Homeಮುಖಪುಟರಾಜಸ್ಥಾನ ಅವಿಶ್ವಾಸ ನಿರ್ಣಯಕ್ಕೆ ಗೈರು: ಶಾಸಕರಿಗೆ ಸಮನ್ಸ್ ನೀಡಿ ವಿವರಣೆ ಕೇಳಿದ ಬಿಜೆಪಿ

ರಾಜಸ್ಥಾನ ಅವಿಶ್ವಾಸ ನಿರ್ಣಯಕ್ಕೆ ಗೈರು: ಶಾಸಕರಿಗೆ ಸಮನ್ಸ್ ನೀಡಿ ವಿವರಣೆ ಕೇಳಿದ ಬಿಜೆಪಿ

ಅಂದು ಬೆಳಿಗ್ಗೆ ನಾನು ಸಭೆಯಲ್ಲಿದ್ದೆ. ಆದರೆ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಿ ಬಂತು. ಇದು ಅಲ್ಲಿ ಸಾಧ್ಯವಿಲ್ಲದ್ದರಿಂದ, ಎಂಎಲ್‌ಎ ಕ್ವಾರ್ಟ್ರಸ್‌ಗೆ ಹೋಗಬೇಕಾಯಿತು. ಅಲ್ಲಿಗೆ ಹೊದ ಮೇಲೆ ವಿಶ್ವಾಸ ನಿರ್ಣಯದ ವಿಷಯ ತಿಳಿಯಿತು. ಹಾಗಾಗಿ ಅಲ್ಲಿಯೇ ನಿದ್ರೆಗೆ ಜಾರಿದೆ ಎಂದು ಗೋಪಿ ಚಂದ್ ಮೀನಾ ಹೇಳಿದ್ದಾರೆ.

- Advertisement -
- Advertisement -

ಆಗಸ್ಟ್ 14 ರಂದು ರಾಜಸ್ಥಾನ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮಂಡಿಸಿದ ವಿಶ್ವಾಸ ನಿರ್ಣಯಕ್ಕೆ ಗೈರಾಗಿದ್ದ ರಾಜಸ್ಥಾನದ ನಾಲ್ಕು ಬಿಜೆಪಿ ಶಾಸಕರಿಗೆ ಪಕ್ಷವು ಸಮನ್ಸ್ ನೀಡಿ, ವಿವರಣೆಯನ್ನು ಕೇಳಿದೆ.

ಶಾಸಕರು ಪ್ರತಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಮತ್ತು ರಾಜ್ಯ ಪಕ್ಷದ ಅಧ್ಯಕ್ಷ ಸತೀಶ್ ಪೂನಿಯಾ ಅವರನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ.

ನಾಲ್ಕೂ ಶಾಸಕರಾದ ಗೋಪಿ ಚಂದ್ ಮೀನಾ, ಕೈಲಾಶ್ ಚಂದ್ರ ಮೀನಾ, ಹರೇಂದ್ರ ನಿನಾಮಾ ಮತ್ತು ಗೌತಮ್ ಲಾಲ್ ಅವರು ಆರಂಭದಲ್ಲಿ ಅಸೆಂಬ್ಲಿಯಲ್ಲಿ ಹಾಜರಿದ್ದೇವೆ, ಆದರೆ ಸಭೆಯನ್ನು ಮಧ್ಯಾಹ್ನ 1 ಗಂಟೆಯವರೆಗೆ ಮುಂದೂಡಿದ ನಂತರ ಗೈರಾದೆವು ಎಂದು ಹೇಳಿದ್ದಾರೆ.

ವಿಧಾನಸಭೆ ಅಧಿವೇಶನಕ್ಕೆ ಮುನ್ನ ಕುದುರೆ ವ್ಯಾಪರಾಕ್ಕೊಳಕ್ಕಾಗಬಹುದು ಎಂಬ ಭಯದಿಂದ ಗುಜರಾತ್‌ನ ರೆಸಾರ್ಟ್‌ಗೆ ಕಳುಹಿಸಲಾದ 18 ಬಿಜೆಪಿ ಶಾಸಕರಲ್ಲಿ ಈ ನಾಲ್ವರು ಸೇರಿದ್ದಾರೆ.

