Homeಮುಖಪುಟಮತ್ತೆ ಉಲ್ಭಣಿಸಿದ ಆರೋಗ್ಯ ಸಮಸ್ಯೆ: ಮೂರನೇ ಬಾರಿ ಏಮ್ಸ್‌ಗೆ ದಾಖಲಾದ ಅಮಿತ್ ಶಾ

ಮತ್ತೆ ಉಲ್ಭಣಿಸಿದ ಆರೋಗ್ಯ ಸಮಸ್ಯೆ: ಮೂರನೇ ಬಾರಿ ಏಮ್ಸ್‌ಗೆ ದಾಖಲಾದ ಅಮಿತ್ ಶಾ

ಆದರೆ ಆಗಸ್ಟ್ 18 ರಂದು ದೇಹದ ನೋವು ಮತ್ತು ಆಯಾಸದ ಕಾರಣಕ್ಕಾಗಿ ಅವರು ಏಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

- Advertisement -
- Advertisement -

ಗೃಹ ಸಚಿವ ಅಮಿತ್ ಶಾರವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಮೂರನೇ ಬಾರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಗಸ್ಟ್ 2ರಂದು ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಮೊದಲ ಬಾರಿಗೆ ಏಮ್ಸ್‌ಗೆ ದಾಖಲಾಗಿದ್ದರು. ನಂತರ ಮೆದೆಂಥ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದು, ಆಗಸ್ಟ್ 14 ರಂದು ತಾವು ಗುಣಮುಖರಾಗಿರುವುದಾಗಿ ತಿಳಿಸಿ, ವೈದ್ಯರ ಸಲಹೆಯ ಮೇರೆಗೆ ಹೋಮ್ ಐಸೋಲೇಷನ್‌ನಲ್ಲಿದ್ದರು.

ಆದರೆ ಆಗಸ್ಟ್ 18 ರಂದು ದೇಹದ ನೋವು ಮತ್ತು ಆಯಾಸದ ಕಾರಣಕ್ಕಾಗಿ ಅವರು ಏಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಹಲವು ದಿನಗಳ ಬಳಿಕ ಆಗಸ್ಟ್ 31 ರಂದು ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ತಿಳಿಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರು, ನಿನ್ನೆ ರಾತ್ರಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

55 ವರ್ಷದ ಅಮಿತ್ ಶಾ ಕಳೆದ ಮೂರು ತಿಂಗಳಿನಿಂದಲೂ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸದಾ ಒಂದಲ್ಲೊಂದು ರೋಗಗಳು ಅವರನ್ನು ಬಾಧಿಸುತ್ತಿವೆ.

ನಾಳೆಯಿಂದ ಮಾನ್ಸೂನ್ ಅಧಿವೇಶನ ಆರಂಭವಾಗಲಿದ್ದು, ಕೋವಿಡ್ ಮುನ್ನೆಚ್ಚರಿಕೆಯ ಅಂಗವಾಗಿ ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಧರಿಸುವಿಕೆಯ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಅಮಿತ್ ಶಾರವರು ಅಧಿವೇಶನದಿಂದ ಹೊರಗುಳಿಯುವ ಸಾಧ್ಯತೆಯಿದೆ.


ಇದನ್ನೂ ಓದಿ: ಮತ್ತೆ ಆರೋಗ್ಯ ಸಮಸ್ಯೆ: ಏಮ್ಸ್‌ಗೆ ದಾಖಲಾದ ಗೃಹಸಚಿವ ಅಮಿತ್‌ ಶಾ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...