Homeಮುಖಪುಟಪಂಜಾಬ್ ಮುಖ್ಯಮಂತ್ರಿ ಕೇಜ್ರಿವಾಲ್, ಭಗವಂತ್ ಮಾನ್ ಅಲ್ಲ..: ಸುಖಬೀರ್ ಸಿಂಗ್ ಬಾದಲ್

ಪಂಜಾಬ್ ಮುಖ್ಯಮಂತ್ರಿ ಕೇಜ್ರಿವಾಲ್, ಭಗವಂತ್ ಮಾನ್ ಅಲ್ಲ..: ಸುಖಬೀರ್ ಸಿಂಗ್ ಬಾದಲ್

- Advertisement -
- Advertisement -

‘ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪಂಜಾಬ್ ಸರ್ಕಾರವನ್ನು ನಡೆಸುತ್ತಿದ್ದಾರೆ. ಅವರು (ಎಎಪಿ) ರಾಜ್ಯವನ್ನು ಲೂಟಿ ಮಾಡುತ್ತಿದ್ದು, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅಲ್ಲ’ ಎಂದು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ವಾಗ್ದಾಳಿ ನಡೆಸಿದ್ದಾರೆ.

ಪಂಜಾಬ್ ಆಡಳಿತಾರೂಢ ಎಎಪಿ ನಾಯಕರ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ ಅವರು, ‘ಸಿಖ್ಖರ ಇತಿಹಾಸ ಗೊತ್ತಿಲ್ಲದ ಕಾರಣ ನಾನು ಅವರನ್ನು (ಭಗವಂತ್ ಮಾನ್) ಸಿಖ್ ಎಂದು ಪರಿಗಣಿಸುವುದಿಲ್ಲ. ಅವರು ತಮ್ಮನ್ನು ತಾವು ಸಿಖ್ ಎಂದು ಬಿಂಬಿಸಿಕೊಳ್ಳಲು ಪೇಟ ಧರಿಸುತ್ತಾರೆ. ಆದರೆ, ಅವರಿಗೆ ನಮ್ಮ ಇತಿಹಾಸ ತಿಳಿದಿಲ್ಲ. ಅವರನ್ನು ನೋಡಿದಾಗ ಮತ್ತು ಅವರ ಹೇಳಿಕೆಗಳನ್ನು ಕೇಳಿದಾಗ ನಮಗೆ ದುಃಖವಾಗುತ್ತದೆ’ ಎಂದು ದೆಹಲಿಯಲ್ಲಿ ನಡೆದ ಸಿಖ್ ಮುಖಂಡರ ಸಭೆಯಲ್ಲಿ ಕಿಡಿಕಾರಿದರು.

‘ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯು ಸುಮಾರು ಶೇ.18ರಷ್ಟಿದೆ. ಅವರಲ್ಲಿ ಒಗ್ಗಟ್ಟಿಲ್ಲದ ಕಾರಣಕ್ಕೆ ಅವರಿಗೆ ಅವರಿಗೆ ನಾಯಕತ್ವವಿಲ್ಲ. ನಾವು ಶೇ.2ರಷ್ಟಿದ್ದರೂ ನಮಗೆ ಶ್ರೀ ಅಕಲ್ ತಖ್ತ್ ಸಾಹಿಬ್ ಅವರ ನಾಯಕತ್ವದಲ್ಲಿ ಒಗ್ಗೂಡಿದ್ದೇವೆ’ ಎಂದು ಹೇಳಿದರು.

61 ವರ್ಷದ ಅಕಾಲಿ ನಾಯಕ ಸೋಮವಾರ ಬಿಹಾರ ಮತ್ತು ಮಹಾರಾಷ್ಟ್ರದ ಸಿಖ್ ಸಂಗತ್ ಸದಸ್ಯರನ್ನು ಪಕ್ಷದ ದೆಹಲಿ ರಾಜ್ಯ ಘಟಕದ ಅಧ್ಯಕ್ಷ ಎಸ್ ಪರಮ್ಜಿತ್ ಸಿಂಗ್ ಸರ್ನಾ ಅವರ ನಿವಾಸದಲ್ಲಿ ಭೇಟಿಯಾದರು. ‘ಶಿರೋಮಣಿ ಅಕಾಲಿದಳವು ಸಿಖ್ ಜನಸಂಖ್ಯೆಯನ್ನು ಹೊಂದಿರುವ ಎಲ್ಲ ರಾಜ್ಯಗಳಲ್ಲಿ ಪಕ್ಷದ ಘಟಕಗಳನ್ನು ಸ್ಥಾಪಿಸುತ್ತದೆ’ ಎಂದು ಅವರು ಘೋಷಿಸಿದರು.

ಒಗ್ಗಟ್ಟಾಗಿ ಉಳಿಯಲು ಸಮುದಾಯಕ್ಕೆ ಮನವಿ:

‘ಒಡೆದು ಹೋಗಬೇಡಿ, ಒಗ್ಗಟ್ಟಾಗಿ ಉಳಿಯುವಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ… ಶಿರೋಮಣಿ ಅಕಾಲಿದಳವು ಎಲ್ಲ ರಾಜ್ಯಗಳಲ್ಲಿ ಪಕ್ಷದ ಘಟಕಗಳನ್ನು ಸ್ಥಾಪಿಸಲಿದೆ…’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹಿರಿಯ ಅಕಾಲಿ ನಾಯಕ ಎಸ್ ಮಂಜಿತ್ ಸಿಂಗ್ ಜಿಕೆ ಅವರು ತಮ್ಮ ಸಂಪೂರ್ಣ ಜಾಗೋ ಪಕ್ಷದ ತಂಡದೊಂದಿಗೆ ಶಿರೋಮಣಿ ಅಕಾಲಿ ದಳಕ್ಕೆ ಮರುಸೇರ್ಪಡೆಯಾಗುವುದಕ್ಕೆ ಸಭೆ ಸಾಕ್ಷಿಯಾಯಿತು.

‘ಈ ಏಕತೆಯು ಸಿಖ್ ಸಮುದಾಯವನ್ನು ಬಲಪಡಿಸುವುದಲ್ಲದೆ, ನಮ್ಮ ಎಲ್ಲಾ ಬಾಕಿ ಇರುವ ಬೇಡಿಕೆಗಳ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನನಗೆ ಖಾತ್ರಿಯಿದೆ. ಸಿಖ್ ಸಮುದಾಯವು ವಿವಿಧ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಎಲ್ಲರ ನಿರ್ಣಯವನ್ನು ಸಾಧಿಸಲು ಮಾತ್ರ ನಾವು ಎಲ್ಲರೂ ಪಂಥ್ನ ಧ್ವಜದ ಅಡಿಯಲ್ಲಿ ಒಂದಾಗಬಹುದು’ ಎಂದು ಬಾದಲ್ ಹೇಳಿದರು.

ಇದನ್ನೂ ಓದಿ; ಬ್ರಿಟನ್‌ನಲ್ಲಿ ರಾಜಕೀಯದ ಚಿತ್ರಣ ಬದಲಿಸಿದ ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...