಿರೋಧ ಜಾಥಾದ ಭಾಗವಾಗಿ ಗುಡಿಬಂಡೆ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದ್ದ...

    “ಚುನಾವಣಾ ಆಯೋಗದ ‘ಕೊಳೆತ ವ್ಯವಸ್ಥೆ’ ಗ್ಯಾನೇಶ್ ಕುಮಾರ್ ಅವರಿಂದಷ್ಟೇ ಶುರುವಾಗಿದ್ದಲ್ಲ!” – ಬಂಗಾಳ ಚುನಾವಣೆಯ ಅಸಲಿ ಸತ್ಯ ಬಿಚ್ಚಿಟ್ಟ ಪ್ರಶಾಂತ್ ಕಿಶೋರ್

    ಭಾರತೀಯ ಚುನಾವಣಾ ಆಯೋಗದ ಒಳಗಿನ 'ಸರ್ವಾಧಿಕಾರಿ' ಧೋರಣೆ, ಇಬ್ಬರು ಆಯುಕ್ತರ ಬಂಡಾಯ ಮತ್ತು ನಿಯಮಬಾಹಿರ ನಿರ್ಧಾರಗಳ ಕುರಿತು ಇಡೀ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ, ಖ್ಯಾತ ಚುನಾವಣಾ ತಂತ್ರಜ್ಞ ಹಾಗೂ 'ಜನ್...

    ಎಸ್ಐಆರ್ ಅಕ್ರಮ: ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ; ಪೊಲೀಸರಿಂದ ಹಲವೆಡೆ ಅಶ್ರುವಾಯು, ಜಲಫಿರಂಗಿ ಪ್ರಯೋಗ

    ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದು, ಕನಿಷ್ಠ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಚುನಾವಣಾ...