Homeಮುಖಪುಟಜಮ್ಮ-ಕಾಶ್ಮೀರ: ಆರು ಮಂದಿ ಸರ್ಕಾರಿ ನೌಕರರ ವಜಾ

ಜಮ್ಮ-ಕಾಶ್ಮೀರ: ಆರು ಮಂದಿ ಸರ್ಕಾರಿ ನೌಕರರ ವಜಾ

- Advertisement -
- Advertisement -

ಭಯೋತ್ಪಾದಕರ ಸಂಪರ್ಕದಲ್ಲಿದ್ದರೆಂದು ಆರೋಪಿಸಿ ಆರು ಮಂದಿ ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರದ ಆಡಳಿತ ವಜಾಗೊಳಿಸಿದೆ.

ಭಾರತದ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂಬುದಾಗಿ ಸ್ಕೋಲ್‌ಡಾಟ್‌ಇನ್‌ ವರದಿ ಮಾಡಿದೆ.

ಕೆಲಸದಿಂದ ತೆಗೆದುಹಾಕಲು ಯಾವುದೇ ದುಷ್ಕೃತ್ಯ ಅಥವಾ ಲೋಪದೋಷಗಳನ್ನು ಆದೇಶದಲ್ಲಿ ಉಲ್ಲೇಖಿಸಿಲ್ಲ ಎಂದಿರುವ ಸ್ಕ್ರೋಲ್‌, ‘ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದ ಕಾರಣದಿಂದ ಕೆಲಸದಿಂದ ತೆಗೆದುಹಾಕಲಾಗಿದೆ’ ಎಂದು ಪಿಟಿಐಗೆ ಅಧಿಕೃತ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.

ಸಂವಿಧಾನದ ತಿದ್ದುಪಡಿ ವಿಧಿ 311 ಪ್ರಕಾರ ಕೆಲಸದಿಂದ ವಜಾಗೊಳಿಸಲು ಯಾವುದೇ ವಿಚಾರಣೆ ಅಗತ್ಯವಿಲ್ಲ. ವಜಾಗೊಂಡಿರುವ ನೌಕರರು ಹೈಕೋರ್ಟ್‌‌ನಲ್ಲಿ ಮಾತ್ರ ಪರಿಹಾರಕ್ಕೆ ಮೊರೆ ಇಡಬಹುದು.

ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದರೆಂದು ಆರೋಪಿಸಿ, ಹಿಜ್‌ಬುಲ್‌ ಮುಜಾಹಿದ್ದೀನ್‌ ಮುಖ್ಯಸ್ಥ ಸೈಯದ್‌ ಸಲಹುದ್ದೀನ್‌ ಅವರ ಪುತ್ರನನ್ನುಒಳಗೊಂಡಂತೆ 11 ಮಂದಿ ಸರ್ಕಾರಿ ನೌಕರರನ್ನು ಕಳೆದ ಜುಲೈನಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತ ವಜಾಗೊಳಿಸಿತ್ತು. ಮೇ ತಿಂಗಳಲ್ಲಿ ಮೂವರನ್ನು ವಜಾಗೊಳಿಸಲಾಗಿತ್ತು.

ಬುಧವಾರದ ಕ್ರಮದಲ್ಲಿ, ಜಾಫರ್ ಹುಸೇನ್ ಬುಟ್ಟೋ ಮತ್ತು ಶೋಕತ್ ಅಹ್ಮದ್ ಖಾನ್ ಎಂದು ಗುರುತಿಸಲಾದ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸ್ಕ್ರೋಲ್‌ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಯಾರೊಬ್ಬರು ಉಸಿರಾಡಲೂ ಆಗುತ್ತಿಲ್ಲ: ಮೆಹಬೂಬಾ ಮುಫ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...