ಮಕ್ಕಳು ದೊಡ್ಡವರಾದ `ಗಿರ್ಮಿಟ್​’ ಸಿನಿಮಾಕ್ಕೆ ಅಂಕವೆಷ್ಟು..?

ಮೊಟ್ಟ ಮೊದಲ ಪ್ರಯೋಗಾತ್ಮಕ ಮಕ್ಕಳ ಕಮರ್ಷಿಯಲ್ ಗಿರ್ಮಿಟ್ ಚಿತ್ರ ತೆರೆಗೆ ಅಪ್ಪಳಿಸಿದೆ. ದೊಡ್ಡವರ ಪಾತ್ರಗಳಿಗೆ ಮಕ್ಕಳು ಬಣ್ಣ ಹಚ್ಚುವ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಿರ್ದೇಶಕ ರವಿ ಬಸ್ರೂರು ಮತ್ತು ತಂಡದ ಪರಿಶ್ರಮ ಪ್ರೇಕ್ಷಕರ ಮನ ಗೆದ್ದಿದೆ.

ಗಿರ್ಮಿಟ್ ಚಿತ್ರ ಅಪ್ಪಟ ಮನರಂಜನಾತ್ಮಕ ಚಿತ್ರ. ದೊಡ್ಡವರ ಪಾತ್ರಗಳಲ್ಲಿ ನಟಿಸುವ ಮೂಲಕ ಮಕ್ಕಳು ಕಮಾಲ್ ಮಾಡಿದ್ದಾರೆ. ಪ್ರಯೋಗಾತ್ಮಕ ಚಿತ್ರಗಳಲ್ಲಿ ಮನರಂಜನೆ ಹೆಚ್ಚು ಪಾತ್ರವಹಿಸುವುದಿಲ್ಲ. ಆದರೆ ರವಿ ಬಸ್ರೂರು ಮಕ್ಕಳ ಮೂಲಕ ಮನರಂಜಿಸಿದ್ದಾರೆ.

ನಾಯಕ, ನಾಯಕಿ, ಅಪ್ಪ-ಅಮ್ಮ, ಸ್ನೇಹಿತ ಹೀಗೆ ವಿವಿಧ ಪಾತ್ರಗಳನ್ನು ಮಕ್ಕಳೇ ಮಾಡಿದ್ದಾರೆ. ಮೀಸೆ, ಸೀರೆಯುಟ್ಟಿರುವ ಮಕ್ಕಳ ಪಾತ್ರ ನೈಜವಾಗಿ ಮೂಡಿ ಬಂದಿದೆ. ಸಾಮಾನ್ಯ ಕಥೆಯನ್ನಿಟ್ಟುಕೊಂಡು ಉತ್ತಮವಾಗಿ ಕಟ್ಟಿ ಕೊಟ್ಟಿದ್ದಾರೆ ರವಿ ಬಸ್ರೂರು. ನಾಯಕ ರಾಜನಿಗೆ (ಆಶ್ಲೇಷ್​ ರಾಜ್​) ಮದುವೆಗೆ ಹುಡುಗಿ ಹುಡುಕುತ್ತಿರುತ್ತಾರೆ. ಇನ್ನೊಂದು ಕಡೆ ನಾಯಕಿ ರಶ್ಮಿ (ಶ್ಲಾಘಾ ಸಾಲಿಗ್ರಾಮಾ) ಅವರ ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಬೇಕೆಂಬ ಹುಡುಕಾಟ ನಡೆಸಿರುತ್ತಾಳೆ. ತನ್ನನ್ನು ಇಷ್ಟಪಡುವ ನಾಯಕನಿಗೆ, ನಾಯಕಿ ತನ್ನ ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿಸಬೇಕು ಎಂದು ಷರತ್ತು ವಿಧಿಸುತ್ತಾಳೆ. ನಂತರದಲ್ಲಿ ನಾಯಕ ನಡೆಸುವ ಪ್ರಯತ್ನಗಳು, ನಾಯಕಿಯ ಅಕ್ಕಂದಿರ ಮದುವೆ ಮಾಡಿಸಿ, ತನ್ನ ಮದುವೆ ಹೇಗೆ ಮಾಡಿಕೊಳ್ಳುತ್ತಾನೆ ಎಂಬುದೇ ಚಿತ್ರದ ಕಥೆ.

ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಪ್ರಕೃತಿ ಸೌಂದರ್ಯವನ್ನು ಸೊಗಸಾಗಿ ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ಮಕ್ಕಳ ಸಂಭಾಷಣೆ ಗಮನ ಸೆಳೆಯುತ್ತದೆ. ಕುಂದಾಪುರ ಮತ್ತು ಉತ್ತರ ಕರ್ನಾಟಕ ಕನ್ನಡ ಭಾಷೆ ಮುದ ನೀಡುತ್ತದೆ. ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಸೇರಿದಂತೆ ಹಿರಿಯ ಕಲಾವಿದರು ಧ್ವನಿ ನೀಡಿದ್ದಾರೆ. ಚಿತ್ರದ ಗೀತೆಗಳು ಕೇಳಲು ಇಂಪಾಗಿವೆ. ಚಿತ್ರದಲ್ಲಿ ಸುಮಾರು 280 ಮಕ್ಕಳು ನಟಿಸಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here