Homeಮುಖಪುಟಸಿಂಗ್ ವಿರುದ್ಧ ಪುರಾವೆಗಳಿದ್ದರೆ ಬಹಿರಂಗಪಡಿಸಿ, ಇಲ್ಲವಾದರೆ ರಾಜಕೀಯದಿಂದ ದೂರವಿರಿ: ಕೇಂದ್ರಕ್ಕೆ ಎಎಪಿ ನಾಯಕಿ ಸವಾಲು

ಸಿಂಗ್ ವಿರುದ್ಧ ಪುರಾವೆಗಳಿದ್ದರೆ ಬಹಿರಂಗಪಡಿಸಿ, ಇಲ್ಲವಾದರೆ ರಾಜಕೀಯದಿಂದ ದೂರವಿರಿ: ಕೇಂದ್ರಕ್ಕೆ ಎಎಪಿ ನಾಯಕಿ ಸವಾಲು

- Advertisement -
- Advertisement -

ದೆಹಲಿಯಲ್ಲಿ ಈಗ ರದ್ದುಗೊಂಡಿರುವ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬುಧವಾರ ಎಎಪಿ ಶಾಸಕ ಸಂಜಯ್ ಸಿಂಗ್ ಅವರ ಬಂಧನವಾಗಿದೆ. ಈ ವಿಚಾರವಾಗಿ ಬಿಜೆಪಿ ಪಕ್ಷದ ಪ್ರಧಾನ ಕಚೇರಿ ಎದುರು ಎಎಪಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಹಲವಾರು ಎಎಪಿ ಕಾರ್ಯಕರ್ತರು ಬಿಜೆಪಿ ಕಚೇರಿ ಎದುರು ಜಮಾಯಿಸಿ, ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಸಿಂಗ್ ಬಿಡುಗಡೆಗೆ ಒತ್ತಾಯಿಸಿದರು. ಎಎಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು, ಆನಂತರ ಅವರಲ್ಲಿ ಕೆಲವರನ್ನು ಬಂಧಿಸಲಾಯಿತು.

ಅದಾನಿ ಗ್ರೂಪ್‌ಗೆ ಸಂಬಂಧಿಸಿದ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಕಾರಣ ಜಾರಿ ನಿರ್ದೇಶನಾಲಯ ಸಿಂಗ್ ಅವರನ್ನು ಬಂಧಿಸಿದೆ ಎಂದು ಎಎಪಿ ಆರೋಪಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ಎಎಪಿ ನಾಯಕ ಅತಿಶಿ, ”ಕಳೆದ 15 ತಿಂಗಳಲ್ಲಿ ಎಎಪಿ ನಾಯಕರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಇಡಿ ಮತ್ತು ಸಿಬಿಐನ 500ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಆದರೆ ಅವರ ವಿರುದ್ಧ ‘ಒಂದು ಸಾಕ್ಷ್ಯವೂ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ.

”ಅವರು ಮನೀಶ್ ಸಿಸೋಡಿಯಾ ಅವರ ನಿವಾಸ, ಕಚೇರಿಗಳು ಮತ್ತು ಇತರ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದರು ಆದರೆ ಅವರಿಗೆ ಒಂದು ಪೈಸೆಯ ಭ್ರಷ್ಟಾಚಾರದ ಪುರಾವೆಗಳು ಸಿಗಲಿಲ್ಲ. ಮತ್ತು ಈಗ, ಸಂಜಯ್ ಸಿಂಗ್ ಅವರನ್ನು ಗುರಿಯಾಗಿಸಲಾಗಿದೆ” ಎಂದು ಅತಿಶಿ ಹೇಳಿದರು.

”ಇಡಿ ಅಧಿಕಾರಿಗಳು ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ಮಾಡಿದರು ಆದರೆ ಅವರಿಗೆ ಏನೂ ಸಿಗಲಿಲ್ಲ. ಅವರು ನಿರಂತರವಾಗಿ ಕೇಂದ್ರದ ಭ್ರಷ್ಟಾಚಾರದ ವಿಷಯಗಳನ್ನು ಪ್ರಸ್ತಾಪಿಸಿದ ಕಾರಣ ಅವರನ್ನು ಬಂಧಿಸಿದರು” ಎಂದು ಅವರು ಹೇಳಿದರು.

”ನಮ್ಮ ನಾಯಕರ ವಿರುದ್ಧ ಯಾವುದೇ ಪುರಾವೆಗಳಿದ್ದರೆ, ಕೇಂದ್ರವು ಅದನ್ನು “ಸಾರ್ವಜನಿಕಗೊಳಿಸಬೇಕು” ಎಂದು ಅತಿಶಿ ಹೇಳಿದರು.

”ಸಂಜಯ್ ಸಿಂಗ್ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದರೆ, ಅವರು ಅದನ್ನು ಸಾರ್ವಜನಿಕಗೊಳಿಸಲಿ ಅಥವಾ ಅವರು ರಾಜಕೀಯವನ್ನು ತೊರೆಯಲಿ ಎಂದು ನಾನು ಬಿಜೆಪಿಗೆ ಸವಾಲು ಹಾಕಲು ಬಯಸುತ್ತೇನೆ. ಸಂಜಯ್ ಸಿಂಗ್ ಭೇಟಿ ನೀಡಿದ ಸ್ಥಳಗಳಿಗೆ ಕೇಂದ್ರ ಸರ್ಕಾರವು ತಮ್ಮ ಅಧಿಕಾರಿಗಳನ್ನು ಕಳುಹಿಸಬಹುದು ಮತ್ತು ಅವರ ವಿರುದ್ಧ ಏನೂ ಸಿಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಸಂಜಯ್ ಸಿಂಗ್ ಬಂಧನ: ಬಿಜೆಪಿ ಕಚೇರಿ ಹೊರಗೆ ಎಎಪಿ ಪ್ರತಿಭಟನೆ; ಮೋದಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...