Homeಮುಖಪುಟಬಲಪಂಥೀಯ ನಿರೂಪಕ ಸುಧೀರ್ ಚೌಧರಿಯೊಂದಿಗೆ ₹15 ಕೋಟಿಗೆ ಒಪ್ಪಂದ ಮಾಡಿಕೊಂಡ ಡಿಡಿ ನ್ಯೂಸ್!

ಬಲಪಂಥೀಯ ನಿರೂಪಕ ಸುಧೀರ್ ಚೌಧರಿಯೊಂದಿಗೆ ₹15 ಕೋಟಿಗೆ ಒಪ್ಪಂದ ಮಾಡಿಕೊಂಡ ಡಿಡಿ ನ್ಯೂಸ್!

ಸುಲಿಗೆ ಮತ್ತು ಸುಳ್ಳು ಸುದ್ದಿ ಹರಡಿ 2 ಬಾರಿ ಜೈಲುಪಾಲಾಗಿದ್ದ ಸುಧೀರ್ ಚೌಧರಿ!

- Advertisement -
- Advertisement -

ನಕಲಿ ಸುದ್ದಿ ಹರಡಿದ, ಮಾಧ್ಯಮ ಸುಲಿಗೆಗಾಗಿ ಈ ಹಿಂದೆ ಎರಡು ಬಾರಿ ಜೈಲು ಶಿಕ್ಷೆಗೆ ಒಳಗಾದ ವಿವಾದಾತ್ಮಕ ಸುದ್ದಿ ನಿರೂಪಕ ಸುಧೀರ್ ಚೌಧರಿ ಅವರೊಂದಿಗೆ ಕೇಂದ್ರ ಸರ್ಕಾರದ ಅಡಿಯಲ್ಲಿರುವ ದೂರದರ್ಶನವು ವಾರ್ಷಿಕ 15 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾಧ್ಯಮ ತಂಡದಿಂದ ನೇರವಾಗಿ ಮೇಲ್ವಿಚಾರಣೆ ಮಾಡಲ್ಪಡುವ ದೂರದರ್ಶನ ನ್ಯೂಸ್ (ಡಿಡಿ ನ್ಯೂಸ್), ಸುಧೀರ್ ಚೌಧರಿಯಂತಹ ಕಳಂಕಿತ ಪತ್ರಕರ್ತರೊಂದಿಗೆ ದೈನಂದಿನ ಸುದ್ದಿ ಪ್ರಸ್ತುತಿ ಒಪ್ಪಂದವನ್ನು ಮಾಡಿರುಕೊಂಡುರಿವ ಬಗ್ಗೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲಪಂಥೀಯ ನಿರೂಪಕ

ಡಿಡಿ ನ್ಯೂಸ್‌ನ ಮಂಡಳಿಯು ನಿರೂಪಕ ಸುಧೀರ್ ಚೌಧರಿ ಅವರು ಮಾಡಿದ ಒಪ್ಪಂದದಂತೆ, ಅವರು ಡಿಡಿ ನ್ಯೂಸ್‌ನಿಂದ ಒಂದು ಗಂಟೆಯ ಅವಧಿಯ ವಿಶೇಷ ಕಾರ್ಯಕ್ರಮವನ್ನು ವಾರಕ್ಕೆ 5 ದಿನಗಳ ಕಾಲ  ನಿರ್ಮಿಸಬೇಕಾಗಿದೆ. ಇದಕ್ಕಾಗಿ ವಾರ್ಷಿಕ ರೂ. 15 ಕೋಟಿಯನ್ನು ಅವರಿಗೆ ನಿಗದಿಪಡಿಸಲಾಗಿದ್ದು,, ಈ ಮೊತ್ತದಲ್ಲಿ ಜಿಎಸ್‌ಟಿ ಕೂಡಾ ಸೇರಿದೆ. ಅಷ್ಟೆ ಅಲ್ಲದೆ, ಈ ಮೊತ್ತವು ಪ್ರತಿ ವರ್ಷ 10% ದರದಲ್ಲಿ ಹೆಚ್ಚಳಕ್ಕೆ ಒಳಪಟ್ಟಿರುತ್ತದೆ ಎಂದು ಒಪ್ಪಂದ ಸೂಚಿಸಿದೆ. ಬಲಪಂಥೀಯ ನಿರೂಪಕ

