Homeಮುಖಪುಟಪುಲ್ವಾಮಾ ದಾಳಿ: ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಲ್ಲಿ ತಂದೆ-ಮಗಳ ಬಂಧನ

ಪುಲ್ವಾಮಾ ದಾಳಿ: ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಲ್ಲಿ ತಂದೆ-ಮಗಳ ಬಂಧನ

- Advertisement -
- Advertisement -

ಕಳೆದ ವರ್ಷದ ಫೆಬ್ರವರಿಯಲ್ಲಿ ಸಂಭವಿಸಿದ ಅನಾಗರಿಕ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಒಬ್ಬ ವ್ಯಕ್ತಿ ಮತ್ತು ಆತನ ಮಗಳನ್ನು ಬಂಧಿಸಿದೆ.

ಇವರು ಆತ್ಮಹತ್ಯಾ ಬಾಂಬರ್ ತನ್ನ ವಾಹನವನ್ನು ಸಿಆರ್‌ಪಿಎಫ್‌ ಅರೆಸೈನಿಕ ಬಸ್‌ಗೆ ನುಗ್ಗಲು ಸಹಾಯ ಮಾಡಿದರು ಎಂಬ ಆರೋಪ ಹೊತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧನದಲ್ಲಿರುವ ವ್ಯಕ್ತಿ ಪೀರ್ ತಾರಿಕ್ ಮತ್ತು ಅವರ ಮಗಳು ಇನ್ಶಾ ಎಂದು ಗುರುತಿಸಲಾಗಿದೆ, ಅವರನ್ನು ವಿಚಾರಣೆಗಾಗಿ ಜುಮ್ಮುವಿನಲ್ಲಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿ 14, 2019 ರ ದಾಳಿಯ ಹಿಂದಿನ ಪಿತೂರಿಯ ಈ ಪ್ರಕರಣವನ್ನು ತನಿಖೆಗಾಗಿ ಎನ್ಐಎ ವಹಿಸಿಕೊಂಡಿದೆ. ಇದರಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ತನ್ನ ಕಾರನ್ನು ಸಿಆರ್‌ಪಿಎಫ್‌ ಬೆಂಗಾವಲಿಗೆ ನುಗ್ಗಿಸಿದ್ದರಿಂದ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಬಿಡುಗಡೆ ಮಾಡಿದ ದಾರ್‌ನ ಕೊನೆಯ ವಿಡಿಯೋವನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾದ ಅವರ ನಿವಾಸದಲ್ಲಿ ಚಿತ್ರೀಕರಿಸಲಾಗಿತ್ತು.

ಮಾಹಿತಿ: ಎನ್‌ಡಿಟಿವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...