Homeಮುಖಪುಟ‘ಸೀತಾರಾಮನ್ ಸ್ಕೂಲ್ ಆಫ್‌ ಇಕನಾಮಿಕ್ಸ್‌‌’: ‘ರುಪಾಯಿ ಕುಸಿಯುತ್ತಿಲ್ಲ, ಡಾಲರ್‌ ಬಲಗೊಳ್ಳುತ್ತಿದೆ’ ವಿತ್ತ ಸಚಿವರ ಹೇಳಿಕೆ ಟ್ರೋಲ್‌

‘ಸೀತಾರಾಮನ್ ಸ್ಕೂಲ್ ಆಫ್‌ ಇಕನಾಮಿಕ್ಸ್‌‌’: ‘ರುಪಾಯಿ ಕುಸಿಯುತ್ತಿಲ್ಲ, ಡಾಲರ್‌ ಬಲಗೊಳ್ಳುತ್ತಿದೆ’ ವಿತ್ತ ಸಚಿವರ ಹೇಳಿಕೆ ಟ್ರೋಲ್‌

- Advertisement -
- Advertisement -

ಅಮೆರಿಕನ್‌‌‌ ಡಾಲರ್‌‌ ವಿರುದ್ಧ ಭಾರತೀಯ ರುಪಾಯಿ 82.38 ರೂ.ಗೆ ಕುಸಿದಿದೆ. ಇದು ಐತಿಹಾಸಿಕ ದಾಖಲೆಯ ಕುಸಿತವಾಗಿದ್ದು, ಭಾರತೀಯ ಕರೆನ್ಸಿ ಮೇಲೇಲುವ ಸ್ಥಿತಿಯ ಬಗ್ಗೆ ಆರ್ಥಿಕ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಈತನ್ಮಧ್ಯೆ, ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಎಲ್ಲಾ ತರ್ಕಬದ್ಧತೆಯ ನಿಯಮಗಳನ್ನು ಗಾಳಿಗೆ ತೂರಿ, “ರುಪಾಯಿ ಕುಸಿಯುತ್ತಿಲ್ಲ, ಡಾಲರ್‌ ಬಲಗೊಳ್ಳುತ್ತಿದೆ” ಎಂದು ಹೇಳಿದೆ.

ಅಮೆರಿಕದ ವಾಶಿಂಗ್‌ಟನ್‌‌ ಡಿಸಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದ ಒಕ್ಕೂಟ ಸರ್ಕಾರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರು ಭಾರತೀಯ ರೂಪಾಯಿ ಮೌಲ್ಯದಲ್ಲಿ 8% ದಷ್ಟು ಕುಸಿದಿರುವುದನ್ನು ಸಮರ್ಥಿಸಿಕೊಂಡಿದ್ದರು. “ರುಪಾಯಿ ಕುಸಿಯುತ್ತಿಲ್ಲ, ಬದಲಾಗಿ ಅಮೇರಿಕನ್ ಡಾಲರ್‌ ಬಲಗೊಳ್ಳುತ್ತಿದೆ” ಎಂದು ಅವರು ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಚಿವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವ್ಯಂಗ್ಯಕ್ಕೆ ಈಡಾಗಿದೆ. ವಿಪಕ್ಷಗಳು ಸಚಿವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದೆ.

ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕೂಡ ಸಚಿವರನ್ನು ವ್ಯಂಗ್ಯವಾಡಿದ್ದಾರೆ. “ಶುಭಾಶಯಗಳು, ಜೆಎನ್‌ಯು ವಿಫಲವಾಗಿಲ್ಲ” ಎಂದು ಬರೆದಿರುವ ಅವರು, ‘‘ನಾವು ಪಂದ್ಯ ಸೋತಿಲ್ಲ, ನಮ್ಮ ವಿರುದ್ಧ ಇರುವ ತಂಡ ಗೆದ್ದಿದೆ” ಎಂದು ಬರೆದಿರುವ ಜೊತೆಗೆ ನಿರ್ಮಲಾ ಅವರ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಆಮ್‌ ಆದ್ಮಿ ಪಕ್ಷ ನಿರ್ಮಲಾ ಅವರನ್ನು ಟೀಕಿಸಿದ್ದು, “ಮೋದಿ ಅವರ ‘ಸ್ಕೂಲ್ ಆಫ್ ಲಾಜಿಕ್‌’ನ ಹೆಮ್ಮೆಯ ವಿದ್ಯಾರ್ಥಿ” ಎಂದು ವಿಡಿಯೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ, ನಿರ್ಮಲಾ ಅವರ ವೈರಲ್ ಹೇಳಿಕೆ ಮತ್ತು ಪ್ರಧಾನಿ ಮೋದಿ ಅವರು ತಾಪಮಾನ ಹೆಚ್ಚಿರುವ ಕುರಿತು ನೀಡಿರುವ ಹೇಳಿಕೆಯನ್ನು ನೀಡಲಾಗಿದೆ.