“ಪುನರ್ರಚಿಸಲಾದ ಮಾತುಕತೆ ಸಮಿತಿಯು ಫೆಬ್ರವರಿ 6 ರಿಂದ 20, 2025 ರ ನಡುವೆ ಐದು ಬಾರಿ ಸಭೆ ಸೇರಿ ಸುಧೀರ್ ಚೌಧರಿ ಪ್ರತಿನಿಧಿಸುವ ನಿರ್ಮಾಣ ಕಂಪನಿ M/s ESSPRIT ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಮಾತುಕತೆ ನಡೆಸಿತು. ಹಾರ್ಡ್‌ವೇರ್, ಸ್ಟುಡಿಯೋ ಬಳಕೆಯ ವೆಚ್ಚ, ಸ್ಥಳ, ಪೀಠೋಪಕರಣಗಳು, ಸುದ್ದಿ ಸಂಸ್ಥೆ ಶುಲ್ಕಗಳು ಮತ್ತು ಇತರ ವಿವಿಧ ವೆಚ್ಚಗಳಂತಹ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರಸಾರ ಭಾರತಿಯಿಂದ ಭರಿಸಬೇಕಾದ ಉತ್ಪಾದನಾ ವೆಚ್ಚದ ಕುರಿತು ಸರಣಿ ಚರ್ಚೆಗಳ ನಂತರ, ಎರಡೂ ಕಡೆಯವರು ಉತ್ಪಾದನಾ ವೆಚ್ಚವನ್ನು ಒಪ್ಪಿಕೊಂಡವು” ಎಂದು ದೂರದರ್ಶನದಂತಹ ಸಾರ್ವಜನಿಕ ಪ್ರಸಾರ ಸಂಸ್ಥೆಗಳನ್ನು ನಿಯಂತ್ರಿಸುವ ಪ್ರಸಾರ ಭಾರತಿ ಮಂಡಳಿಯ ಕಾರ್ಯಸೂಚಿ ಹೇಳುತ್ತದೆ.

“ಡಿಡಿ ನ್ಯೂಸ್‌ನಲ್ಲಿ ವಾರಕ್ಕೆ 5 ದಿನಗಳು (ಒಂದು ವರ್ಷದಲ್ಲಿ ಒಟ್ಟು 260 ಸಂಚಿಕೆಗಳು) ಒಂದು ಗಂಟೆಯ ವಿಶೇಷ ಕಾರ್ಯಕ್ರಮಗಳನ್ನು ವರ್ಷಕ್ಕೆ ರೂ.15.00 ಕೋಟಿ ಮತ್ತು ಜಿಎಸ್‌ಟಿಯಲ್ಲಿ ಪ್ರಸಾರ ಮಾಡಲಾಗುತ್ತದೆ” ಎಂದು ಪ್ರಸಾರ ಭಾರತಿ ಮಂಡಳಿಯ ಕಾರ್ಯಸೂಚಿ ಹೇಳಿದೆ. ವಾರ್ಷಿಕವಾಗಿ 260 ಸಂಚಿಕೆಗಳನ್ನು ಉತ್ಪಾದಿಸಲು ಒಪ್ಪಿದ ವೆಚ್ಚವನ್ನು 2012 ರಲ್ಲಿ ನಿಗದಿಪಡಿಸಿದ ಸಿಬಿಸಿ-ಅನುಮೋದಿತ ದರಗಳಲ್ಲಿ ಪರಿಗಣಿಸಲಾಗಿದೆ ಎಂದು ಅದು ಹೇಳಿದೆ.

ಈ ಮಧ್ಯೆ, ಸುಧೀರ್ ಚೌಧರಿ ಅವರ ಕಂಪನಿಯಾದ ಮೆಸರ್ಸ್ ಇಎಸ್‌ಎಸ್‌ಪಿಆರ್‌ಐಟಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಬಗ್ಗೆ ಯಾವುದೇ ಸಾರ್ವಜನಿಕ ದಾಖಲೆಗಳು ಮತ್ತು ವಿವರಗಳು ಲಭ್ಯವಿಲ್ಲ ಎಂದು pgurus.com ವರದಿ ಮಾಡಿದೆ.

ಎರಡು ಬಾರಿ ಜೈಲು ಶಿಕ್ಷೆಗೊಳಗಾಗಿದ್ದ ನಿರೂಪಕ ಸುಧೀರ್ ಚೌಧರಿ

2008 ರಲ್ಲಿ, ಶಾಲಾ ಶಿಕ್ಷಕಿಯೊಬ್ಬರ ವಿರುದ್ಧ ನಕಲಿ ವರದಿಯನ್ನು ಪ್ರಕಟಿಸಿದ್ದಕ್ಕಾಗಿ ಸುಧೀರ್ ಚೌಧರಿ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಸುದ್ದಿ ಮಾಡುವ ವೇಳೆ, ಶಿಕ್ಷಕಿಯು ಶಾಲಾ ಹುಡುಗಿಯರ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಸುಧೀರ್‌ ಆರೋಪಿಸಿದ್ದರು. ಆ ಸಮಯದಲ್ಲಿ ಸುಧೀರ್ ಚೌಧರಿ ಅವರು ಲೈವ್ ಇಂಡಿಯಾ ಟಿವಿ ಚಾನೆಲ್‌ನ ಸಂಪಾದಕರಾಗಿದ್ದರು. ಅವರ ಈ ನಕಲಿ ವರದಿಗಾಗಿ ಅವರ ಟಿವಿ ಚಾನೆಲ್ ಅನ್ನು ಕೆಲವು ವಾರಗಳ ಕಾಲ ನಿಷೇಧಿಸಲಾಗಿತ್ತು ಮತ್ತು ಸುಧೀರ್ ಚೌಧರಿ ಅವರನ್ನು ಜೈಲಿಗೆ ಹಾಕಲಾಯಿತು.

