Homeಮುಖಪುಟಮಹಿಳಾ ಮೀಸಲಾತಿ ಮಸೂದೆ ಅಪೂರ್ಣ: ಬೆಂಬಲಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ರಾಹುಲ್ ಗಾಂಧಿ

ಮಹಿಳಾ ಮೀಸಲಾತಿ ಮಸೂದೆ ಅಪೂರ್ಣ: ಬೆಂಬಲಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ರಾಹುಲ್ ಗಾಂಧಿ

- Advertisement -
- Advertisement -

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ನಡೆಯುತ್ತಿರುವ ಚರ್ಚೆಯ ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 20 ರಂದು ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದರು. ಆದರೆ ಈ ಮೀಸಲಾತಿ ಮಸೂದೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಉಪ-ಮೀಸಲಾತಿಯ ಕೊರತೆಯಿಂದಾಗಿ ಇದು ‘ಅಪೂರ್ಣ’ ಎಂದು ವಿಷಾದ ವ್ಯಕ್ತಪಡಿಸಿದರು.

”ಇದು (ಮಹಿಳಾ ಮೀಸಲಾತಿ ಮಸೂದೆ) ಒಂದು ದೊಡ್ಡ ಹೆಜ್ಜೆ. ನಮ್ಮ ದೇಶದ ಮಹಿಳೆಯರಿಗೆ ಬಹಳ ಮುಖ್ಯವಾದ ಹೆಜ್ಜೆ ಎಂದು ನನಗೆ ಖಾತ್ರಿಯಿದೆ. ಆದರೆ ಈ ಮಸೂದೆಯಲ್ಲಿ OBC ಮೀಸಲಾತಿಯನ್ನು ಸೇರಿಸಬೇಕು ಎಂದು ಬಯಸುತ್ತೇನೆ. ಇಲ್ಲವಾದರೆ ಇದು ಅಪೂರ್ಣವಾಗುತ್ತದೆ” ಎಂದು ಅವರು ಲೋಕಸಭೆಯಲ್ಲಿ ಹೇಳಿದರು.

ಲೋಕಸಭೆಯಲ್ಲಿ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ”ಒಬಿಸಿ ಮೀಸಲಾತಿಗೂ ಅವಕಾಶ ಕಲ್ಪಿಸಬೇಕು” ಎಂದು ಹೇಳಿದರು.

”ನನ್ನ ದೃಷ್ಟಿಯಲ್ಲಿ ಈ ಮಸೂದೆಯನ್ನು ಅಪೂರ್ಣಗೊಳಿಸುವ ಒಂದು ವಿಷಯವಿದೆ. ಈ ಮಸೂದೆಯಲ್ಲಿ ಒಬಿಸಿ ಮೀಸಲಾತಿಯನ್ನು ಸೇರಿಸುವುದನ್ನು ನಾನು ನೋಡಲು ಬಯಸುತ್ತೇನೆ” ಎಂದು ಅವರು ಹೇಳಿದರು.

”ಭಾರತ ಸರ್ಕಾರದ 90 ಕಾರ್ಯದರ್ಶಿಗಳಿದ್ದಾರೆ… 90 ಜನರಲ್ಲಿ ಎಷ್ಟು ಜನರು ಒಬಿಸಿ ಸಮುದಾಯದಿಂದ ಬಂದಿದ್ದಾರೆ? ಉತ್ತರದಿಂದ ನಾನು ಆಘಾತಕ್ಕೊಳಗಾಗಿದ್ದೇನೆ … ಕೇವಲ ಮೂವರು ಕಾರ್ಯದರ್ಶಿಗಳು ಮಾತ್ರ ಒಬಿಸಿ ಸಮುದಾಯ…” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದರು.

”ನೀವು (ಸರ್ಕಾರ) ಮಹಿಳೆಯರಿಗೆ ಕೇವಲ 33 ಪ್ರತಿಶತ ಮೀಸಲಾತಿ ನೀಡಿ ಈ ಮಸೂದೆಯನ್ನು ಜಾರಿಗೊಳಿಸಿ, ಡಿಲಿಮಿಟೇಶನ್ ಮತ್ತು ಜನಗಣತಿಯ ಅಗತ್ಯವಿಲ್ಲ” ಎಂದು ಹೇಳಿದರು.

”ಇದಲ್ಲದೆ, ಪ್ರತಿಪಕ್ಷಗಳು ಜಾತಿ ಗಣತಿಯನ್ನು ಎತ್ತಿದ ತಕ್ಷಣ, ಬಿಜೆಪಿ ಹೊಸ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸಿತು” ಎಂದು ಗಾಂಧಿ ಆರೋಪಿಸಿದರು.

ನೂತನ ಸಂಸತ್ ಭವನದ ಕುರಿತು ಮಾತನಾಡಿದ ರಾಹುಲ್, ಅಧ್ಯಕ್ಷರು ಬುಡಕಟ್ಟು ಸಮುದಾಯದ ಮಹಿಳೆಯಾಗಿದ್ದು, ಹೊಸ ಸಂಸತ್ ಭವನಕ್ಕೆ ವರ್ಗಾವಣೆ ಮಾಡುವಾಗ ಅವರ ಕಾಣಿಸಿಕೊಳ್ಳಬೇಕಿರುವುದು ಸೂಕ್ತ ಎಂದು ಹೇಳಿದರು.

”ಇದು ಸುಂದರವಾದ ಕಟ್ಟಡವಾಗಿದೆ ಆದರೆ ಈ ಇಲ್ಲಿ ಅಧ್ಯಕ್ಷರನ್ನು ನೋಡಲು ಇಷ್ಟಪಡುತ್ತಿದ್ದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಮುಲ್ಲಾ ಭಯೋತ್ಪಾದಕ’: ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ನಿಂದನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...