ಪ್ರೊ. ಆನಂದ ತೇಲ್ತುಂಬ್ಡೆಯವರ ಮೇಲೆ ಸುಳ್ಳು ಅಪಾದನೆಗಳನ್ನು ಹೊರಿಸಿ ಬಂದಿಸುವುದನ್ನು ವಿರೋದಿಸಿ ಹಾಗೂ ಅವರ ಮೇಲಿನ ಸುಳ್ಳು ಆರೋಪಗಳನ್ನು ಕೈ ಬಿಡುವಂತೆ ಶಿಕ್ಷಣ ಹಕ್ಕಿಗಾಗಿ ಅಖಿಲ ಭಾರತ ವೇದಿಕೆ(ಎಐಎಫ್‌ಆರ್‌ಟಿಇ) ಅಭಿಯಾನ ಪ್ರಾರಂಭಿಸಿದೆ.

ಶಿಕ್ಷಣ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯು ಆನ್ ಲೈನ್ ಅರ್ಜಿಯನ್ನು ಸಹಿ ಮಾಡಲು ಕೋರಿದೆ. ಸರಕಾರವು  ಸುಳ್ಳು ಪ್ರಕರಣಗಳನ್ನು ಸೃಷ್ಟಿಸಿ ತೇಲ್ತುಂಬ್ಡೆಯವರು ಮುಂಬೈನ ಎನ್ ಐಎ ಕೋರ್ಟ್ ನ ಮುಂದೆ 6, ಎಪ್ರಿಲ್ 2020ರಂದು ಶರಣಾಗಬೇಕೆಂದು ಸೂಚಿಸಿದೆ ಎಂದು ವೇದಿಕೆ ಆರೋಪಿಸಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹಿರಿಯ ಪ್ರಾದ್ಯಾಪಕರಾಗಿರುವ ಆನಂದ ತೇಲ್ತುಂಬ್ಡೆ ಅವರ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದು ಭಾರೀ ಅಘಾತ ಉಂಟು ಮಾಡಿದೆ ಎಂದಿರುವ ಎಐಎಫ್‌ಆರ್‌ಟಿಇ, ಜಾತಿ-ವರ್ಗ ಮತ್ತು ಸಾರ್ವಜನಿಕ ನೀತಿಗಳಿಗೆ ಸಂಬಂದಿಸಿದಂತೆ ಅತ್ಯಂತ ಮಹತ್ವದ ಚಿಂತಕರಾದ ಆನಂದ ತೇಲ್ತುಂಬ್ಡೆ ಅವರು ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಹಕ್ಕುಗಳ ಪರವಾದ ಹೋರಾಟಗಾರರಾಗಿದ್ದಾರೆ ಎಂದಿದೆ.

ನಿಷೇದಿತ ಮಾವೋವಾದಿ ಸಂಘಟನೆಗಳೊಂದಿಗೆ ಸಂಬಂದ ಹೊಂದಿದ್ದಾರೆ ಎಂದು ಆರೋಪಿಸಿ ’ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ” (ಯುಎಪಿಎ) ಯಂತಹ ಕರಾಳ ಶಾಸನವನ್ನು ಬಳಸಿಕೊಂಡು ಅವರ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿದೆ. ೨೦೧೮ರಲ್ಲಿ ಭೀಮ್ – ಕೊರೆಗಾಂನಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡ ಪೇಶ್ವಾಗಳ ವಿರುದ್ದದ ಯುದ್ದದಲ್ಲಿ ಜಯ ಗಳಿಸಿದ ೨೦೦ನೆ ವರ್ಷದ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ಬಳಸಿಕೊಂಡ ಬಿಜೆಪಿ / ಆರೆಸ್ಸಸ್ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಕೇಂದ್ರ ಸರಕಾರವು ಮಾನವ ಹಕ್ಕುಗಳ ಹೋರಾಟಗಾರರು, ನಾಗರಿಕ ಹಕ್ಕುಗಳ ಹೋರಾಟಗಾರರನ್ನು ಗುರಿಯಾಗಿಸಿಕೊಂಡಿದೆ ಎಂದು ಎಐಎಫ್‌ಆರ್‌ಟಿಇ ಹೇಳಿದೆ.

