Homeಅಂತರಾಷ್ಟ್ರೀಯಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ

- Advertisement -
- Advertisement -

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗಾಯಗೊಂಡಿದ್ದಾರೆ. ಇಮ್ರಾನ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ತಮ್ಮ ಪಕ್ಷದ ವತಿಯಿಂದ ನಡೆಸುತ್ತಿರುವ ‘ಲಾಂಗ್ ಮಾರ್ಚ್’ ರಾಜಕೀಯ ರ್‍ಯಾಲಿಯ ವೇಳೆ ಕಂಟೈನರ್‌ ಬಳಿ ಇಮ್ರಾನ್ ಖಾನ್ ಮೇಲೆ ಗುಂಡು ಹಾರಿಸಲಾಗಿದ್ದು, ಅವರ ಪಾದಕ್ಕೆ ಗಾಯವಾಗಿದೆ ಎಂದು ವರದಿಯಾಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಮ್ರಾನ್‌ ಖಾನ್ ನೇತೃತ್ವದ ಹಕೀಕಿ ಮಾರ್ಚ್ ವಜೀರಾಬಾದ್ ಪ್ರವೇಶಿಸಿದಾಗ ಈ ಘಟನೆ ನಡೆದಿದೆ. ಗುಂಡಿನ ದಾಳಿಯ ನಂತರ ಕಾಲ್ತುಳಿತ ಸಂಭವಿಸಿದ್ದು, ಈ ವೇಳೆ ಕಂಟೈನರ್‌ನಲ್ಲಿದ್ದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕರು ಸೇರಿದಂತೆ ಎಲ್ಲರೂ ಗಾಬರಿಗೊಂಡಿದ್ದಾರೆ.

ಗುಂಡಿನ ದಾಳಿಯ ಸಮಯದಲ್ಲಿ, ಬೆಂಗಾವಲು ಪಡೆ ಜಫರಾಲಿ ಖಾನ್ ಚೌಕ್ ಬಳಿ ತಲುಪಿತ್ತು ಎಂದು ಪಾಕಿಸ್ತಾನದ ARY ನ್ಯೂಸ್ ವರದಿ ಮಾಡಿದೆ. ಆಪಾದಿತ ಶೂಟರ್‌ನನ್ನು ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಟಿವಿ ಚಾನೆಲ್ ತಿಳಿಸಿದೆ.

ಗುಂಡಿನ ದಾಳಿಯಲ್ಲಿ ಐವರು ಗಾಯಗೊಂಡಿರುವ ವರದಿಗಳಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ: ಜಿಂಬಾಬ್ವೆ ಎದುರು 1 ರನ್‌ನಿಂದ ಸೋತ ಪಾಕಿಸ್ತಾನ: ಸೆಮಿಫೈನಲ್ ಹಾದಿ ದುರ್ಗಮ

ಇಮ್ರಾನ್ ಖಾನ್ ಮತ್ತು ಅವರ ಪಕ್ಷವಾದ ಪಿಟಿಐ ಕಾರ್ಯಕರ್ತರು ಕ್ಷಿಪ್ರ ಚುನಾವಣೆಗೆ ಆಗ್ರಹಿಸಿ ಇಸ್ಲಾಮಾಬಾದ್ ಕಡೆಗೆ ಲಾಂಗ್ ಮಾರ್ಚ್‌ ನಡೆಸುತ್ತಿದ್ದರು. ಈ ವೇಳೆ ಘಟನೆ ನಡೆದಿದೆ.

‘ಜನರನ್ನು ದಾರಿತಪ್ಪಿಸುತ್ತಿದ್ದ’ ಕಾರಣಕ್ಕೆ ಇಮ್ರಾನ್‌ ಖಾನ್‌ರನ್ನು ಕೊಲ್ಲಲು ಯತ್ನಿಸಿದೆ: ಶಂಕಿತ ಆರೋಪಿ

“ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರು ಸಾರ್ವಜನಿಕರನ್ನು ದಾರಿತಪ್ಪಿಸುತ್ತಿದ್ದು, ಹೀಗಾಗಿ ಅವರನ್ನು ಕೊಲ್ಲಲು ಬಯಸಿದ್ದೆ” ಎಂದು ಘಟನೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಏಕೈಕ ಶಂಕಿತ ಆರೋಪಿ ಹೇಳಿದ್ದಾರೆ.

“ಅವನು (ಇಮ್ರಾನ್) ಜನರನ್ನು ದಾರಿತಪ್ಪಿಸುತ್ತಿದ್ದರು. ಅದನ್ನು ನೋಡಿ ನನಗೆ ಸಹಿಸಲಾಗಲಿಲ್ಲ. ಆದ್ದರಿಂದ ನಾನು ಅವರನ್ನು ಕೊಂದಿದ್ದೇನೆ … ಕೊಲ್ಲಲು ಪ್ರಯತ್ನಿಸಿದೆ” ಎಂದು ಶಂಕಿತ ಆರೋಪಿ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ನಾನು ಅವರನ್ನು ಕೊಲ್ಲಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಘಟನೆಯಲ್ಲಿ ಇಮ್ರಾನ್ ಖಾನ್ ಅವರನ್ನು ಮಾತ್ರ ಕೊಲ್ಲಲು ಬಯಸಿದ್ದೆ, ಹೊತರು ಬೇರೆ ಯಾರನ್ನೂ ಅಲ್ಲ” ಎಂದು ಆರೋಪಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಬಡವರೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ..’; ಪ್ರಧಾನಿ ಮೋದಿ...

0
'ದೇಶದ ಬಡವರು ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ. 'ಪ್ರತಿಪಕ್ಷಗಳ ಇಂಡಿಯಾ...