Homeಮುಖಪುಟದಲಿತ ಎಂಬ ಕಾರಣಕ್ಕೆ ಮನೆ ಬಾಡಿಗೆಗೆ ನೀಡಲು ನಿರಾಕರಣೆ: ಮಾಲಿಕರ ವಿರುದ್ಧ ಪ್ರಕರಣ

ದಲಿತ ಎಂಬ ಕಾರಣಕ್ಕೆ ಮನೆ ಬಾಡಿಗೆಗೆ ನೀಡಲು ನಿರಾಕರಣೆ: ಮಾಲಿಕರ ವಿರುದ್ಧ ಪ್ರಕರಣ

- Advertisement -
- Advertisement -

ತಮಿಳುನಾಡಿನ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ವ್ಯಕ್ತಿಯೊಬ್ಬರಿಗೆ ಮನೆ ಬಾಡಿಗೆ ನೀಡಲು ನಿರಾಕರಿಸಿದ ಆರೋಪದ ಮೇಲೆ ಮಹಿಳೆಯೊಬ್ಬರ ಮೇಲೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ದಿಂಡಿಗಲ್‌ನ ಒಟ್ಟನ್‌ಛತ್ರಂನಲ್ಲಿ ನಡೆದಿದೆ.

ಅರಸಪಿಳ್ಳೈಪಟ್ಟಿ ಗ್ರಾಮದ ಮಧುರೈ ವೀರನ್ ಎಂಬ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಸೆಪ್ಟೆಂಬರ್ 14ರಂದು ಲಕ್ಷ್ಮಿ ಮತ್ತು ವೇಲುಸಾಮಿ ದಂಪತಿಗಳ ಒಡೆತನದ ಕಟ್ಟಡದ ಮನೆಯನ್ನು ಬಾಡಿಗೆಗೆ ಪಡೆಯಲು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಉಲ್ಲೇಖಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ವೇಲುಸಾಮಿ ದಂಪತಿ ಬಾಡಿಗೆ ಮನೆ ತೋರಿಸಲು ವೀರನ್‌ ಮತ್ತು ಅವರ ಜೊತೆಯಲ್ಲಿದ್ದ ಇಬ್ಬರನ್ನು ಬಾಡಿಗೆ ಮನೆಗೆ ಕರೆದೊಯ್ದಿದ್ದಾರೆ. ಮನೆ ಮಾಲೀಕ ಲಕ್ಷ್ಮಿ ವೀರನ್ ಅವರ ಜಾತಿ ವಿವರಗಳನ್ನು ಕೇಳಿದ್ದಾರೆ. ವೀರನ್‌ ತನ್ನ ಸಮುದಾಯದ ಬಗ್ಗೆ ಹೇಳಿದಾಗ ಅವರಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ. ಇಷ್ಟೆ ಅಲ್ಲದೆ, ದಲಿತರಿಗೆ ಮನೆ ನೀಡಿದರೆ ಕುಲದೇವತೆಗೆ ಅಪಚಾರವಾಗುತ್ತದೆ ಎಂದಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

“ಎಸ್‌ಟಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಹಿನ್ನೆಲೆಯ ವ್ಯಕ್ತಿಗಳಿಗೂ ಫ್ಲಾಟ್ ನೀಡುವುದಿಲ್ಲ ಎಂದು ಮಹಿಳೆ ಹೇಳಿದರು. ಮನೆ ಮಾಲೀಕ ವೇಲುಸಾಮಿ, ಒಟ್ಟನ್‌ಛತ್ರಂ ಮಾರುಕಟ್ಟೆಯಲ್ಲಿ ತರಕಾರಿ ಸಗಟು ಅಂಗಡಿ ನಡೆಸುತ್ತಿದ್ದು, ದಲಿತ ಜನರ ದುಡಿಮೆಯಿಂದ ಲಕ್ಷಗಟ್ಟಲೆ ಲಾಭ ಗಳಿಸಿದ್ದಾರೆ. ಆದರೆ, ಅವರ ಪತ್ನಿ ದಲಿತ ಸಮುದಾಯದವರಿಗೆ ಮನೆ ಬಾಡಿಗೆ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ಈ ಮನಸ್ಥಿತಿ ಮೊದಲು ಬದಲಾಗಬೇಕು” ಎಂದು ವೀರನ್ ಜೊತೆಗಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಾದ ವಿಸಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಜಾನ್ಸನ್ ಕ್ರಿಸ್ಟೋಫರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: MSP ಸಿಗದುದ್ದಕ್ಕೆ ಮೋದಿ ಕಾರಣ ಎಂಬ ಪತ್ರ ಬರೆದಿಟ್ಟು ಸಾವಿಗೆ ಶರಣಾದ ರೈತ

ವೀರನ್ ನೀಡಿದ ದೂರಿನ ಮೇರೆಗೆ ಮನೆ ಮಾಲೀಕ ಲಕ್ಷ್ಮಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ವಿಚಾರಣೆ ನಡೆಸಲು ಪೊಲೀಸರು ಮನೆ ಮಾಲೀಕನ ಮನೆಗೆ ಹೋದಾಗ, ಅವರು ಪರಾರಿಯಾಗಿದ್ದು, ಅವರ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಲಿತರು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಬಾಡಿಗೆ ಮನೆ ಕೊಡಲು ಒಪ್ಪದ ಹಲವಾರು ಪ್ರಕರಣಗಳು ಕರ್ನಾಟಕದ ನಾನಾ ಭಾಗಗಳಲ್ಲಿ ವರದಿಯಾಗುತ್ತಲೇ ಇವೆ. ಶಿಕ್ಷಕರೊಬ್ಬರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಮನೆ ಬಾಡಿಗೆ ನೀಡಲು ಹಲವು ಮನೆ ಮಾಲೀಕರು ನಿರಾಕರಿಸಿದ್ದ ಘಟನೆ ನಾಲ್ಕೈದು ವರ್ಷಗಳ ಹಿಂದೆ ಮೈಸೂರಿನ ನಂಜನಗೂಡಿನಲ್ಲಿ ವರದಿಯಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...