Homeಮುಖಪುಟಪ್ರೊ ಕಬಡ್ಡಿ: ಗುಜರಾತ್ ಗೈಂಟ್ಸ್ ಮಣಿಸಿ ಸೆಮಿಫೈನಲ್ ತಲುಪಿದ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿ: ಗುಜರಾತ್ ಗೈಂಟ್ಸ್ ಮಣಿಸಿ ಸೆಮಿಫೈನಲ್ ತಲುಪಿದ ಬೆಂಗಳೂರು ಬುಲ್ಸ್

- Advertisement -
- Advertisement -

ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯ ಪ್ಲೇಆಫ್ ಪಂದ್ಯದಲ್ಲಿ ಗುಜರಾತ್ ಗೈಂಟ್ಸ್ ವಿರುದ್ಧ ಭರ್ಜರಿ ಜಯಗಳಿಸಿದ ಬೆಂಗಳೂರು ಬುಲ್ಸ್ (29-49) ಸೆಮಿಫೈನಲ್ ತಲುಪಿದೆ. ಫೆಬ್ರವರಿ 23ರ ಬುಧವರ ನಡೆಯುವ ಎರಡನೇ ಸೆಮಿಫೈನಲ್ ನಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ.

ಇಂದು ಡಿಫೆನ್ಸ್ ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಬೆಂಗಳೂರು 20 ಪಾಯಿಂಟ್ ಗಳ ಅಂತರದಲ್ಲಿ ಅಧಿಕಾರಯುತ ಗೆಲುವು ದಾಖಲಿಸಿತು. ಡಿಫೆಂಡರ್ ಗಳಾದ ಮಹೇಂದ್ರ ಕುಮಾರ್, ಸೌರಭ್ ನಂದಲ್ ಮತ್ತು ಅಮನ್ ಅದ್ವಿತೀಯ ಪ್ರದರ್ಶನ ನೀಡಿದರು.

ರೈಡಿಂಗ್ ವಿಭಾಗದಲ್ಲಿ ಎಂದಿನಂತೆ ಪವನ್ ಕುಮಾರ್ 13 ಅಂಕ ಗಳಿಸಿ ಮಿಂಚಿದರು. ಚಂದ್ರನ್ ರಂಜಿತ್ 07 ಅಂಕ ಗಳಿಸಿದರೆ ಭರತ್ 06 ಅಂಕ ಗಳಿಸಿದರು. ಅದರಲ್ಲಿ ಒಂದೇ ರೈಡ್ ನಲ್ಲಿ 4 ಜನರನ್ನು ಔಟ್ ಮಾಡಿ ಗಮನ ಸೆಳೆದರು.

ಮತ್ತೊಂದು ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ ಯೋಧ ಪುಣೇರಿ ಪಲ್ಟನ್ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿತು. ಅದು ಪಟ್ನಾ ಪೈರೇಟ್ಸ್ ವಿರುದ್ದ ಸೆಮಿಯಲ್ಲಿ ಸೆಣಸಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read