Homeರಾಷ್ಟ್ರೀಯಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್‌ ನೇಮಕ

ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್‌ ನೇಮಕ

- Advertisement -
- Advertisement -

ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಒಕ್ಕೂಟ ಸರ್ಕಾರದ ಕಾನೂನು ಸಚಿವಾಲಯ ಗುರುವಾರದಂದು ಅಧಿಸೂಚನೆ ಹೊರಡಿಸಿದೆ. ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಯು ಮೇ 15, 2022 ರಿಂದ ಜಾರಿಗೆ ಬರಲಿದೆ.

ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಮೇ 14, 2022 ರಂದು ತಮ್ಮ ಕಚೇರಿಯನ್ನು ತೊರೆದ ನಂತರ ಅವರು ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಅವರು 2020ರ ಸೆಪ್ಟೆಂಬರ್ 1 ರಿಂದ ಭಾರತೀಯ ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಾನೂನು ಸಚಿವಾಲಯವು ಮೇ 12 ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಸಂವಿಧಾನದ 324 ನೇ ವಿಧಿಯ ಷರತ್ತು (2) ರ ಅನುಸಾರವಾಗಿ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ನೇಮಕಾತಿಯನ್ನು ಮಾಡಿದ್ದಾರೆ.

ಇದನ್ನೂ ಓದಿ: ‘ಮೌಲ್ಯಗಳಿಗೆ ಸರಿ ಹೊಂದುತ್ತಿಲ್ಲ’: ಸುಪ್ರೀಂನಲ್ಲಿ ಚುನಾವಣಾ ಆಯೋಗವನ್ನು ಪ್ರತಿನಿಧಿಸುವ ವಕೀಲ ರಾಜೀನಾಮೆ

ನೇಮಕಾತಿ ಪತ್ರವನ್ನು ಒಕ್ಕೂಟ ಸರ್ಕಾರದ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಅವರು ಇಂದು ಟ್ವಿಟರ್ ಪೋಸ್ಟ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಸಚಿವ ರಿಜಿಜು ಅವರು ಟ್ವೀಟ್‌ನಲ್ಲಿ ರಾಜೀವ್‌‌ ಕುಮಾರ್‌ಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

1960 ರ ಫೆಬ್ರವರಿ 19 ರಂದು ಜನಿಸಿರುವ ರಾಜೀವ್ ಕುಮಾರ್ ಅವರು, B.SC, LL.B, PGDM ಮತ್ತು MA ಸಾರ್ವಜನಿಕ ನೀತಿಯಲ್ಲಿ ಶೈಕ್ಷಣಿಕ ಪದವಿಗಳನ್ನು ಹೊಂದಿದ್ದಾರೆ. ಅವರು ಬಿಹಾರ/ಜಾರ್ಖಂಡ್ ಕೇಡರ್‌ನ 1984 ಬ್ಯಾಚ್‌ನ ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಿದ್ದಾರೆ. ಫೆಬ್ರವರಿ 2020 ರಲ್ಲಿ IAS ನಿಂದ ನಿವೃತ್ತರಾಗಿದ್ದಾರೆ.

ನಂತರ ಏಪ್ರಿಲ್ 2020 ರಲ್ಲಿ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿಯ (PESB) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸೆಪ್ಟೆಂಬರ್ 1, 2020 ರಂದು ಚುನಾವಣಾ ಆಯುಕ್ತರಾಗಿ ECI ಗೆ ಸೇರಿದರು.

ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್​ ಹೈಕೋರ್ಟ್

ರಾಜೀವ್‌ ಕುಮಾರ್‌ ಅವರು ಸಾಮಾಜಿಕ, ಪರಿಸರ ಮತ್ತು ಅರಣ್ಯಗಳು, ಮಾನವ ಸಂಪನ್ಮೂಲಗಳು, ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ವಿವಿಧ ಕೇಂದ್ರ ಮತ್ತು ರಾಜ್ಯ ಸಚಿವಾಲಯಗಳಲ್ಲಿ 36 ವರ್ಷಗಳ ಸರ್ಕಾರಿ ಸೇವೆಯ ಅನುಭವವನ್ನು ಹೊಂದಿದ್ದಾರೆ.

ಅವರು ಸೆಂಟ್ರಲ್ ಬೋರ್ಡ್ ಆಫ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI), SBI, NABARD ನಿರ್ದೇಶಕರಾಗಿ; ಆರ್ಥಿಕ ಗುಪ್ತಚರ ಮಂಡಳಿ (EIC) ಸದಸ್ಯರಾಗಿ; ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (FSDC)ಯ ಸದಸ್ಯರಾಗಿ; ಬ್ಯಾಂಕ್ ಬೋರ್ಡ್ ಬ್ಯೂರೋ (BBB)ದ ಸದಸ್ಯರಾಗಿ; ಹಣಕಾಸು ವಲಯದ ನಿಯಂತ್ರಕ ನೇಮಕಾತಿಗಳ ಹುಡುಕಾಟ ಸಮಿತಿ (FSRASC) ಸದಸ್ಯ ಸೇರಿದಂತೆ ನಾಗರಿಕ ಸೇವಾ ಮಂಡಳಿಯ ಹಲವು ಮಂಡಳಿಗಳು ಮತ್ತು ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...