Homeಕರ್ನಾಟಕಮನುಷ್ಯತ್ವದ ಎದುರು ಮಂದಿರ, ಮಸೀದಿ ನಿಲ್ಲಿಸಲಾಗುತ್ತಿದೆ: ಪತ್ರಕರ್ತ ನವೀನ್‌ ಕುಮಾರ್

ಮನುಷ್ಯತ್ವದ ಎದುರು ಮಂದಿರ, ಮಸೀದಿ ನಿಲ್ಲಿಸಲಾಗುತ್ತಿದೆ: ಪತ್ರಕರ್ತ ನವೀನ್‌ ಕುಮಾರ್

- Advertisement -
- Advertisement -

‘ಮನುಷ್ಯತ್ವದ ಎದುರು ಮಂದಿರ ಮಸೀದಿ ನಿಲ್ಲಿಸಲಾಗುತ್ತಿದೆ’ ಎಂದು ಆರ್ಟಿಕಲ್ 19 ಇಂಡಿಯಾ ಸಂಪಾದಕ ನವೀನ್‌ ಕುಮಾರ್ ಕಳವಳ ವ್ಯಕ್ತಪಡಿಸಿದರು.

ಪತ್ರಕರ್ತೆ ಗೌರಿ ಲಂಕೇಶ್ ಅವರ ಜನ್ಮ ದಿನದ ಅಂಗವಾಗಿ ಬೆಂಗಳೂರಿನ ಬೆನ್ಸನ್ ಟೌನ್‌ನ ಇಂಡಿಯನ್ ಸೋಶಿಯಲ್ ಇನ್ಸ್‌ಟ್ಯೂಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ‘ಗೌರಿ ದಿನ- ನಾಲ್ಕನೇ ಅಂಗದ ಮರು ನಿರ್ಮಾಣ ಚಿಂತನಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ರಕ್ಷಣೆಯ ಹೆಸರಿನಲ್ಲಿ ಯುವ ಜನರಿಂದ ಪೆನ್ನು, ಪುಸ್ತಕ ಕಿತ್ತುಕೊಂಡು ತಲ್ವಾರ್ ಕೊಡಲಾಗುತ್ತಿದೆ. ಧರ್ಮಗಳ ನಡುವೆ ದ್ವೇಷ ಬಿತ್ತಲಾಗುತ್ತಿದೆ ಎಂದರು.

ವಿಶ್ವ ವಿದ್ಯಾಲಯಗಳಲ್ಲಿ ಚಿಂತಕರಿದ್ದಾರೆ. ಆದರೆ, ಅವರ ಧ್ವನಿ ಅಡಗಿಸುತ್ತಿದ್ದಾರೆ. ಸತ್ಯ ಮಾತನಾಡುತ್ತಿದ್ದಾರೆ ಎಂದು ವಿಶ್ವ ವಿದ್ಯಾಲಯಗಳನ್ನು ಖಾಸಗೀಕರಣ ಮಾಡಿ ಮೂಗುದಾರ ಹಾಕಲಾಗುತ್ತಿದೆ. ಶುಲ್ಕ ಏರಿಸಿ ಬಡ, ಹಿಂದುಳಿದ ವರ್ಗದ ಮಕ್ಕಳನ್ನು ಶಿಕ್ಷಣದಿಂದ ದೂರ ಇಡಲಾಗುತ್ತಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ಪತ್ರಕರ್ತೆ ಮೀನಾ ಕೊತ್ವಾಲ್‌ ಮಾತನಾಡಿ, ಧರ್ಮದ ಹೆಸರಿನಲ್ಲಿ ನಡೆಯುವ ದೌರ್ಜನ್ಯಕ್ಕೆ ಮೊದಲು ಬಲಿಯಾಗುವುದು ಮಹಿಳೆಯರು. ಧರ್ಮಗಳು ಮಹಿಳೆಯರ ಧ್ವನಿಯನ್ನು ಅಡಗಿಸುತ್ತಿದೆ. ಇದಕ್ಕೆ ಉದಾಹರಣೆ ಗೌರಿ ಲಂಕೇಶ್ ಅವರು. ಗೌರಿಯವರಿಗೆ ಗುಂಡಿಕ್ಕಲು ಧರ್ಮದ ಅಮಲೇ ಕಾರಣ. ನಾನೂ ಕೂಡ ಸತ್ಯ ಹೇಳುತ್ತೇನೆ. ಸಾವು ಬಂದರೂ ಸರಿ, ಸರ್ಕಾರದ ಕೈಗೊಂಬೆಯಾಗಲಾರೆ ಎಂದು ದಿಟ್ಟ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇತರ ಗಣ್ಯರು, ದೇಶದ ಮಾಧ್ಯಮಗಳು ಮತ್ತು ಸರ್ಕಾರಗಳು ಒಂದು ಧರ್ಮದ ಪ್ರಚಾರಕರಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ದೇಶದ ಅಸ್ಮಿತೆಯಾದ ವೈವಿದ್ಯತೆಯ ಮೇಲೆ ಏಕತೆ ಎಂಬ ಒಂದು ಯೋಜಿತ ಸಿದ್ದಾಂತ ಹೇರಿಕೆಯ ಬಗ್ಗೆ ಆತಂಕದ ಮಾತುಗಳನ್ನಾಡಿದರು.

ಕೋಮುವಾದ ಮತ್ತು ಧಾರ್ಮಿಕ ರಾಜಕೀಯದ ವಿರುದ್ದ ಗೌರಿ ಲಂಕೇಶ್ ಯಾವ ರೀತಿ ಧ್ವನಿಯಾಗಿದ್ದರು ಎಂಬುವುದನ್ನು ಸ್ಮರಿಸಿಕೊಂಡರು. ಸರ್ಕಾರ ಮತ್ತು ಕೋಮುವಾದಿ ಸಿದ್ದಾಂತದ ವಿರುದ್ದ ಧ್ವನಿ ಎತ್ತಿದ ಯುವ ಹೋರಾಟಗಾರರು ಮತ್ತು ಪತ್ರಕರ್ತರನ್ನು ಕಾನೂನು ದುರ್ಬಳಕೆ ಮಾಡಿಕೊಂಡು ಯಾವ ರೀತಿ ಕಂಬಿ ಹಿಂದೆ ತಳ್ಳಲಾಗುತ್ತಿದೆ ಎಂದು ವಿವರಿಸಿದರು.

ಗೌರಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕರಾದ ತೀಸ್ತಾ ಸೆಟಲ್ವಾಡ್, ಪರಂಜಾಯ್ ಗುಹಾ ಠಾಕುರ್ತಾ, ಕವಿತಾ ಲಂಕೇಶ್, ಹರ್ಷ್ತೋಶ್ ಬಾಲ್, ಸುಮಿತ್ ಚವ್ಹಾಣ್, ಗೀತಾ ಶೇಷು, ಭವರ್ ಮೇಘವಂಶಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ‘ಕಾಂತರಾಜು ಆಯೋಗದ ವರದಿ ಸ್ವೀಕರಿಸುತ್ತೇನೆ…’; ಶೋಷಿತರ ಜಾಗೃತಿ ಸಮಾವೇಶದಲ್ಲಿ ಸಿಎಂ ಭರವಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...