Homeಮುಖಪುಟಒಪಿಎಸ್‌ ಆಯ್ಕೆ ಮಾಡಿಕೊಳ್ಳಲು ಆಯ್ದ ಕೇಂದ್ರ ಸರ್ಕಾರಿ ನೌಕರರಿಗೆ ಅವಕಾಶ; ಆದೇಶ

ಒಪಿಎಸ್‌ ಆಯ್ಕೆ ಮಾಡಿಕೊಳ್ಳಲು ಆಯ್ದ ಕೇಂದ್ರ ಸರ್ಕಾರಿ ನೌಕರರಿಗೆ ಅವಕಾಶ; ಆದೇಶ

- Advertisement -
- Advertisement -

ಕೇಂದ್ರ ಸರ್ಕಾರಿ ನೌಕರರ ಆಯ್ದ ಗುಂಪಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಿಬ್ಬಂದಿ ಸಚಿವಾಲಯ ನೀಡಿದೆ.

ಈ ಕುರಿತು ಸಚಿವಾಲಯ ಆದೇಶ ಹೊರಡಿಸಿದ್ದು, “ಹೊಸ ಪಿಂಚಿಣಿ ಯೋಜನೆ (ಎನ್‌ಪಿಎಸ್‌) ಜಾರಿ ಅಧಿಸೂಚನೆ 2003ರ ಡಿಸೆಂಬರ್‌ 22ರಂದು ಪ್ರಕಟವಾಗುವುದಕ್ಕೂ ಮುನ್ನ ಕೇಂದ್ರ ಸರ್ಕಾರದ ಸೇವೆಗೆ ಸೇರಿಕೊಂಡ ನೌಕರರು, ‘ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮ, 1972’ರ ಅಡಿಯಲ್ಲಿ ಒಪಿಎಸ್‌ ಆಯ್ಕೆ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ” ಎಂದು ತಿಳಿಸಲಾಗಿದೆ.

ಆಗಸ್ಟ್ 31, 2023ರೊಳಗೆ ಸಂಬಂಧಿಸಿದ ಸರ್ಕಾರಿ ನೌಕರರು ಈ ಆಯ್ಕೆಯನ್ನು ಮಾಡಿಕೊಳ್ಳಬಹುದು. ವಿವಿಧ ಉಲ್ಲೇಖಗಳು ಮತ್ತು ನ್ಯಾಯಾಲಯದ ನಿರ್ಧಾರಗಳನ್ನು ಆಧರಿಸಿ ಈ ಆದೇಶ ಹೊರಬಿದ್ದಿದೆ.

ನ್ಯಾಯಾಲಯಗಳ ವಿವಿಧ ಉಲ್ಲೇಖಗಳು ಮತ್ತು ನಿರ್ಧಾರಗಳ ಹಿನ್ನೆಲೆಯಲ್ಲಿ ಹಣಕಾಸು ಸೇವೆಗಳ ಇಲಾಖೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ವೆಚ್ಚ ಇಲಾಖೆ ಮತ್ತು ಕಾನೂನು ವ್ಯವಹಾರಗಳ ಇಲಾಖೆಯೊಂದಿಗೆ ಸಮಾಲೋಚಿಸಿ ವಿಷಯವನ್ನು ಪರಿಶೀಲಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನಿಗದಿತ ದಿನಾಂಕದೊಳಗೆ ಈ ಆಯ್ಕೆಯನ್ನು ಮಾಡಿಕೊಳ್ಳದಿದ್ದರೆ ಸಂಬಂಧಪಟ್ಟ ಎಲ್ಲಾ ನೌಕರರೂ ಎನ್‌ಪಿಎಸ್‌ನೊಳಗೆ ಬರಲಿದ್ದಾರೆ. ಒಮ್ಮೆ ಪ್ರಯೋಗಿಸಿದ ಆಯ್ಕೆಯೇ ಅಂತಿಮವಾಗಿರುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿರಿ: ಎನ್‌ಪಿಎಸ್‌ ನೌಕರರ ಮೇಲೆ ಸರ್ಕಾರಿ ನೌಕರರ ಸಂಘದಿಂದ ಹಲ್ಲೆ; ಷಡಕ್ಷರಿ ಮೇಲೆ ಗಂಭೀರ ಆರೋಪ

ಸಂಬಂಧಪಟ್ಟ ನೌಕರರು ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮ, 1972 (ಈಗ 2021)ರ ಅಡಿಯಲ್ಲಿ ಷರತ್ತುಗಳನ್ನು ಪೂರೈಸಿದರೆ, ಈ ನಿಟ್ಟಿನಲ್ಲಿ ಅಗತ್ಯ ಆದೇಶವನ್ನು 31 ಅಕ್ಟೋಬರ್, 2023 ರೊಳಗೆ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ. ಒಪಿಎಸ್‌ ಆಯ್ಕೆ ಮಾಡಿಕೊಳ್ಳುವ ಸರ್ಕಾರಿ ನೌಕರರ ಎನ್‌ಪಿಎಸ್‌ ಖಾತೆಯನ್ನು ಡಿಸೆಂಬರ್ 31, 2023ರಿಂದ ಮುಚ್ಚಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗುತ್ತದೆ.

14 ಲಕ್ಷಕ್ಕೂ ಹೆಚ್ಚಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಸಂಸ್ಥೆಯಾದ ‘ಹಳೆಯ ಪಿಂಚಣಿ ಯೋಜನೆಗಾಗಿ ರಾಷ್ಟ್ರೀಯ ಚಳವಳಿ’ (NMOPS) ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.

“ಅರ್ಹ ಕೇಂದ್ರ ಸರ್ಕಾರಿ ನೌಕರರಿಗೆ ಇದು ಒಳ್ಳೆಯ ಸುದ್ದಿ. ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಎಲ್ಲಾ ಕೇಂದ್ರ ಸರ್ಕಾರಿ ಸಿಬ್ಬಂದಿಗೆ ವಿಸ್ತರಿಸುವುದನ್ನು ಖಚಿತಪಡಿಸಿಕೊಳ್ಳಲು, ಅಸ್ತಿತ್ವದಲ್ಲಿರುವ ಎನ್‌ಪಿಎಸ್ ಅನ್ನು ತಿದ್ದುಪಡಿ ಮಾಡಲು ನಾವು ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಎನ್‌ಎಂಒಪಿಎಸ್ ದೆಹಲಿ ಘಟಕದ ಮುಖ್ಯಸ್ಥ ಮಂಜೀತ್ ಸಿಂಗ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...