Homeಮುಖಪುಟಬಾಲಾಕೋಟ್ ದಾಳಿ: ತೋರಿಸಿದ್ದು ಪ್ರಮೋಷನಲ್ ವಿಡಿಯೋ, ಹೇಳಿದ್ದು ರಿಯಲ್ ಫೂಟೇಜ್ ಎಂದು!

ಬಾಲಾಕೋಟ್ ದಾಳಿ: ತೋರಿಸಿದ್ದು ಪ್ರಮೋಷನಲ್ ವಿಡಿಯೋ, ಹೇಳಿದ್ದು ರಿಯಲ್ ಫೂಟೇಜ್ ಎಂದು!

- Advertisement -
- Advertisement -

ನಮ್ಮ ‘ಯುದ್ಧದಾಹಿ’ ಚಾನೆಲ್‍ಗಳು ಇನ್ನೂ ಬಾಲಾಕೋಟ್ ಮಂಪರಿನಿಂದ ಹೊರಬಂದಿಲ್ಲ, ಮುಂದಿನ ಚುನಾವಣೆವರೆಗೂ ಅವು ಆಗಾಗ ಬಾಲಾಕೋಟ್ ದಾಳಿಯ ವಿಸ್ಮೃತಿಗೆ ಒಳಗಾಗುತ್ತಲೇ ವೀಕ್ಷಕರನ್ನು ವಂಚಿಸಲಿವೆ. ಎರಡು-ಮೂರು ದಿನಗಳಿಂದ ಬಹುಪಾಲು ಇಂಗ್ಲಿಷ್, ಹಿಂದಿ ನ್ಯೂಸ್ ಚಾನೆಲ್‍ಗಳು ಮತ್ತು ಅವುಗಳ ಪ್ರಾದೇಶಿಕ ಆವೃತ್ತಿಗಳು ವೀಕ್ಷಕರನ್ನು ಪೆದ್ದು ಮಾಡಲು ಹೋಗಿ ತಾವೇ ಮೂರ್ಖರಾದ ಪ್ರಸಂಗ ನಡೆದುದೆ.

ಮಿಥ್ಯ: ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಝೀ ಹಿಂದಿ ನ್ಯೂಸ್, ಎಬಿಪಿ ನ್ಯೂಸ್, ಇಂಡಿಯಾ ಟುಡೇ ಇತ್ಯಾದಿ ಚಾನೆಲ್‍ಗಳ ಜೊತೆಗೆ ಕೆಲವು ಪ್ರಾದೇಶಿಕ ಚಾನೆಲ್‍ಗಳು ಮತ್ತು ಪತ್ರಿಕೆಗಳು ತಮ್ಮ ವೀಕ್ಷಕರು ಮತ್ತು ಓದುಗರ ಮೇಲೆ ಈ ‘ಫೇಕ್ ದಾಳಿ’ ನಡೆಸಿದವು. ಅವು ಭಾರತೀಯ ವಾಯುಸೇನೆ ಬಿಡಿಗಡೆ ಮಾಡಿದ್ದ ವಿಡಿಯೋ ಒಂದನ್ನು ತೋರಿಸಿ ಅದು ಬಾಲಾಕೋಟ್ ದಾಳಿಯ ರಿಯಲ್ ಫುಟೇಜ್ ಎಂದವು.

ಕೆಲವು ಚಾನೆಲ್‍ಗಳಂತೂ ‘ಪ್ರೂಫ್ ಬೇಕಾ ಪ್ರೂಫ್? ಇಲ್ಲಿದೆ ನೋಡಿ’ ಎಂದವು. ಪಂಜಾಬ್ ಕೇಸರಿ ಮತ್ತು ಗುಜರಾತ್ ಸಮಾಚಾರ್ ಪತ್ರಿಕೆಗಳು ಪುಟಗಟ್ಟಲೇ ಬರೆದವು.

