ಹೀಗಿದೆ ಆರೆಸೆಸ್

- Advertisement -
- Advertisement -

ಆರ್.ಎಸ್.ಎಸ್. ಬೇಡಿಕೆ: “ಭಾರತೀಯ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿಯ ಅನುಷ್ಠಾನ” – ಹಾಗಾದರೆ ದಲಿತರು ಮತ್ತು ಮಹಿಳೆಯರ ಗತಿಯೇನು? ಭಾರತ ಸಂವಿಧಾನದ ಮೇಲಿರುವ ಆರ್.ಎಸ್.ಎಸ್. ನಿಷ್ಠೆಯನ್ನು ಗೋಲ್ವಾಲ್ಕರ್ ಅವರ “ಚಿಂತನಾಗುಚ್ಛ” ಕೃತಿಯಲ್ಲಿನ ವಿವರ ಹೇಳಿಕೆಗಳಿಂದ ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಈ ಕೃತಿ ಕೇವಲ ಆಯ್ದ ಲೇಖನಗಳ ಸಂಕಲನವಷ್ಟೇ ಅಲ್ಲ, ಬದಲಿಗೆ ಆರ್.ಎಸ್.ಎಸ್. ಸ್ವಯಂಸೇವಕರ ಪಾಲಿಗೆ ಒಂದು ಪವಿತ್ರ ಗ್ರಂಥ ಕೂಡ.
“ನಮ್ಮ ಸಂವಿಧಾನ ವಿವಿಧ ಪಾಶ್ಚಿಮಾತ್ಯ ರಾಷ್ಟ್ರಗಳ ಸಂವಿಧಾನಗಳಿಂದ ಆಯ್ದುಕೊಂಡ ವಿವಿಧ ಲೇಖನಗಳು ಮತ್ತು ಅನುಚ್ಛೇದದ ತುಣುಕುಗಳ ಸಂಚಯಿತ ರೂಪ. ಇದು ನಮ್ಮದೆಂದು ಹೇಳಿಕೊಳ್ಳಲು ನಿಚ್ಚಳವಾದ ಯಾವ ಹೆಗ್ಗಳಿಕೆಯೂ ಇಲ್ಲ. ನಮ್ಮ ರಾಷ್ಟ್ರ ಬದುಕಿನ ಧ್ಯೇಯವನ್ನಾಗಲಿ ಅಥವಾ ನಮ್ಮ ಬದುಕಿಗಿರುವ ಮಾರ್ಗದರ್ಶಿ ತತ್ತ್ವವನ್ನಾಗಲಿ ತೆರೆದು ತೋರುವ ಯಾವ ಮಾರ್ಗದರ್ಶಕ ಸಿದ್ಧಾಂತಗಳ ಒಂದು ಪದವಾದರೂ ಅದರಲ್ಲಿದೆಯೆ?
ವಾಸ್ತವ ಸಂಗತಿಯೆಂದರೆ, ಭಾರತ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿ ಅಥವಾ ಮನುಸಂಹಿತೆ ಅಥವಾ ಮನುಧರ್ಮಶಾಸ್ತ್ರವಿರಬೇಕೆಂದು ಆರ್.ಎಸ್.ಎಸ್. ಅಪೇಕ್ಷಿಸಿತ್ತು. ಎಲ್ಲರೂ ತಿಳಿದಿರುವಂತೆ ಶೂದ್ರರು, ದಲಿತರು ಮತ್ತು ಮಹಿಳೆಯರ ಕುರಿತಂತೆ, ಅತ್ಯಂತ ಅವಹೇಳನಕಾರಿ ಮತ್ತು ಅಮಾನುಷ ಪ್ರಸ್ತಾಪಗಳ ಉಲ್ಲೇಖವಿರುವ ಮನುಸ್ಮøತಿ ಅವರ ಅಪೇಕ್ಷೆಯ ಸಂವಿಧಾನವಾಗಿತ್ತು. ಸಂಸದೀಯ ಸಭೆ, ಸಂವಿಧಾನ ರಚನೆ ಮತ್ತು ಮಂಡನೆಯ ಕಾರ್ಯವನ್ನು ಅಂತಿಮಗೊಳಿಸಿದಾಗ, ಆರ್.ಎಸ್.ಎಸ್ ತನ್ನ ಅಸಮಾಧಾನ ಮತ್ತು ಬೇಸರವನ್ನು ವ್ಯಕ್ತಪಡಿಸಿತು. ನವೆಂಬರ್ 30, 1949ರ ಆರ್ಗನೈಸರ್ ಪತ್ರಿಕೆಯ ಸಂಪಾದಕೀಯದಲ್ಲಿ ತನ್ನ ಆಕ್ಷೇಪವನ್ನು ಸ್ಪಷ್ಟವಾಗಿ ತಿಳಿಸಿದೆ.