ತಾಪಮಾನ ಬದಲಾವಣೆ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಕೇಳಿದಾಗ ಅವರು, “ತಾಪಮಾನ ಬದಲಾಗಿಲ್ಲ, ವಯಸ್ಸು ಹೆಚ್ಚಾದ ಕಾರಣ ಸಹಿಸುವ ಶಕ್ತಿ ಕಡಿಮೆಯಾದಾಗ ತಾಪಮಾನ ಹೆಚ್ಚಾದಂತೆ ಅನಿಸುತ್ತದೆ. ತಾಪಮಾನ ಬದಲಾಗಿಲ್ಲ, ನಾವು ಬದಲಾಗಿದ್ದೇವೆ” ಎಂದು ಮೋದಿ ಹೇಳಿದ್ದರು. ಈ ಹೇಳಕೆ ಕೂಡಾ ವ್ಯಾಪಕ ಟ್ರೋಲ್‌ಗೆ ಒಳಗಾಗಿತ್ತು.

ಇದನ್ನೂ ಓದಿ: ಪಡಿತರ ಅಂಗಡಿಯಲ್ಲಿ ಮೋದಿ ಚಿತ್ರ ಇಲ್ಲದಿರುವುದನ್ನು ಕಂಡುಹಿಡಿದ ನಿರ್ಮಲಾ ಸೀತಾರಾಮನ್; ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್

ಡಿಎಂಕೆ ನಾಯಕರಾದ ಇಸೈ ಅವರು, ಸಚಿವರ ಈ ಹೇಳಿಕೆಗೆ ಅವರು ಅರ್ಥಶಾಸ್ತ್ರದ ನೋಬೆಲ್ ಪಡೆಯಬೇಕು ಎಂದು ವ್ಯಂಗ್ಯವಾಗಿದ್ದಾರೆ.

ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ವ್ಯಂಗ್ಯ ಚಿತ್ರ ಬರೆದಿದ್ದು, ಕೋಚ್ ನಿರ್ಮಲಾ ಸೀತಾರಾಮನ್ ಎಂದು ಬರೆದಿದ್ದಾರೆ.

ಬಿಆರ್‌ಎಸ್‌ ಪಕ್ಷದ ಐಟಿ ಮುಖ್ಯಸ್ಥ ಯತೀಶ್‌ ರೆಡ್ಡಿ ಅವರು, ‘‘ಭೂಮಿಯ ಮೇಲೆ ರೂಪಾಯಿ ಗಟ್ಟಿಯಾಗಿದೆ, ಡಾಲರ್ ಏರುತ್ತಿದೆ’’ ಎಂದು ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇಂಧನ ಬೆಲೆ ಏರಿಕೆ ಬಗ್ಗೆ ನಿಮ್ಮ ರಾಜ್ಯ ಸರ್ಕಾರಗಳನ್ನು ಕೇಳಿ: ನಿರ್ಮಲಾ ಸೀತಾರಾಮನ್‌

ಎಎಪಿ ಸಂಸದ ರಾಘವ್ ಚಡ್ಡಾ ಅವರು,“ನನ್ನ ಅರ್ಥಶಾಸ್ತ್ರ ದುರ್ಬಲವಾಗಿಲ್ಲ, ನಿಮ್ಮದು ಶಕ್ತಿಯುತವಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಲಖಿಂಪುರ್‌ ಖೇರಿಯಂತಹ ಘಟನೆ ನಡೆಯುತ್ತಲೇ ಇರುತ್ತವೆ: ನಿರ್ಮಲಾ ಸೀತಾರಾಮನ್

ಇದನ್ನೂ ಓದಿ: NMP ಯೋಜನೆ: ಕಾಂಗ್ರೆಸ್ ಡಿಎನ್‌ಎಯಲ್ಲಿ ಲೂಟಿ ಇದೆ ಎಂದ ಸಚಿವೆ ನಿರ್ಮಲಾ ಸೀತಾರಾಮನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...