‘ಐಎಎಫ್‍ನಿಂದ ಬಾಲಾಕೋಟ್ ದಾಳಿಯ ಪ್ರೂಫ್’ ಎಂದು ತೋರಿಸಿದ ರಿಪಬ್ಲಿಕ್ ಟಿವಿಯು ತನ್ನ ಡಿಫೆನ್ಸ್‌ ಸಲಹೆಗಾರ ಮೇಜರ್ ಗೌರವ್ ಆರ್ಯ ಅವರಿಂದ ‘ಪ್ರಮೋಷನಲ್’ ಮಾತು ಹೇಳಿಸಿತು. ‘ಸೇನೆಯು ಇಂತಹ ವಿಡಿಯೋಗಳನ್ನು ಮಾಡಿ ಪ್ರಸಾರ ಮಾಡಬೇಕು. ಸಾಮಾಜಿಕ ಜಾಲತಾಣ ಕ್ರಿಯಾಶೀಲವಾಗಿರುವ ಈ ಕಾಲದಲ್ಲಿ ಇಂತಹ ವಿಡಿಯೋಗಳ ಮೂಲಕ ಜನರಲ್ಲಿ ದೇಶದ ಕುರಿತು ಹೆಮ್ಮೆ ಹುಟ್ಟಿಸಬಹುದು,,, ನಾನು ಈ ವಿಡಿಯೋ ನೋಡಿಲ್ಲ, ಆದರೆ ಅದರ ಕಂಟೆಂಟ್ ಗೊತ್ತು’ ಅಂದರು! ಆರಂಭದಲ್ಲಿಯೇ ಇದು ಪ್ರಮೋಷನಲ್ ವಿಡಿಯೋ ಎಂದು ಫ್ಲಾಷ್ ಮಾಡಿದ ಚಾನೆಲ್ ನಂತರ ಇದು ರಿಯಲ್ ಅಟ್ಯಾಕ್ ಎಂಬಂತೆ ವಿವರಣೆ ನೀಡುತ್ತ ಹೋಗುತ್ತದೆ!. ಝೀ ನ್ಯೂಸ್ ಅಂತೂ ಬಾಲಾಕೋಟ್ ದಾಳಿ ಯಶಸ್ವಿಯಾಗಿಲ್ಲ ಎನ್ನುವವರಿಗೆ ಇಲ್ಲಿದೆ ತಕ್ಕ ಉತ್ತರ ಅಂದಿತು.

ಸತ್ಯ: ಅಸಲಿಗೆ ಯಾವುದೇ ದಾಳಿಯ ವಿಡಿಯೋಗಳನ್ನು ಸೇನೆ ಬಿಡುಗಡೆ ಮಾಡುವುದಿಲ್ಲ. ಅದು ಅಕ್ಟೋಬರ್ 4ರಂದು ಬಿಡುಗಡೆ ಮಾಡಿದ್ದು ಬಾಲಾಕೋಟ್ ದಾಳಿ ಹೇಗೆ ಯೋಜಿತವಾಗಿತು ಎಂದು ತೋರಿಸುವ ಪ್ರಮೋಷನಲ್ ( ರೆಪ್ರೆಸೆಂಟೆಟಿವ್ ವಿಡಿಯೋ ಅಂದರೆ ಪ್ರಾತಿನಿಧಿಕ ವಿಡಿಯೋ) ವಿಡಿಯೋವನ್ನಷ್ಟೇ. ಆದರೆ ಬಹುಪಾಲು ಚಾನೆಲ್‍ಗಳು ಬಾಲಾಕೋಟ್ ದಾಳಿಯ ರಿಯಲ್ ಫೂಟೇಜ್ ಎಂದೆಲ್ಲ ಬೊಬ್ಬೆ ಹೊಡೆದವು.

