HomeಅಂಕಣಗಳುKarnataka against SIRಜ್ಞಾನೇಶ್ ಕುಮಾರ್‌ನನ್ನು ವಜಾಗೊಳಿಸಿ-SIR ರದ್ದುಗೊಳಿಸುವಂತೆ ಒತ್ತಾಯಿಸಿ ಸೆ.26 ಪ್ರತಿಭಟನೆಗೆ ಎಡ ಪಕ್ಷಗಳು ಹಾಗೂ SIR ವಿರೋಧಿ...

ಜ್ಞಾನೇಶ್ ಕುಮಾರ್‌ನನ್ನು ವಜಾಗೊಳಿಸಿ-SIR ರದ್ದುಗೊಳಿಸುವಂತೆ ಒತ್ತಾಯಿಸಿ ಸೆ.26 ಪ್ರತಿಭಟನೆಗೆ ಎಡ ಪಕ್ಷಗಳು ಹಾಗೂ SIR ವಿರೋಧಿ ಒಕ್ಕೂಟ ಕರೆ

- Advertisement -
- Advertisement -

ಕೇಂದ್ರ ಚುನಾವಣಾ ಆಯೋಗವು ಎಸಗಿರುವ ಅಕ್ರಮಗಳ ಪಾಪದ ಕೊಡ ತುಂಬಿದ್ದು, ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾಗಿವೆ ಎಂದು ‘SIR ವಿರೋಧಿ ಜನಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ’ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಅಕ್ರಮವಾಗಿ ಜಾರಿಗೆ ತರಲಾಗಿರುವ ‘ಎಸ್‌ಐಆರ್’ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಒಕ್ಕೂಟವು ಆಗ್ರಹಿಸಿದೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟವು, ಚುನಾವಣಾ ಆಯೋಗವು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಸತ್ಯಾಂಶವನ್ನು ಜಗತ್ತಿನ ಮುಂದೆ ನಿರ್ಭೀತಿಯಿಂದ ತಂದ ತನಿಖಾ ಪತ್ರಕರ್ತೆ ಋತಿಕಾ ಚೋಪ್ರಾ (Ritika Chopra) ಹಾಗೂ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ತನ್ನ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸಿದೆ.

ಏಕವ್ಯಕ್ತಿ ತೀರ್ಮಾನ ಮತ್ತು ಸಾಂವಿಧಾನಿಕ ಅಕ್ರಮ:

ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಸಂಸ್ಥೆಯಾಗಿದ್ದು, ಅದರ ಘನತೆಯನ್ನು ಜ್ಞಾನೇಶ್ ಕುಮಾರ್ ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ. “ದೇಶದ ಎಲ್ಲಾ ವಿರೋಧ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಯಾರ ಮಾತಿಗೂ ಬೆಲೆ ನೀಡದೆ ಸರ್ವಾಧಿಕಾರಿ ರೀತಿಯಲ್ಲಿ ‘ಎಸ್‌ಐಆರ್’ ಎಂಬ ಮತ ಪರಿಷ್ಕರಣಾ ಪ್ರಕ್ರಿಯೆಯನ್ನು ದೇಶದ ಮೇಲೆ ಹೇರಲಾಗಿದೆ. ಇದರಿಂದಾಗಿ ಕೋಟ್ಯಾಂತರ ಅರ್ಹ ಮತದಾರರು, ವಿಶೇಷವಾಗಿ ಶೋಷಿತ ಸಮುದಾಯದ ಜನರು ಮತದಾರರ ಪಟ್ಟಿಯಿಂದ ಹೊರದಬ್ಬಲ್ಪಡುತ್ತಿದ್ದಾರೆ” ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.