ಜನವರಿ 1, 2018 ರಂದು ನಡೆದ ಘಟನೆಯೂ ವಿಡಿಯೋಗಳಲ್ಲಿ ಚಿತ್ರೀಕರಣಗೊಂಡಿದೆ, ವಾಟ್ಸಾಪ್‌ಗಳಾದ್ಯಂತ ಪ್ರಸಾರವಾಗಿದೆ. ಅನೇಕರು ಗಾಯಗೊಂಡು, ಹಲವರ ವಾಹನಗಳು ಜಖಂಗೊಂಡವು. ಈ ಗಲಭೆಗಳನ್ನು ಪ್ರಚೋದಿಸಿದ ಸಮಸ್ಥ ಹಿಂದುತ್ವ ಅಗಾಡಿಯ ಮಿಲಿಂದ್ ಏಕಬೋಟೆ ಮತ್ತು ಶಿವ ಚತ್ರಪತಿ ಪ್ರತಿಷ್ಟಾನದ ಸಾಂಬಾಂಜಿ ಭಿಡೆಯವರು ಜಾಮೀನಿನ ಮೇಲೆ ಹೊರ ಬಂದಿದ್ದರು ಮತ್ತು ಇವರ ವಿರುದ್ದ ಅಪೀಲು ಸಲ್ಲಿಸಲಿರಲಿಲ್ಲ. ಇವರಿಬ್ಬರನ್ನು ರಕ್ಷಿಸಲು ಹಿಂದಿನ ದಿನ ಪುಣೆಯಲ್ಲಿ ಹಮ್ಮಿಕೊಳ್ಳಲಾದ ಎಲ್ಗಾರ್ ಪರಿಷದ್ ನಲ್ಲಿ ಮಾತನಾಡಿದ ಭಾಷಣಕಾರರು ಈ ಗಲಭೆಗೆ ಕಾರಣ ಎಂದು ಪುಣೆ ಪೋಲೀಸರು ’ಪಿತೂರಿ ಕಟ್ಟುಕತೆ’ಯನ್ನು ತೇಲಿ ಬಿಟ್ಟರು ಎಂದು ಎಐಎಫ್‌ಆರ್‌ಟಿಇ ಆರೋಪಿಸಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಜಸ್ಟೀಸ್ ಕೋಲ್ಸೆ-ಪಾಟೀಲ್ ಮತ್ತು ಪಿ.ಬಿ.ಸಾವಂತ್ ಅವರು ಈ ಸಮಾವೇಶವನ್ನು ಸಂಘಟಿಸಿದ್ದರು. ಆದರೆ ಸಂಘಟಕರಿಗೂ ಮತ್ತು ನಿಷೇದಿತ ಮಾವೋವಾದಿಗಳಿಗೂ ಸಂಬಂದವಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಪೋಲೀಸರು ವಾದಿಸಿ, ನಂತರ ಜೂನ್ ೨೦೧೮ರಿಂದ ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳನ್ನು ಮಾವೋವಾದಿಗಳ ಪರ ಒಲವುಳ್ಳವರು ಎಂದು ಆರೋಪಿಸಿ ಮತ್ತು ಇವರ ವಿರುದ್ದ ಕರಾಳ ’ಯುಎಪಿಎ’ ಶಾಸನ ಆಡಿಯಲ್ಲಿ ಬಂದಿಸಿದರು ಮತ್ತು ಇವರೆಲ್ಲಾ ಇಂದಿಗೂ ಬಂದನದಲ್ಲಿದ್ದಾರೆ ಎಂದಿದೆ.