ರಾಜ್ಯ ಬಿಜೆಪಿ ಮುಖ್ಯಸ್ಥ ಪೂನಿಯಾ, “ಇದು ಅಷ್ಟಾಗಿ ಏನೂ ಗಂಭೀರವಾಗಿರಲಿಲ್ಲ. ಆದರೆ ಇದು ಅವರ ಅನುಪಸ್ಥಿತಿಯನ್ನು ಪರಿಗಣಿಸುತ್ತದೆ ಅಷ್ಟೆ. ಹಾಗಾಗಿ ನಾನು ಪ್ರತಿಪಕ್ಷದ ನಾಯಕನೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

‘ಅತೃಪ್ತ ಶಾಸಕರು ಮತ್ತೆ ಒಂದಾಗಿದ್ದಾರೆ. ಹಾಗಾಗಿ ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಕೈಬಿಟ್ಟು, ಕೊರೊನಾ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದರು. ನಾವು ಗೈರಾಗಲು ಇದೇ ಕಾರಣ’ ಎಂದು ಶಾಸಕ ಗೋಪಿ ಚಂದ್ ಮೀನಾ ಹೇಳಿದರು.

ಆರೋಗ್ಯ ಸರಿಯಿಲ್ಲದ ಕಾರಣ ಆಗಸ್ಟ್ 13 ರಂದು ಅತಿಸಾರ ಉಂಟಾಗಿ ನಾನು ಅಸ್ವಸ್ಥನಾಗಿದ್ದೆ. ತಮ್ಮ ಕ್ಷೇತ್ರವು ಜೈಪುರದಿಂದ 500 ಕಿ.ಮೀ ದೂರದಲ್ಲಿದೆ. ಗುಜರಾತ್‌ನಲ್ಲಿ ರಸ್ತೆ ಮೂಲಕ ಮತ್ತು ನಂತರ ರಾಜಸ್ಥಾನ ರಸ್ತೆ ಮೂಲಕ ಜೈಪುರಕ್ಕೆ ಪ್ರಯಾಣಿಸುವುದು ನನ್ನ ಆರೋಗ್ಯವನ್ನು ಹದಗೆಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಅಂದು ಬೆಳಿಗ್ಗೆ ನಾನು ಸಭೆಯಲ್ಲಿದ್ದೆ. ಆದರೆ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಿ ಬಂತು. ಇದು ಅಲ್ಲಿ ಸಾಧ್ಯವಿಲ್ಲದ್ದರಿಂದ, ಎಂಎಲ್‌ಎ ಕ್ವಾರ್ಟ್ರಸ್‌ಗೆ ಹೋಗಬೇಕಾಯಿತು. ಅಲ್ಲಿಗೆ ಹೊದ ಮೇಲೆ ವಿಶ್ವಾಸ ನಿರ್ಣಯದ ವಿಷಯ ತಿಳಿಯಿತು. ಹಾಗಾಗಿ ಅಲ್ಲಿಯೇ ನಿದ್ರೆಗೆ ಜಾರಿದೆ ಎಂದು ಗೋಪಿ ಚಂದ್ ಮೀನಾ ಹೇಳಿದ್ದಾರೆ.

ಆದರೆ ಬಿಜೆಪಿಗಾಗಿ ದುಡಿದಿರುವ ನನಗೆ ಸಮನ್ಸ್ ನೀಡಿರುವುದು ಬೇಸರ ತಂದಿದೆ. ಅದರೂ ನನ್ನ ಆರೋಗ್ಯದ ಕಾರಣದಿಂದ ಆ ದಿನ ಸದನವನ್ನು ತೊರೆಯುವ ಮೂಲಕ ನಾನು ತಪ್ಪು ಮಾಡಿದ್ದೇನೆ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನನ್ನ ಕಾರು ದುರಸ್ಥಿಯಲ್ಲಿತ್ತು. ಹಾಗಾಗಿ ನಾನು ಆಟೋ ರಿಕ್ಷಾದಲ್ಲಿ ಹೊರಟೆ. ಆದರೂ ಮಳೆಯಲ್ಲಿ ಸಿಲುಕಿಕೊಂಡೆ. ಹಾಗಾಗಿ ಸಭೆಗೆ ಹಾಜರಾಗಲು ತಡವಾಯಿತು ಎಂದು ಗರ್ಹಿ ಶಾಸಕ ಕೈಲಾಶ್ ಚಂದ್ರ ಹೇಳಿದ್ದಾರೆ.

