Homeಕರ್ನಾಟಕವಿಮರ್ಶೆ ಸಾಧ್ಯವಿಲ್ಲದೇ ನಿಂದನೆಗೆ ಮೊರೆ ಹೋದವರದ್ದು ವಿದ್ವತ್ತು ಒಳನೋಟ ಹೇಗಾದೀತು?

ವಿಮರ್ಶೆ ಸಾಧ್ಯವಿಲ್ಲದೇ ನಿಂದನೆಗೆ ಮೊರೆ ಹೋದವರದ್ದು ವಿದ್ವತ್ತು ಒಳನೋಟ ಹೇಗಾದೀತು?

ಮೋದಿ ಅವರು ಮರು ಆಯ್ಕೆಗೊಂಡ ಮಾತ್ರಕ್ಕೆ ಎಲ್ಲವೂ ಇಲ್ಲಿಗೆ ಮುಗಿದು ಹೋಯಿತು, ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ತಾಕೀತು ಮಾಡ ಹೊರಟಿರುವ ನೀವು ದೇಶದ ಧರ್ಮಗ್ರಂಥ ‘ಸಂವಿಧಾನ’ಕ್ಕೆ ನೆತ್ತಿಯೂರಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬಹುದಾದ ಸಲಹೆಯಾದರೂ ಏನು

- Advertisement -
- Advertisement -

| ಟೆಲೆಕ್ಸ್ ರವಿಕುಮಾರ್ |

ರೋಹಿತ್ ಚಕ್ರತೀರ್ಥ ಅವರಿಗೆ ನಮಸ್ಕಾರಗಳು
ನಿಮ್ಮ ಲೇಖನ ‘ಮೋದಿ ಬಿರುಗಾಳಿಗೆ ಬೆತ್ತಲಾಗಿದ್ದಾರೆ ಬುದ್ದಿಜೀವಿಗಳು’ ಓದಿದೆ. ಸ್ವಲ್ಪ ನಿರಾಶೆಯಾಯಿತು. ನರೇಂದ್ರ ಮೋದಿ ಅವರ ‘ಮರುವಿಕ್ರಮ’ವನ್ನು ವಿಶ್ಲೇಷಿಸುವಾಗ ಇದಕ್ಕೆ ಕಾರಣವಾದ ಜನಪರ ಯೋಜನೆಗಳು, ರಾಜಕೀಯ ಧೋರಣೆ, ಆಡಳಿತಾತ್ಮಕ ಅಂಶಗಳು ಮತ್ತು ರಾಜಕೀಯ ವಿರೋಧಿಗಳ ಎಲ್ಲಾ ತಂತ್ರ, ಕುತಂತ್ರಗಳನ್ನು ಮೋದಿ ಹೇಗೆಲ್ಲಾ ಹಿಮ್ಮೆಟಿಸಿ ‘ವಿಜಯದ ಪರಾಕ್ರಮ’ ಮೆರೆದರು ಎಂಬುದನ್ನು ವಿಶ್ಲೇಷಣಾತ್ಮಕವಾಗಿ ಬರೆಯಬಹುದೆಂದು ನಿರೀಕ್ಷಿಸಿದ್ದ ನನಗೆ ಖಂಡಿತ ನಿರಾಶೆಯಾಯಿತು.

ನಿಮ್ಮ ‘ವಿದ್ವತ್ತು ಮತ್ತು ಒಳನೋಟ’ ಭಾರತದ ವರ್ತಮಾನದ ರಾಜಕೀಯ ನಾಗಾಲೋಟವನ್ನು ಸೈದ್ಧಾಂತಿಕ ಎದುರಾಳಿಗಳನ್ನು ಹೀಯಾಳಿಸುವಲ್ಲಿ ವ್ಯರ್ಥವಾಗಿ ಹೋಯಿತೇನೋ ಎಂದೆನಿಸುತ್ತಿದೆ. ಈ ಕಾರಣಕ್ಕಾಗಿಯೇ ನನಗೆ ನಿರಾಶೆಯಾಯಿತು ಎಂದು ಮೊದಲೆ ಹೇಳಿದ್ದು. ಮೋದಿ ಅವರ ವಿಜಯಯಾತ್ರೆಯನ್ನು ಜನಾಭಿಪ್ರಾಯಗಳಿಂದ ಕಟ್ಟಿಹಾಕುವಲ್ಲಿ ಅವರ ಸೈದ್ಧಾಂತಿಕ ಮತ್ತು ರಾಜಕೀಯ ಎದುರಾಳಿಗಳು ವಿಫಲರಾಗಿದ್ದಾರೆ ಎಂಬುದನ್ನು ನೀವು ಹೇಳುವುದಕ್ಕಿಂತಲೂ ಮಗತಟ್ಟೆಗಳಲ್ಲಿ ಕಂಡು ಕರಗಿದೆ.