“ಕಾನೂನಿನ ಪ್ರಕಾರ ಚುನಾವಣಾ ಆಯೋಗದಲ್ಲಿ ಮೂವರೂ ಆಯುಕ್ತರು ಸಮಾನರು ಮತ್ತು ತೀರ್ಮಾನಗಳು ಸರ್ವಸಮ್ಮತಿಯಿಂದ ಆಗಬೇಕು. ಆದರೆ ಆಯೋಗದ ಒಳಗಡೆ ಇಬ್ಬರು ಆಯುಕ್ತರ ಬಹುಸಂಖ್ಯಾತ ಅಭಿಪ್ರಾಯವನ್ನೂ ತಳ್ಳಿಹಾಕಿ, ಏಕವ್ಯಕ್ತಿಯಾಗಿ ಜ್ಞಾನೇಶ್ ಕುಮಾರ್ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ತಮ್ಮ ಆಯ್ಕೆಯ ಹಿಂದೆ ಮೋದಿ-ಅಮಿತ್ ಶಾ ಇದ್ದಾರೆ ಎಂಬ ಧೈರ್ಯವೇ ಅವರಿಂದ ಈ ದುಸ್ಸಾಹಸವನ್ನು ಮಾಡಿಸಿದೆ. ಇದು ದೇಶದ್ರೋಹದ ಕೆಲಸವಾಗಿದ್ದು, ವಾಸ್ತವದಲ್ಲಿ ಮೋದಿ, ಅಮಿತ್ ಶಾ ಮತ್ತು ಜ್ಞಾನೇಶ್ ಕುಮಾರ್ ಅವರೇ ಆಯೋಗದಂತೆ ಕೆಲಸ ಮಾಡುತ್ತಿದ್ದಾರೆ,” ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ರಾಜಕೀಯ ಪಕ್ಷಗಳಿಗೆ ಗಟ್ಟಿ ನಿರ್ಧಾರದ ಕರೆ & ಸೆಪ್ಟೆಂಬರ್ 26ಕ್ಕೆ ಪ್ರತಿಭಟನೆ:

ರಾಜಕೀಯ ಪಕ್ಷಗಳು ಕೇವಲ ತೋರಿಕೆಯ ಪ್ರತಿಭಟನೆಗೆ ಸೀಮಿತವಾಗದೆ, “ಮತದಾರರ ಪಟ್ಟಿ ಸಂಪೂರ್ಣವಾಗಿ ಸರಿಯಾಗುವ ತನಕ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ” ಎಂಬ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮತ್ತು ಬೀದಿ ಹೋರಾಟಕ್ಕೆ ಇಳಿಯಬೇಕು ಎಂದು ಒಕ್ಕೂಟವು ಕರೆ ನೀಡಿದೆ.

ತಮ್ಮ ಪ್ರಮುಖ ಆಗ್ರಹಗಳನ್ನು ಮುನ್ನೆಲೆಗೆ ತರಲು ಸೆಪ್ಟೆಂಬರ್ 26 (ಶನಿವಾರ) ಸಂಜೆ 4 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಡ, ಪ್ರಜಾತಾಂತ್ರಿಕ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಜಂಟಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕರೆಯನ್ನು ಬೆಂಬಲಿಸಿ ಎಲ್ಲಾ ದೇಶಪ್ರೇಮಿ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.

ಅಕ್ಟೋಬರ್ 1 ರಿಂದ ರಾಷ್ಟ್ರವ್ಯಾಪಿ ಆಂದೋಲನದ ಎಚ್ಚರಿಕೆ:

ನಡೆದಿರುವ ಆಡಳಿತಾತ್ಮಕ ಲೋಪ ಮತ್ತು ಅಕ್ರಮ ಕೂಸಾದ ‘ಎಸ್‌ಐಆರ್’ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಿ, ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು. ಒಂದು ವೇಳೆ ಸೆಪ್ಟೆಂಬರ್ 30 ರೊಳಗೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ಮತ್ತು ಎಸ್‌ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸದಿದ್ದರೆ, ಅಕ್ಟೋಬರ್ 1 ರಿಂದ ಸಮಾನ ಮನಸ್ಕರ ಜೊತೆಗೂಡಿ ದೇಶಾದ್ಯಂತ ಬೃಹತ್ ಆಂದೋಲನವನ್ನು ರೂಪಿಸುವುದಾಗಿ ಒಕ್ಕೂಟವು ಗಡುವು ನೀಡಿದೆ.

