ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಸಿಎಎ ವಿರುದ್ಧ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿ, ಘಟನೆಗೆ ಕೆಲವೇ ನಿಮಿಷಗಳ ಮೊದಲು ತನ್ನ ಎಲ್ಲಾ ಚಟುವಟಿಕೆಗಳನ್ನು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಿರುವುದು ಕಂಡುಬಂದಿದೆ.

ಗುಂಡು ಹೊಡೆದ ಘಟನೆಯ ನಂತರ ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರು ಕರೆದೊಯ್ಯುವಾಗ ದಾಳಿಕೋರನು ತನ್ನನ್ನು ‘ರಾಮ್‌ಭಕ್ತ್‌ ಗೋಪಾಲ್’ ಎಂದು ಗುರುತಿಸಿಕೊಂಡಿದ್ದಾನೆ.

Posted by Rambhakt Gopal on Thursday, January 30, 2020

ಫೇಸ್‌ಬುಕ್‌ನಲ್ಲಿ ಗೋಪಾಲ್ ಅವರ ಬಯೋ ಹೇಳುವಂತೆ ‘ರಾಮ್‌ಭಕ್ತ್‌, ಸಾಕು ವಿಶ್ರಾಂತಿ, ಸಮಯ ಬಂದಿದೆ’. ಅಂತಿಮವಾಗಿ ಜಾಮಿಯಾ ವಿದ್ಯಾರ್ಥಿಗಳಿಗೆ ಗುಂಡು ಹಾರಿಸುವ ಮೊದಲು ಅವನು ಕೆಲವು ಬಾರಿ ಫೇಸ್‌ಬುಕ್‌ನಲ್ಲಿ ಲೈವ್‌ ಬಂದಿದ್ದಾನೆ. ಅವನ ಕೆಲವು ವೀಡಿಯೊಗಳು ಪ್ರತಿಭಟನೆಯ ನೋಟವನ್ನು ತೋರಿಸಿದರೆ, ಇತರ ಕೆಲವು ವಿಡಿಯೋಗಳಲ್ಲಿ ಮೊಬೈಲ್‌ನ ಸೆಲ್ಫಿ ಕ್ಯಾಮೆರಾವನ್ನು ಬಳಸಿದ್ದಾನೆ.

ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಅವನು ತೆಗೆದುಕೊಳ್ಳಲು ಯೋಜಿಸುತ್ತಿರುವ ಪ್ರತೀಕಾರದ ಬಗ್ಗೆ ಹಲವು ಪೋಸ್ಟ್‌‌ಗಳನ್ನು ಮಾಡಿದ್ದಾನೆ. “ಶಾಹೀನ್ ಬಾಗ್ … ಆಟ ಮುಗಿದಿದೆ” ಎಂಬುದು ಅವನ ಪೋಸ್ಟ್‌ಗಳಲ್ಲಿ ಒಂದಾಗಿದ್ದು ಅದನ್ನು ಏಳುನೂರಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ.

ಅಲ್ಲದೇ ಮತ್ತೊಂದು ಪೋಸ್ಟ್‌ನಲ್ಲಿ ಇಲ್ಲಿ ಹಿಂದೂ ಮಾಧ್ಯಮಗಳು ಒಂದೂ ಇಲ್ಲ ಎಂದು ಪೋಸ್ಟ್‌ ಮಾಡಿದ್ದಾನೆ. ಒಟ್ಟಿನಲ್ಲಿ ಈತನ ಪೋಸ್ಟ್‌ಗಳ್ಲಿ ವಿಪರೀತ ದ್ವೇಷವೇ ತುಂಬಿಕೊಂಡಿದೆ. ಈ ಪ್ರತಿಕಾರವನ್ನು ಚಂದನ್‌ ಅಣ್ಣನಿಗೆ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾನೆ. ನಾನೋಬ್ಬನೇ ಹಿಂದು ಇಲ್ಲಿರುವುದು ಎಂದು ಬರೆದಿದ್ದಾನೆ. ನನ್ನ ಕುಟುಂಬದ ಬಗ್ಗೆ ಕಾಳಜಿ ವಹಿಸಿ,

ಒಂದು ಪೋಸ್ಟ್‌ನಲ್ಲಿ, ತನಗೆ ಕರೆ ಮಾಡದಂತೆ ತನ್ನ ಫೇಸ್‌ಬುಕ್ ಸ್ನೇಹಿತರನ್ನು ಒತ್ತಾಯಿಸಿದ್ದಾನೆ. ಎಲ್ಲಾ ಪೋಸ್ಟ್‌ಗಳು ಹಿಂದಿಯಲ್ಲಿವೆ.

ಆತನ ಫೇಸ್‌ಬುಕ್‌ ಕವರ್‌ ಫೋಟೊದಲ್ಲಿ ಆತ ಹರಿತವಾದ ತಲ್ವಾರ್‌(ಮಚ್ಚು)ಗೆ ಮುತ್ತು ಕೊಡುತ್ತಿರುವ ಫೋಟೊ ಹಾಕಿದ್ದಾನೆ. ಕೇಸರಿ ಬಣ್ಣದ ಬಟ್ಟೆಗಳ ಅವನ ಫೋಟೊಗಳು ಫೇಸ್‌ಬುಕ್‌ನಲ್ಲಿವೆ. ಜೈಶ್ರೀರಾಮ್‌,

ಪಿಸ್ತೂಲ್ ಹೊತ್ತುಕೊಂಡಿದ್ದ ಗೋಪಾಲ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು, ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಜನಸಮೂಹವು ಅವನನ್ನು ಹಿಡಿಯಿತು ಮತ್ತು ನಂತರ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

“ನಾವು ಹೋಲಿ ಫ್ಯಾಮಿಲಿ ಆಸ್ಪತ್ರೆಯತ್ತ ಸಾಗುತ್ತಿದ್ದೆವು, ಅಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಇದ್ದಕ್ಕಿದ್ದಂತೆ, ಬಂದೂಕು ಹಿಡಿದ ವ್ಯಕ್ತಿಯೊಬ್ಬರು ಹೊರಗೆ ಬಂದು ಗುಂಡು ಹಾರಿಸಿದರು. ಒಂದು ಗುಂಡು ನನ್ನ ಸ್ನೇಹಿತನ ಕೈಗೆ ಬಡಿಯಿತು ”ಎಂದು ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ವಿದ್ಯಾರ್ಥಿನಿ ಆಮ್ನಾ ಆಸಿಫ್ ಪಿಟಿಐಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here