ಆಡಳಿತ ವಿರೋಧಿ ಅಲೆಯನ್ನು ಹುಟ್ಟುಹಾಕುವಲ್ಲಿ ಪ್ರತಿಪಕ್ಷಗಳಾಗಲಿ, ಜನಾಭಿಪ್ರಾಯವನ್ನು ರೂಪಿಸುವಲ್ಲಿ ನೀವು ಗುರುತಿಸಲ್ಪಟ್ಟ ಬುದ್ದಿಜೀವಿಗಳಾಗಲಿ ವಿಫಲರಾಗಿದ್ದಾರೆ ನಿಜ. ಬಹುಶಃ ನಾನು ತಿಳಿದಂತೆ ಸುಳ್ಳು ಕಲೆ ಇವರಿಗೆ ಗೊತ್ತಿಲ್ಲದ ಕಾರಣ ಈ ಹಿನ್ನಡೆ ಅನುಭವಿಸಬೇಕಾಗಿ ನಿಮ್ಮ ನುಡಿ ನಾಲಿಗೆಗೆ ಈಡಾಗಬೇಕಾಗಿ ಬಂದಿದೆ. ನನ್ನ ಪ್ರಕಾರ ನರೇಂದ್ರ ಮೋದಿ ಅವರನ್ನು ಬೆತ್ತಲು (ವಿಷಯಾಧಾರಿತವಾಗಿ) ಮಾಡುವಲ್ಲಿ ಈ ನಾಡಿನ ಬುದ್ದಿಜೀವಿಗಳಿಗೆ ಸಾಧ್ಯವೆ ಆಗಲಿಲ್ಲ. ಇದೆಲ್ಲವನ್ನೂ ಮೆಟ್ಟಿ ಮೋದಿ ವಿಜಯಸಾಮ್ರಾಟರಾಗಿದ್ದು ಹೇಗೆ ಎಂಬುದನ್ನು ತಿಳಿಯಲು ನನಗಿನ್ನೂ ಕುತೂಹಲವಿದೆ.

ಮೋದಿ ಅವರನ್ನು ಸೈದ್ದಾಂತಿಕ ಕಾರಣಕ್ಕೆ, ಆಡಳಿತ ಧೋರಣೆ ಕಾರಣಕ್ಕೆ ವಿರೋಧಿಸಿದವರನ್ನು ಗುರಿಯಾಗಿಸಿಕೊಂಡ ನಿಮ್ಮ ಬರಹ ಒಂದು ಸೀಮಿತ ಚೌಕಟ್ಟಿನಲ್ಲಿ ನರಳುವಂತಿದೆ. ಮೋದಿ ಅವರು ಗೆದ್ದಾಗಿದೆ ನಿಜ, ಜನಮತವನ್ನು ಪ್ರಜಾಪ್ರಭುತ್ವ ಒಪ್ಪುವ ಎಲ್ಲರೂ ಗೌರವಿಸಲೇಬೇಕು. ಆದರೆ ಅವರ ಗೆಲುವನ್ನು ಇತರರ ಸೋಲಿಗೆ ಹೋಲಿಸುವಾಗ ಒಂದು ಘನತೆಯ ಸಂವೇದನೆ ಇಲ್ಲದೇ ಹೋದರೆ ಅದೊಂದು ‘ಅಸಾದಿಯ ಮಾರಿ ಬೈಗುಳ’ವಾಗಿ ರಂಜಿಸಬಹುದಷ್ಟೇ. ನಿಮ್ಮ ಈ ಲೇಖನ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವುಗಳಿಗೆ ತಾವು ಉತ್ತರಿಸಿದಲ್ಲಿ ನಾನು ಸೇರಿದಂತೆ ಈ ನಾಡಿನ ಬಹುತೇಕರು ಗೌರವಿಸುವ ಬುದ್ದಿಜೀವಿಗಳ, ಸಾಹಿತ್ಯ-ಸಾಂಸ್ಕೃತಿಕ ವಲಯದ ಪ್ರತಿನಿಧಿಗಳ ಕುರಿತಾದ ನನ್ನ ಅಭಿಪ್ರಾಯವನ್ನು ಮರು ವಿಮರ್ಶೆ ಮಾಡಿಕೊಳ್ಳಲು ಸಹಕಾರಿಯಾಗಬಹುದು.

