Homeಮುಖಪುಟಪ್ರಶಾಂತ್ ಭೂಷಣ್ ಸತ್ಯ ಹೇಳಿದ್ದಾರೆ, ಅದಕ್ಕಾಗಿ ತನಿಖೆ: ಭೂಷಣ್ ಪರ ನಿಂತ ಸಾಮಾಜಿಕ ಕಾರ್ಯಕರ್ತರು

ಪ್ರಶಾಂತ್ ಭೂಷಣ್ ಸತ್ಯ ಹೇಳಿದ್ದಾರೆ, ಅದಕ್ಕಾಗಿ ತನಿಖೆ: ಭೂಷಣ್ ಪರ ನಿಂತ ಸಾಮಾಜಿಕ ಕಾರ್ಯಕರ್ತರು

- Advertisement -
- Advertisement -

ಸುಪ್ರೀಂ ಕೋರ್ಟ್‌‌ನ ಹಿರಿಯ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್ ಸತ್ಯ ಹೇಳಿದ್ದಾರೆ. ಹಾಗಾಗಿ ಅವರ ಮೇಲೆ ಸುಪ್ರೀಂ ಕೋರ್ಟ್‌ ತನಿಖೆ ನಡೆಸುತ್ತಿದೆ ಎಂದು ದೇಶದ ಹಲವಾರು ಚಿಂತಕರು ಆರೋಪಿಸಿದ್ದಾರೆ.

ನ್ಯಾಯಾಂಗ ನಿಂದನೆ ಆರೋಪದಲ್ಲಿ ಪ್ರಶಾಂತ್ ಭೂಷಣ್ ಮತ್ತು ಟ್ವಿಟ್ಟರ್ ಇಂಡಿಯಾದ ಮೇಲೆ ಸ್ವಯಂ ವಿಚಾರಣೆ ಆರಂಭಿಸಿರುವ ಸುಪ್ರೀಂ ಕೋರ್ಟ್‌‌ನ ಕ್ರಮಕ್ಕೆ ದೇಶದ ಹಲವು ಚಿಂತಕರು, ಹೋರಾಟಗಾರರು, ರಾಜಕಾರಣಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಾವಿರಾರು ಸಾಮಾಜಿಕ ಕಾರ್ಯಕರ್ತರು ನಿನ್ನೆ I Stand With Prashant Bhushan ಎಂಬ ಹ್ಯಾಸ್ ಟ್ಯಾಗ್ ಬಳಸಿ ಸುಪ್ರೀಂ ಕೋರ್ಟ್‌‌ನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಪ್ರಶಾಂತ್ ಭೂಷಣ್‌ರವರ ಪರ ಐಕ್ಯಮತ್ಯ ಪ್ರದರ್ಶಿಸಿದ್ದಾರೆ.

ಸ್ವರಾಂಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಸರಣಿ ಟ್ವೀಟ್‌ಗಳನ್ನು ಮಾಡಿ, ಪ್ರಶಾಂತ್ ಭೂಷಣ್ ಸತ್ಯ ಹೇಳಿದ್ದಾರೆ. ಹಾಗಾಗಿ ಅವರನ್ನು ಗುರಿ ಮಾಡಲಾಗುತ್ತಿದೆ ಎಂದು ಪ್ರಶಾಂತ್ ಭೂಷಣ್‌ರವರ ಹಳೆಯ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಿದ್ದಾರೆ.

ಈ ದೇಶದಲ್ಲಿ ಸಾವಿರಾರು ಕೋಮುಗಲಭೆಗಳಿಗೆ, ಸಾವುನೋವುಗಳಿಗೆ ಕಾರಣವಾದ ಪ್ರಚೋದನಾಕಾರಿ ಭಾಷಣಗಳು, ಸಂದೇಶಗಳನ್ನು ಸುಪ್ರೀಂ ಕೋರ್ಟ್‌ ನಿರ್ಲಕ್ಷಿಸಿದೆ. ಆದರೆ ಜನಪರ ಚಿಂತಕ ಪ್ರಶಾಂತ್ ಭೂಷಣ್‌ರವರ ಮೇಲೆ ತನಿಖೆ ನಡೆಸುತ್ತಿದೆ. ನ್ಯಾಯಾಂಗ ಎಂದೂ ಪಕ್ಷಪಾತಿಯಾಗಬಾರದೆಂದು ನಾವು ಭಾರತೀಯರು ಸಂಘಟನೆ ಟ್ವೀಟ್ ಮಾಡಿದೆ.

ನ್ಯಾಯಾಂಗವೂ ವಿಮರ್ಶೆಗೆ ಅತೀತವಲ್ಲ. ಎಲ್ಲಕ್ಕೂ ಮಿಗಿಲು ನಮ್ಮ ಸಂವಿಧಾನ. ಆಳುವ ಶಕ್ತಿಗಳನ್ನು ಪ್ರಶ್ನಿಸುವ ಹಕ್ಕನ್ನು ಅದು ನೀಡಿದೆ ಎಂದು ಅನೀಶ್ ಪಾಶರವರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅವರನ್ನು ದ್ವೇಷಿಸುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅವರನ್ನು ದ್ವೇಷಿಸುತ್ತದೆ. ಅಧಿಕಾರದಲ್ಲಿರುವವರು ಅವರನ್ನು ದ್ವೇಷಿಸುವಂತೆ ಅವರು ಮಾಡುವುದಾದರೂ ಏನನ್ನು? ಅವರು ಬಡವರು ಮತ್ತು ದನಿಯಿಲ್ಲದವರ ಪರವಾಗಿ ಅಧಿಕಾರವನ್ನು ನಿರ್ಭೀತಿಯಿಂದ ಪ್ರಶ್ನಿಸುತ್ತಾರೆ ಎಂದು ಅವಿಕ್ ಶಾ ಹೇಳಿದ್ದಾರೆ.


ಇದನ್ನೂ ಓದಿ; ಪ್ರಶಾಂತ್ ಭೂಷಣ್ ಟ್ವೀಟ್‌ಗಳ ವಿರುದ್ಧದ ವಿಚಾರಣೆ ಪ್ರಾರಂಭಿಸಿದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...