“ಆದರೆ ನಮ್ಮ ಸಂವಿಧಾನದಲ್ಲಿ, ಪ್ರಾಕ್ತನ ಭಾರತದಲ್ಲಿ ಆಗಿರಬಹುದಾದ ಒಂದು ಅನನ್ಯ ಸಂವಿಧಾನಾತ್ಮಕ ಬೆಳವಣಿಗೆಯ ವಿವರಗಳಾಗಲಿ, ಉಲ್ಲೇಖಗಳಾಗಲಿ ಲವಲೇಶವಿಲ್ಲ. ಸ್ಪಾರ್ಟ್ ದ ಲೈಕರ್ಗಸ್ (820 ಬಿ.ಸಿ) ಅಥವಾ ಪರ್ಷಿಯಾದ ಸೊಲೊನ್ (640 ಬಿ.ಸಿ) ಅವರುಗಳಿಗೂ ಪೂರ್ವದಲ್ಲೇ ಮನುಸ್ಮøತಿ ರಚಿತವಾಗಿತ್ತು. ಇಂದಿನವರೆಗೂ ಮನುಸ್ಮøತಿಯಲ್ಲಿ ಪ್ರತಿಪಾದಿತವಾಗಿರುವ ವಿಧಿ ನಿಬಂಧನೆಗಳು ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿವೆ ಹಾಗೂ ಸ್ವಯಂಪ್ರೇರಿತ ನಿಷ್ಠೆ ಮತ್ತು ಅನುಸರಣೀಯ ಗುಣವನ್ನು ಪ್ರೇರೇಪಿಸಿದೆ. ಆದರೆ ಈ ಯಾವ ವಿಚಾರವು ನಮ್ಮ ಸಂವಿಧಾನದ ಪಂಡಿತೋತ್ತಮರಿಗೆ ಅರ್ಥವಾಗುವುದಿಲ್ಲ. ಹಾಗೆ ಅವರಿಗೆ ಮುಖ್ಯವೂ ಅಲ್ಲ”
ಸ್ವತಂತ್ರ ಭಾರತದಲ್ಲಿ ಮನುಧರ್ಮಶಾಸ್ತ್ರವನ್ನು ಅಂಗೀಕರಿಸಿ, ಅಧಿಕೃತವಾಗಿ ಘೋಷಿಸಬೇಕೆಂದು ಆರ್.ಎಸ್.ಎಸ್. ಒತ್ತಾಯಿಸುತ್ತಿರುವುದಕ್ಕೆ ನಿಜವಾದ ಕಾರಣವೆಂದರೆ, ತಮ್ಮ ಮಾರ್ಗದರ್ಶಿ, ತತ್ವಜಿಜ್ಞಾಸು ಮತ್ತು ವಿಚಾರ ಉದ್ದೀಪಕರಾಗಿರುವ ವಿ.ಡಿ.ಸಾವರ್ಕರ್ ಅವರನ್ನು ನಿಷ್ಠೆಯಿಂದ ಹಿಂಬಾಲಿಸುತ್ತಿರುವುದು. ಸಾವರ್ಕರರ ಮೇರೆಗೆ ;
“ನಮ್ಮ ಹಿಂದು ರಾಷ್ಟ್ರದ ಪವಿತ್ರ ಕೃತಿಗಳಾದ ವೇದಗಳ ಅನಂತರ ಅತ್ಯಂತ ಪೂಜ್ಯನೀಯ ಮತಧರ್ಮಶಾಸ್ತ್ರವೆಂದರೆ ‘ಮನುಸ್ಮøತಿ’ ಮಾತ್ರ. ಅಲ್ಲದೆ ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕøತಿ, ಸಂಪ್ರದಾಯ, ಚಿಂತನೆ ಮತ್ತು ಆಚರಣೆಯ ಮೂಲ ತಳಹದಿ ‘ಮನುಸ್ಮøತಿ’ಯಾಗಿದೆ. ಅಧ್ಯಾತ್ಮ ಮತ್ತು ದೈವಿಕತೆ ಕೇಂದ್ರಿತ ನಮ್ಮ ದೇಶ ಸಾಧಿಸಿರುವ ಮುನ್ನಡೆಯನ್ನು ಈ ಕೃತಿ ಸಂಕೇತರೂಪದಲ್ಲಿ ತನ್ನೊಡಲಲ್ಲಿ ಇರಿಸಿಕೊಂಡಿದೆ. ಇಂದಿಗೂ ಕೋಟ್ಯಾಂತರ ಮಂದಿ ಹಿಂದುಗಳು ತಮ್ಮ ಬದುಕಿನಲ್ಲಿ ಮತ್ತು ಆಚರಣೆಗಳಲ್ಲಿ ಪಾಲಿಸುತ್ತಿರುವ ವಿಧಿನಿಯಮಗಳು ‘ಮನುಸ್ಮøತಿ’ ಯನ್ನು ಆಧರಿಸಿವೆ. ಇಂದು ಹಿಂದು ಮತೀಯರ ಕಾನೂನು ಎಂದರೆ ಅದು ‘ಮನುಸ್ಮøತಿ’ ಮಾತ್ರ