ಹೆಚ್.ಎಸ್ ದೊರೆಸ್ವಾಮಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು, ಗಾಂಧಿವಾದದ ಕೊಂಡಿಯಂತೆ ಗೌರವಿಸುತ್ತಾ ಬರಲಾಗಿದೆ. ಇದು ನಿಜವೂ ಹೌದು. ಅವರನ್ನು ‘ಗಾಂಧಿವಾದಿ’ ಎಂಬ ಕಾರಣಕ್ಕೆ ನೀವು ಹಿರಿಯಜೀವದ ಹೋರಾಟವನ್ನು ಲೇವಡಿ ಮಾಡಿವಷ್ಟು ಅಸಹನೆಗೆ ನಿಮ್ಮನ್ನು ಒಡ್ಡಿಕೊಳ್ಳಲು ಹೇಗೆ ಸಾಧ್ಯವಾಯಿತು? ಗಿರೀಶ್ ಕಾರ್ನಾಡ್, ಚಂಪಾ, ಮಹಮ್ಮದ್ ಕುಂಞ, ಕುಂ.ವಿ, ಎಸ್.ಜಿ.ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ. ಹೆಚ್.ಎಸ್.ಶಿವಪ್ರಕಾಶ್, ರಾಜೇಂದ್ರ ಚೆನ್ನಿ, ವಿವೇಕ್ ಶಾನುಭಾಗ ಅವರನ್ನೆಲ್ಲಾ ನೀವೆ ನಿಮ್ಮ ಲೇಖನದಲ್ಲಿ ‘ಪ್ರಗತಿಪರಜೀವಪರ ಸಾಕ್ಷಿ ಪ್ರಜ್ಞೆ’ಗಳು ಎಂದು ಗುರುತಿಸಿದ್ದೀರ. ಹೀಗಿರುವಾಗ ಅವರೆಲ್ಲಾ ಸೈದ್ಧಾಂತಿಕ ನೆಲಗಟ್ಟಿನಲ್ಲಿ ಮೋದಿ ಅವರನ್ನು ವಿರೋಧಿಸಿದ ಮಾತ್ರಕ್ಕೆ ನಿಮ್ಮ ಲೇವಡಿ ಸ್ತುತಿಗೆ ಈಡಾಗಿದ್ದು ಮಾತ್ರ ಸೋಜಿಗದ ಸಂಗತಿ.

