Homeಮುಖಪುಟಸಂವಿಧಾನದ ಹೊಸ ಪ್ರತಿಗಳಲ್ಲಿ 'ಸಮಾಜವಾದಿ, ಜಾತ್ಯತೀತ' ಕಾಣೆಯಾಗಿದೆ: ಅಧೀರ್ ಚೌಧರಿ ಕಳವಳ

ಸಂವಿಧಾನದ ಹೊಸ ಪ್ರತಿಗಳಲ್ಲಿ ‘ಸಮಾಜವಾದಿ, ಜಾತ್ಯತೀತ’ ಕಾಣೆಯಾಗಿದೆ: ಅಧೀರ್ ಚೌಧರಿ ಕಳವಳ

- Advertisement -
- Advertisement -

ಹೊಸ ಸಂಸತ್ ಕಟ್ಟಡದ ಉದ್ಘಾಟನಾ ದಿನದಂದು ರಾಜಕಾರಣಿಗಳಿಗೆ ನೀಡಿದ ಸಂವಿಧಾನದ ಹೊಸ ಪ್ರತಿಗಳಲ್ಲಿ ‘ಸಮಾಜವಾದಿ ಜಾತ್ಯತೀತ’ ಪದಗಳು ಇಲ್ಲ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕಳವಳ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಅವರು, ”ಇಂದು (ಸೆಪ್ಟೆಂಬರ್ 19) ನಮಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳನ್ನು ನಾವು ನಮ್ಮ ಕೈಯಲ್ಲಿ ಹಿಡಿದು ಹೊಸ ಸಂಸತ್ತಿನ ಕಟ್ಟಡ ಪ್ರವೇಶಿಸಿದ್ದೇವೆ. ಆದರೆ ಇದರ ಮುನ್ನುಡಿಯಲ್ಲಿ ‘ಸಮಾಜವಾದಿ ಜಾತ್ಯತೀತ’ ಪದಗಳಿಲ್ಲ” ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಚೌಧರಿ, ”1976ರಲ್ಲಿ ತಿದ್ದುಪಡಿಯ ನಂತರ ಈ ಪದಗಳನ್ನು ಸೇರಿಸಲಾಗಿದೆ ಎಂದು ನಮಗೆ ತಿಳಿದಿದೆ. ಆದರೆ ಯಾರಾದರೂ ಇಂದು ನಮಗೆ ಸಂವಿಧಾನದ ಪ್ರತಿ ನೀಡಿದರೆ, ಅದರಲ್ಲಿ ಸಮಾಜವಾದಿ, ಜಾತ್ಯತೀತ ಪದಗಳಿಲ್ಲದಿದ್ದರೆ ಅದು ಕಳವಳಕಾರಿ ವಿಷಯವಾಗಿದೆ” ಎಂದರು.

”ಅವರ ಉದ್ದೇಶ ಅನುಮಾನಾಸ್ಪದವಾಗಿದೆ, ಅದನ್ನು ಜಾಣತನದಿಂದ ಮಾಡಲಾಗಿದೆ. ಇದು ನನಗೆ ಕಳವಳದ ವಿಷಯವಾಗಿದೆ” ಎಂದು ಕೇಂದ್ರ ಬಿಜೆಪಿ ವಿರುದ್ಧ ಕಿಡಿಕಾರಿದರು.

”ನಾನು ಈ ವಿಷಯವನ್ನು ಎತ್ತಲು ಪ್ರಯತ್ನಿಸಿದೆ, ಆದರೆ ಈ ವಿಷಯವನ್ನು ಪ್ರಸ್ತಾಪಿಸಲು ನನಗೆ ಅವಕಾಶ ಸಿಗಲಿಲ್ಲ” ಎಂದು ಹೇಳಿದರು.

ಐದು ದಿನಗಳ ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ‘INDIA ಮತ್ತು ‘ಭಾರತ’ ನಡುವೆ ಅನಗತ್ಯ ಬಿರುಕು ಮೂಡಿಸಲು ಯಾರೂ ಪ್ರಯತ್ನಿಸಬಾರದು . ಭಾರತದ ಸಂವಿಧಾನದ ಪ್ರಕಾರ ಇವೆರಡರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು.

”ಈ ಸಂವಿಧಾನವು ನಮಗೆ ಗೀತಾ, ಕುರಾನ್ ಮತ್ತು ಬೈಬಲ್‌ಗಿಂತ ಕಡಿಮೆಯಿಲ್ಲ. 1ನೇ ವಿಧಿ ಹೇಳುತ್ತದೆ, INDIA, ಅದು ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ…” ಅಂದರೆ INDIA ಮತ್ತು ಭಾರತಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಎರಡರ ನಡುವೆ ಅನಗತ್ಯವಾಗಿ ಬಿರುಕು ಮೂಡಿಸಲು ಪ್ರಯತ್ನಿಸದಿದ್ದರೆ, ಅದು ಉತ್ತಮವಾಗಿರುತ್ತದೆ” ಎಂದು ಹೇಳಿದರು.

ಸಾಮಾನ್ಯವಾಗಿ ‘ಇಂಡಿಯಾದ ರಾಷ್ಟ್ರಪತಿ’ ಎಂದು ಬಳಸಲಾಗುತ್ತದೆ. ಆದರೆ G20 ಔತಣಕೂಟದ ಆಹ್ವಾನದಲ್ಲಿ ‘ಭಾರತದ ಅಧ್ಯಕ್ಷ’ ಹೆಸರಿನಲ್ಲಿ ಕಳುಹಿಸಲಾಯಿತು. ಇದು INDIA ಮತ್ತು ಭಾರತ ನಡುವಿನ ರಾಜಕೀಯ ಗದ್ದಲಕ್ಕೆ ಕಾರಣವಾಯಿತು. ಇಂದು ಲೋಕಸಭೆಯಲ್ಲಿ ಈ ವಿಚಾರವನ್ನು ಕಾಂಗ್ರೆಸ್ ನಾಯಕ ಚೌಧರಿ ಪ್ರಸ್ತಾಪಿಸಿದರು. 26 ವಿರೋಧ ಪಕ್ಷಗಳು ಒಗ್ಗೂಡಿ ತನ್ನನ್ನು ತಾನು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (I.N.D.I.A) ಎಂದು ಒfಕೂಟ ರಚನೆ ಮಾಡಿದವು. ಹಾಗಾಗಿ ಈ ‘INDIA’ ಎನ್ನುವ ಹೆಸರಿನ ಮೇಲೆ ಕೇಂದ್ರ ಬಿಜೆಪಿ ದಾಳಿ ನಡೆಸುತ್ತಿದೆ.

ಇದನ್ನೂ ಓದಿ: ಭಗವದ್ಗೀತೆ, ಕುರಾನ್, ಬೈಬಲ್‌ಗಿಂತ ನಮಗೆ ಸಂವಿಧಾನವೇ ಹೆಚ್ಚು: ಲೋಕಸಭೆಯಲ್ಲಿ ಅಧೀರ್ ಚೌಧರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...