“ಡಿ.ಜೆ. ಹಳ್ಳಿ ಮತ್ತು ಕೆ.ಜೆ. ಹಳ್ಳಿ ಪ್ರಕರಣಗಳಲ್ಲಿ ಎಸ್‌ಡಿಪಿಐ–ಪಿಎಫ್‌ಐ ಸಂಘಟನೆಗಳ ಪಾತ್ರದ ಬಗ್ಗೆ ಸಾಕ್ಷ್ಯಗಳಿದ್ದರೆ, ತಕ್ಷಣವೇ ಅವುಗಳನ್ನು ನಿಷೇಧ ಮಾಡಿ” ಎಂದು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಭಾವೈಕ್ಯತಾ ಸಮಾವೇಶ’ಲ್ಲಿ ಮಾತನಾಡಿದ ಅವರು, “ಯಾರೇ ಮಾಡಿದರೂ, ಕೋಮುವಾದವೇ, ಅದನ್ನು ನಾನು ಖಂಡಿಸುತ್ತೇನೆ” ಎಂದು ಸ್ಪಷ್ಟನೆ ನೀಡಿದರು.
“ರಾಜ್ಯ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರ ಅನುದಾನವನ್ನು ₹3 ಸಾವಿರ ಕೋಟಿಯಿಂದ ₹800 ಕೋಟಿಗೆ ಇಳಿಕೆ ಮಾಡಿದೆ. ನಾನು ಅಧಿಕಾರಕ್ಕೆ ಬಂದರೆ ₹10 ಸಾವಿರ ಕೋಟಿಗೆ ಏರಿಸುತ್ತಿದ್ದೆ. ದೇಶದಲ್ಲಿ ಬಿಜೆಪಿಯವರೇ ಶೇ 90ರಷ್ಟು ಬೀಫ್ ವ್ಯಾಪಾರ ಮಾಡುತ್ತಿದ್ದು, ಅದರ ಆಮದು–ರಫ್ತು ನಿಷೇಧ ಮಾಡುತ್ತಿಲ್ಲ. ಆದರೆ, ಗೋ ಹತ್ಯೆ ನಿಷೇಧ ಕಾಯ್ದೆ ಮೂಲಕ ರೈತರು ಹಾಗೂ ಅಲ್ಪಸಂಖ್ಯಾತರನ್ನು ಹೊಡೆಯುವ ಹುನ್ನಾರ ನಡೆಸಿದ್ದಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ: ರಾಜಕೀಯದಲ್ಲೇ ಮುಳುಗಿ ಹೋದವರಿಗೆ ರಾಜ್ಯದ ಹಿತ ನೆನಪಿರುತ್ತದೆಯೇ?- ಕುಮಾರಸ್ವಾಮಿ ಆಕ್ರೋಶ