2012 ರಲ್ಲಿ, ಕಲ್ಲಿದ್ದಲು ಹಗರಣದಲ್ಲಿ ಕಂಪನಿಯ ಪಾತ್ರವನ್ನು ಮುಚ್ಚಿಹಾಕಿದ್ದಕ್ಕಾಗಿ ಜಿಂದಾಲ್ ಗ್ರೂಪ್‌ನಿಂದ ರೂ.100 ಕೋಟಿ ಸುಲಿಗೆ ಮಾಡಲು ಪ್ರಯತ್ನಿಸಿದ್ದ ಸುಧೀರ್ ಚೌಧರಿ ಅವರನ್ನು ಮತ್ತೆ ಜೈಲಿಗೆ ಹಾಕಲಾಗಿತ್ತು. ಆ ಸಮಯದಲ್ಲಿ ಸುಧೀರ್ ಚೌಧರಿ ಅವರು ಸುಭಾಷ್ ಚಂದ್ರ ಅವರ ಜೀ ಗ್ರೂಪ್‌ನ ಮುಖ್ಯಸ್ಥರಾಗಿದ್ದರು. ಈ ವೇಳೆ ಅವರು ಜಿಂದಾಲ್ ಗ್ರೂಪ್‌ನಿಂದ ರೂ.100 ಕೋಟಿ ಸುಲಿಗೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಸಿಕ್ಕಿಬಿದ್ದಿದ್ದರು.

ಈ ಪ್ರಕರಣದಲ್ಲಿ ಚೌಧರಿ ಮತ್ತು ಜೀ ಬಿಸಿನೆಸ್ ಸಂಪಾದಕ ಸಮೀರ್ ಅಹ್ಲುವಾಲಿಯಾ ಅವರನ್ನು ಬಂಧಿಸಿ ತಿಂಗಳುಗಟ್ಟಲೆ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಜಿಂದಾಲ್ ಗ್ರೂಪ್ ಮುಖ್ಯಸ್ಥ ನವೀನ್ ಜಿಂದಾಲ್ ಸಲ್ಲಿಸಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಕ್ರಮ ಈ ಕೈಗೊಂಡಿದ್ದರು. ಜೊತೆಗೆ ಜೀ ಗ್ರೂಪ್‌ನ ಸುಭಾಷ್ ಚಂದ್ರ ಅವರನ್ನು ಕೂಡಾ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು.

ಭ್ರಷ್ಟ ಮತ್ತು ಕಳಂಕಿತ ನಿರೂಪಕನೊಂದಿಗೆ ಪ್ರಸಾರ ಭಾರತಿ 15 ಕೋಟಿ ರೂ.ಗಳಿಗೆ ಒಪ್ಪಂದ ಮಾಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಇದರ ಬಗ್ಗೆ ಧ್ವನಿಯೆತ್ತಿದ್ದಾರೆ.

“ಎರಡು ಜೈಲು ಶಿಕ್ಷೆಯನ್ನು ಎದುರಿಸಿದ ಕಳಂಕಿತ ಪತ್ರಕರ್ತ ಸುಧೀರ್ ಚೌಧರಿ ಜೊತೆ ಸರ್ಕಾರಿ ಟಿವಿ ವಾರ್ಷಿಕ ರೂ.15 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ! ದೂರದರ್ಶನವು ನಮ್ಮ ಹಣದಲ್ಲಿ ನಡೆಯುತ್ತದೆ. ಗಂಭೀರ ಆರೋಪಗಳ ಮೇಲೆ ಎರಡು ಬಾರಿ ಜೈಲಿನಲ್ಲಿದ್ದು ಪ್ರತಿದಿನ ದ್ವೇಷವನ್ನು ಹರಡುವ ವ್ಯಕ್ತಿಗೆ ಪಾವತಿಸಲು ಅದನ್ನು ಲೂಟಿ ಮಾಡಲಾಗುತ್ತಿದೆ.” ಎಂದು ಪ್ರಶಾಂತ್ ಭೂಷಣ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಚಿನ್ನ ಕಳ್ಳಸಾಗಣೆ ಆರೋಪಿ ರನ್ಯಾ ರಾವ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್

ಚಿನ್ನ ಕಳ್ಳಸಾಗಣೆ ಆರೋಪಿ ರನ್ಯಾ ರಾವ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...