ಫೆಬ್ರವರಿ ೨೦೧೯ರಲ್ಲಿ ಸಲ್ಲಿಸಲಾದ ಪೂರಕ ಚಾರ್ಜ್ ಶೀಟ್ ನಲ್ಲಿ ಪ್ರೊ. ಆನಂದ ತೇಲ್ತುಂಬ್ಡೆ ಅವರ ಹೆಸರನ್ನು ಸೇರಿಸಲಾಯಿತು. ಆದರೆ ತೇಲ್ತುಂಬ್ಡೆಯವರು ಎಲ್ಗಾರ್ ಪರಿಷದ್ ನ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ. ಆದರೆ ಈ ಮೊದಲು ಬಂದಿಸಿದ್ದವರ ಕಂಪ್ಯೂಟರ್ ನಲ್ಲಿ ಒಂದು ಪತ್ರವನ್ನು ಉಲ್ಲೇಖಿಸಿ ತೇಲ್ತುಂಬ್ಡೆಯವರ ವಿರುದ್ದ ಅದನ್ನೇ ಸಾಕ್ಷಿಯಾಗಿ ಮುಂದಿಟ್ಟರು. ಕಂಪ್ಯೂಟರ್ ನ ಹಾರ್ಡ್ ಡಿಸ್ಕ್ ಅನ್ನು ಪರೀಕ್ಷಿಸಿದ ಸೈಬರ್ ಫೋರೆನ್ಸಿಕ್ ಪರಿಣಿತರು ಅಲ್ಲಿ malware ಇರುವುದನ್ನು ತೋರಿಸಿ, ಇದು ದೂರದಿಂದಲೆ ಕಂಪ್ಯೂಟರ್ ಅನ್ನು ಅಕ್ರಮವಾಗಿ ಬಳಸಿಕೊಳ್ಳುವುದಕ್ಕೆ ಅನುಮತಿಸುತ್ತದೆ ಎಂದು ವಿವರಿಸಿದರು. ಆದರೆ ಮುಂಚೂಣಿ ತಂತ್ರಜ್ನಾನದ ಪರಿಣಿತರಾಗಿ ಪ್ರೊ. ತೇಲ್ತುಂಬ್ಡೆ ಯವರ ವೃತ್ತಿಪರ ಸಾಧನೆಗಳು ಇಂದಿಗೂ ಮುಖ್ಯವಾಗಿವೆ. ಭಾರತದಲ್ಲಿ ಮಾಹಿತಿ ತಂತ್ರಜ್ನಾವನ್ನು ಅಬಿವೃದ್ದಿಪಡಿಸಿದ ೨೦ ವೃತ್ತಿಪರರ ಪಟ್ಟಿಯಲ್ಲಿ ತೇಲ್ತುಂಬ್ಡೆಯವರೂ ಒಬ್ಬರು ಮತ್ತು ಇದನ್ನು ಡಾಟಾಕ್ವೆಸ್ಟ್ ಸಂಸ್ಥೆಯು ಸತತ ಮೂರು ವರ್ಷಗಳ ಕಾಲ ಮೌಲ್ಯಮಾಪನ ಮಾಡುತ್ತ ಬಂದಿದೆ ಎಂದು ಎಐಎಫ್‌ಆರ್‌ಟಿಇ ತನ್ನಅರ್ಜಿಯಲ್ಲಿ ಹೇಳಿದೆ.

ತೈಲ ಮತ್ತು ಅನಿಲ ವಲಯಗಳಲ್ಲಿ ಮೂರು ದಶಕಗಳ ಕಾಲ ನಿರಂತರವಾಗಿ ಸಂಶೋದನೆ ನಡೆಸಿಕೊಂಡು ಬಂದ ಮತ್ತು ಹೊಸದಾದ ಅವಿಷ್ಕಾರಗಳನ್ನು ಮಾಡಿದ, ವಿನ್ಯಾಸಗಳನ್ನು ರೂಪಿಸಿದ ತೇಲ್ತುಂಬ್ಡೆಯವರು ಗೌರವಾನ್ವಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದಿರುವ ಎಐಎಫ್‌ಆರ್‌ಟಿಇ ಇದೆ ಕಂಪನಿಯಲ್ಲಿ ಸಿಇಓ ಆಗಿದ್ದ ತೇಲ್ತುಂಬ್ಡೆಯವರು ಉಪಾಂಗ ಸಂಸ್ಥೆಗಳಲ್ಲಿ ಸತತವಾಗಿ ಏಳು ವರ್ಷಗಳ ಕಾಲ ಸದಸ್ಯರಾಗಿದ್ದರು ಎಂದಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಭೂರಹಿತ ಕೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಆನಂದ್ ತೇಲ್ತುಂಬ್ಡೆಯವರು ಶೋಷಿತರು ಮತ್ತು ದಮನಿತರ ಪರವಾಗಿ ಹೋರಾಡುತ್ತಾ ಬಂದಿದ್ದಾರೆ, ಮಾನವ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ ಸಾಮಾಜಿಕ ನ್ಯಾಯದ ಪರವಾಗಿ ಅತ್ಯಂತ ಪ್ರಮುಖ ಚಿಂತಕರು. ಅವರು ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗಳನ್ನು ಮದುವೆಯಾಗಿದ್ದಾರೆ.

