Homeಮುಖಪುಟಅಪಘಾತದಲ್ಲಿ ರಿಷಬ್ ಪಂತ್‌ಗೆ ತೀವ್ರ ಗಾಯ: ಸುಟ್ಟು ಕರಕಲಾದ ಕಾರು

ಅಪಘಾತದಲ್ಲಿ ರಿಷಬ್ ಪಂತ್‌ಗೆ ತೀವ್ರ ಗಾಯ: ಸುಟ್ಟು ಕರಕಲಾದ ಕಾರು

- Advertisement -
- Advertisement -

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಉತ್ತರಖಂಡ ರಾಜ್ಯದಲ್ಲಿ ಕಾರು ಚಲಾಯಿಸುತ್ತಿದ್ದಾಗ ಡಿವೈಡರ್‌ಗೆ ನುಗ್ಗಿದ ಪರಿಣಾಮ ಭಾರೀ ಅಪಘಾತ ಸಂಭವಿಸಿದೆ. ತೀವ್ರ ಗಾಯಗಳಾಗಿರುವ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಈ ನಡುವೆ ಅವರ ಮರ್ಸಿಡೆಸ್ ಬೆಂಚ್ ಕಾರು ಸುಟ್ಟು ಕರಕಲಾಗಿದೆ.

ಇಂದು ಬೆಳಿಗ್ಗೆ ನವದೆಹಲಿಯಿಂದ ಉತ್ತರಖಂಡಕ್ಕೆ ಪ್ರಯಾಣಿಸುತ್ತಿದ್ದಾಗ ಉತ್ತರಾಖಂಡದ ರೂರ್ಕಿ ಬಳಿ ಅಪಘಾತ ಸಂಭವಿಸಿದೆ. ರಿಷಬ್ ಪಂತ್ ಅವರೆ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ವೇಗವಾಗಿ ಚಲಿಸುವ ಕಾರು ಡಿವೈಡರ್‌ ಹಾರಿ ಹೋಗುವುದು ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ.

ಗಾಯಗೊಂಡ ಅವರನ್ನು ಸಕ್ಷಮ್ ಆಸ್ಪತ್ರೆ ಮಲ್ಟಿಸ್ಪೆಷಾಲಿಟಿ ಮತ್ತು ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಿಷಬ್ ಅವರ ಹಣೆಗೆ ಪೆಟ್ಟಾಗಿದೆ. ಅವರ ಬಲ ಮೊಣಕಾಲು ಮತ್ತು ಪಾದದ ಬೆರಳಿಗೆ ಗಾಯವಾಗಿದೆ. ಬೆನ್ನಿನ ಮೇಲೆ ತರಚಿದ ಗಾಯಗಳಾಗಿವೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಡ್ರೈವಿಂಗ್ ಮಾಡುವಾಗ ಪಂತ್ ತೂಕಡಿಸಿದ ಪರಿಣಾಮ ಆಯಾ ತಪ್ಪಿ ಅಪಘಾತ ಸಂಭವಿಸಿದೆ. ಆನಂತರ ವಾಹನಕ್ಕೆ ಬೆಂಕಿ ಹೊತ್ತಿಕೊಂಡಾಗ ತಪ್ಪಿಸಿಕೊಳ್ಳಲು ಕಾರಿನ ವಿಂಡ್‌ಸ್ಕ್ರೀನ್ ಅನ್ನು ಹೊಡೆದಿದ್ದಾರೆ. ಕಾರಿನಲ್ಲಿ ಪಂತ್ ಒಬ್ಬರೆ ಇದ್ದರು ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.

ರಿಷಬ್ ಪಂತ್ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯವೇ ಭರಿಸಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಅಲ್ಲದೆ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಅಗತ್ಯ ಬಿದ್ದರೆ ಏರ್ ಆಂಬ್ಯುಲೆನ್ಸ್ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಜಕೀಯ ಕ್ರಾಂತಿಗೆ ಕಹಳೆ ನಾಂದಿ ಮೊಳಗಬೇಕಿರುವ ಸಂಧಿಕಾಲದಲ್ಲಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...