ಮರುದಿನ ಸ್ವಾತಂತ್ರ್ಯ ದಿನಾಚರಣೆಗೆ ತಮ್ಮ ಕ್ಷೇತ್ರಕ್ಕೆ ಹೋಗಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದರಿಂದ, ಮತ್ತು ಸದನವನ್ನು 1 ಗಂಟೆಗೆ ಮುಂದೂಡಿದ್ದರಿಂದ ನಾನು ಗೈರಾಗಬೇಕಾಯಿತು ಎಂದು ಘಾಟೋಲ್ ಶಾಸಕ ಹರೇಂದ್ರ ನಿನಾಮಾ ವಿವರಣೆ ನೀಡಿದ್ದಾರೆ.

“ಅವಿಶ್ವಾಸ ನಿರ್ಣಯ ಮಂಡಿಸದಿರಲು ಪಕ್ಷ ನಿರ್ಧರಿಸಿತು. ಕಾಂಗ್ರೆಸ್ ಬಣಗಳು ಮತ್ತೆ ಒಂದಾಗಿದ್ದವು. ಆದ್ದರಿಂದ ಇನ್ನು ಏನೂ ಉಳಿದಿಲ್ಲ. ಇದಲ್ಲದೆ ನಾನು ಸ್ವಾತಂತ್ರ್ಯ ದಿನಾಚರಣೆಗೆ ನನ್ನ ಕ್ಷೇತ್ರದಲ್ಲಿ ಇರಬೇಕಾಗಿತ್ತು. ಆದ್ದರಿಂದ ಸದನವನ್ನು ಮುಂದೂಡಿದ ನಂತರ, ನಾನು ಎಂ ಎಲ್ ಎ ಕ್ವಾರ್ಟ್ರಸ್ ಗೆ ಮರಳಿದೆ. ಊಟದ ನಂತರ ಸ್ವಕ್ಷೇತ್ರಕ್ಕೆ ಹೊರಟೆ” ಎಂದು ಶಾಸಕ ಗೌತಮ್ ಲಾಲ್ ಹೇಳಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ 18 ಶಾಸಕರ ಬಂಡಾಯದ ನಂತರ, ರಾಜಸ್ಥಾನದಲ್ಲಿ ಒಂದು ತಿಂಗಳ ಕಾಲ ರಾಜಕೀಯ ಬಿಕ್ಕಟ್ಟು ಸಂಭವಿಸಿತ್ತು. ಅಶೋಕ್ ಗೆಹ್ಲೋಟ್ ಶಿಬಿರದೊಂದಿಗೆ ಮತ್ತೆ ಒಂದಾದ ಅತೃಪ್ತರ ಬಣ ಆಗಸ್ಟ್ 14 ರಂದು ವಿಶ್ವಾಸಾರ್ಹ ನಿರ್ಣಯವನ್ನು ಮಂಡಿಸಿ, ಅದನ್ನು ಧ್ವನಿ ಮತದ ಮೂಲಕ ಗೆದ್ದುಕೊಂಡಿತು.

ರಾಜ್ಯ ಕಾಂಗ್ರೆಸ್‌ನಲ್ಲಿನ ದಂಗೆಯು ಬಿಜೆಪಿಯ ರಾಜ್ಯ ಘಟಕದೊಳಗೆ ಇರುವ ಬಿರುಕನ್ನು ಹೊರಗೆಳೆದಿದೆ. ಮಾಜಿ ಸಿಎಂ ವಸುಂಧರಾ ರಾಜೆ ಸುದೀರ್ಘ ಮೌನವನ್ನು ಕಾಯ್ದುಕೊಂಡಿದ್ದಾರೆ ಮತ್ತು ಅವರ ನಿಷ್ಠಾವಂತ ಮಾಜಿ ಸ್ಪೀಕರ್ ಕೈಲಾಶ್ ಮೇಘವಾಲ್ ಕುದುರೆ ವ್ಯಾಪಾರದ ವಿರುದ್ಧ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: ರಾಜಸ್ಥಾನ ಬಿಕ್ಕಟ್ಟು: ವಿಶ್ವಾಸ ಮತ ಗೆದ್ದ ಗೆಹ್ಲೋಟ್; ಸರ್ಕಾರ ಭದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...