’ಎಐಎಫ್‌ಆರ್‌ಟಿಇ’ ಸಂಘಟನೆಯ ಮುಂದಾಳತ್ವದಲ್ಲಿರುವ, ಕಳೆದ ಹತ್ತು ವರ್ಷಗಳಿಂದ ಅದರ ಪ್ರಿಸಿಡಿಯಂ ಸದಸ್ಯರಾಗಿರುವ ತೇಲ್ತುಂಬ್ಡೆಯವರು ಉಚಿತ ಮತ್ತು ಕಡ್ಡಾಯ ನೆರೆಹೊರೆ ಶಾಲಾ ವ್ಯವಸ್ಥೆಯ ಪರವಾಗಿ, ತಾಯ್ನುಡಿ ಮಾದ್ಯಮದ ಪರವಾಗಿ ಸಂಘಟನೆ ಮಾಡಿದ್ದಾರೆ ಮತ್ತು ದೇಶದ ಅನೇಕ ಚಿಂತಕರು ಮತ್ತು ಹೋರಾಟಗಾರರನ್ನು ಈ ಸಂಘಟನೆಯಲ್ಲಿ ತೊಡಗಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾದಿಸಲು ಇದೊಂದೆ ಏಕೈಕ ಮಾರ್ಗ ಎಂದು ನಂಬಿದ್ದಾರೆ. ನಮ್ಮ ದೇಶದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಪ್ರೊ. ಆನಂದ ತೇಲ್ತುಂಬ್ಡೆ ಮತ್ತು ಇತರರ ವಿರುದ್ದದ ಆರೋಪಗಳನ್ನು ಕೈಬಿಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಎಐಎಫ್‌ಆರ್‌ಟಿಇ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಎಐಎಫ್‌ಆರ್‌ಟಿಇ ಸಹಿ ಆದ ಅರ್ಜಿಯನ್ನು ಭಾರತದ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾದೀಶರು, ಪ್ರದಾನ ಮಂತ್ರಿಗಳು ಹಾಹೂ ಕೇಂದ್ರ ಗೃಹ ಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದೆ.

ಈ ವಾರದೊಳಗಡೆ ಸಾವಿರಾರು ಸಹಿ ಸಂಗ್ರಹಣೆ ಮಾಡಬೇಕಿದೆ ಎಂದು ಎಐಎಫ್‌ಆರ್‌ಟಿಇ ಪ್ರಕಟನೆ ತಿಳಿಸಿದೆ. ಅರ್ಜಿಯ ಕನ್ನಡ ಅವತರಿಣಿಕೆಯನ್ನು ಲಗತ್ತಿಸಿದ ಎಐಎಫ್‌ಆರ್‌ಟಿಇ ಮತ್ತು ಅದರ ಸಹ ಸಂಘಟನೆಗಳು ಈ ಅರ್ಜಿಯನ್ನು ಸ್ನೇಹಿತರು, ಪರಿಚಿತರೊಂದಿಗೆ, ಸಂಘಟನೆಗಳೊಂದಿಗೆ ಹಂಚಿಕೊಳ್ಳಬೇಕೆಂದು ಕೋರಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here