ಆರ್.ಎಸ್.ಎಸ್. ದೃಷ್ಟಿಯಲ್ಲಿ ಹಿಂದು ರಾಷ್ಟ್ರದ ಸಮಾನಾರ್ಥಕ ಪದವೆಂದರೆ ‘ಜಾತೀಯತೆ’:
ಆರ್.ಎಸ್.ಎಸ್. ಪ್ರಧಾನರ ಶ್ರದ್ಧೆ, ನಂಬಿಕೆಯಿರುವುದು ಮನುಸ್ಮøತಿಯಲ್ಲಿ. ಆದ್ದರಿಂದ ಸಹಜವಾಗಿಯೆ ಜಾತೀಯತೆಯನ್ನು ನಂಬುವ ಕಡೆಗೆ ಅವರನ್ನು ಕರೆದೊಯ್ಯಿತು. ಆರ್.ಎಸ್.ಎಸ್.ಗೆ ಜಾತೀಯತೆಯೇ ಹಿಂದು ಧರ್ಮದ ಮತ್ತು ಹಿಂದು ರಾಷ್ಟ್ರೀಯತೆಯ ಅಂತಃಸ್ಸಾರ. ಮನು ಮೇರೆಗೆ ಹಿಂದು ಧರ್ಮೀಯರು ಮತ್ತಾರೂ ಅಲ್ಲ, ಆದರೆ ;
“ಹಿಂದು ಧರ್ಮೀಯರು ವಿರಾಟ್ ಪುರುಷ ಸಂಭೂತರು, ಆ ದೈವೀಶಕ್ತಿಯ ಮಾನುಷಾವತಾರಿಗಳು, ‘ಹಿಂದು’ ಶಬ್ದದ ಬಳಕೆ ಮಾಡದಿದ್ದರೂ, ‘ಪುರುಷ ಸೂಕ್ತ’ ದಲ್ಲಿ ವರ್ಣಿತವಾಗಿರುವ ದೈವೀಶಕ್ತಿಯ ವಿವರಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ; ಸೂರ್ಯಚಂದ್ರರು ವಿರಾಟ್ ಪುರುಷನ ಎರಡು ಕಣ್ಣುಗಳು, ಅವನ ಹೊಕ್ಕಳು ಮೂಲದಿಂದಲೇ ತಾರೆಗಳು ಮತ್ತು ಗಗನ ಸೃಷ್ಟಿತವಾಗಿದೆ. ಹಾಗು ಅವನ ಶಿರವೇ ಬಾ ್ರಹ್ಮಣರು, ತೋಳುಗಳೇ ಕ್ಷತ್ರಿಯರು, ವೈಶ್ಯರು ಅವನೆರಡು ಊರುಗಳು ಮತ್ತು ಪಾದಗಳೇ ಶೂದ್ರರು. ಇಂಥ ಪುರಾಣ ರೂಪಿಕೆಯ ಅರ್ಥವೆಂದರೆ; ಚಾತುರ್ವಣ್ರ್ಯ ವ್ಯವಸ್ಥೆಯಿರುವ ಸಮುದಾಯವೇ ಹಿಂದು ಮತೀಯರು – ನಮ್ಮ ದೇವತೆಗಳು ಹಾಗು ವಿರಾಟ್ ಪುರುಷನ ಶ್ರೇಷ್ಠಾಂಗವಾದ ಶಿರದ ಉತ್ಕøಷ್ಟ ದರ್ಶನವೇ ನಮ್ಮ ‘ರಾಷ್ಟ್ರ’ ಪರಿಕಲ್ಪನೆಯ ಆಂತರ್ಯದ ತಿರುಳು. ಈ ಅಂತಃಸತ್ತ್ವ ನಮ್ಮ ಚಿಂತನಾಕ್ರಮವನ್ನು ವಿಸ್ತರಿಸಿದೆ ಹಾಗು ನಮ್ಮ ಸಾಂಸ್ಕøತಿಕ ಪರಂಪರೆಯ ವಿವಿಧ ಅನನ್ಯ ಪರಿಕಲ್ಪನೆಗಳ ಆವಿರ್ಭಾವಕ್ಕೆ ಕಾರಣವಾಗಿದೆ”.