‘ಒಂದಾನೊಂದು ಕಾಲವಿತ್ತು. ವಿದ್ಯಾರ್ಥಿಗಳಾಗಿದ್ದ ನಾವೆಲ್ಲ ಶಾಲೆ-ಕಾಲೇಜುಗಳ ಭಾಷಾಪಠ್ಯದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪ್ರಶಸ್ತಿ ಸಿಕ್ಕಿದೆ ಎಂಬ ಲೆಕ್ಕದ ಮೇಲೆ ಸಾಹಿತಿಗಳ ಮೌಲ್ಯವನ್ನು ಮುಗ್ಧರಾಗಿ ಅಳೆಯುತ್ತಿದ್ದೆವು. ಕುಂವೀ, ಚಂಪಾ, ಬರಗೂರು, ಕಾರ್ನಾಡ ಎಂಬೆಲ್ಲ ಪ್ರಭೃತಿಗಳನ್ನು ನೋಡಿದರೆ ಆಹಾ ಅವರದದೆಂಥ ಉನ್ನತ ವ್ಯಕ್ತಿತ್ವ ಎಂದು ಮನಸ್ಸು ತಲೆಬಾಗುತ್ತಿತ್ತು. ಅವರು ಬರೆದದ್ದೆಲ್ಲ ಘನವಾದದ್ದೇ ಇರಬೇಕು, ಅವರ ಕತೆ-ಕವಿತೆ-ಕಾದಂಬರಿ-ನಾಟಕಗಳಲ್ಲಿ ಜೀವನದ ಪರಮ ರಹಸ್ಯಗಳೆಲ್ಲ ಅಡಗಿರಬೇಕು ಎಂದು ನಾವು ಭಾವಿಸಿದ್ದೆವು.’
ಎಂದು ಬರೆಯುವ ನಿಮ್ಮ ಗತ ನಂಬಿಕೆ ನಿಮ್ಮ ಹೊರತಾದ ಜನಸಮುದಾಯದಲ್ಲಿ ಈಗಲೂ ಸತ್ತಿಲ್ಲ. ಬಹುಶಃ ನಿಮ್ಮ ಜ್ಞಾನದ ಪರಿಧಿಯಲ್ಲಿ ಈ ಎಲ್ಲರನ್ನೂ ವಿಮರ್ಶೆಗೊಳಿಸಿದರೆ ತಪ್ಪೇನಿಲ್ಲ. ಇಲ್ಲಿ ಯಾರು ಪ್ರಶ್ನಾತೀತರಲ್ಲ. ಎಲ್ಲರೂ ವಿಮರ್ಶೆಗೆ ಒಳಪಟ್ಟು ಸೋಸಿ ಶುದ್ದರಾಗಬೇಕಾಗಿದೆ. ಆ ನಿಟ್ಟಿನಲ್ಲಿ ತಮ್ಮ ವಾದ, ವಿಚಾರಮಂಡನೆಯನ್ನು ಸ್ವಾಗತಿಸುತ್ತೇನೆ. ಆದರೆ ನೀವು ಇಲ್ಲಿ ಅವರ ವಿದ್ವತ್ತು, ಸಿದ್ಧಾಂತ ಪ್ರತಿಪಾದನೆಯಲ್ಲಿರಬಹುದಾದ ಲೋಪಗಳನ್ನು ಬಯಲು ಮಾಡದೆ ಕೇವಲ ನಿಂದನಾ ರೂಪದಲ್ಲಿ ಬೆತ್ತಲಾಗಿದ್ದಾರೆ ಎಂದು ಲೇವಡಿ ಮಾಡ ಹೊರಟಿರುವುದು ಕ್ಷುಲ್ಲಕ ತಿವಿತವಾಗಬಹುದು ಅಷ್ಟೆ. ಅದೊಂದು ಮೋದಿ ಗೆಲುವಿನ ವಿಶ್ಲೇಷಣೆ ಆಗಲಾರದು.

