Homeರಂಜನೆಕ್ರೀಡೆರಣಜಿ ಟ್ರೋಫಿ: ಜಮ್ಮು ಕಾಶ್ಮೀರದ ವಿರುದ್ಧ ಜಯಿಸಿ ಸೆಮಿಫೈನಲ್ ಪ್ರೇಶಿಸಿದ ಕರ್ನಾಟಕ

ರಣಜಿ ಟ್ರೋಫಿ: ಜಮ್ಮು ಕಾಶ್ಮೀರದ ವಿರುದ್ಧ ಜಯಿಸಿ ಸೆಮಿಫೈನಲ್ ಪ್ರೇಶಿಸಿದ ಕರ್ನಾಟಕ

- Advertisement -
  • ಜಮ್ಮು ಕಾಶ್ಮೀರದ ವಿರುದ್ಧ ಕ್ವಾಟೆರ್‍ ಫೈನಲಿನಲ್ಲಿ ಸೆಣಸಿದ ಕರ್ನಾಟಕ ತಂಡವೂ 167 ರನ್‌ಗಳ ಗೆಲುವು ದಾಖಲಿಸಿತು. ಈ ಮೂಲಕ ಕರ್ನಾಟಕ ತಂಡವೂ ಸೆಮಿ ಫೈನಲ್ ಪ್ರವೇಶಿಸಿದ್ದು ಅಲ್ಲಿ ಬಂಗಾಳ ತಂಡವನ್ನು ಎದುರಿಸಲಿದೆ.
- Advertisement -

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆ ಗೌತಮ್ ಪಡೆದ ಏಳು ವಿಕೆಟ್ ಗಳ ಸಹಾಯದಿಂದ ಕರ್ನಾಟಕ ತಂಡವೂ 167 ರನ್ ಗಳಿಂದ ಜಮ್ಮುಕಾಶ್ಮೀರ ತಂಡವನ್ನು ಸೋಲಿಸಿತು. ಐದನೇ ದಿನದಂದು ಕರ್ನಾಟಕವು 331 ರನ್ ಗಳ ಗುರಿ ನೀಡಿತ್ತು. ತದನಂತರ ಕರಾರುವಾಕ್ಕಾದ ಬೌಲಿಂಗ್ ಮಾಡಿ 45 ಓವರ್‌ಗಳಲ್ಲಿ 163 ರನ್‌ಗಳಿಗೆ ಜಮ್ಮು ಕಾಶ್ಮೀರವನ್ನು ಆಲ್ ಔಟ್ ಮಾಡಿ ವಿಜಯ ಪಡೆಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ 76 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ  ಕೃಷ್ಣಮೂರ್ತಿ ಸಿದ್ಧಾರ್ಥ್ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಸಹ 98 ರನ್ ಗಳಿಸಿ ಮಿಂಚಿದರು.

ಬೌಲಿಂಗ್ ವಿಭಾಗದಲ್ಲಿ ಅಬಿದ್ ಮುಷ್ತಾಕ್ ಆರು ವಿಕೆಟ್ ಗಳಿಸುವ ಮೂಲಕ ಪಂದ್ಯ ಗೆಲ್ಲಲು ಕಾರಣರಾದರು. ಜಮ್ಮು ಕಾಶ್ಮೀರದ ಪರವಾಗಿ  ಶುಭಮ್ ಪಂಡಿರ್ (31), ಅಕ್ವಿಬ್ ನಬಿ (26) ಮತ್ತು ಉಮರ್ ನಜೀರ್ ಮಿರ್ (24) ಗಳಿಸಿದರೂ ಸಹ ಆತಿಥೇಯ ತಂಡವನ್ನು ಸೋಲದಂತೆ ತಡೆಯಲು ವಿಫಲವಾದರು.

ಕರ್ನಾಟಕವು ಸೆಮಿಫೈನಲ್ ಪಂದ್ಯವನ್ನು ಕೊಲ್ಕತ್ತಾದಲ್ಲಿ ಬಂಗಾಳದ ವಿರುದ್ಧ ಆಡಲಿದೆ. ಇನ್ನೊಂದು ಸೆಮಿಫೈನಲ್‌ ನಲ್ಲಿ ಸೌರಾಷ್ಟ್ರವನ್ನು ಗುಜರಾತ್ ಎದುರಿಸಲಿದೆ.

ಸಂಕ್ಷಿಪ್ತ ಅಂಕ ಪಟ್ಟಿಗಳು: ಕರ್ನಾಟಕ ಮೊದಲ ಇನ್ನಿಂಗ್ಸ್ 206 (ಕೃಷ್ಣಮೂರ್ತಿ ಸಿದ್ಧಾರ್ಥ್ 76)

ಎರೆನೇಯ ಇನ್ನಿಂಗ್ಸ್: 316 (ಕೃಷ್ಣಮೂರ್ತಿ ಸಿದ್ಧಾರ್ಥ್ 98)

ಕರ್ನಾಟಕದ ಪರವಾಗಿ ಬೌಲಿಂಗ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಪರ್ವೇಜ್ ರಸೂಲ್ 3-36 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅಬಿದ್ ಮುಷ್ತಾಕ್ 6-83 ಮಿಂಚಿದರು.

ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್ : 192 ಹಾಗೂ ಎರಡನೇ ಇನ್ನಿಂಗ್ಸ್ 163.

ಕರ್ನಾಟಕಕ್ಕೆ 167 ರನ್ ಗಳ ಜಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...