ಆರ್.ಎಸ್.ಎಸ್. ಮತ್ತು ಹಿಂದುತ್ವದ ಸಂಘಟನೆಗಳು ಮನುಸಂಹಿತೆಯನ್ನು ಜಾರಿಗೊಳಿಸುವ ಮೂಲಕ ಯಾವ ಬಗೆಯ ನಾಗರಿಕತೆಯನ್ನು ಕಟ್ಟಲು ಹೊರಟಿದ್ದಾರೆ ಎಂಬುದನ್ನು ಕೂಲಂಕಷವಾಗಿ ತಿಳಿಯಬೇಕಾದರೆ, ಮನುತತ್ತ್ವ ಶೂದ್ರರು ಮತ್ತು ಮಹಿಳೆಯರನ್ನು ಕುರಿತಂತೆ ರೂಪಿಸಿರುವ ನ್ಯಾಯವಿಧಿಗಳತ್ತ ಒಮ್ಮೆ ಅವಲೋಕಿಸಬೇಕಾಗುತ್ತದೆ. ಅಮಾನವೀಯವೂ ಮತ್ತು ಭ್ರಷ್ಟವೂ ಆಗಿರುವ ಕೆಲವು ನಿಯಮಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇವುಗಳೇ ತಮ್ಮ ಅರ್ಥವನ್ನು ಸ್ವಯಂ ನಿರ್ವಚಿಸಿಕೊಳ್ಳುತ್ತವೆ.
ಪ್ರಜಾಪ್ರಭುತ್ವದ ವಿರುದ್ಧ :
ಪ್ರಜಾಪ್ರಭುತ್ವದ ತಾತ್ತ್ವಿಕತೆಗೆ ತದ್ವಿರುದ್ಧವಾದ ನಿರಂಕುಶ ಆಳ್ವಿಕೆಯ ಅಡಿಯಲ್ಲಿ ಭಾರತ ತನ್ನ ಆಡಳಿತ ನಡೆಸಬೇಕೆಂದು ಆರ್.ಎಸ್.ಎಸ್. ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದೆ. 1940 ರಂದು ಆರ್.ಎಸ್.ಎಸ್. ಕೇಂದ್ರಸ್ಥಾನವಾಗಿರುವ ನಾಗಪುರದ ರೇಷಮ್ ಭಾಗ್‍ನಲ್ಲಿ ಜರುಗಿದ ರಾಷ್ಟ್ರಮಟ್ಟದ ಆರ್‍ಎಸ್‍ಎಸ್‍ನ ಸುಮಾರು 1350 ಮಂದಿ ಉನ್ನತ ಸ್ತರದ ಸಂಘಟನೆಯ ಸ್ವಯಂಸೇವಕ ಪದವೃಂದವನ್ನುದ್ದೇಶಿಸಿ ಮಾತಾಡುತ್ತಾ ಗೋಲ್ವಾಲ್ಕರ್ ಮಹತ್ತರ ಹೇಳಿಕೆಯೊಂದನ್ನು ಘೋಷಿಸಿದರು ;
“ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತ ಎಂಬ ನಿಲುವಿನಿಂದ ಆರ್.ಎಸ್.ಎಸ್. ಸ್ಫೂರ್ತಿ ಪಡೆದಿದೆ. ಈ ಸ್ಫೂರ್ತಿ ಜ್ಯೋತಿಯೇ ನಮ್ಮ ಮಹಾನ್ ನೆಲದ ಮೂಲೆಮೂಲೆಯಲ್ಲೂ ಹಿಂದುತ್ವದ ದೀಪ ಹಚ್ಚಿ ದೇದಿಪ್ಯಮಾನಗೊಳಿಸುತ್ತಿದೆ”.
ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತವೆಂಬ ಈ ಘೋಷಣೆ, ಯುರೋಪಿನ ನಾಜಿ ಮತ್ತು ಉಗ್ರ ಬಲಪಂಥೀಯರಿಂದ ನೇರವಾಗಿ ಎರವಲು ಪಡೆದ, ಸ್ವಪಜ್ಞತೆಯಿರದ ಅನುಕರಣಾರ್ಥಕ ಘೋಷಣೆ. ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಹಿಂದು ಮಹಾಸಭಾದ ಮುಖಂಡರಾಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರೂ ಈ ಸಭೆಯಲ್ಲಿ ಉಪಸ್ಥಿತರಿದ್ದದ್ದು. ಇದೇ ಮುಖರ್ಜಿಯವರು, ವಿಭಜನೆ ಪೂರ್ವದಲ್ಲಿದ್ದ ಮುಸ್ಲಿಂ ಲೀಗ್ ಮತ್ತು ಹಿಂದು ಮಹಾಸಭಾ ಜೊತೆಗೂಡಿ 1942ರಲ್ಲಿ ರಚಿಸಿದ್ದ ಸಂಮಿಶ್ರ ಸರ್ಕಾರದಲಿ ್ಲ ಉಪಮುಖ್ಯಮಂತ್ರಿಯಾಗಿದ್ದವರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...