“ಪ್ರತಿಭಾ ನಂದಕುಮಾರ್, ಬಿ.ಟಿ. ಲಲಿತಾ ನಾಯಕ್, ಮೊಗಳ್ಳಿ ಗಣೇಶ, ಪುರುಷೋತ್ತಮ ಬಿಳಿಮಲೆ, ಜಿ. ರಾಜಶೇಖರ ಮೊದಲಾದವರೆಲ್ಲ ಆಗಿನ ಕಾಲಕ್ಕೆ ಪ್ರಶ್ನಾತೀತ ಸಾಹಿತಿಗಳು! ಇವರು ಬರೆದದ್ದನ್ನು ಕಣ್ಣಿಗೊತ್ತಿಕೊಂಡು ದೇವರ ಮನೆಯಲ್ಲಿಟ್ಟು ಪೂಜಿಸುವ ದೊಡ್ಡ ಓದುಗ ವರ್ಗವೇ ಇತ್ತು. ಇಷ್ಟಕ್ಕೂ ಇವರೆಲ್ಲ ಬರೆಯುತ್ತಿದ್ದದ್ದು ಏನಂತೀರಿ? ಕರುಳು ಕಿವುಚುವಂಥ ಬಡತನ, ಅನಕ್ಷರತೆ, ಅಸಮಾನತೆಯ ಕಣ್ಣೀರ ಕತೆಗಳು. ಹೆಣ್ಣಿನ ಮೇಲೆ ಪುರೋಹಿತಶಾಹಿಗಳು, ಬಡವರ ಮೇಲೆ ಬಂಡವಾಳಶಾಹಿಗಳು ಮಾಡುತ್ತಿದ್ದ ಕರ್ಣಕಠೋರ ಅತ್ಯಾಚಾರದ ಹಸಿಬಿಸಿ ವಿವರಗಳಿದ್ದ ಕಾವ್ಯಗಳು. ಈ ಬುದ್ಧಿವಂತರು ಬರೆದದ್ದನ್ನಷ್ಟೇ ಓದಿ ಬೆಳೆದ ನಮ್ಮಂಥ ತಿಳಿಮಿದುಳುಗಳಿಗೆ ಜಗತ್ತೆಲ್ಲ ಹೀಗೇ ಇದೆ; ಜಗತ್ತಲ್ಲಿ ಅನ್ಯಾಯ-ಅಸಮಾನತೆ ತಾಂಡವವಾಡುತ್ತಿದೆ; ಸಮಾಜದಲ್ಲಿ ಒಂದು ವರ್ಗ ಇನ್ನೊಂದು ವರ್ಗವನ್ನು ನಿತ್ಯನಿರಂತರವಾಗಿ ತುಳಿಯುತ್ತಲೇ ಇದೆ; ಹಿಂದೂ ಧರ್ಮದಲ್ಲಿರುವಷ್ಟು ಕಂದಾಚಾರ ಕಟ್ಟುಪಾಡು ಶೋಷಣೆ ಜಗತ್ತಿನ ಬೇರಾವ ಧರ್ಮ-ಜಾತಿಗಳಲ್ಲಿಲ್ಲ; ಸಮಾಜದ ಗಂಡಸರೆಲ್ಲರೂ ಸ್ತ್ರೀಯನ್ನು ಕಾಮದ ಕಣ್ಣಿಂದ ನೋಡುವುದಕ್ಕೆಂದೇ ಹುಟ್ಟಿಬಂದ ರಾಕ್ಷಸರು – ಮುಂತಾದ ಭ್ರಮೆಗಳಿದ್ದವು.

ನಾವು ಓದುತ್ತಿದ್ದ ಪ್ರಜಾವಾಣಿಯಂಥ ಪತ್ರಿಕೆಗಳು ಕೂಡ ಅದೇ ಅಭಿಪ್ರಾಯವನ್ನು ಗಟ್ಟಿ ಮಾಡುವಂತಿದ್ದವು. ಅಲ್ಲಿನ ಭಾನುವಾರದ ಪುರವಣಿಗಳಲ್ಲಿ ಕೂಡ ಮತ್ತೆ ಇದೇ ಸಾಕ್ಷಿಪ್ರಜ್ಞೆಗಳೇ ಬರೆಯುತ್ತಿದ್ದುದರಿಂದ ಜಗತ್ತಿಗಿನ್ನೊಂದು ಆಯಾಮವಿದೆ ಎಂಬುದನ್ನು ಯೋಚಿಸಲು ಅವಕಾಶವೇ ಇರಲಿಲ್ಲ’ ಇದು ನೀವೇ ಬರೆದ ನಿಮ್ಮ ಅಭಿಪ್ರಾಯ. ಇದರಲ್ಲಿ ಯಾವುದು ಬದಲಾಗಿದೆ ನೋಡಿ. ಇಂದಿಗೂ ಹೆಣ್ಣಿನ ಮೇಲೆ ಗಂಡು ಜೀವಿಯ ಅಟ್ಟಹಾಸ ನಿಂತಿಲ್ಲ. ಕಂದಾಚಾರ- ದಲಿತರ ಮೇಲಿನ ದೌರ್ಜನ್ಯ ಕೊನೆಗೊಂಡಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟಿ ರಕ್ತಪಾತ ನಡೆಸುವುದು ಇನ್ನಷ್ಟು ಮುಂದುವರೆದಿದೆ ಹೀಗಿರುವಾಗ ಯಾವುದು ಬದಲಾಗಿದೆ, ಸುಖೀ ಸಮಾಜವೊಂದು ನಿರ್ಮಾಣವಾಗಿದ್ದಾದರು ಎಲ್ಲಿ ಎಂಬುದನ್ನು ವಿವರಿಸಿದರೆ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಬಹುದು.