ಈ ಜಂಟಿ ಮಾಧ್ಯಮ ಹೇಳಿಕೆಗೆ ಒಕ್ಕೂಟದ ಪ್ರಮುಖ ನಾಯಕರಾದ ಕೆ. ಮಹಂತೇಶ್, ಸೀತಾರಾಂ ಗುಂಡಪ್ಪ, ತಾಹೀರ್ ಹುಸೇನ್, ಕೆ.ವಿ. ಭಟ್, ಅಬ್ದುಲ್ ಮಜೀದ್, ಚಾಮರಸ ಮಾಲಿ ಪಾಟೀಲ್, ನೂರ್ ಶ್ರೀಧರ್, ಅರುಣ್ ಲೂಯಿಸ್, ಯೂಸೂಫ್ ಕನ್ನಿ, ಕೆ. ಎಸ್. ವಿಮಲ, ಹೆಣ್ಣೂರು ಶ್ರೀನಿವಾಸ್ ಹಾಗೂ ಅಂಬಣ್ಣ ಆರೋಲಿಕರ್ ಬೆಂಬಲ ಸೂಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ವಿವಾದ ಮತ್ತು ಆಂತರಿಕ ಬಿಕ್ಕಟ್ಟು: ಮೀರತ್, ವಾರಾಣಸಿ ಪ್ರವಾಸ ದಿಢೀರ್ ರದ್ದುಗೊಳಿಸಿದ ಗ್ಯಾನೇಶ್‌ ಕುಮಾರ್! Gen-Z ಆಕ್ರೋಶಕ್ಕೆ ಬೆದರಿತೇ ಆಯೋಗ?

ದೇಶಾದ್ಯಂತ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (SIR) ವಿವಾದ, ಸ್ಥಗಿತಗೊಂಡಿರುವ ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆ (SSR) ಹಾಗೂ ಚುನಾವಣಾ ಆಯೋಗದ ಉನ್ನತ ಹಂತದ ಶೀತಲ...

ವಿಜಯವಾಡ ಕಸ್ಟಡಿಯಲ್ಲಿ ಸಾಯಿ ಕೃಷ್ಣ ಸಾವು: ಶವ ದಹನ, ಸಾಕ್ಷ್ಯ ನಾಶ ಖಚಿತ ಪಡಿಸಿದ ಎಸ್ಐಟಿ; ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆ 

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ 25 ವರ್ಷದ ಗದೆ ಸಾಯಿ ಕೃಷ್ಣ ಅವರ ನಾಪತ್ತೆ ಹಾಗೂ ಶಂಕಿತ ಕಸ್ಟಡಿ ಸಾವಿನ ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಗೆ ಒಳಪಟ್ಟಿದೆ. ಕೃಷ್ಣಲಂಕಾ ಪೊಲೀಸರು ವಶಕ್ಕೆ...

SIR ಜಾರಿಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮೇಲೆ ಸಂಶಯ ಮೂಡಿದೆ: ಅಶೋಕ್ ಲವಾಸ ಕಳವಳ

ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣದ ನೆಪದಲ್ಲಿ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಥವಾ ಬೇಟೆಯಾಡುವ ಪ್ರವೃತ್ತಿಯನ್ನು ತಕ್ಷಣವೇ ಕೈಬಿಡಬೇಕು, SIR ಪ್ರಕ್ರಿಯೆಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ವರ್ಚಸ್ಸಿಗೆ ಭಾರೀ ಧಕ್ಕೆಯಾಗುತ್ತಿದೆ ಎಂದಿರುವ ಮಾಜಿ...

“ಟರ್ನ್ ಅಪ್ರೂವರ್ ಆಗಿ”: ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ; ಮತ ಕಳ್ಳತನ ಆರೋಪದಲ್ಲಿ ಮೋದಿ, ಶಾ ತನಿಖೆ ನಡೆಯಬೇಕಿದೆ: ರಾಹುಲ್ ಗಾಂಧಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣಾ ವ್ಯವಸ್ಥೆಯಲ್ಲಿ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಅಕ್ರಮಗಳ ಕುರಿತು “ಅನುಮೋದಕರಾಗಿ” (ಅಪ್ರೂವರ್) ಬದಲಾಗಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ...

