Homeಮುಖಪುಟಕಡತದಿಂದ ರಾಹುಲ್ ಭಾಷಣ ಕಡಿತ; ಪ್ರಜಾಪ್ರಭುತ್ವ ದಹನ ಎಂದ ಕಾಂಗ್ರೆಸ್

ಕಡತದಿಂದ ರಾಹುಲ್ ಭಾಷಣ ಕಡಿತ; ಪ್ರಜಾಪ್ರಭುತ್ವ ದಹನ ಎಂದ ಕಾಂಗ್ರೆಸ್

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಟೀಕೆಗಳ ಸುರಿಮಳೆಗೈದರು. ಆದರೆ ರಾಹುಲ್ ಗಾಂಧಿಯವರ ಕೆಲವು ಟೀಕೆಗಳನ್ನು ಕಡತದಿಂದ ತಗೆದುಹಾಕಲಾಗಿದೆ. ಇದನ್ನು ಕಾಂಗ್ರೆಸ್, ”ಪ್ರಜಾಪ್ರಭುತ್ವವನ್ನು ದಹನ ಮಾಡಲಾಗಿದೆ” ಎಂದು ಆರೋಪಿಸಿದೆ.

”ಪ್ರಧಾನಿ ಅದಾನಿ ಮಹಾ ಹಗರಣದ ಕುರಿತು ರಾಹುಲ್ ಗಾಂಧಿಯವರ ಟೀಕೆಗಳನ್ನು ಕಡತದಿಂದ ತೆಗೆದುಹಾಕುವುದರೊಂದಿಗೆ, ಲೋಕಸಭೆಯಲ್ಲಿ ಪ್ರಜಾಪ್ರಭುತ್ವದ ದಹನವಾಯಿತು. ಓಂ ಶಾಂತಿ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು, ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿದ ಕೆಲವು ಮಾತುಗಳನ್ನು ಕಡತದಲ್ಲಿ ಸೇರಿಸದ ಕಾರಣ ಕಾಂಗ್ರೆಸ್‌ ಖಂಡಿಸಿದೆ, ಪ್ರಧಾನಿ ಮೋದಿಯವರು ಪ್ರಜಾಪ್ರಭುತ್ವದ ಧ್ವನಿಯನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಅದಾನಿಗೂ ಪ್ರಧಾನಿ ಮೋದಿಗೂ ಇರುವ ಸಂಬಂಧವೇನು? ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಶ್ನೆ

”ಪ್ರಧಾನಿ ಮೋದಿಯವರೇ, ನೀವು ಪ್ರಜಾಪ್ರಭುತ್ವದ ಧ್ವನಿಯನ್ನು ಅಳಿಸಲು ಸಾಧ್ಯವಿಲ್ಲ. ಜನ ನೇರವಾಗಿ ನಿಮ್ಮನ್ನು ಪ್ರಶ್ನಿಸುತ್ತಿದ್ದಾರೆ. ನೀವು ಉತ್ತರಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.

”2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೌತಮ್ ಅದಾನಿ ಅವರ ಅದೃಷ್ಟ ಖುಲಾಯಿಸಿದೆ, ಅವರ ಸಂಪತ್ತು ಏರಿಕೆಯಾಗಿದೆ ಮತ್ತು ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 609 ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದರು” ಎಂದು ರಾಹುಲ್ ಗಾಂಧಿ ಆರೋಪಿಸಿದರು.

”ಪ್ರಧಾನಿ ಮೋದಿಯವರೇ, ನೀವು ಅದಾನಿಯೊಂದಿಗೆ ಎಷ್ಟು ಬಾರಿ ವಿದೇಶಕ್ಕೆ ಪ್ರಯಾಣಿಸಿದ್ದೀರಿ? ಉದ್ಯಮಿ ವಿದೇಶ ಪ್ರವಾಸಗಳಲ್ಲಿ ಪ್ರಧಾನಿಯನ್ನು ಸೇರಿಕೊಂಡಿದ್ದಾರೆ? ಪ್ರಧಾನಿಯವರ ವಿದೇಶ ಪ್ರವಾಸದ ನಂತರ ಅದಾನಿ ಎಷ್ಟು ಬಾರಿ ಆ ದೇಶಕ್ಕೆ ಭೇಟಿ ನೀಡಿದರು? ಮತ್ತು ಅವರು ಎಷ್ಟು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ? ಎಂದು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದರು.” ಆದರೆ ಈ ಎಲ್ಲ ಮಾತುಗಳನ್ನು ಕಡತಕ್ಕೆ ಸೇರಿಸಿಲ್ಲ.

ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಕಾನೂನು ಸಚಿವ ಕಿರಣ್ ರಿಜಿಜು ಅವರು, ”ಸುಳ್ಳು ಆರೋಪಗಳನ್ನು” ಮಾಡಬೇಡಿ ಮತ್ತು ನಿಮ್ಮ ಆರೋಪಗಳಿಗೆ ಪುರಾವೆಗಳನ್ನು ಒದಗಿಸುವಂತೆ ಕೇಳಿಕೊಂಡರು.

ಈ ಬಗ್ಗೆ ಸಂಸತ್ತಿನ ಹೊರಗೆ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಮಾತನಾಡಿದ್ದು, ರಾಹುಲ್ ಗಾಂಧಿಯವರು ಆಧಾರರಹಿತ ಹಾಗೂ ಅಜಾಗರೂಕತೆಯ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವು ”ದೊಡ್ಡ ಹಗರಣಗಳಲ್ಲಿ” ಭಾಗಿಯಾಗಿದ್ದು, ದೇಶದ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...