“ಸಂಕ್ರಾಂತಿ ನಾಟಕದಲ್ಲಿ ಕೆಳಜಾತಿಯ ಹುಡುಗನಿಗೆ ಬ್ರಾಹ್ಮಣರ ಹುಡುಗಿಯಿಂದ ಮೋಸವಾಗುವ ಸಾಧ್ಯತೆ ಇರುತ್ತದೆಯೇ ಹೊರತು ಬ್ರಾಹ್ಮಣರ ಹುಡುಗಿಗೆ ಕೆಳಜಾತಿಯ ಹುಡುಗ ಮೋಸ ಮಾಡುವ ಸಂದರ್ಭ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ! ಯಾಕೆಂದರೆ ಈ ಸಾಹಿತ್ಯ ಕೃತಿಗಳೆಲ್ಲವೂ ಒಂದು ಅಜೆಂಡಾ ಇಟ್ಟುಕೊಂಡೇ ಹೊರಡುತ್ತವೆ.” ಎಂದು ಅದರೊಳಗಿನ ‘ತಾಕಲಾಟ’, ‘ಅಜೆಂಡಾ’ ವನ್ನು ಗುರುತಿಸುವ ನೀವು ಸಮಾಜದಲ್ಲಿನ ಶತ ಶತಮಾನಗಳ ಕಾಲದಿಂದಲೂ ಈ ಜಾತಿ ತರಮದ ಸೃಷ್ಟಿಕರ್ತರು ಹೊಣೆಗಾರರು ಯಾರು ಎಂಬುದನ್ನು ಯಾಕೆ ಜಗತ್ತಿಗೆ ಸಾರಬಾರದು? ಸಾಮಾಜಿಕ ಜಾಲತಾಣದ ಪರಿಣಾಮ ಸುಳ್ಳುಗಳು ದೇಶವನ್ನು ಆಳುತ್ತಿವೆ. ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವ ಹೊತ್ತಿಗೆ ಸುಳ್ಳು ಮೇಲುಗೈ ಸಾಧಿಸಿ ಹೊರಟಿರುತ್ತದೆ. ಈಗ ಆಗಿರುವುದು ಇದೆ. ಈಗ ಸಾಹಿತಿಗಳು, ಪತ್ರಕರ್ತರು, ಬುದ್ದಿಜೀವಿಗಳು ಈಗ ನಿಜವಾದ ಮೋದಿ ವಿರೋಧಿಗಳು ಎಂಬ ಷರಾ ಬರೆದಿಟ್ಟು ನಿಂದನಾ ತಿರುಗಣಿಯಲ್ಲಿ ತಿರುವಿದ್ದೀರ.

ಇದನ್ನು ಓದಿ: ಎಮರ್ಜೆನ್ಸಿ ಭಟ್ಟನ ದುಷ್ಟಾಯಣ

ಮೋದಿ ಅವರು ಮರು ಆಯ್ಕೆಗೊಂಡ ಮಾತ್ರಕ್ಕೆ ಎಲ್ಲವೂ ಇಲ್ಲಿಗೆ ಮುಗಿದು ಹೋಯಿತು, ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ತಾಕೀತು ಮಾಡ ಹೊರಟಿರುವ ನೀವು ದೇಶದ ಧರ್ಮಗ್ರಂಥ ‘ಸಂವಿಧಾನ’ಕ್ಕೆ ನೆತ್ತಿಯೂರಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬಹುದಾದ ಸಲಹೆಯಾದರೂ ಏನು ಎಂಬುದನ್ನು ಬರೆದಿದ್ದರೆ ಚೆನ್ನಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....