Homeಮುಖಪುಟಪಂಜಾಬ್ ಚುನಾವಣೆ: ನಟ ಸೋನು ಸೂದ್ ಕಾರನ್ನು ವಶಕ್ಕೆ ಪಡೆದ ಪೊಲೀಸರು

ಪಂಜಾಬ್ ಚುನಾವಣೆ: ನಟ ಸೋನು ಸೂದ್ ಕಾರನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಇಂದು ಪಂಜಾಬ್‌ನಲ್ಲಿ ಚುನಾವಣೆ ನಡೆದಿದ್ದು, ಈ ವೇಳೆ ಮತಗಟ್ಟೆಗೆ ಪ್ರವೇಶಿಸಲು ಯತ್ನಿಸಿದ್ದ ಬಹುಭಾಷಾ ನಟ, ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಅವರ ಕಾರನ್ನು ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

“ಸೋನು ಸೂದ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಾರನ್ನು ಜಪ್ತಿ ಮಾಡಲಾಗಿದೆ ಮತ್ತು ಅವರನ್ನು ಮನೆಗೆ ಕಳುಹಿಸಲಾಗಿದೆ” ಎಂದು ಮೊಗಾ ಜಿಲ್ಲೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು ಮೊಗಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮಾಳವಿಕಾ ಅವರು 2022ರ ಜನವರಿ 10 ರಂದು ಕಾಂಗ್ರೆಸ್ ಸೇರಿದ್ದರು.

ಕೆಲವು ಬೂತ್‌ಗಳಲ್ಲಿ ಇತರ ಪಕ್ಷಗಳಿಂದ ಹಣ ಹಂಚಲಾಗಿದೆ ಎಂಬ ದೂರುಗಳನ್ನು ಪರಿಶೀಲಿಸಲು ತಾವು ಹೊರಗೆ ಹೋಗಿದ್ದಾಗಿ ಸೋನು ಸೂದ್ ಹೇಳಿದ್ದಾರೆ.

ಇದನ್ನೂ ಓದಿ: ದಲಿತ ಮಹಿಳೆಯನ್ನು ಪ್ರಾರ್ಥಿಸದಂತೆ ತಡೆದ ತಮಿಳುನಾಡಿನ ಚಿದಂಬರಂ ದೇವಸ್ಥಾನದ ಅರ್ಚಕರು

“ನಮಗೆ ವಿವಿಧ ಬೂತ್‌ಗಳಲ್ಲಿ ಪ್ರತಿಪಕ್ಷಗಳಿಂದ ಬೆದರಿಕೆ ಕರೆಗಳು ಬಂದಿವೆ. ವಿಶೇಷವಾಗಿ ಅಕಾಲಿದಳದಿಂದ ಕೆಲವು ಬೂತ್‌ಗಳಲ್ಲಿ ಹಣವನ್ನು ಹಂಚಲಾಗುತ್ತಿತ್ತು. ಆದ್ದರಿಂದ ಇದನ್ನು ಪರಿಶೀಲಿಸಿ ನ್ಯಾಯಯುತ ಚುನಾವಣೆಯನ್ನು ಖಾತ್ರಿಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿಯೇ ನಾವು ಹೊರಗೆ ಹೋಗಿದ್ದೆವು” ಎಂದು ಸೋನು ಸೂದ್ ಹೇಳಿದ್ದಾರೆ.

ಮತದಾನದ ವೇಳೆ ಸೋನು ಸೂದ್ ಮನೆಯಿಂದ ಹೊರಗೆ ಕಾಲಿಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ತಾವು ಮನೆಯಲ್ಲೇ ಇರುವುದಾಗಿ ಸೋನು ಸೂದ್ ತಿಳಿಸಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಕಾಂಗ್ರೆಸ್, ಎಎಪಿ, ಎಸ್ಎಡಿ-ಬಿಎಸ್‌ಪಿ, ಬಿಜೆಪಿ-ಪಿಎಲ್‌ಸಿ-ಎಸ್ಎಡಿ (ಸಂಯುಕ್ತ) ಪಕ್ಷಗಳ ನಡುವೆ ಸ್ಪರ್ಧೆ ನಡೆಯುತ್ತಿದೆ.

2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಪಂಜಾಬ್ ವಿಧಾನಸಭೆಯ ಒಟ್ಟು 117 ಸ್ಥಾನಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. ಉಳಿದಂತೆ, ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಯು ಕೇವಲ 18 ಸ್ಥಾನಗಳನ್ನು ಮತ್ತು ಎಎಪಿ 20 ಸ್ಥಾನಗಳನ್ನು ಗೆದ್ದಿದ್ದವು.


ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಪಂಜಾಬ್‌ನಲ್ಲಿ ಮತದಾನ; ಯುಪಿಯಲ್ಲಿ ಅಖಿಲೇಶ್‌‌ಗೆ ಅಗ್ನಿಪರೀಕ್ಷೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...