ಮೋದಿಗೆ, ಬಿಜೆಪಿಗೆ ಲಾಭ ಆಗುವುದಾದರೆ ಎಲ್ಲವನ್ನೂ ಬಿಟ್ಟು ಬೆತ್ತಲಾಗುವ ಮಾಧ್ಯಮಗಳ ಈ ವರ್ತನೆಯೇನು ಹೊಸದಲ್ಲ. ಆದರೆ, ಬಾಲಾಕೋಟ್ ದಾಳಿ ಯಶಸ್ವಿಯಾಯಿತೇ ಎಂಬ ಬಗ್ಗೆ ಸೇನೆಯೇ ಇನ್ನೂ ಉತ್ತರಿಸಿಲ್ಲ. ಆದರೆ ಮೋದಿ ಮೀಡಿಯಾಗಳ ಪಾಲಿಗೆ ಬಾಲಾಕೋಟ್ ವಿಷಯ ಪ್ರಚಾರದ ವಸ್ತು ಅಷ್ಟೇ

WION ಟಿವಿಯ ಸಿದಾಂತ್ ಸಿಬಲ್ ಟ್ವೀಟ್ ಮಾಡಿ, ಪತ್ರಿಕಾಗೋಷ್ಠಿಯಲ್ಲಿ ಎಲ್ಲೂ ಇದು ರಿಯಲ್ ಫುಟೇಜ್ ಎಂದು ಹೇಳಿಲ್ಲ. ವಾಯುಸೇನಾ ಮುಖ್ಯಸ್ಥರೇ ದಾಳಿಯ ರಿಯಲ್ ಫುಟೇಜ್ ಇಲ್ಲ, ಇದು ಪ್ರಮೋಷನಲ್ ವಿಡಿಯೋ ಮಾತ್ರ ಎಂದು ಹೇಳಿದ್ದರು’ ಎಂದು ವಿವರಿಸಿದರು. ಬಿಬಿಸಿಯ ಜುಗಲ್ ಪುರೋಹಿತ್ ಕೂಡ ಇಂಥದ್ದೇ ಟ್ವೀಟ್ ಮಾಡಿದರು. ಕೊನೆಗೆ ಎಎನ್‍ಐ ಕೂಡ ತಪ್ಪು ತಿದ್ದಿಕೊಂಡು ಇದು ಪ್ರಮೋಷನಲ್ ವಿಡಿಯೋ ಅಂದಿತು…..

ಒಟ್ಟಿನಲ್ಲಿ ಸತ್ಯ ಮುಚ್ಚಿಟ್ಟು ಟಿಆರ್‍ಪಿ ಹೆಚ್ಚಿಸಿಕೊಂಡ ಮಾಧ್ಯಮಗಳಿಗೆ, ಅದಕ್ಕಿಂತ ಹೆಚ್ಚಾಗಿ ಮೋದಿ ಭಜನೆ ಮಾಡಿದ ತೃಪ್ತಿ ಇರಬಹುದೇನೋ?

ಇವತ್ತಿಗೂ ಬಾಲಾಕೋಟ್ ದಾಳಿ ಯಶಸ್ವಿಯಾಗಿದೆಯೋ ಇಲ್ಲವೋ ಎಂಬ ಬಗ್ಗೆ ಸೇನೆಯೇ ಸರಿಯಾದ ಉತ್ತರ ನೀಡಿಲ್ಲ! ಅಂಥದ್ದರಲ್ಲಿ ಅದು ಪ್ರಮೋಷನಲ್ ವಿಡಿಯೋ ಬಿಡುಗಡೆ ಮಾಡುವ ಅಗತ್ಯವಿತ್ತೇ? ಅಥವಾ ಆ ವಿಡಿಯೋವನ್ನು ರಿಯಲ್ ಎಂದು ಮೋದಿ-ಮೀಡಿಯಾ ತೋರಿಸಲಿ ಎಂದು ಅದು ಕೂಡ ಆಶಿಸಿತ್ತೇ ಎಂಬ ಪ್ರಶ್ನೆ ಏಳುವುದು ಸಹಜ ಅಲ್ಲವೇ?
(ಆಧಾರ: ಆಲ್ಟ್ ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...