SIR : ಭಾಲ್ಕಿ, ಬೆಳಗಾವಿ ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಅರ್ಹ ಮತಗಳ ಡಿಲೀಟ್‌ಗೆ ಯತ್ನ; ಅನ್ಯರು ಫಾರಂ-7 ಸಲ್ಲಿಸಿರುವುದು ಬಯಲು!

ಭಾರತೀಯ ಚುನಾವಣಾ ಆಯೋಗದಲ್ಲಿ (ಇಸಿಐ) ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ ಬಟಾಬಯಲಾಗಿ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ನಡುವೆಯೇ, ಕರ್ನಾಟಕದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌)...

‘ದಿಮಾಗಿ ನಕ್ಸಲರು ಚುನಾವಣಾ ಆಯುಕ್ತರನ್ನು ಗುರಿಯಾಗಿಸಿಕೊಂಡಿದ್ದಾರೆ..’; ಗ್ಯಾನೇಶ್‌ ಕುಮಾರ್ ಬೆಂಬಲಕ್ಕೆ ನಿಂತ ಅಸ್ಸಾಂ ಸಿಎಂ

ಮುಖ್ಯ ಚುನಾವಣಾ ಆಯುಕ್ತರು ಇತರ ಚುನಾವಣಾ ಆಯುಕ್ತರನ್ನು ಸಂಪರ್ಕಿಸದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಯು ಇದು ರಾಜಕೀಯ ಪ್ರಚಾರ ಹಾಗೂ ವಿರೋಧ ಪಕ್ಷಗಳ...

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: ಸಂಕಷ್ಟದಲ್ಲಿ ಲಕ್ಷಾಂತರ ‘Gen Z’ ಯುವಕರ ಮತದಾನದ ಹಕ್ಕು!

ಭಾರತೀಯ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಆಯುಕ್ತರ ನಡುವೆ ಉಂಟಾಗಿದೆ ಎನ್ನಲಾದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ, ದೇಶದ ನೂತನ ಯುವ ಮತದಾರರ ಸೇರ್ಪಡೆ ಪ್ರಕ್ರಿಯೆ ಮಂದಗತಿಯಲ್ಲಿದೆ ಎಂಬ ವರದಿ...

‘ಅನ್ಯಾಯಯುತ’ ಚುನಾವಣೆಗಳಿಗೆ ಅವಕಾಶ ನೀಡಿದ್ದಕ್ಕಾಗಿ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು: ಪ್ರಿಯಾಂಕಾ ಗಾಂಧಿ

ವಯನಾಡ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಕೋಟ್ಯಂತರ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವ ವಿಚಾರದ ನಡುವೆಯೇ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನ ವಾಗ್ದಾಳಿ ಮತ್ತಷ್ಟು ತೀವ್ರಗೊಂಡಿದೆ. ಮತದಾರರ...

48 ಗಂಟೆಯೊಳಗೆ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ; ಗ್ಯಾನೇಶ್ ಕುಮಾರ್‌ಗೆ ಸಿಜೆಪಿ ಎಚ್ಚರಿಕೆ

ದೇಶದ ಅತ್ಯಂತ ದೊಡ್ಡ ರಾಷ್ಟ್ರದ್ರೋಹಿ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), "ಮತದಾರರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದ್ದಾರೆ" ಎಂದು ಆರೋಪಿಸಿ ಅವರ...

11 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಧಾರಣೆ ಮುಂದುವರಿಸಲು ಒತ್ತಾಯಿಸಲಾಗದು: 24 ವಾರ ಮೀರಿದರೂ ಗರ್ಭಪಾತಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ಅನುಮತಿ

ಶ್ರೀನಗರ: ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿರುವ 11 ವರ್ಷದ ಬಾಲಕಿಯನ್ನು ಕಾನೂನಿನಲ್ಲಿರುವ ನಿಗದಿತ ಅವಧಿಯನ್ನು ಮೀರಿದೆ ಎಂಬ ಕಾರಣಕ್ಕೆ ಗರ್ಭಧಾರಣೆಯನ್ನು ಪೂರ್ಣ ಅವಧಿಯವರೆಗೆ ಮುಂದುವರಿಸುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್...